• Home
 • »
 • News
 • »
 • lifestyle
 • »
 • Coronavirus: ಒಂದೇ ರೀತಿಯ ಮಾಸ್ಕ್ ಎಲ್ಲಾ ವೈರಸ್​ಗಳಿಂದ ರಕ್ಷಣೆ ಕೊಡಲ್ಲ, ಆಯ್ಕೆಗೆ ಹೀಗಿದೆ ನಿಯಮ

Coronavirus: ಒಂದೇ ರೀತಿಯ ಮಾಸ್ಕ್ ಎಲ್ಲಾ ವೈರಸ್​ಗಳಿಂದ ರಕ್ಷಣೆ ಕೊಡಲ್ಲ, ಆಯ್ಕೆಗೆ ಹೀಗಿದೆ ನಿಯಮ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How to Choose Mask: ಕೋವಿಡ್, ಫ್ಲೂ ಅಥವಾ ಇತರ ಯಾವುದೇ ಉಸಿರಾಟದ ವೈರಸ್ ಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವ ವಿಷಯಕ್ಕೆ ಬಂದಾಗ, ಕೇವಲ ಮಾಸ್ಕ್ ಧರಿಸಿದರೆ ಸಾಲದು. ಅದು ಚೆನ್ನಾಗಿ ಹೊಂದಿಕೊಳ್ಳುವಂತಿರಬೇಕು

 • Trending Desk
 • 3-MIN READ
 • Last Updated :
 • Share this:

ಕಳೆದ ಎರಡೂವರೆ ವರ್ಷಗಳಿಂದ ಇಡೀ ಜಗತ್ತನ್ನೇ (World) ಬೆಂಬಿಡದಂತೆ ಕಾಡುತ್ತಿರುವ ಕೋವಿಡ್-19 (Covid) ಸಾಂಕ್ರಾಮಿಕ ರೋಗವು ಸಂಪೂರ್ಣವಾಗಿ ಕಡಿಮೆಯಾಗುವ ಸಾಧ್ಯತೆಗಳು ತುಂಬಾ ಹತ್ತಿರವಂತೂ ಕಾಣುತ್ತಿಲ್ಲ ಅಂತ ಹೇಳಬಹುದು. ಕೋವಿಡ್-19 ಸಾಂಕ್ರಾಮಿಕ ರೋಗದ (Pandemic) ಹಾವಳಿ ಶುರುವಾದಾಗಿನಿಂದಲೂ ನಮ್ಮ ರಕ್ಷಣೆಗೆ ಇದ್ದುದ್ದು ಈ ಮುಖಕ್ಕೆ ಧರಿಸುವ ಮಾಸ್ಕ್ ಮತ್ತು ಕೈಗೆ ಹಾಕಿಕೊಳ್ಳುವ ಸ್ಯಾನಿಟೈಜರ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆನಂತರ ನಮ್ಮನ್ನೆಲ್ಲಾ ಕೋವಿಡ್-19 ಸೋಂಕಿನಿಂದ ರಕ್ಷಿಸಿದ್ದು ಕೋವಿಡ್ ವಿರುದ್ಧ ಕಂಡು ಹಿಡಿಯಲಾದ ಲಸಿಕೆಗಳು ಅಂತಾನೆ ಹೇಳಬಹುದು. ಬಹುತೇಕರು ತಮ್ಮ ಲಸಿಕೆಯ (Vaccine) ಎರಡು ಡೋಸ್ ಗಳನ್ನು ಪಡೆದು ಈ ಕೋವಿಡ್ ಸೋಂಕಿನ ಕದಂಬ ಬಾಹುಗಳಿಂದ ಬಚಾವ್ ಆದರು ಅಂತ ಹೇಳಿದರೆ ಸುಳ್ಳಲ್ಲ. ಕೋವಿಡ್ ನ ಎರಡನೇ ಅಲೆಯಲ್ಲಂತೂ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡರು.


ಆವತ್ತಿನಿಂದ ಹಿಡಿದು ಇಂದಿನ ದಿನದವರೆಗೆ ಬಹುತೇಕರು ತಮ್ಮ ಮನೆಯಿಂದ ಹೊರಗೆ ದ್ವಿಚಕ್ರದ ಮೇಲೆ ಹೋಗಬೇಕಾದರೆ ಮುಖಕ್ಕೆ ಮಾಸ್ಕ್ ಧರಿಸುವುದನ್ನು ನೋಡುತ್ತೇವೆ. ಕೋವಿಡ್-19 ಪ್ರಕರಣಗಳು ಎಲ್ಲೆಡೆ ಗಣನೀಯವಾಗಿ ಇಳಿಮುಖವಾಗಿದ್ದರೂ ಸಹ ಮಾಸ್ಕ್ ಹಾಕಿಕೊಳ್ಳುವುದು ಒಂದು ನಿತ್ಯದ ಅಭ್ಯಾಸವಾಗಿ ಬದಲಾಗಿದೆ.


ನಿನ್ನೆ ಒಂದು ದಿನದಲ್ಲಿ ಪತ್ತೆಯಾದ 547 ಹೊಸ ಕೋವಿಡ್ ಪ್ರಕರಣಗಳೊಂದಿಗೆ, ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶವು ಏಪ್ರಿಲ್ 8, 2020 ರ ನಂತರ ಭಾರತದಲ್ಲಿ ಒಂದು ದಿನದಲ್ಲಿ ಪತ್ತೆಯಾದ ಅತ್ಯಂತ ಕಡಿಮೆ ಕೋವಿಡ್-19 ಪ್ರಕರಣಗಳಾಗಿವೆ ಎಂದು ಸೋಮವಾರ ವರದಿ ಮಾಡಿದೆ, ಇದು ದೇಶದ ಒಟ್ಟು ಸೋಂಕಿತರ ಸಂಖ್ಯೆಯನ್ನು 4,46,66,924 ಕ್ಕೆ ಏರಿಸಿದೆ ಅಂತ ಹೇಳಬಹುದು.


ಕೆಲವು ತಿಂಗಳುಗಳಿಂದ ಅನೇಕ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿವೆ..


ಕಳೆದ ಕೆಲವು ತಿಂಗಳುಗಳಲ್ಲಿ, ಹಲವಾರು ದೇಶಗಳು ಕೋವಿಡ್-19 ಪ್ರಕರಣಗಳಲ್ಲಿ ಇಳಿಕೆಯನ್ನು ದಾಖಲಿಸಿವೆ. ಕೆಲವು ಆರೋಗ್ಯ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡಿದ್ದರೂ, ತಜ್ಞರು ಕೋವಿಡ್, ಫ್ಲೂ ಮತ್ತು ರೆಸ್ಪಿರೇಟರಿ ಸಿಂಕೈಟಿಯಲ್ ವೈರಸ್ (ಆರ್‌ಎಸ್‌ವಿ) ನ ಏಕಕಾಲಿಕ ಸೋಂಕನ್ನು ಒಳಗೊಂಡಿರುವ ಸಂಭಾವ್ಯ 'ಟ್ರಿಪಲ್ಡೆಮಿಕ್' ದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.


ಇದಲ್ಲದೆ, ಕಳಪೆ ಗಾಳಿಯ ಗುಣಮಟ್ಟವು ಶ್ವಾಸಕೋಶದ ಆರೋಗ್ಯವನ್ನು ಹದಗೆಡಿಸುವ ಅಪಾಯವನ್ನು ಹೆಚ್ಚಿಸಿದೆ, ಅದಕ್ಕಾಗಿಯೇ ಮಾಸ್ಕ್ ಧರಿಸುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಮುಖ್ಯವಾಗಿದೆ ಎನ್ನಲಾಗುತ್ತಿದೆ.


ಏನಿದು 'ಟ್ರಿಪಲ್ಡೆಮಿಕ್'? ಇದರ ಬಗ್ಗೆ ನಾವು ಏನು ತಿಳಿದುಕೊಳ್ಳಬೇಕು?


2022 ರ ಟ್ರಿಪಲ್ಡೆಮಿಕ್ ಸಾಂಕ್ರಾಮಿಕ ರೋಗವು ಕೋವಿಡ್-19, ಫ್ಲೂ ಮತ್ತು ರೆಸ್ಪಿರೇಟರಿ ಸಿಂಕೈಟಿಯಲ್ ವೈರಸ್ (ಆರ್‌ಎಸ್‌ವಿ) ಅನ್ನು ಏಕಕಾಲದಲ್ಲಿ ಎದುರಿಸುವ ಸಾಧ್ಯತೆಯನ್ನು ಇದು ವಿವರಿಸುತ್ತದೆ.


ಹಲವಾರು ಯುಎಸ್ ವರದಿಗಳ ಪ್ರಕಾರ, ಮೂರು ಉಸಿರಾಟದ ವೈರಸ್ ಗಳು ದೇಶದ ಅನೇಕ ಭಾಗಗಳಲ್ಲಿ ಹಾನಿಯನ್ನುಂಟು ಮಾಡುತ್ತಿವೆ. ಮಕ್ಕಳಲ್ಲಿ ಆರ್‌ಎಸ್‌ವಿ ಪ್ರಕರಣಗಳ ಹಠಾತ್ ಹೆಚ್ಚಳದಿಂದಾಗಿ, ಅನೇಕ ಮಕ್ಕಳು ಆಸ್ಪತ್ರೆಗೆ ಹೋಗಿ ಸೇರುವಂತೆ ಮಾಡಿದೆ.


ಇದಲ್ಲದೆ, ಇನ್ಫ್ಲುಯೆನ್ಸಾ ಪ್ರಕರಣಗಳು ಸಹ ಹೆಚ್ಚುತ್ತಿವೆ ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ, ಪ್ರಸ್ತುತ ಯುಎಸ್ ಕಳೆದ ಒಂದು ದಶಕದಲ್ಲೇ ಇದೇ ಮೊದಲ ಬಾರಿಗೆ ಈ ವರ್ಷದಲ್ಲಿ ಅತಿ ಹೆಚ್ಚು ಆಸ್ಪತ್ರೆಗೆ ದಾಖಲಾಗುವವರನ್ನು ನೋಡುತ್ತಿದೆ.


ಕೊನೆಯದಾಗಿ, ಎಸ್ಎಆರ್-ಕೋವ್-2 ವೈರಸ್, ಅದು ಎಷ್ಟೇ ಸೌಮ್ಯವಾಗಿದ್ದರೂ, ಸಾಕಷ್ಟು ಜನರಿಗೆ ಸೋಂಕನ್ನುಂಟು ಮಾಡುತ್ತಲೇ ಇರುತ್ತದೆ ಮತ್ತು ಸಮಾಜದಲ್ಲಿ ಹೆಚ್ಚು ದುರ್ಬಲರಾಗಿರುವವರಿಗೆ ಇನ್ನೂ ಅಪಾಯವನ್ನುಂಟು ಮಾಡುತ್ತದೆ.


ಈ ಚಳಿಗಾಲದಲ್ಲಿ ಸಂಭವನೀಯ ಟ್ರಿಪಲ್ಡೆಮಿಕ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ನಾವು ಅಗತ್ಯವಿರುವ ಎಲ್ಲಾ ಕೋವಿಡ್ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಚೆನ್ನಾಗಿ ತಯಾರಿಸಿದ ಮಾಸ್ಕ್ ಗಳನ್ನು ಧರಿಸುವುದು ನಮಗೆ ಹೆಚ್ಚಿನ ರಕ್ಷಣೆಯನ್ನು ನೀಡುತ್ತದೆ, ಆದರೆ ಇದು ನೀವು ಆಯ್ಕೆ ಮಾಡುವ ಮಾಸ್ಕ್ ನ ವಿಧ ಮತ್ತು ನೀವು ಅನುಸರಿಸುತ್ತಿರುವ ಮಾಸ್ಕಿಂಗ್ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ.


ಹಾಗಾದರೆ ಎಂತಹ ಮಾಸ್ಕ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅವುಗಳನ್ನು ಹೇಗೆ ಧರಿಸಬೇಕು ಮತ್ತು ಅಷ್ಟೇ ಅಲ್ಲದೆ ಅವುಗಳನ್ನು ಯಾವಾಗ ಬದಲಾಯಿಸಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ.


ನಿಮ್ಮ ರಕ್ಷಣೆಗಾಗಿ ಅತ್ಯುತ್ತಮ ಮಾಸ್ಕ್ ಗಳನ್ನು ಆರಿಸಿಕೊಳ್ಳಿ


ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಧರಿಸುವುದು ಒಂದು ನಿರ್ಣಾಯಕ ಸಾರ್ವಜನಿಕ ಆರೋಗ್ಯ ಸಾಧನವಾಗಿದೆ. ಆದರೆ ಉತ್ತಮವಾದ ಮಾಸ್ಕ್ ಅನ್ನು ಧರಿಸುವುದು ತುಂಬಾನೇ ಮುಖ್ಯವಾಗುತ್ತದೆ.


ಆರೋಗ್ಯ ಸಂಸ್ಥೆ ಮಾಸ್ಕ್ ಧರಿಸಲು ಶಿಫಾರಸು ಮಾಡುತ್ತದೆ, ಅದು ನಮ್ಮ ಮುಖಕ್ಕೆ ಸರಿಯಾಗಿ ಹೊಂದಿಕೊಳ್ಳುವ ಮಾಸ್ಕ್ ಆಗಿರಬೇಕು ಎಂದು ಸಹ ಹೇಳುತ್ತದೆ. ಮಾಸ್ಕ್ ಗಳು ಒದಗಿಸುವ ರಕ್ಷಣೆಯ ಮಟ್ಟಕ್ಕೆ ಅನುಗುಣವಾಗಿ ಶ್ರೇಯಾಂಕಿತವಾದ ರಕ್ಷಣಾತ್ಮಕ ಫೇಸ್ ಮಾಸ್ಕ್ ಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ.


 • ಅತ್ಯಂತ ರಕ್ಷಣಾತ್ಮಕ ಫೇಸ್ ಮಾಸ್ಕ್: ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಆಕ್ಯುಪೇಶನಲ್ ಸೇಫ್ಟಿ ಅಂಡ್ ಹೆಲ್ತ್ ಅನುಮೋದಿಸಿದ ಎನ್ 95 ಮಾಸ್ಕ್ ಗಳು ಮತ್ತು ಇತರ ರೆಸ್ಪಿರೇಟರ್ ಗಳು ಧರಿಸಲು ಸೂಕ್ತವಾಗಿರುತ್ತವೆ.

 • ಉತ್ತಮ ರಕ್ಷಣೆ ಒದಗಿಸುವ ಮಾಸ್ಕ್ ಗಳು: ಕೆಎನ್95 ಮಾಸ್ಕ್ ಗಳು ಮತ್ತು ಮುಖಕ್ಕೆ ಚೆನ್ನಾಗಿ ಹೊಂದಿಕೊಳ್ಳುವ ವಿಲೇವಾರಿ ಮಾಡುವಂತಹ ಸರ್ಜಿಕಲ್ ಮಾಸ್ಕ್ ಗಳು ಒಳ್ಳೆಯ ರಕ್ಷಣೆಯನ್ನು ನೀಡುತ್ತವೆ.

 • ಕೆಲವು ಹಂತದ ರಕ್ಷಣೆ ಒದಗಿಸುವ ಮಾಸ್ಕ್ ಗಳು: ಲೇಯರ್ಡ್ ನುಣುಪಾದ ನೇಯ್ದ ಮಾಸ್ಕ್ ಗಳು ಕೆಲವು ಹಂತದ ರಕ್ಷಣೆಯನ್ನು ಒದಗಿಸುತ್ತದೆ ಎಂದು ಹೇಳಬಹುದು.

 • ಕನಿಷ್ಠ ರಕ್ಷಣೆ ನೀಡುವ ಮಾಸ್ಕ್: ಸಡಿಲವಾಗಿ ನೇಯ್ದ ಬಟ್ಟೆಯಿಂದ ಮಾಡಿದ ಮಾಸ್ಕ್ ಗಳು ಕಡಿಮೆ ರಕ್ಷಣೆಯನ್ನು ಒದಗಿಸುತ್ತದೆ.


ವಾಯುಮಾಲಿನ್ಯದ ವಿರುದ್ಧ ಮಾಸ್ಕ್ ಧರಿಸುವುದು


ನಮಗೆಲ್ಲಾ ತಿಳಿದಿರುವಂತೆ ಉಸಿರಾಟದ ಸೋಂಕುಗಳ ಹೊರತಾಗಿ, ವಾಯುಮಾಲಿನ್ಯವು ಸಹ ನಮ್ಮ ಉಸಿರಾಟ ವ್ಯವಸ್ಥೆಯ ಮೇಲೆ ತುಂಬಾನೇ ಪರಿಣಾಮವನ್ನು ಬೀರುತ್ತದೆ. ಕಳಪೆ ಗಾಳಿಯ ಗುಣಮಟ್ಟವು ನಮಗೆ ಉಸಿರಾಡಲು ಕಷ್ಟಕರವಾಗಿರುವುದರ ಜೊತೆಗೆ, ಇದು ನಮ್ಮ ಶ್ವಾಸಕೋಶದ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತದೆ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳಿಗೆ ನಮ್ಮನ್ನು ಒಡ್ಡಿದೆ. ಫ್ಲೂ ಮತ್ತು ಕೋವಿಡ್ ನಿಂದ ರಕ್ಷಿಸುವ ಮಾಸ್ಕ್ ಗಳು ವಾಯು ಮಾಲಿನ್ಯದಿಂದ ರಕ್ಷಿಸಬಹುದು ಎಂದು ಅದು ಹೇಳಿದೆ.


ಎನ್95 ರೆಸ್ಪಿರೇಟರ್ ಮಾಸ್ಕ್ ಗಳು ಮತ್ತು ಎಫ್ಎಫ್‌ಪಿ 1 ಮಾಸ್ಕ್ ಗಳನ್ನು ಅತ್ಯುತ್ತಮ ಮಾಲಿನ್ಯ ವಿರೋಧಿ ಮಾಸ್ಕ್ ಗಳೆಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಉಸಿರಾಟದ ಕವಾಟವಿದ್ದು, ಅವು ವಾಯು ಮಾಲಿನ್ಯಕಾರಕಗಳನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸುತ್ತವೆ.


ಇದನ್ನೂ ಓದಿ: 48 ಸಾವಿರ ವರ್ಷಗಳಷ್ಟು ಹಳೆಯ ಅಪಾಯಕಾರಿ ಜೋಂಬಿ ವೈರಸ್​ಗೆ ಮರುಜೀವ, ವಿಶ್ವಕ್ಕೆ ಮತ್ತೊಂದು ಸಂಕಷ್ಟ?


ಆದಾಗ್ಯೂ, ಕೆಲವು ತಜ್ಞರು ಡಿಸ್ಪೋಸೆಬಲ್, ಸರ್ಜಿಕಲ್ ಮಾಸ್ಕ್ ಗಳು ಸಹ ಉತ್ತಮ ಆಯ್ಕೆಯಾಗಬಹುದು ಎಂದು ನಂಬುತ್ತಾರೆ, ಏಕೆಂದರೆ ಅದು ನಿಮ್ಮ ಮೂಗನ್ನು ಸಮರ್ಥವಾಗಿ ಮುಚ್ಚುತ್ತದೆ ಮತ್ತು ನಿಮ್ಮ ಗಲ್ಲದ ಕೆಳಗೆ ಹೋಗುತ್ತದೆ ಮತ್ತು ಯಾವುದೇ ಸಡಿಲವಾದ ತುದಿಗಳನ್ನು ಹೊಂದಿರುವುದಿಲ್ಲ.


ನಿಮ್ಮ ಮಾಸ್ಕ್ ಗಳನ್ನು ನೀವು ಹೇಗೆ ಧರಿಸುತ್ತೀರಿ ಎಂಬುದು ಸಹ ಮುಖ್ಯವಾಗುತ್ತದೆ..


ಕೋವಿಡ್, ಫ್ಲೂ ಅಥವಾ ಇತರ ಯಾವುದೇ ಉಸಿರಾಟದ ವೈರಸ್ ಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವ ವಿಷಯಕ್ಕೆ ಬಂದಾಗ, ಕೇವಲ ಮಾಸ್ಕ್ ಧರಿಸಿದರೆ ಸಾಲದು. ಅದು ಚೆನ್ನಾಗಿ ಹೊಂದಿಕೊಳ್ಳುವಂತಿರಬೇಕು, ಎಂದರೆ ಅದು ನಿಮ್ಮ ಮೂಗು ಮತ್ತು ಬಾಯಿಯನ್ನು ಸರಿಯಾಗಿ ಮುಚ್ಚುತ್ತದೆಯೇ, ಸ್ವಚ್ಛವಾಗಿದೆಯೇ ಮತ್ತು ಒದ್ದೆಯಾಗಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಉಸಿರಾಡಲು ಕಷ್ಟವಾಗುವ ಮಾಸ್ಕ್ ಗಳನ್ನು ಎಂದಿಗೂ ಧರಿಸಬೇಡಿ.


ಮಾಸ್ಕ್ ಹಾಕಿಕೊಳ್ಳುವಾಗ ಈ ಅಂಶಗಳ ಮೇಲೆ ಇರಲಿ ಗಮನ


- ನಿಮ್ಮ ಮಾಸ್ಕ್ ನಲ್ಲಿ ಯಾವುದೇ ರೀತಿಯ ಸೋರಿಕೆಗಳನ್ನು ಅದು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳಿ, ಅಂದರೆ ಅದು ನಿಮ್ಮ ಮಾಸ್ಕ್ ನ ಮೇಲ್ಭಾಗ, ಕೆಳಭಾಗ ಅಥವಾ ಬದಿಗಳಲ್ಲಿ ಯಾವುದೇ ತೆರೆದ ಪ್ರದೇಶಗಳನ್ನು ಹೊಂದಿರಬಾರದು.


- ನಿಮ್ಮ ಮಾಸ್ಕ್ ಅನ್ನು ಮುಟ್ಟುವ ಮೊದಲು ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಿ.


- ಮಾಸ್ಕ್ ನ ಹೊರ ಪದರವನ್ನು ಮಾತ್ರ ಸ್ಪರ್ಶಿಸಿ.


- ನಿಮ್ಮ ಮೂಗಿಗೆ ಪರಿಪೂರ್ಣವಾಗಿ ಹೊಂದಿಕೊಳ್ಳುವಂತೆ ಮಾಸ್ಕ್ ಅನ್ನು ಧರಿಸಿಕೊಳ್ಳಿ.


ಇದನ್ನೂ ಓದಿ: ಭಾರತೀಯರು ಈ ದೇಶಗಳಿಗೆ ವೀಸಾ ಇಲ್ದೇ ಹೋಗಬಹುದು, ಅಲ್ಲಿಯೇ ಕೊಡ್ತಾರಂತೆ


ಮಾಸ್ಕ್ ಅನ್ನು ಯಾವಾಗ ವಿಲೇವಾರಿ ಮಾಡಬೇಕು?


 • ತಜ್ಞರ ಪ್ರಕಾರ, ವೈದ್ಯಕೀಯ ಮಾಸ್ಕ್ ಅನ್ನು ಸರಿಯಾಗಿ ಧರಿಸಿದರೆ, ಅದು 8 ಗಂಟೆಗಳ ಕಾಲ ಪರಿಣಾಮಕಾರಿಯಾಗಿರುತ್ತದೆ.

 • ಕೊಳಕು, ಒದ್ದೆಯಾಗಿರುವ ಅಥವಾ ಯಾವುದೇ ಇತರ ವ್ಯಕ್ತಿ ಧರಿಸಿರುವ ಯಾವುದೇ ಮಾಸ್ಕ್ ಅನ್ನು ಮತ್ತೆ ಧರಿಸಬಾರದು.

 • ಮಾಸ್ಕ್ ಹಾಗೆಯೇ ಇದ್ದರೆ ಮತ್ತು ಹರಿದಿಲ್ಲದಿದ್ದರೆ, ಅದನ್ನು 3 ದಿನಗಳವರೆಗೆ ಮರುಬಳಕೆ ಮಾಡಬಹುದು. ನೀವು ಎನ್ 95 ಮಾಸ್ಕ್ ಅನ್ನು ಬಳಸಿದರೆ, ನೀವು ಅದನ್ನು ಕಾಗದ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿಡಬಹುದು ಮತ್ತು ಅದನ್ನು ಮತ್ತೆ ಬಳಸಬಹುದು. ಆದಾಗ್ಯೂ, ನಿಮ್ಮ ಮರುಬಳಕೆಯ ಮಾಸ್ಕ್ ನಿಂದಾಗಿ ನಿಮಗೆ ಉಸಿರಾಡಲು ಸಾಧ್ಯವಾಗದಿದ್ದರೆ, ಅವುಗಳನ್ನು ತಕ್ಷಣ ಎಸೆಯಿರಿ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು