Saree Selection: Saree Selection: ನಿಮ್ಮ ಚರ್ಮದ ಬಣ್ಣಕ್ಕೆ ಸೂಕ್ತವಾದ ಸೀರೆ ಆಯ್ಕೆ ಮಾಡಿ! ಹೇಗೆ ಅಂತ ಗೊತ್ತಿಲ್ವಾ? ಇಲ್ಲಿದೆ ಉತ್ತರ

ಯಾವ ಸ್ಕಿನ್ ಟೋನ್ ಗೆ ಯಾವ ಬಣ್ಣದ ಸೀರೆ ಒಪ್ಪುತ್ತದೆ ಎಂಬುವುದರ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ. ಈ ಮಾಹಿತಿ ನಿಮಗೆ ಮುಂದಿನ ಬಾರಿ ಸೀರೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಖಂಡಿತ ಉಪಯೋಗಕ್ಕೆ ಬರುತ್ತದೆ. ಅದರಲ್ಲೂ ಈ ತಿಂಗಳಿಂದ ಸಾಲು ಸಾಲು ಹಬ್ಬಗಳು ಶುರುವಾಗುವುದರಿಂದ ಹೆಚ್ಚು ಸೀರೆಕೊಳ್ಳುವ ಮಹಿಳೆಯರಿಗೆ ಈ ಮಾಹಿತಿ ಪ್ರಯೋಜನವಾಗುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸೀರೆ (Saree) ನೀರೆಯರಿಗೆ ನಿಜಕ್ಕೂ ಹೇಳಿಮಾಡಿಸಿದ ಉಡುಪು. ಸೀರೆಯಲ್ಲಿ ಹೆಣ್ಣು ಮಕ್ಕಳು ಮುದ್ದಾಗಿ, ಚೆಂದವಾಗಿ ಕಾಣುತ್ತಾರೆ. ಸೀರೆ ಕೊಳ್ಳುವಾಗ ಹೆಣ್ಣು ಮಕ್ಕಳಿಗೆ ವಿಶೇಷ ಕಾಳಜಿ. ಸೀರೆಯ ಬಣ್ಣ, ಡಿಸೈನ್, ಯಾವ ರೀತಿಯ ಬಟ್ಟೆ, ದರ ಹೀಗೆ ಎಲ್ಲವನ್ನೂ ಅಳೆದು ತೂಗಿ ತೆಗೆದುಕೊಳ್ಳುತ್ತಾರೆ. ಇನ್ನೂ ಮುಖ್ಯವಾಗಿ ಇದರ ಜೊತೆ ಈ ಸೀರೆ ಬಣ್ಣ (Saree Color) ನಮಗೆ ಒಪ್ಪುತ್ತದೆಯೋ ಇಲ್ಲ ಎಂಬುದನ್ನು ಸಹ ಹತ್ತಾರು ಬಾರಿ ಯೋಚಿಸ್ತಾರೆ. ಹೌದು ಮೇಕಪ್, ಚರ್ಮದ ಉತ್ಪನ್ನಗಳು, ಬಟ್ಟೆ ಇದ್ಯಾವುದೇ ಇರಲಿ ಇದು ನಮ್ಮ ಚರ್ಮ (Skin) ಮತ್ತು ಅದರ ಬಣ್ಣದ ಅನುಗುಣವಾಗಿ ಇರಬೇಕು. ಹೌದು ಸೀರೆಯನ್ನು ನಿಮ್ಮ ಚರ್ಮದ ಬಣ್ಣಕ್ಕೆ (Skin Tone) ತಕ್ಕಂತೆ ಖರೀದಿಸಬೇಕು. ಈ ನಿಯಮ ಅನುಸರಿಸಿದರೆ ನೀವು ಸೀರೆಯಲ್ಲಿ ಮತ್ತಷ್ಟು ಚೆಂದವಾಗಿ ಕಾಣುತ್ತೀರಾ.

ಹಾಗಾದರೆ ಯಾವ ಸ್ಕಿನ್ ಟೋನ್ ಗೆ ಯಾವ ಬಣ್ಣದ ಸೀರೆ ಒಪ್ಪುತ್ತದೆ ಎಂಬುವುದರ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ. ಈ ಮಾಹಿತಿ ನಿಮಗೆ ಮುಂದಿನ ಬಾರಿ ಸೀರೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಖಂಡಿತ ಉಪಯೋಗಕ್ಕೆ ಬರುತ್ತದೆ. ಅದರಲ್ಲೂ ಈ ತಿಂಗಳಿಂದ ಸಾಲು ಸಾಲು ಹಬ್ಬಗಳು ಶುರುವಾಗುವುದರಿಂದ ಹೆಚ್ಚು ಸೀರೆಕೊಳ್ಳುವ ಮಹಿಳೆಯರಿಗೆ ಈ ಮಾಹಿತಿ ಪ್ರಯೋಜನವಾಗುತ್ತದೆ.

1) ಲೈಟ್ ಸ್ಕಿನ್ ಕಲರ್
ನೀವು ತಿಳಿ ಮೈ ಬಣ್ಣ ಹೊಂದಿದವರಾದರೆ ನಿಮಗೆ ಕೆಂಪು, ಪೀಚ್, ಗುಲಾಬಿ ಬಣ್ಣದ ಸೀರೆಗಳು ಒಪ್ಪುತ್ತವೆ. ಹೀಗಾಗಿ ಈ ಮೈಬಣ್ಣ ಹೊಂದಿದ್ದರೆ ಸೀರೆ ಮಾತ್ರವಲ್ಲದೇ ನೀವು ಈ ಬಣ್ಣಗಳ ಬಟ್ಟೆಯನ್ನು ಸಹ ತೊಡಬಹುದು.

2) ಬೆಚ್ಚಗಿನ ಚರ್ಮ
ಇವರಿಗೆ ಬೈಗೆ ಅಥವಾ ಟ್ಯಾನ್ ಕಲರ್ ಒಪ್ಪುತ್ತವೆ.ಅಂದರೆ ಪಚ್ಚೆ ಹಸಿರು, ಕಡು ಬಣ್ಣಗಳಾದ ನೀಲಿ ಇಂತಹ ಬಣ್ಣಗಳು ಸೂಕ್ತ.ಅಥವಾ ಇವರು ಲೈಟ್ ಕಲರ್ ಸಹ ತೊಡಬಹುದು. ಪೀಚ್, ಪಿಂಕ್ ನಂತಹ ಬಣ್ಣಗಳೂ ಇವರಿಗೆ ಒಪ್ಪುತ್ತವೆ. ಬೆಚ್ಚಗಿನ ಚರ್ಮದವರಿಗೆ ಕಪ್ಪು-ಬಿಳಿ ಬಣ್ಣವೂ ಕೂಡ ಚೆನ್ನಾಗಿ ಕಾಣಿಸುತ್ತದೆ. ಇವರು ಕಿತ್ತಳೆ-ಕೆಂಪು ಬಣ್ಣದಂತಹ ನಿಯಾನ್ ಬಣ್ಣಗಳ ಸೀರೆಗಳನ್ನು ಆಯ್ಕೆ ಮಾಡದೇ ಇರುವುದು ಉತ್ತಮ. ಈ ಬಣ್ಣಗಳು ಈ ಸ್ಕಿನ್ ಟೋನ್ ಗಗೆ ಹೊಂದಿಕೆಯಾಗುವುದಿಲ್ಲ.

ಇದನ್ನೂ ಓದಿ: Monsoon Wedding Hacks: ಮಳೆಗಾಲದಲ್ಲಿ ಮದುವೆ ಮಂಟಪ ಅಲಂಕಾರ ಮಾಡೋಕೆ ಇಲ್ಲಿದೆ ಸಿಂಪಲ್ ಟಿಪ್ಸ್

3) ತಂಪಾದ ಒಳ ಚರ್ಮ
ಇವರಿಗೆ ಗುಲಾಬಿ ಅಥವಾ ವೈನ್ ಬಣ್ಣದ ಸೀರೆಗಳು ಪಚ್ಚೆ, ಬಂಗಾರದ ಬಣ್ಣದಂತಹ ಡಾರ್ಕ್ ಶೇಡ್ ಸೀರೆಗಳು ಚೆನ್ನಾಗಿ ಕಾಣುತ್ತವೆ. ಕೂಲ್ ಅಂಡರ್ ಟೋನ್ ಇರುವವರು ಲೋಹೀಯ ಬಣ್ಣ, ಕಪ್ಪು, ಬಿಳಿ ಬಣ್ಣದ ಸೀರೆಗಳ ಆಯ್ಕೆಯನ್ನು ತಪ್ಪಿಸಬೇಕು. ಈ ಬಣ್ಣಗಳಿ ಇವರನ್ನು ಡಲ್ ಆಗಿ ಕಾಣುವಂತೆ ಮಾಡುತ್ತವೆ.

4) ಮಧ್ಯಮ ಸ್ಕಿನ್ ಟೋನ್
ಮಧ್ಯಮ ಚರ್ಮದ ಬಣ್ಣ ಹೊಂದಿರುವವರು ನಿಮ್ಮ ಮೈಬಣ್ಣದ ವಿರುದ್ಧ ಬಣ್ಣಗಳ ಸೀರೆಯನ್ನು ಆಯ್ಕೆ ಮಾಡಿಕೊಳ್ಳುವುದರ ಬಗ್ಗೆ ಯೋಚಿಸಬೇಕು. ಇವರಿಗೆ ಕೆಂಪು, ನೀಲಿ, ನೇರಳೆ, ಆಲಿವ್ ಹಸಿರು ಚೆನ್ನಾಗಿ ಕಾಣುತ್ತದೆ. ಇವರು ತಪ್ಪಿಸಬೇಕಾದ ಬಣ್ಣಗಳೆಂದರೆ ಬೈಗೆ, ಕಂದು, ಕಪ್ಪು, ಗ್ರೇ. ಅಲ್ಲದೇ ಕಿತ್ತಳೆ, ಕ್ಯಾರಮೆಲ್, ಬಣ್ಣಗಳ ಔಟ್ ಫಿಟ್ ಆಗಲಿ, ಸೀರೆಯಾಗಲಿಬ ಚೆನ್ನಾಗಿ ಕಾಣುವುದಿಲ್ಲ.

5) ಆಲಿವ್ ಚರ್ಮದ ಬಣ್ಣ
ನೀವು ಆಲಿವ್ ಚರ್ಮದ ಬಣ್ಣವನ್ನು ಹೊಂದಿದ್ದರೆ, ನಿಯಾನ್‌ನಿಂದ ಪಾಸ್ಟಲ್‌ಗಳವರೆಗೆ, ಲೋಹೀಯದಿಂದ ನ್ಯೂಟ್ರಲ್‌ ನಂತಹ ಯಾವುದೇ ಬಣ್ಣವನ್ನು ಧರಿಸಬಹುದು. ಆಲಿವ್ ಚರ್ಮದ ಬಣ್ಣವು ಎಲ್ಲಾ ಬಣಕ್ಕೆ ಹೊಂದುತ್ತದೆ.

ಇದನ್ನೂ ಓದಿ:  Eye Care: ನಟಿ ಕಾಜೊಲ್‌ರಂತೆ ಹೊಳೆಯುವ ಕಣ್ಣು ನಿಮ್ಮದಾಗಬೇಕೆ? ಇಲ್ಲಿದೆ ಸಿಂಪಲ್ ಟಿಪ್ಸ್

6) ಗಾಢ ಬಣ್ಣ
ಈ ಬಣ್ಣದವರು ಸ್ವಲ್ಪ ಜಾಗ್ರತೆಯಿಂದ ಸೀರೆ, ಬಟ್ಟೆಯ ಬಣ್ಣಗಳನ್ನು ಆರಿಸಿಕೊಳ್ಳಬೇಕು. ಪಾಸ್ಟೆಲ್ ಶೇಡ್ ಗಳಾದ ನೇರಳೆ, ಗುಲಾಬಿ, ನೀಲಿ ಬಣ್ಣಗಳು ಇವರಿಗೆ ಸೂಕ್ತ. ಗಾಢ ಬಣ್ಣದವರು ಬಿಳಿ ಬಣ್ಣದ ಸೀರೆಗಳನ್ನು ಧರಿಸಬಾರದು.
Published by:Ashwini Prabhu
First published: