• Home
  • »
  • News
  • »
  • lifestyle
  • »
  • Summer Camp: ಮಕ್ಕಳಿಗಾಗಿ ಸರಿಯಾದ ಬೇಸಿಗೆ ಶಿಬಿರವನ್ನು ಹೇಗೆ ಆರಿಸುವುದು? ಇಲ್ಲಿದೆ ಮಾಹಿತಿ

Summer Camp: ಮಕ್ಕಳಿಗಾಗಿ ಸರಿಯಾದ ಬೇಸಿಗೆ ಶಿಬಿರವನ್ನು ಹೇಗೆ ಆರಿಸುವುದು? ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೇಸಿಗೆ ಶಿಬಿರ/ಸಮ್ಮರ್ ಕ್ಯಾಂಪ್ಸ್ ಎಂದು ಕರೆಯಲಾಗುವ ಇದು ಅನುಭವಿ ತರಬೇತುದಾರರಿಂದ ಮಕ್ಕಳಿಗಾಗಿ ನಡೆಯುವ ಶಿಬಿರಗಳು. ಈ ಶಿಬಿರಗಳಲ್ಲಿ, ಮಕ್ಕಳ ದೈನಂದಿನ ಕಲಿಕೆಯ ಬದಲಾಗಿ, ಬೇರೆಯದೇ ರೀತಿಯ ಶಿಕ್ಷಣ ನೀಡಲಾಗುತ್ತದೆ.

  • Share this:

ಮಕ್ಕಳಿಗೆ (School) ಪರೀಕ್ಷೆಗಳು (Exams) ಮುಗಿದು ಇನ್ನೇನು ಸಮ್ಮರ್ ಹಾಲಿಡೇಸ್ (Summer Holidays) ಪ್ರಾರಂಭವಾಗುತ್ತಿವೆ, ಮಕ್ಕಳಿಗೆ ರಜೆಯ ಮಜದ ಖುಷಿಯಾದರೆ, ಪೋಷಕರಿಗೆ ಹೇಗಪ್ಪಾ ಇವರನ್ನು ಕಂಟ್ರೋಲ್ ಮಾಡೋದು ಅನ್ನೋದೆ ಚಿಂತೆ. ಬೇಸಿಗೆಯ ರಜಾ ಉತ್ತಮವಾಗಿ ಕಳೆಯಲು, ಪೋಷಕರ (Parents) ಚಿಂತೆ ದೂರಮಾಡಲು ಇರುವುದೊಂದೇ ಪರಿಹಾರ, ಅದುವೇ ಮಕ್ಕಳ ಬೇಸಿಗೆ ಶಿಬಿರ (Children Summer Camp). ಹೌದು, ಬೇಸಿಗೆ ಶಿಬಿರ/ಸಮ್ಮರ್ ಕ್ಯಾಂಪ್ಸ್ ಎಂದು ಕರೆಯಲಾಗುವ ಇದು ಅನುಭವಿ ತರಬೇತುದಾರರಿಂದ ಮಕ್ಕಳಿಗಾಗಿ ನಡೆಯುವ ಶಿಬಿರಗಳು. ಈ ಶಿಬಿರಗಳಲ್ಲಿ, ಮಕ್ಕಳ ದೈನಂದಿನ ಕಲಿಕೆಯ ಬದಲಾಗಿ, ಬೇರೆಯದೇ ರೀತಿಯ ಶಿಕ್ಷಣ ನೀಡಲಾಗುತ್ತದೆ.


ಇವುಗಳು ಅಟಗಳು, ಬುದ್ಧಿಯನ್ನು ವೃದ್ಧಿಸುವ ಮೈಂಡ್ ಗೇಮ್ ಗಳು, ಕಲೆ ಸಂಸ್ಕೃತಿಯ ಪರಿಚಯ- ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇಂತಹ ಉನ್ನತ ಶಿಬಿರಗಳು ಜೀವಮಾನದ ನೆನಪುಗಳು ಮತ್ತು ಕೌಶಲ್ಯಗಳನ್ನು ಒದಗಿಸುತ್ತವೆ.


ಹಾಗಾದರೆ ಮಕ್ಕಳಿಗೆ ಉತ್ತಮ, ಸರಿಯಾದ ಬೇಸಿಗೆ ಶಿಬಿರವನ್ನು ಹೇಗೆ ಆರಿಸುವುದು ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ.


1)ಕೂಲ್ ಕ್ಯಾಂಪ್ ಅನ್ನು ಆರಿಸಿ


ಇಂದಿನ ಸಮ್ಮರ್ ಕ್ಯಾಂಪ್ ಗಳು ವೈವಿಧ್ಯಮಯವಾಗಿವೆ. ಸಂಗೀತ ಮತ್ತು ರಂಗಭೂಮಿ, ಕಲೆ ಮತ್ತು ವಿಜ್ಞಾನ, ಭಾಷೆ, ಕ್ರೀಡೆ ವಿಷಯಗಳು ಮತ್ತು ಕಂಪ್ಯೂಟರ್‌ಗಳ ಮೇಲೆ ಕೇಂದ್ರೀಕರಿಸುವ ಶಿಬಿರಗಳಿವೆ. ಯಾವುದೇ ಪ್ರಧಾನ ಕಛೇರಿಯನ್ನು ಹೊಂದಿರದ ವ್ಯಾನ್ ಶಿಬಿರಗಳು ಸಹ ಇವೆ. ಆದರೆ ಬದಲಿಗೆ ಉದ್ಯಾನವನಗಳು ಮತ್ತು ಸ್ಥಳೀಯ ಆಸಕ್ತಿಯ ಇತರ ಪ್ರದೇಶಗಳಲ್ಲಿ ಇರುವಂತಹ ಬೇಸಿಗೆ ಶಿಬಿರಗಳನ್ನು ಆರಿಸಿ. ಜೊತೆಗೆ ನಿಮ್ಮ ಮಗುವಿನ ಆಯ್ಕೆಯನ್ನು ಒಮ್ಮೆ ಪರಿಗಣಿಸಿ.


2) ಬೇಸಿಗೆ ಶಿಬಿರದ ಹಿನ್ನೆಲೆ ಪರಿಶೀಲನೆ ಮಾಡಿ


ಮಕ್ಕಳನ್ನು ಒಂಟಿಯಾಗಿ ಬೇಸಿಗೆ ಶಿಬಿರಗಳಲ್ಲಿ ಬಿಡುವುದರಿಂದ ಅವುಗಳ ಹಿನ್ನೆಲೆಯನ್ನು ಅಗತ್ಯವಾಗಿ ಪೋಷಕರು ಮಾಡಬೇಕಾಗುತ್ತದೆ. ಯಾರು ಶಿಬಿರ ನಡೆಸುತ್ತಿದ್ದಾರೆ, ಅವರ ಈ ಹಿಂದೆ ಏನು ಮಾಡುತ್ತಿದ್ದರು ಎಂದು ಶಿಬಿರ ನಡೆಸುವ ಮುಖ್ಯಸ್ಥರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ನಿಮ್ಮ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹೀಗೆ ಮಾಡಿದ್ದಲ್ಲಿ ಪೋಷಕರು ಸಹ ನೀರಳವಾಗಿರಬಹುದು.


ಇದನ್ನೂ ಓದಿ:  Health Care: ಪ್ರತಿ ಆರೋಗ್ಯ ಸಮಸ್ಯೆಗೂ ಆ್ಯಂಟಿಬಯೋಟಿಕ್‌ಗಳ ಸೇವನೆ ಮಾಡುತ್ತಿದ್ದೀರಾ? ಇದರಿಂದ ಜೀವಕ್ಕೆ ಅಪಾಯ ಬರಬಹುದು ಹುಷಾರ್


ಉತ್ತಮ ಹಿನ್ನಲೆಯಿಂದ ಬಂದಿರುವವರು ಮಕ್ಕಳನ್ನು ಹೆಚ್ಚು ಉತ್ತಮರನ್ನಾಗಿಸುತ್ತಾರೆ. ಹೀಗಾಗಿ ಮಗುವಿನ ಆರೋಗ್ಯ ಮತ್ತು ಸುರಕ್ಷತೆಗೆ ಶಿಬಿರವು ಬದ್ಧತೆ ಮತ್ತು ಮಾನ್ಯತೆಯನ್ನು ಪಡೆದಿದೆ ಎಂದು ಮೊದಲು ಖಚಿತ ಪಡಿಸಿಕೊಳ್ಳಬೇಕು.


3) ಕೈಗೆಟುಕುವ ದರದ ಶಿಬಿರ ಆರಿಸಿ


ಬೇಸಿಗೆಯ ರಜೆ ಕಳೆಯಲು ನಿಮ್ಮ ಮಗುವಿಗೆ ನೀವು ಎಷ್ಟು ಪಾವತಿಸಬೇಕು ಎಂದು ಮೊದಲೇ ಅಂದಾಜು ಮಾಡಿಕೊಳ್ಳಿ. ನಾಯಿಕೊಡೆಯಂತೆ ನಗರದಾದ್ಯಂತ ಶಿಬಿರಗಳು ತಲೆಎತ್ತಿವೆ. ಹೀಗಾಗಿ ನಿಮಗೆ ಆಯ್ಕೆಗಳು ಹೆಚ್ಚಾಗಿದ್ದು ನಿಮ್ಮ ಆದಾಯಕ್ಕೆ ತಕ್ಕ ಶಿಬಿರಗಳನ್ನು ಆರಿಸಿ. ಆದಷ್ಟು ಕೈಗೆಟಕುವ ದರದ ಶಿಬಿರಗಳನ್ನು ಮಕ್ಕಳಿಗೆ ಆರಿಸಿಕೊಳ್ಳಿ.


4) ಶಾಲೆಯಲ್ಲಿ ಕಲಿಯುವುದರ ಹೊರತಾಗಿ ಏನು ಕಲಿಯಬಹುದು ನೋಡಿ


ಶಾಲೆಯು ಹೊರಗಿರುವಾಗಲೂ ನಿಮ್ಮ ಮಕ್ಕಳು ಕಲಿಯುತ್ತಲೇ ಇರುತ್ತಾರೆ. iD ಟೆಕ್‌ನಂತಹ ಶೈಕ್ಷಣಿಕ ಶಿಬಿರಗಳು ಶಿಕ್ಷಣ ಮತ್ತು ಲವಲವಿಕೆಯ ಪಠ್ಯೇತರ ಚಟುವಟಿಕೆಗಳ ಮೋಜಿನ ಸಮತೋಲನವನ್ನು ಒದಗಿಸುತ್ತವೆ. ಉತ್ತಮ ಭಾಗವೆಂದರೆ, ಅಂತಹ ಶಿಬಿರಗಳು ಹೆಚ್ಚಿನ ಶಾಲೆಗಳು ಕಲಿಸದ ಅಥವಾ ಕಲಿಸಲಾಗದ ವಿಷಯಗಳ ಸುತ್ತ ಸುತ್ತುತ್ತವೆ. ಕ್ರೀಡೆ, ಚಿತ್ರಕಲೆ, ಅಥ್ಲೆಟಿಕ್, ಸಾಹಸಗಳು ಹೀಗೆ ಹಲವಾರು ಚಟುವಟಿಕೆಗಳಿರುವ ಶಿಬಿರಗಳನ್ನು ಆಯ್ಕೆ ಮಾಡಿ.


5) ಶಿಬಿರದ ಸೆಟ್ಟಿಂಗ್, ಟೋನ್ ಮತ್ತು ವೈಬ್ ಅನ್ನು ಪರಿಗಣಿಸಿ.


ಕೆಲವು ಶೈಕ್ಷಣಿಕ, ಕ್ರೀಡೆಗಳು, ಕಲೆಗಳು ಮತ್ತು ತಂತ್ರಜ್ಞಾನ ಶಿಬಿರಗಳು ಅನನ್ಯ ತಜ್ಞರೊಂದಿಗೆ ತಂಡವನ್ನು ಹೊಂದುತ್ತವೆ ಮತ್ತು ಮಕ್ಕಳನ್ನು ಪ್ರೇರೇಪಿಸುವ ಭರವಸೆಯಲ್ಲಿ ನಿರ್ದಿಷ್ಟ ವಾತಾವರಣವನ್ನು ಬೆಳೆಸುತ್ತವೆ. ನೀವು ವಿವಿಧ ಆಯ್ಕೆಗಳನ್ನು ಪರಿಶೀಲಿಸುವಾಗ ಇದು ಖಂಡಿತವಾಗಿಯೂ ಗಮನಹರಿಸಬೇಕಾದ ಸಂಗತಿಯಾಗಿದೆ.


6) ಶಿಬಿರದ ಪ್ರಕಾರವನ್ನು ಆಧರಿಸಿ (ದಿನ, ಸ್ಲೀಪ್-ಓವರ್ ಶಿಬಿರ)


ಬೇಸಿಗೆಯ ಕಲ್ಪನೆಗೆ ಮಕ್ಕಳು ಒಗ್ಗಿಕೊಳ್ಳಲು ದಿನದ ಶಿಬಿರಗಳು ಅತ್ಯುತ್ತಮ ಆಯ್ಕೆಗಳಾಗಿವೆ. ನಿಮ್ಮ ಮಕ್ಕಳು ಸ್ವಲ್ಪ ಮೆಚುರ್ಡ್ ಎಂದಿನಿಸಿದರೆ ಸ್ಲೀಪ್-ಓವರ್ ಶಿಬಿರಗಳನ್ನು ಪರಿಗಣಿಸಬಹುದು.


ಇದನ್ನೂ ಓದಿ:  Memory & Concentration: ಪರೀಕ್ಷೆ ಸಮಯದಲ್ಲಿ ಸ್ಮರಣಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ 5 ಆಹಾರಗಳು!


7) ಅಂತಿಮವಾಗಿ 'ಮೋಜಿನ' ಉದ್ದೇಶ


ಶಿಬಿರದಲ್ಲಿ ನಿಮ್ಮ ಮಗುವಿಗೆ ಮೋಜು ಮಾಡಲು ಸಾಕಷ್ಟು ಅವಕಾಶಗಳಿವೆ ಎಂದು ಖಚಿತಪಡಿಸಿಕೊಳ್ಳಿ. ಶಿಬಿರಗಳು ನಿಮ್ಮ ಮಗುವಿನ ಶೈಕ್ಷಣಿಕ ವಿಷಯಕ್ಕಿಂತ ಅವರಿಗೆ ಹೆಚ್ಚು ಮೋಜಿನ ಚಟುವಟಿಕೆಗಳನ್ನು ನೀಡುವಂತವಾಗಬೇಕು

Published by:Mahmadrafik K
First published: