• Home
  • »
  • News
  • »
  • lifestyle
  • »
  • Baby Health: ಅಮ್ಮಂದಿರ ಗಮನಕ್ಕೆ: ಮಕ್ಕಳಿಗೆ ಬಾಟೆಲ್ ನಲ್ಲಿ ಹಾಲು ಕೊಡ್ತೀರಾ?

Baby Health: ಅಮ್ಮಂದಿರ ಗಮನಕ್ಕೆ: ಮಕ್ಕಳಿಗೆ ಬಾಟೆಲ್ ನಲ್ಲಿ ಹಾಲು ಕೊಡ್ತೀರಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Baby Bottle: ನಿಮ್ಮ ಎಳೆಯಮಕ್ಕಳಿಗೆ ನೀವು ಹಾಲು ನೀಡುವ ಬಾಟಲನ್ನು ಮನೆಯ ಕೊಳಾಯಿ ನೀರು ಅಥವಾ ನಲ್ಲಿ ನೀರಿನಿಂದ ಶುದ್ಧ ಮಾಡಬೇಡಿ.. ಫಿಲ್ಟರ್ ವಾಟರ್ ನೀರಿನಿಂದ ನಿಮ್ಮ ಮಕ್ಕಳಿಗೆ ಹಾಲು ನೀಡುವ ಬಾಟೆಲನ್ನು ಶುಚಿಗೊಳಿಸಿ

  • Share this:

    ತಾಯಿಯ ಹಾಲು(Breast Milk) ಮಗುವಿಗೆ ಅಮೃತ ಎಂದು ಹೇಳುವುದನ್ನು ನಾವೆಲ್ಲರು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಈ ಅಮೃತವನ್ನು ಕೆಲವು ತಾಯಂದಿರು(Mothers) ಗೊತ್ತಿರಲಾರದೇ ಈ ಆಧುನಿಕ ಬದುಕಿನ(Life) ಒತ್ತಡಕ್ಕೆ ಸಿಲುಕಿ ಬಾಟೆಲ್‌ನಲ್ಲಿ(Bottle) ಹಾಕಿ ಹಾಲು(Milk) ಕುಡಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಅನೇಕ ಮಹಿಳೆಯರು(Women) ತಾವು ಕೆಲಸಕ್ಕೆ ಹೋಗಬೇಕಾಗಿರುವುದರಿಂದ ತಮ್ಮ ಮಕ್ಕಳಿಗೆ(Children) ಬಾಟಲ್‌ನಲ್ಲಿ ಹಾಲು ತುಂಬಿಸಿ ಕುಡಿಸುವುದನ್ನು ಬಹು ಬೇಗನೆ ಅಭ್ಯಾಸ ಮಾಡಿಸುತ್ತಾರೆ. ಹೀಗಾಗಿ ಮಗುವಿಗೆ ಬಾಟಲ್ ಹಾಲನ್ನು ಕೊಡುವ ಮೊದಲು, ಬಾಟೆಲ್ ಅನ್ನು ಸ್ವಚ್ಚಗೊಳಿಸುವುದನ್ನು ಮರೆಯಬೇಡಿ. ಕೆಲವೊಮ್ಮೆ ಬಾಟೆಲ್‌ನಲ್ಲಿ ಕೂಡ ಬ್ಯಾಕ್ಟೀರಿಯಾಗಳು ಕಂಡುಬರುತ್ತದೆ, ಅದರಲ್ಲಿಯೂ ಪ್ಲಾಸ್ಟಿಕ್ ಬಾಟಲ್ ಅನ್ನು ನೀವು ಬಳಸುತ್ತಿದ್ದರೆ, ಮೊದಲು ಸ್ವಚ್ಚತೆಗೆ ಗಮನ ಹರಿಸಿ..


    1)ಬಾಟಲಿಯನ್ನ ಚೆನ್ನಾಗಿ ಸ್ವಚ್ಛಗೊಳಿಸಿ: ಮಗುವಿನ ಹಾಲಿನ ಬಾಟಲಿಯನ್ನು ಸ್ಟೆರಿಲೈಜ್ ಮಾಡುವ ಮುಂಚೆ ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಬಾಟಲ್ ನ ಪ್ರತಿ ಭಾಗಗಳನ್ನು ಬಾಟಲಿ ಬ್ರಷ್ ಬಳಸಿ ಶುದ್ಧವಾಗಿ ಯಾವುದೇ ಹಾಲಿನ ಕಣಗಳು ಅಥವಾ ಹಾಲಿನ ಪುಡಿಯ ಅಂಶಗಳು ಇಲ್ಲದಂತೆ ತೊಳೆಯಿರಿ.


    ಬಾಟೆಲ್ ಶುಚಿ ಮಾಡಲು ಡಿಶ್ ವಾಶರ್ ಸಹ ಬಳಸಬಹುದು. ಡಿಶ್ ವಾಶರ್ ನಲ್ಲಿ ಹಾಲಿನ ಬಾಟಲ್ ತೊಳೆಯುವುದೇ ಆದರೆ ಮೇಲಿನ ರಾಕ್ ನಲ್ಲಿ ಹಾಲಿನ ಬಾಟಲ್ ಇಟ್ಟು ತೊಳೆಯಲು ಬಿಸಿ ನೀರಿನ ಬಳಕೆ ಮಾಡಿ.


    ಇದನ್ನೂ ಓದಿ: ರಜೆ ದಿನದಲ್ಲಿ ನಿಮ್ಮ ಮಕ್ಕಳನ್ನು ಚಟುವಟಿಕೆಯಿಂದ ಇಡುವ ಅಭ್ಯಾಸಗಳು


    2)ಬಾಟೆಲ್ ಚನ್ನಾಗಿ ಒಣಗಿಸಿ: ಅಗತ್ಯ ಇರದೆ ಇರುವಾಗ ಅಥವಾ ರಾತ್ರಿ ಅಥವಾ ಹಗಲಿನ ಸಮಯದಲ್ಲಿ ಬಳಸದೆ ಇರುವಾಗ ಬಾಟಲ್ ಅನ್ನು ಸ್ವಚ್ಛವಾಗಿ ತೊಳೆದು ಒಂದೆಡೆ ಒಣಗಲು ಬಿಡಬೇಕು. ಆಗ ಬಾಟಲ್ ಒಳಗೆ ಲೋಳೆಯಂತಹ ಪದರ ಬೆಳೆಯುವುದು ಅಥವಾ ಸೂಕ್ಷ್ಮಾಣುಗಳ ಉತ್ಪತ್ತಿ ಆಗುವುದನ್ನು ತಡೆಯಬಹುದು.


    ಯಾವುದೇ ರೀತಿಯಲ್ಲಿ ಬಾಟಲಿಯ್ನನು ಸ್ವಚ್ಛಗೊಳಿಸಿದ ಬಳಿಕ, ಅದನ್ನು ಒರೆಸಿ. ನಂತರ ಸೂರ್ಯನ ಬೆಳಕಲ್ಲಿ ಸ್ವಲ್ಪ ಸಮಯ ಇಟ್ಟು ಒಣಗಿಸಬಹುದು.


    3)ಚೆನ್ನಾಗಿ ಕೈ ತೊಳೆಯಿರಿ: ಸ್ಟೆರಿಲೈಸೆರ್ ನಿಂದ ಹಾಲಿನ ಬಾಟೆಲ್ ತೆಗೆಯುವ ಮುಂಚೆ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ ಮತ್ತು ನಿಮ್ಮ ಕೈಗಳಲ್ಲಿ ಯಾವುದೇ ಸೋಪಿನ ಅಂಶಗಳು ಇಲ್ಲವೆಂದು ಖಾತ್ರಿಪಡಿಸಿಕೊಳ್ಳಿ. ಬಾಟೆಲ್ ತೆಗೆದುಕೊಳ್ಳಲು ಸ್ಟೆರಿಲೈಸೆರ್ ಟೊಂಗ್ಸ್ ಇದ್ದರೆ ಇನ್ನೂ ಉತ್ತಮ. ಸ್ಟರಿಲಿಜರ್ ನಿಂದ ಬಾಟಲ್ ಹೊರಗೆ ತೆಗೆದ ನಂತರ ಒಂದು ವೇಳೆ ಮರೆತು ಹೆಚ್ಚಿನ ಸಮಯ ಹಾಗೆ ಬಿಟ್ಟಿದ್ದರೆ, ಹಾಲು ತುಂಬಿಸುವ ಮುಂಚೆ ಮತ್ತೊಮ್ಮೆ ಸ್ಟೆರಿಲೈಸ್ ಮಾಡಿ ನಂತರ ಬಳಕೆ ಮಾಡಿ.


    4)ಬ್ಲೀಚ್ ಮೂಲಕ ಸ್ವಚ್ಛತೆ: ಹಾಲಿನ ಬಾಟಲ್ ಅನ್ನು ಬ್ಲೀಚ್‍ನ ಮೂಲಕವೂ ಸ್ವಚ್ಛಗೊಳಿಸಬಹುದು. 10-12 ಕಪ್ ನೀರಿಗೆ 2 ಟೀ ಚಮಚ ಬ್ಲೀಚ್ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಬೇಕು. ನಂತರ ಬಾಟಲ್ ಅನ್ನು ತರೆದು, ಎಲ್ಲಾ ಭಾಗವನ್ನು ಬೇರ್ಪಡಿಸಿ, ಬ್ಲೀಚ್ ಮಿಶ್ರಿತ ನೀರಿನಲ್ಲಿ ಮುಳುಗಿಸಿ. ಐದು ನಿಮಿಷಗಳ ಕಾಲ ನೀರಿನಲ್ಲಿ ನೆನೆಯಲು ಬಿಡಬೇಕು. ನಂತರ ಬಾಟಲ್ ಕ್ಲೀನರ್ ಬ್ರೆಶ್ ಬಳಸಿ ಸ್ವಚ್ಛಗೊಳಿಸಬೇಕು. ಸಂಪೂರ್ಣವಾಗಿ ತೊಳೆದ ಬಳಿಕ ಮಗುವಿಗೆ ಹಾಲನ್ನು ಸೇರಿಸಿ ಕೊಡಬಹುದು


    5) ಫಿಲ್ಟರ್ ವಾಟರ್ ಬಳಸಿ ಸ್ವಚ್ಛ ಮಾಡಿ: ನಿಮ್ಮ ಎಳೆಯಮಕ್ಕಳಿಗೆ ನೀವು ಹಾಲು ನೀಡುವ ಬಾಟಲನ್ನು ಮನೆಯ ಕೊಳಾಯಿ ನೀರು ಅಥವಾ ನಲ್ಲಿ ನೀರಿನಿಂದ ಶುದ್ಧ ಮಾಡಬೇಡಿ.. ಫಿಲ್ಟರ್ ವಾಟರ್ ನೀರಿನಿಂದ ನಿಮ್ಮ ಮಕ್ಕಳಿಗೆ ಹಾಲು ನೀಡುವ ಬಾಟಲನ್ನು ಶುಚಿಗೊಳಿಸಿ.ಒಂದು ವೇಳೆ ಫಿಲ್ಟರ್ ವಾಟರ್ ಬಳಕೆ ಮಾಡದೇ ಇದ್ದರೆ ಬಿಸಿನೀರಿನಿಂದ ಹಾಲಿನ ಬಾಟಲ್ ಸ್ವಚ್ಛಗೊಳಿಸಬೇಕು.


    ಇದನ್ನೂ ಓದಿ: ಬೇಸಿಗೆಯಲ್ಲಿ ಸಿಗುವ ಈ 5 ಹಣ್ಣುಗಳನ್ನು ಮಿಸ್​ ಮಾಡದೆ ತಿನ್ನಿ!


    6) ಸ್ವಚ್ಛವಾಗಿರುವ ಜಾಗದಲ್ಲಿ ಬಾಟೆಲ್ ಇರಿಸಿ: ನಿಮ್ಮ ಮಕ್ಕಳ ಫ್ರೀಡಿಂಗ್ ಬಾಟಲನ್ನು ಚೆನ್ನಾಗಿ ತೊಳೆದ ಬಳಿಕ ದೂರು ಅಥವಾ ಬೇರೆ ಯಾವುದೇ ಸ್ಥಳದಲ್ಲಿ ಇಡಬೇಡಿ.. ಶುದ್ಧವಾದ ಟವೆಲ್ಲಿನಿಂದ ಬಾಟಲ್ ನಲ್ಲಿ ಇರುವ ನೀರಿನ ಅಂಶ ಒಣಗಿಸಿ ಅದನ್ನು ಯಾವುದಾದರೂ ಸ್ವಚ್ಛತೆ ಇರುವ ಜಾಗದಲ್ಲಿ ಇಡಿ.

    Published by:ranjumbkgowda1 ranjumbkgowda1
    First published: