Life Hacks: ಪರ್ಫೆಕ್ಟ್ ವಾಡ್ರೋಬ್ ಬೇಕಾ? ಹೀಗೆ ಮಾಡಿ..

Wardrobe: ಒಂದು ಬಟ್ಟೆಯಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು ಸಂಪೂರ್ಣ  ವಾಡ್ರೋಬ್ ಗೋಡೆಗಳನ್ನು ಮೇಲಿನಿಂದ ಕೆಳಕ್ಕೆ ಸ್ವಚ್ಛ ಮಾಡಿ. ನಿಮ್ಮ ವಾಡ್ರೋಬ್ ಗಟ್ಟಿಮರದ  ಬೇಸ್  ಹೊಂದಿದ್ದರೆ, ನೆಲವನ್ನು ಗುಡಿಸಿ ನಂತರ ಒರೆಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮ್ಮ ಬಟ್ಟೆ  ವಾಡ್ರೋಬ್ (Wardrobe)  ನೀವು ಬಯಸಿದಷ್ಟು ಸ್ವಚ್ಛ ಮತ್ತು ಸುವ್ಯವಸ್ಥಿತವಾಗಿದೆಯೇ? ನಿಮ್ಮ ತುಂಬಿದ ಕ್ಲೋಸೆಟ್‌ನಿಂದ(Closet) ಕೇವಲ ಎರಡು ಅಥವಾ ಕೆಲ ವಸ್ತುಗಳನ್ನು ಮಾತ್ರ ನೀವು ಪದೇ ಪದೇ ಧರಿಸುತ್ತೀರಾ? ನಿಮ್ಮ ವಾಡ್ರೋಬ್ ಹೇಗೆ ವ್ಯವಸ್ಥಿತವಾಗಿ ಇಡಬೇಕು ಎನ್ನುವ ಗೊಂದಲ ಇದ್ರೆ ಅದಕ್ಕೆ ಇಲ್ಲಿದೆ ಪರಿಹಾರ.

ಕೆಳಗಿನ  ವಸ್ತುಗಳನ್ನು ಸಂಗ್ರಹಿಸಿ:

ನೀರು

ಸಾಬೂನು

ಮಾಸ್ಕ್

ಕಸದ ಚೀಲಗಳು

ಮೂರು ಲಾಂಡ್ರಿ ಪೆಟ್ಟಿಗೆಗಳು

ಹ್ಯಾಂಗರ್‌ಗಳು

ಮಾರ್ಕರ್/ಪೆನ್, ಪೇಪರ್ ಮತ್ತು ಟೇಪ್

ಇದನ್ನೆಲ್ಲ ಯಾಕೆ ಮೊದಲೇ ಸಂಗ್ರಹಿಸಬೇಕು ಎಂದರೆ, ವಾಡ್ರೋಬ್  ಸ್ವಚ್ಛ ಮಾಡುವಾಗ ಯಾವುದೇ ವಸ್ತು ಸಿಗದೆ ಅದರ ಖರೀದಿಗೆ ಕಾಯುವ ಹಾಗಾಗಬಾರದು.

ವಾಡ್ರೋಬ್​ನಿಂದ ಎಲ್ಲವನ್ನೂ ತೆಗೆದುಹಾಕಿ.

ಇದು  ಕಷ್ಟ ಎನಿಸಬಹುದು, ಆದರೆ ಕೆಲಸವನ್ನು ಸರಿಯಾಗಿ ಮಾಡಲು  ಮತ್ತು ವಾಡ್ರೋಬ್ ಸುಂದರವಾಗಿ ಕಾಣಲು ಇದು ಉತ್ತಮ ವಿಧಾನ.  ವಾಡ್ರೋಬ್​ನಲ್ಲಿರುವ ಎಲ್ಲ ವಸ್ತುಗಳನ್ನು ತೆಗೆದು  ಹಾಕಿ. ನಂತರ  ನಿಮ್ಮ  ವಾಡ್ರೋಬ್ ಅನ್ನು ಸ್ವಚ್ಛ ಮಾಡಿ. ಸ್ವಚ್ಛ ಮಾಡುವಾಗ ತಲೆನೋವು ಅಥವಾ ಅಲರ್ಜಿಗಳನ್ನು ತಪ್ಪಿಸಲು ನೀವು ಡಸ್ಟ್ ಮಾಸ್ಕ್ ಧರಿಸಿ.

ಇದನ್ನೂ ಓದಿ: ನೀವೇ ಹೇರ್ ಡೈ ಮಾಡ್ಕೊಳೋದಾ? ಹಾಗಿದ್ರೆ ಇದೆಲ್ಲಾ ಸರಿಯಾಗಿ ತಿಳ್ಕೊಳಿ

ನೆಲವನ್ನು ಸ್ವಚ್ಛಗೊಳಿಸಿ.

ಒಂದು ಬಟ್ಟೆಯಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು ಸಂಪೂರ್ಣ  ವಾಡ್ರೋಬ್ ಗೋಡೆಗಳನ್ನು ಮೇಲಿನಿಂದ ಕೆಳಕ್ಕೆ ಸ್ವಚ್ಛ ಮಾಡಿ. ನಿಮ್ಮ ವಾಡ್ರೋಬ್ ಗಟ್ಟಿಮರದ  ಬೇಸ್  ಹೊಂದಿದ್ದರೆ, ನೆಲವನ್ನು ಗುಡಿಸಿ ನಂತರ ಒರೆಸಿ.

ಬಟ್ಟೆ, ಬೂಟುಗಳನ್ನು ಮತ್ತು  ವಸ್ತುಗಳನ್ನು ಗುಂಪು ಮಾಡಿ ವಿಂಗಡಿಸಿ.

ನಿಮಗೆ ಬೇಡದ ವಸ್ತುಗಳನ್ನು ಕೊಟ್ಟುಬಿಡಿ, ಯಾವುದೂ ತೊಳೆಯಬೇಕು ಅದನ್ನು ಒಂದು ಕಡೆ ಇಡಿ, ಬೇಕಾಗುವ ವಸ್ತುಗಳನ್ನು ಒಂದೆಡೆ ಇಡಿ.  ಕಲೆಯಾದ ಮತ್ತು ಹರಿದು ಹೋದ ಬಟ್ಟೆಗಳನ್ನು ಎಸೆಯಿರಿ. ಕಳೆದ ವರ್ಷದಲ್ಲಿ ನೀವು ನಿಯಮಿತವಾಗಿ ಧರಿಸಿದ್ದನ್ನು ಮತ್ತು  ನಿಮಗೆ ಹೊಂದುವ ಬಟ್ಟೆಗಳನ್ನು ಮಾತ್ರ ಇಟ್ಟುಕೊಳ್ಳಿ. ನೀವು ಇತ್ತೀಚೆಗೆ ಧರಿಸದ ಎಲ್ಲವನ್ನೂ ಬೇರೆಯವರಿಗೆ ನೀಡಿ.  ವಾಡ್ರೋಬ್ ಸ್ವಚ್ಛ ಮಾಡುವಾಗ ಇರುವ ವಸ್ತುಗಳಲ್ಲಿ  ಅರ್ಧ ಇಟ್ಟುಕೊಳ್ಳುವ ಗುರಿಯನ್ನು ಹೊಂದುವುದು ಮುಖ್ಯವಾಗುತ್ತದೆ. ಇನ್ನು ಅನಾವಶ್ಯಕವಾಗಿ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬೇಡಿ.

ಪರ್ಸ್, ಬ್ಯಾಕ್ ಪ್ಯಾಕ್, ಶೂ, ಬೆಲ್ಟ್, ಸ್ಕಾರ್ಫ್ ಅಥವಾ ಆಭರಣಗಳಂತಹ  ವಸ್ತುಗಳನ್ನು ನಿಮ್ಮ ಕೋಣೆಯ ಒಂದು ಭಾಗದಲ್ಲಿ ಅಥವಾ ವಾಡ್ರೋಬ್​ನಲ್ಲಿ ಜಾಗವಿದ್ದಲ್ಲಿ ಅದಕ್ಕೆ ಒಂದು ಸ್ಥಳ ಮೀಸಲು ಇಡಿ. ಜೀನ್ಸ್, ಡ್ರೆಸ್ ಪ್ಯಾಂಟ್, ಟೀ ಶರ್ಟ್, ಬ್ಲೌಸ್, ಡ್ರೆಸ್, ಬೂಟ್ ಮತ್ತು ಶೂಗಳನ್ನು ಕೋಣೆಯ ಇನ್ನೊಂದು  ಪ್ರದೇಶದಲ್ಲಿ  ಜೋಡಿಸಿ.

ನಿಮಗೆ ಬೇಕಾಗುವ ಬಟ್ಟೆಗಳನ್ನು ಸರಿಯಾಗಿ ಮಡಚಿ, ಜೋಡಿಸುವುದು ಮುಖ್ಯವಾಗುತ್ತದೆ. ನಿಮ್ಮ ವಾಡ್ರೋಬ್​ನಲ್ಲಿ ಹೆಚ್ಚಿನ ಜಾಗವಿದ್ದರೇ, ಕಾಲಗಳ ಅನುಸಾರವಾಗಿ ಬಟ್ಟೆಗಳನ್ನು ಜೋಡಿಸಿ, ಅಲ್ಲದೇ ನಿಮಗೆ ಬಣ್ಣಗಳ ಆಧಾರದಲ್ಲಿ ಜೋಡಿಸಬಹುದು, ಇದು ನಿಮ್ಮ ವಾಡ್ರೋಬ್​ ಅಂದವನ್ನು ಹೆಚ್ಚಿಸುತ್ತದೆ.  ಸುಮ್ಮನೇ ಜೋಡಿಸಿಡುವ  ಬದಲು  ವಿಭಿನ್ನ ರೀತಿಯ ಪ್ರಯೋಗಗಳನ್ನು ಮಾಡಬಹುದು.

ಇದನ್ನೂ ಓದಿ: ಒಣಗಿದ ಹಿಮ್ಮಡಿ ಮುಜುಗರ ಉಂಟುಮಾಡುತ್ತಿದೆಯಾ? ಈ ಮನೆಮದ್ದುಗಳನ್ನು ಟ್ರೈ ಮಾಡಿ..

ವಾಡ್ರೋಬ್‌ನಲ್ಲಿ ಬಟ್ಟೆಗಳನ್ನು ಜೋಡಿಸಿಡುವ ಮೊದಲು ಕೆಳಗೆ ಪೇಪರ್  ಹಾಕಿ. ಆಗ ಬಟ್ಟೆಗಳಿಗೆ ಕಲೆ ತಾಗುವುದಿಲ್ಲ.  ಅಲ್ಲದೇ ಬಟ್ಟೆಗಳನ್ನು ಐರನ್ ಮಾಡಿ ಚೆನ್ನಾಗಿ ಜೋಡಿಸಿ.
ಡಿಸೈನರ್ ಡ್ರೆಸ್ ಅಥವಾ ಸೀರೆಯನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿಡಿ. ಹೀಗ್ ಮಾಡಿದರೆ ಬಟ್ಟೆ ಫ್ರೆಶ್ ಆಗಿರುತ್ತದೆ. ಅಲ್ಲದೆ ಇವುಗಳನ್ನು ಪದೇ ಪದೇ ಐರನ್ ಮಾಡಬೇಕಾಗಿಲ್ಲ. ಹಾಗೂ  ಬಟ್ಟೆಗೆ ಯಾವುದೇ ಹಾನಿಯಾಗುವುದಿಲ್ಲ.
Published by:Sandhya M
First published: