Kitchen Hacks: ಒಲೆಯ ಮೇಲಿಟ್ಟ ಅಡುಗೆ ಎಣ್ಣೆ ಕಾದಿದೆಯೋ ಇಲ್ಲವೋ ನೋಡಲು ಇಲ್ಲಿದೆ ಸೂಪರ್ ಟಿಪ್ಸ್‌..

How to Check Your Cooking Oils Temperature: ಹಾಗಾದರೆ ಎಣ್ಣೆ ಕಾದಿದೆಯಾ ಇಲ್ಲವೋ ಎಂದು ತಿಳಿಯುವುದು ಹೇಗೆ..? ಒಬ್ಬೊಬ್ಬರು ಬಾಣಲಿಯಲ್ಲಿ ಎಣ್ಣೆ ಹಾಕಿದ ಮೇಲೆ ಸ್ವಲ್ಪ ಸಮಯ ಬಿಟ್ಟು ಬಾಣಲಿಯಲ್ಲಿ ಹಾಕಿದ ಎಣ್ಣೆಯ ಸ್ವಲ್ಪ ಎತ್ತರದಲ್ಲಿ ಅಂಗೈ ಹಿಡಿಯುತ್ತಾರೆ. ಅಂಗೈಗೆ ಬಿಸಿ ಹಬೆ ಚೆನ್ನಾಗಿ ತಾಗಿದರೆ ಎಣ್ಣೆ ಕಾದಿದೆ ಎನ್ನುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಡುಗೆ(Kitchen) ಮನೆ ಒಂದು ಯೂನಿವರ್ಸಿಟಿ(University) ಇದ್ದ ಹಾಗೆ. ಹೇಗೆ ವಿಶ್ವವಿದ್ಯಾಲಯಗಳಲ್ಲಿ ಎಷ್ಟೇ ಕಲಿತರೂ ಕಡಿಮೆ ಎನಿಸುತ್ತದೆಯೋ ಅದೇ ರೀತಿ ಅಡುಗೆ ಮನೆಯಲ್ಲಿಯೂ ನಾವು ಅಳೆದು ತೂಗಿ ಮಾಡುವ ಕಲೆಯಾದ ಅಡುಗೆಯನ್ನು ದಿನಂಪ್ರತಿ ಕಲಿಯುವುದು ಇರುತ್ತದೆ. ಅದಕ್ಕೆ ಹಿರಿಯರು ಅಡುಗೆ ಎನ್ನುವುದು ಒಂದು ಕೌಶಲ್ಯ ಎನ್ನುತ್ತಾರೆ. ಉಪ್ಪು ಹುಳಿ, ಖಾರವನ್ನು ಹದವಾಗಿ ಹಾಕಿ ಅಡುಗೆ ಮಾಡುವ ಕಲೆ ಶ್ರದ್ಧೆಯಿಂದ ಕಲಿತಾಗ ಬರುತ್ತದೆ ಎಂಬ ಲೋಕ ರೂಢಿ ಮಾತು ಉಂಟು.

ಹಾಗಾಗಿ ಅಡುಗೆ ಮನೆಯಲ್ಲಿ ಸಣ್ಣ ಕೊತ್ತಂಬರಿ ಹೆಚ್ಚುವುದರಿಂದ ಹಿಡಿದು ಪ್ರತಿಯೊಂದಕ್ಕೂ ಸಣ್ಣ ಸಣ್ಣ ಪರ್ಯಾಯ ಮಾರ್ಗ ಕಂಡುಕೊಂಡರೆ ಅಡುಗೆ ಬೇಗ ಮುಗಿಸಬಹುದು ಹಾಗೂ  ಉಂಟಾಗುವ ಎಡವಟ್ಟುಗಳನ್ನು ತಪ್ಪಿಸಬಹುದು. ಉದಾಹರಣೆಗೆ ಕೊತ್ತಂಬರಿ ಕತ್ತರಿಸುವುದು ಹೇಗೆ, ಆಲೂಗಡ್ಡೆ ಸಿಪ್ಪೆ ಸುಲಿಯುವುದು ಹೇಗೆ, ತರಕಾರಿಗಳನ್ನು ಬಹಳ ಬೇಗ ಕತ್ತರಿಸುವುದು ಹೇಗೆ, ತರಕಾರಿಗಳನ್ನು ಬಹಳ ದಿನಗಳ ಕಾಲ ತಾಜಾವಾಗಿ ಇರುವಂತೆ ಮಾಡುವುದು ಹೇಗೆ? ಕಲೆಯುಲು ಹೊದರೆ ಬಹಳಷ್ಟಿದೆ.

ಇನ್ನು ಅಡುಗೆ ಮನೆಯಲ್ಲಿ ಕರಿದ ಪದಾರ್ಥಗಳಿಗೂ ಬಹಳ  ಪ್ರಾಶಸ್ತ್ಯ ಇದ್ದೇ ಇರುತ್ತದೆ. ವಾರದಲ್ಲಿ ಒಮ್ಮೆಯಾದರೂ ಒಲೆ ಮೇಲೆ ಎಣ್ಣೆ ಇಟ್ಟು ಬೋಂಡಾ, ಬಜ್ಜಿ, ಹಪ್ಪಳ, ಸಂಡಿಗೆಗಳನ್ನು ಕರಿಯಲಾಗುತ್ತದೆ. ಇದನ್ನು ಮಾಡುವ ಮೊದಲು ಎಣ್ಣೆ ಚೆನ್ನಾಗಿ ಕಾಯಬೇಕು. ಎಣ್ಣೆ ಕಾಯುವ ಮೊದಲು ಬೋಂಡಾ, ಬಜ್ಜಿ ಮಾಡಲು ಶುರುವಿಟ್ಟರೆ ರುಚಿಯೇ ಭಿನ್ನವಾಗುತ್ತದೆ. ಹಾಗಾಗಿ ಎಲ್ಲರೂ ಎಣ್ಣೆ ಕಾದ ಮೇಲೆ ಇವುಗಳನ್ನು ಮಾಡಲು ಶುರುವಿಡುತ್ತಾರೆ.

ಇದನ್ನೂ ಓದಿ: ಈ 7 ಸಲಹೆ ಪಾಲಿಸುವುದರಿಂದ ಹೃದಯಾಘಾತದಿಂದ ಪಾರಾಗಬಹುದು!

ಹಾಗಾದರೆ ಎಣ್ಣೆ ಕಾದಿದೆಯಾ ಇಲ್ಲವೋ ಎಂದು ತಿಳಿಯುವುದು ಹೇಗೆ..? ಒಬ್ಬೊಬ್ಬರು ಬಾಣಲಿಯಲ್ಲಿ ಎಣ್ಣೆ ಹಾಕಿದ ಮೇಲೆ ಸ್ವಲ್ಪ ಸಮಯ ಬಿಟ್ಟು ಬಾಣಲಿಯಲ್ಲಿ ಹಾಕಿದ ಎಣ್ಣೆಯ ಸ್ವಲ್ಪ ಎತ್ತರದಲ್ಲಿ ಅಂಗೈ ಹಿಡಿಯುತ್ತಾರೆ. ಅಂಗೈಗೆ ಬಿಸಿ ಹಬೆ ಚೆನ್ನಾಗಿ ತಾಗಿದರೆ ಎಣ್ಣೆ ಕಾದಿದೆ ಎನ್ನುತ್ತಾರೆ. ಇನ್ನು ಕೆಲವರು ಮಾಡಬೇಕಾದ ಪದಾರ್ಥವನ್ನು ಎಣ್ಣೆಗೆ ಹಾಕಿ ನೋಡುತ್ತಾರೆ. ಹೀಗೆ ಹಲವು ಟ್ರಿಕ್‍ಗಳನ್ನು ಮಾಡುತ್ತಾರೆ.

ಹಾಗಾದರೆ ಈ ಎಲ್ಲ ಸರ್ಕಸ್ ಮಾಡದೇ  ಎಣ್ಣೆ ಕಾದಿದೆಯೋ ಇಲ್ಲವೂ  ಎಂಬುದನ್ನು ನೋಡುವುದು ಹೇಗೆ ಎಂಬ ಮತ್ತೊಂದು ವಿಧಾನವನ್ನು @mamainthekitchen ಎಂಬ ಟಿಕ್‍ಟಾಕ್ ಕ್ರಿಯೇಟರ್ ತಮ್ಮ ಟಿಕ್‍ಟಾಕ್‍ನಲ್ಲಿ ಹೇಳಿಕೊಟ್ಟಿದ್ದಾರೆ. ಇದಕ್ಕೆ ಮರದ ಸ್ಪೂನ್ ಹೊರತಾಗಿ ಯಾವ ವಸ್ತುವೂ ಬೇಡ ಎನ್ನುತ್ತಾರೆ.

ನಿಮ್ಮ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿದ ನಂತರ, ನೀವು ಮರದ ಚಮಚ ಅಥವಾ ಚಾಕು ತುದಿಯನ್ನು ಎಣ್ಣೆಯಲ್ಲಿ ಇರಿಸಬೇಕು. ಇದು ಸಾಕಷ್ಟು ಬಿಸಿಯಾಗಿಲ್ಲದಿದ್ದರೆ, ಮರದ ಸುತ್ತ ಯಾವುದೇ ಗುಳ್ಳೆಗಳು ರೂಪುಗೊಳ್ಳುವುದಿಲ್ಲ. ಆಗ ನೀವು ಪುನಃ ಎಣ್ಣೆ ಬಿಸಿಮಾಡಬೇಕಾಗುತ್ತದೆ. ಮರದ ಸುತ್ತಲೂ ಸಣ್ಣ ಗುಳ್ಳೆಗಳು ಸಂಗ್ರಹವಾದರೆ ಎಣ್ಣೆ  ಕರಿಯಲು ಸಿದ್ಧವಾಗಿದೆ ಎಂದರ್ಥ. ಮುಖ್ಯವಾಗಿ ಗುಳ್ಳೆಗಳು ಚಿಕ್ಕದಾಗಿರಬೇಕು. ದೊಡ್ಡದಾದ ಗುಳ್ಳೆಗಳು ಬರುತ್ತಿದ್ದರೆ ಶಾಖವನ್ನು ತಗ್ಗಿಸಿ ಮತ್ತು ಮತ್ತೆ ಎಣ್ಣೆಯನ್ನು ಸ್ವಲ್ಪ ತಣ್ಣಗಾಗಲು ಬಿಡಬೇಕು ಎಂದು ಅವರು ಅದ್ಭುತವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೋ ಟಿಕ್‍ಟಾಕ್‍ನಲ್ಲಿ ಬಹಳ ವೈರಲ್ ಆಗಿತ್ತು, ಇದನ್ನು ನೋಡಿದವರು ತುಂಬಾ ಉಪಯುಕ್ತ ಮಾಹಿತಿ ಎಂದಿದ್ದಾರೆ.ಈಗಾಗಲೇ ಈ ವಿಡಿಯೋವನ್ನು ಹಲವಾರು ಜನರು ಶೇರ್ ಮಾಡಿದ್ದು, ಪ್ರಯತ್ನಿಸಿ ನೋಡಿದ್ದಾಗಿ ಕಾಮೆಂಟ್ ಸಹ ಮಾಡಿದ್ದಾರೆ.

ಇದನ್ನೂ ಓದಿ: ಸಮಸ್ಯೆಯಾಗಿ ಕಾಡುತ್ತಿರುವ ಬೆನ್ನು ನೋವು? ಇದಕ್ಕೆ ಪರಿಹಾರವೇನು?

ಇನ್ನು ಹಾಲು ಉಕ್ಕಿ ಹರಿಯುವುದನ್ನು ತಪ್ಪಿಸಲು ಹಾಲು ಉಕ್ಕುವ ಮೊದಲೇ ಅದರ ಮೇಲೆ ಮರದ ಸೌಟು ಇಟ್ಟರೆ ಉಕ್ಕಿ ಹರಿಯುವುದನ್ನು ತಪ್ಪಿಸಬಹುದು ಎಂದು ಕೆಲವರು ಹೇಳುತ್ತಾರೆ.
Published by:Sandhya M
First published: