Education Tips: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಸೆಂಟರ್​ ಹುಡುಕುವಾಗ ಈ ಟಿಪ್ಸ್ ಫಾಲೋ ಮಾಡಿ

Life Hacks: ಕೇವಲ ಕೋಚಿಂಗ್ ಮಾತ್ರವಲ್ಲದೆ, ನಿಮ್ಮ ತಯಾರಿಯಲ್ಲಿ ನಿಮಗೆ ಸಹಾಯ ಮಾಡುವ ಅಧ್ಯಯನ ಸಾಮಗ್ರಿ ಮತ್ತು  ಪುಸ್ತಕಗಳ ಪಟ್ಟಿಗಳನ್ನು ಒದಗಿಸುವ ಕೋಚಿಂಗ್ ಸೆಂಟರ್ ಅನ್ನು ಆಯ್ಕೆ ಮಾಡಿಕೊಳ್ಳಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿದ್ಯಾರ್ಥಿಗಳು (Student) ತಮ್ಮ ಪಿಯುಸಿ (PUC) ವಿದ್ಯಾಭ್ಯಾಸ ಮುಗಿಸಿದ ನಂತರ ಇಂಜಿನಿಯರ್ ಅಥವಾ ವೈದ್ಯಕೀಯ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಅದಕ್ಕೆ ತಯಾರಿ ನಡೆಸಲು ಈ ಮಹಾ ನಗರಗಳಲ್ಲಿರುವ ಸಿಇಟಿ (CET) ಪರೀಕ್ಷೆಗಳ ತರಬೇತಿ ಕೇಂದ್ರಗಳಿಗೆ ಹೇಗೆ ಹೋಗುತ್ತಾರೋ, ಅದೇ ಮಾದರಿಯಲ್ಲಿ ಪದವಿ ಮುಗಿಸಿಕೊಂಡ ಅನೇಕ ವಿದ್ಯಾರ್ಥಿಗಳು ಈ ಸರ್ಕಾರಿ ಹುದ್ದೆಗಳಲ್ಲಿ ಭರ್ತಿಯಾಗಲು ಆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಸೂಕ್ತವಾದ ತರಬೇತಿ ಕೇಂದ್ರಗಳಲ್ಲಿ (Coaching Centers)  ತಮ್ಮ ಸೀಟನ್ನು ಭದ್ರ ಪಡಿಸಿಕೊಳ್ಳಲು ಸಾಲು ಸಾಲಾಗಿ ನಿಂತುಕೊಂಡು ಕಾಯುತ್ತಿರುವುದನ್ನು ಸಹ ನಾವು ಇತ್ತೀಚೆಗೆ ನೋಡುತ್ತಿದ್ದೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹೌದು..ಮತ್ತೆ ಈಗ ವಿದ್ಯಾರ್ಥಿಗಳು ಸರ್ಕಾರಿ ಕೆಲಸಗಳತ್ತ ಮುಖ ಮಾಡಿರುವುದಂತೂ ನಿಜ, ವಿವಿಧ ಸರ್ಕಾರಿ ವಿಭಾಗಗಳಲ್ಲಿ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಲು ಪದವಿ ಮುಗಿಸಿದ ವಿದ್ಯಾರ್ಥಿಗಳು ಒಂದೆರಡು ವರ್ಷಗಳ ಕಾಲ ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಲುವಾಗಿಯೇ ತರಬೇತಿಯನ್ನು ಪಡೆಯುವುದನ್ನು ನಾವು ನೋಡುತ್ತೇವೆ.

ಬ್ಯಾಂಕಿನ ಹುದ್ದೆಗಳಿಗೆ, ಪೊಲೀಸ್ ಅಧಿಕಾರಿ ಹುದ್ದೆಗಳಿಗೆ ಮತ್ತು ಇನ್ನಿತರೇ ಸರ್ಕಾರಿ ಹುದ್ದೆಗಳಿಗೆ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಲೆಂದು ಅನೇಕ ರೀತಿಯ ಕೋಚಿಂಗ್ ಸೆಂಟರ್ ಗಳು ಬಹುತೇಕವಾಗಿ ಎಲ್ಲಾ ಸ್ತರದ ನಗರಗಳಲ್ಲಿ ತಲೆಯತ್ತಿವೆ ಎಂದು ಹೇಳಬಹುದು.

ಅದರಲ್ಲೂ ಈ ಬೆಂಗಳೂರಿನ ಅಂತಹ ಮಹಾ ನಗರಗಳಲ್ಲಿ ವಿಶೇಷವಾಗಿ ಮಲ್ಲೇಶ್ವರಂ. ಮತ್ತು ಕೋರಮಂಗಲ ನಂತಹ ಪ್ರದೇಶಗಳು, ದೊಡ್ಡ ಸಂಖ್ಯೆಯಲ್ಲಿ ಅನೇಕ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಾರೆ ಎಂದು ಹೇಳಬಹುದು. ಆದರೆ ನೀವು ಅದರಲ್ಲಿ ಅತ್ಯುತ್ತಮವಾದದನ್ನು ಹೇಗೆ ಆಯ್ಕೆ ಮಾಡುತ್ತೀರಿ? ಕೋಚಿಂಗ್ ಸೆಂಟರ್ ಆಯ್ಕೆ ಮಾಡುವಾಗ ಈ ಕೆಳಗಿನ ಅಂಶಗಳ ಬಗ್ಗೆ ಇರಲಿ ಸ್ವಲ್ಪ ಗಮನ.

1. ಅನುಭವಿ ಬೋಧಕ ವರ್ಗ

ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಸೆಂಟರ್ ಆಯ್ಕೆ ಮಾಡುವಾಗ, ಸಂಬಂಧಪಟ್ಟ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಬೋಧಕ ಸದಸ್ಯರು ಆ ಕೋಚಿಂಗ್ ಸಂಸ್ಥೆಯ ಭಾಗವಾಗಿದ್ದಾರೆಯೇ ಎಂಬುದನ್ನು ಮೊದಲಿಗೆ ಗಮನಿಸಿ. ಕೋಚಿಂಗ್ ಸೆಂಟರ್ ಅನ್ನು ಆಯ್ಕೆ ಮಾಡುವಾಗ, ನೀವು ಆಯಾ ಕ್ಷೇತ್ರಗಳಲ್ಲಿ ಅಪಾರ ಅನುಭವವನ್ನು ಹೊಂದಿರುವ ಮತ್ತು ಫಲಿತಾಂಶ ಆಧಾರಿತವಾಗಿರುವ ಬೋಧಕರನ್ನು ಹುಡುಕಬೇಕು.

ಅವರ ಹಿಂದಿನ ಸಾಧನೆಗಳನ್ನು ಸಹ ನೀವು ನೋಡಬೇಕು ಮತ್ತು ಬೋಧಕ ವರ್ಗದ ಬಗ್ಗೆ ತಿಳಿದುಕೊಳ್ಳಲು ಉತ್ತಮ ಮಾರ್ಗವೆಂದರೆ ಈ ಕೋಚಿಂಗ್ ಸಂಸ್ಥೆಗಳು ನಡೆಸುವ ಡೆಮೋ ತರಗತಿಗಳಿಗೆ ಹಾಜರಾಗುವುದು.

ಇದನ್ನೂ ಓದಿ: ಈ ಸಮಸ್ಯೆಗಳು ಬಾಯಿಯ ಕ್ಯಾನ್ಸರ್​ ಲಕ್ಷಣವಂತೆ - ತಕ್ಷಣ ವೈದ್ಯರನ್ನು ಭೇಟಿ ಮಾಡಿ

2. ಹಿಂದಿನ ಸಾಧನೆಗಳ ಬಗ್ಗೆ ತಿಳಿದುಕೊಳ್ಳಿರಿ

ಕೋಚಿಂಗ್ ಸೆಂಟರ್ ನಲ್ಲಿ ಸೇರಿಕೊಳ್ಳುವ ಮೊದಲಿಗೆ ನೀವು ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಹಿಂದಿನ ಸಾಧನೆಗಳ ಬಗ್ಗೆ ತಿಳಿದು ಕೊಳ್ಳಬೇಕು ಮತ್ತು ಆ ಸಂಸ್ಥೆಯ ಹಿಂದಿನ ದಾಖಲೆಗಳ ಬಗ್ಗೆ ತಿಳಿದು ಕೊಳ್ಳಬೇಕು.

ಅವರ ಹಿನ್ನೆಲೆ ಮತ್ತು ಪುರಾವೆಗಳನ್ನು ಪರಿಶೀಲಿಸಲು ಪ್ರಯತ್ನಿಸಿ. ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಕೋಚಿಂಗ್ ಸೆಂಟರ್ ಗಳ ಮಾಜಿ ವಿದ್ಯಾರ್ಥಿಗಳೊಂದಿಗೂ ನೀವು ಮಾತನಾಡಬಹುದು.

3. ವೈಯಕ್ತಿಕ ಕಾರ್ಯಕ್ಷಮತೆಯ ಮೌಲ್ಯಮಾಪನ

ನೀವು ಸೇರಲು ಆಯ್ಕೆ ಮಾಡುವ ಸಂಸ್ಥೆಯು ಅಣಕು ಪರೀಕ್ಷೆಗಳ ಮೂಲಕ ವೈಯಕ್ತಿಕ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವಂತಿರಬೇಕು.

ಈ ಮೌಲ್ಯಮಾಪನವು ನಿಮ್ಮ ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳನ್ನು ಕಾಲ ಕಾಲಕ್ಕೆ ನಿಮಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ, ಇದಲ್ಲದೆ ನಿಮಗಿರುವ ದೌರ್ಬಲ್ಯಗಳನ್ನು ಹೇಗೆ ನಿವಾರಿಸಿಕೊಳ್ಳಬಹುದು ಎಂಬುದರ ಬಗ್ಗೆ ನಿಮಗೆ ಹೇಳುತ್ತದೆ.

4. ಅಧ್ಯಯನ ಸಾಮಗ್ರಿ

ಉದ್ಯೋಗ ಅಧಿಸೂಚನೆಗಳೊಂದಿಗೆ, ಮಾರುಕಟ್ಟೆಯು ಸಾಕಷ್ಟು ಅಧ್ಯಯನ ಸಾಮಗ್ರಿಗಳಿಂದ ತುಂಬಿ ತುಳುಕುತ್ತದೆ. ಈ ಅಧ್ಯಯನ ಸಾಮಗ್ರಿಗಳನ್ನು ತಯಾರಿಸುವಾಗ ಸರಿಯಾದ ಪುಸ್ತಕಗಳನ್ನು ಆಯ್ಕೆ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ.

ಇದನ್ನೂ ಓದಿ: ಮದುವೆಗೆ ಲೇಟೆಸ್ಟ್ ಡಿಸೈನ್ ಚಿನ್ನಾಭರಣ ಬೇಕು ಎಂದ್ರೆ ಬೆಂಗಳೂರಿನ ಈ ಸ್ಥಳಗಳಿಗೆ ಭೇಟಿ ಕೊಡಿ!

ಕೇವಲ ಕೋಚಿಂಗ್ ಮಾತ್ರವಲ್ಲದೆ, ನಿಮ್ಮ ತಯಾರಿಯಲ್ಲಿ ನಿಮಗೆ ಸಹಾಯ ಮಾಡುವ ಅಧ್ಯಯನ ಸಾಮಗ್ರಿ ಮತ್ತು  ಪುಸ್ತಕಗಳ ಪಟ್ಟಿಗಳನ್ನು ಒದಗಿಸುವ ಕೋಚಿಂಗ್ ಸೆಂಟರ್ ಅನ್ನು ಆಯ್ಕೆ ಮಾಡಿಕೊಳ್ಳಿರಿ.
Published by:Sandhya M
First published: