Skin Care: ಚರ್ಮದ ಉತ್ಪನ್ನಗಳನ್ನು ಖರೀದಿ ಮಾಡುವಾಗ ಈ ಅಂಶಗಳನ್ನು ಮರೆಯಬಾರದು

Makeup Products: ಚರ್ಮದ ಉತ್ಪನ್ನಗಳನ್ನು ಖರೀದಿಸುವಾಗ ನಾವು ಯಾವಾಗಲೂ ಕೆಲವೊಂದು ವಿಷಯಗಳನ್ನು ಅದರಲ್ಲೂ ಅದಕ್ಕೆ ಬಳಸಿರುವ ಉತ್ಪನ್ನಗಳನ್ನು ಪರೀಕ್ಷಿಸಿ ತೆಗೆದುಕೊಳ್ಳುತ್ತೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚರ್ಮ ನಮ್ಮ ದೇಹದ ಅತಿ ಮುಖ್ಯ ಮತ್ತು ಅತಿ ಸೂಕ್ಷ್ಮ ಅಂಗಗಳಲ್ಲಿ ಒಂದು. ಚರ್ಮದ ಆರೋಗ್ಯ ಕಾಪಾಡುವುದು ಬಹಳ ಮುಖ್ಯವಾಗುತ್ತದೆ. ಇನ್ನು ಚರ್ಮವನ್ನು ಸುಂದರವಾಗಿಟ್ಟುಕೊಳ್ಳಲು ಹಲವಾರು ಸೌಂದರ್ಯ ಉತ್ಮನ್ನಗಳನ್ನು ಬಳಕೆ ಮಾಡುತ್ತೇವೆ. ಎಲ್ಲಾ ಪದಾರ್ಥಗಳು ಸರಿಯಾಗಿರುತ್ತವೆ ಎಂದು ಹೇಳಲು ಬರುವುದಿಲ್ಲ. ಎಲ್ಲರ ಚರ್ಮ ಒಂದೇ ರೀತಿಯಾಗಿ ಇರುವುದಿಲ್ಲ. ನಮ್ಮ ಚರ್ಮದ ಗುಣಲಕ್ಷಣಗಳಿಗೆ ಸರಿ ಹೊಂದುವ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.  ಏಕೆಂದರೆ ಈ ರೀತಿಯ ಚರ್ಮಕ್ಕೆ ಸಂಬಂಧಿಸಿದ ಪದಾರ್ಥಗಳನ್ನು ನಾವು ನೇರವಾಗಿ ನಮ್ಮ ಚರ್ಮಕ್ಕೆ ಹಚ್ಚಿದಾಗ ಕೆಲವೊಮ್ಮೆ ಕಿರಿಕಿರಿ, ದದ್ದು ಮತ್ತು ಅಲರ್ಜಿಗಳು ಉಂಟಾಗುತ್ತದೆ.  ಹಾಗಾಗಿ ಚರ್ಮಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಖರೀದಿ ಮಾಡುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.  

ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಸ್ತುಗಳನ್ನು ಖರೀದಿ ಮಾಡಬೇಕು ಎಂಬುದು ಇಲ್ಲಿದೆ.

ವಸ್ತುಗಳಲ್ಲಿರುವ ನಿರ್ದಿಷ್ಟ ಅಂಶ ಯಾವುದೇ ರೀತಿಯ ಚರ್ಮದ ಅಲರ್ಜಿಯನ್ನು ಉಂಟು ಮಾಡುವುದಿಲ್ಲ. ಆದರೆ ಕೆಲವೊಮ್ಮೆ ಈ ರೀತಿಯ ಉತ್ಪನ್ನಗಳನ್ನು ಬಳಸಿದಾಗ ಅದು ನಿಮ್ಮ ಚರ್ಮವನ್ನು ಹಾಳು ಮಾಡುತ್ತದೆ. ಕೆಲವೊಮ್ಮೆ ಉತ್ಪನ್ನದಲ್ಲಿ ಬಳಸಲಾದ ರಾಸಾಯನಿಕ ಪರಿಮಳ ನಿಮ್ಮ ಚರ್ಮಕ್ಕೆ ಹಾನಿಕಾರಕವಾಗಬಹುದು. ಸೂಕ್ಷ್ಮ ಚರ್ಮವನ್ನು ಹೊಂದಿರುವವರಲ್ಲಿ ಯಾವುದೇ ರೀತಿಯ ಅಂಶಗಳಲ್ಲಿ ವ್ಯತ್ಯಾಸವಾದಾಗ   ಸಹ ಹಲವಾರು ರೀತಿಯ ಚರ್ಮದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಒಂದು ವಸ್ತುವನ್ನು ಖರೀದಿಸುವಾಗ ಸುಗಂಧ ದ್ರವ್ಯವನ್ನು ಸೇರಿಸದೇ ಇರುವುದನ್ನು ಆಯ್ಕೆಮಾಡಿಕೊಳ್ಳಿ.

ಯಾವುದೇ ರೀತಿಯ ಚರ್ಮಕ್ಕೆ ಹೊಂದಾಣಿಕೆಯಾಗದ ಪದಾರ್ಥಗಳನ್ನು ನೀವು ಬಳಸಬೇಡಿ. ಕೆಟ್ಟ ಪದಾರ್ಥಗಳನ್ನು ಬಳಕೆ ಮಾಡಿ ಚರ್ಮವನ್ನು ಹಾಳು ಮಾಡಿಕೊಂಡರೆ ನಂತರ ಅದನ್ನು ಸರಿಪಡಿಸುವುದು ಕಷ್ಟವಾಗುತ್ತದೆ.

ಯಾವುದೇ ಚರ್ಮದ ಉತ್ಪನ್ನಗಳನ್ನು ನೀವು ಬಳಸಲು ಆರಂಭಿಸಿದ ತಕ್ಷಣ ನಿಮ್ಮ ಚರ್ಮದಲ್ಲಿ ಯಾವುದಾದರೂ ಬದಲಾವಣೆ ಆದಲ್ಲಿ ಅಂದರೆ ರಾಸಾಯನಿಕ ಕ್ರಿಯೆ ಉಂಟಾಗಿ, ದದ್ದು ಅಥವಾ ಅಲರ್ಜಿಉಂಟಾಗುತ್ತದೆ. ಹೀಗೆ ನಿಮಗೆ ಬದಲಾವಣೆಯ ಅನುಭವವಾದಲ್ಲಿ ತಕ್ಷಣವೇ ಆ ಉತ್ಪನ್ನಗಳನ್ನು ಬಳಸುವುದನ್ನ ನಿಲ್ಲಿಸಿ.

ಇದನ್ನೂ ಓದಿ: ಬಿಕ್ಕಳಿಕೆ ಸಮಸ್ಯೆಯಿಂದ ಸಾಕಾಗಿದೆಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಚರ್ಮದ ಉತ್ಪನ್ನಗಳನ್ನು ಖರೀದಿಸುವಾಗ ನಾವು ಯಾವಾಗಲೂ ಕೆಲವೊಂದು ವಿಷಯಗಳನ್ನು ಅದರಲ್ಲೂ ಅದಕ್ಕೆ ಬಳಸಿರುವ ಉತ್ಪನ್ನಗಳನ್ನು ಪರೀಕ್ಷಿಸಿ ತೆಗೆದುಕೊಳ್ಳುತ್ತೇವೆ. ಐಪೋ ಅಲರ್ಜಿ, ಡರ್ಮಟಾಲಜಿ ಟೇಸ್ಟೆಡ್, ಸೆನ್ಸಿಟಿವಿಟಿ ಟೇಸ್ಟೇಟ್, ನಾನ್ ಇರಿಟೇಟಿಂಗ್ ಇಂತಹ ಪದಗಳಿರುವ ಉತ್ಪನ್ನಗಳನ್ನು ಖರೀದಿಸಿದಾಗ ಅವು ನಮ್ಮ ಚರ್ಮಕ್ಕೆ ಹಾನಿ ಮಾಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಪ್ರತಿಬಾರಿಯೂ ಇದು ಒಪ್ಪಲಾಗುವುದಿಲ್ಲ. ಸರಿಯಾಗಿ ನೋಡಿ ಖರೀದಿ ಮಾಡಬೇಕು.

ನೀವು ಹೊಸ ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸುವ ಮೊದಲು, ನಿಮ್ಮ ಮೊಣಕೈಯ ಒಳಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ಹಚ್ಚಿ ನೋಡಿ. ನಂತರ 48 ರಿಂದ 72 ಗಂಟೆಗಳವರೆಗೆ ಕಾಯಿರಿ. ಆ ಸ್ಥಳದಲ್ಲಿ ನೀವು  ತುರಿಕೆ, ಅಲರ್ಜಿ ಹೀಗೆ ಯಾವುದೇ ರೀತಿಯ ಇತರ ಲಕ್ಷಣವನ್ನು ಗಮನಿಸದಿದ್ದರೆ, ಆ ಪದಾರ್ಥಗಳನ್ನು ನೀವು ಬಳಸಬಹುದು.

ನೀವು ನಿಮ್ಮ ಬಟ್ಟೆಗಳ ಮೇಲೆ ಪರ್ಫ್ಯೂಮ್ ಪದಾರ್ಥಗಳನ್ನು ಬಳಸಬಹುದೇ ಹೊರತು ನಿಮ್ಮ ಚರ್ಮದ ಮೇಲಲ್ಲ. ನಿಮ್ಮ ಚರ್ಮಗಳ ಮೇಲೆ ಇಂತಹ ಉತ್ಪನ್ನಗಳನ್ನು ಸಿಂಪಡಿಸಿದಾಗ ಅಥವಾ ಹಚ್ಚಿಕೊಂಡಾಗ ಅಲ್ಲಿ ರಾಸಾಯನಿಕ ಕ್ರಿಯೆ ಉಂಟಾಗಿ ಚರ್ಮಕ್ಕೆ ಹಾನಿಯಾಗುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: