Vitamin B12 ಕೊರತೆಯನ್ನು ಹೇಗೆ ತಿಳಿದುಕೊಳ್ಳುವುದು? ಈ ರೋಗಲಕ್ಷಣಗಳು ಹೇಗಿರುತ್ತೆ?

ವಿಟಮಿನ್​ ಬಿ12

ವಿಟಮಿನ್​ ಬಿ12

ವಿಟಮಿನ್ ಬಿ12 (B12) ಕೊರತೆಯಿಂದ ಉಂಟಾಗುವ ರೋಗಲಕ್ಷಣಗಳು ಕೊರತೆಯ ತೀವ್ರತೆ ಮತ್ತು ಅವಧಿಯನ್ನು ಅವಲಂಬಿಸಿ ಬದಲಾಗಬಹುದು.

  • Share this:

ನಮ್ಮ ದೇಹದ ಆರೋಗ್ಯವು (Health)  ಚೆನ್ನಾಗಿರಬೇಕೆಂದರೆ ಎಲ್ಲಾ ವಿಟಮಿನ್ ಗಳು ನಮ್ಮ ದೇಹಕ್ಕೆ ಸರಿಯಾಗಿ ಸಿಗುತ್ತಿರಬೇಕು. ಅಷ್ಟೊಂದು ವಿಟಮಿನ್ ಗಳಲ್ಲಿ ಒಂದು ವಿಟಮಿನ್ ನ ಕೊರತೆ ಕಂಡು ಬಂದರೂ ದೇಹದ ಆರೋಗ್ಯ ಹಳಿ ತಪ್ಪುತ್ತೆ. ವಿಟಮಿನ್ ಬಿ12 ಕೊರತೆಯು ರಕ್ತಹೀನತೆ, ಆಯಾಸ, ದೌರ್ಬಲ್ಯ ಮತ್ತು ನರ ಹಾನಿ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಟಮಿನ್ ಬಿ12 (B12) ಕೊರತೆಯಿಂದ ಉಂಟಾಗುವ ರೋಗಲಕ್ಷಣಗಳು ಕೊರತೆಯ ತೀವ್ರತೆ ಮತ್ತು ಅವಧಿಯನ್ನು ಅವಲಂಬಿಸಿ ಬದಲಾಗಬಹುದು. ಆದ್ದರಿಂದ, ನೀವು, ಈ ಪೋಷಕಾಂಶವು (Protien) ನಿಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸಿಗುತ್ತಿದೆ ಅಂತ ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ವಿಟಮಿನ್ ಬಿ12 ಕೊರತೆಯನ್ನು ಹೇಗೆ ಪರಿಶೀಲಿಸುವುದು ಎಂಬುದು ಇಲ್ಲಿದೆ.


ಆಯಾಸ ಮತ್ತು ದೌರ್ಬಲ್ಯ: ಆಯಾಸವು ವಿಟಮಿನ್ ಬಿ12 ಕೊರತೆಯ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಪಡೆದ ನಂತರವೂ ಸಹ ತುಂಬಾನೇ ದಣಿವು ಮತ್ತು ದುರ್ಬಲತೆಯನ್ನು ಅನುಭವಿಸಬಹುದು.


ರಕ್ತ ಹೀನತೆ: ರಕ್ತ ಹೀನತೆಯು ದೇಹದಲ್ಲಿ ಸಾಕಷ್ಟು ಕೆಂಪು ರಕ್ತ ಕಣಗಳನ್ನು ಹೊಂದಿರದ ಸ್ಥಿತಿಯಾಗಿದೆ. ಕೆಂಪು ರಕ್ತ ಕಣಗಳ ಉತ್ಪಾದನೆಗೆ ವಿಟಮಿನ್ ಬಿ12 ಅಗತ್ಯವಿದೆ ಮತ್ತು ಕೊರತೆಯು ರಕ್ತ ಹೀನತೆಗೆ ಕಾರಣವಾಗಬಹುದು. ರಕ್ತ ಹೀನತೆಯ ರೋಗಲಕ್ಷಣಗಳಲ್ಲಿ ಆಯಾಸ, ದೌರ್ಬಲ್ಯ, ಮಸುಕಾದ ಚರ್ಮ ಮತ್ತು ಉಸಿರಾಟದ ತೊಂದರೆ ಸಹ ಸೇರಿವೆ.


ಮರಗಟ್ಟುವಿಕೆ ಮತ್ತು ಜುಮುಗುಡುವಿಕೆ: ವಿಟಮಿನ್ ಬಿ12 ಕೊರತೆಯು ನರಗಳಿಗೆ ಹಾನಿಯನ್ನುಂಟು ಮಾಡುತ್ತದೆ, ಇದು ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ಜುಮುಗುಡುವಿಕೆಗೆ ಕಾರಣವಾಗಬಹುದು. ಈ ಜಾಗಗಳಲ್ಲಿ ನೀವು ಸುಡುವ ಸಂವೇದನೆ ಅಥವಾ ಸಂವೇದನೆಯ ನಷ್ಟವನ್ನು ಸಹ ಅನುಭವಿಸಬಹುದು.


ನಡೆಯಲು ಕಷ್ಟವಾಗುವುದು: ವಿಟಮಿನ್ ಬಿ12 ಕೊರತೆಯಿಂದ ಉಂಟಾಗುವ ನರ ಹಾನಿಯು ನಿಮ್ಮ ಸಮತೋಲನ ಮತ್ತು ಸಮನ್ವಯದ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ನಡೆಯಲು ಅಥವಾ ನಿಲ್ಲಲು ಸಹ ಕಷ್ಟವಾಗುತ್ತದೆ.


ಮರೆವಿನ ಸಮಸ್ಯೆಗಳು: ಮೆದುಳು ಸೇರಿದಂತೆ ನರಮಂಡಲದ ಸರಿಯಾದ ಕಾರ್ಯ ನಿರ್ವಹಣೆಯಲ್ಲಿ ವಿಟಮಿನ್ ಬಿ12 ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಟಮಿನ್ ನ ಕೊರತೆಯು ನೆನಪಿನ ಸಮಸ್ಯೆಗಳು, ಗೊಂದಲ ಮತ್ತು ಅರಿವಿನ ಕುಸಿತಕ್ಕೆ ಸಹ ಕಾರಣವಾಗಬಹುದು.


ಖಿನ್ನತೆ ಉಂಟಾಗುತ್ತದೆ: ಕಡಿಮೆ ಮಟ್ಟದ ವಿಟಮಿನ್ ಬಿ12 ಕೆಲವೊಮ್ಮೆ ಖಿನ್ನತೆ ಮತ್ತು ಇತರ ಮನಸ್ಥಿತಿಯ ಅಸ್ವಸ್ಥತೆಗಳೊಂದಿಗೆ ಸಹ ಸಂಬಂಧ ಹೊಂದಿದೆ.


ಬಾಯಿ ಮತ್ತು ನಾಲಿಗೆ ಹುಣ್ಣುಗಳ ಉರಿಯೂತಕ್ಕೆ ಕಾರಣವಾಗಬಹುದು: ವಿಟಮಿನ್ ಬಿ12 ಕೊರತೆಯು ನಾಲಿಗೆ ಮತ್ತು ಬಾಯಿ ಹುಣ್ಣುಗಳ ಉರಿಯೂತಕ್ಕೆ ಕಾರಣವಾಗಬಹುದು.


ಜೀರ್ಣಕಾರಿ ಸಮಸ್ಯೆಗಳು: ವಿಟಮಿನ್ ಬಿ12 ಸಣ್ಣ ಕರುಳಿನಲ್ಲಿ ಹೀರಲ್ಪಡುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳು ಅದರ ಹೀರಿಕೊಳ್ಳುವಿಕೆಗೆ ಅಡ್ಡಿ ಪಡಿಸಬಹುದು. ಜೀರ್ಣಕಾರಿ ಸಮಸ್ಯೆಗಳ ರೋಗಲಕ್ಷಣಗಳಲ್ಲಿ ಅತಿಸಾರ, ಮಲಬದ್ಧತೆ ಮತ್ತು ಹಸಿವಾಗದಿರುವುದು ಸೇರಿವೆ.


ವಿಟಮಿನ್ ಬಿ12 ಕೊರತೆ ಇದೆ ಅಂತ ಹೇಗೆ ಗೊತ್ತಾಗುತ್ತದೆ?


ನೀವು ಈ ಮೇಲಿನ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿದರೆ ಮತ್ತು ನೀವು ವಿಟಮಿನ್ ಬಿ12 ಕೊರತೆಯನ್ನು ಹೊಂದಿದ್ದೀರಾ ಅಂತ ನಿರ್ಧರಿಸಲು ನಿಮ್ಮ ವೈದ್ಯರೊಂದಿಗೆ ಮಾತನಾಡುವುದು ಮುಖ್ಯವಾಗುತ್ತದೆ.


ರಕ್ತ ಪರೀಕ್ಷೆ ಮಾಡಿಸುವುದು: ವಿಟಮಿನ್ ಬಿ12 ಕೊರತೆಯನ್ನು ಪರೀಕ್ಷಿಸುವ ಸಾಮಾನ್ಯ ಮಾರ್ಗವೆಂದರೆ ರಕ್ತ ಪರೀಕ್ಷೆ ಮಾಡಿಸುವುದು. ನಿಮ್ಮ ವೈದ್ಯರು ರಕ್ತದ ಮಾದರಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ನಿಮ್ಮ ರಕ್ತಪ್ರವಾಹದಲ್ಲಿ ವಿಟಮಿನ್ ಬಿ12 ಮಟ್ಟವನ್ನು ಅಳೆಯುತ್ತಾರೆ.


ಇದನ್ನೂ ಓದಿ: ಒಬ್ಬರು ಒಂದು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಇಲ್ಲಿದೆ ನೋಡಿ ಬಹು ಪ್ರಮುಖವಾದ ಹೆಲ್ತ್ ಟಿಪ್ಸ್


ಸಾಮಾನ್ಯ ವಿಟಮಿನ್ ಬಿ12 ಶ್ರೇಣಿಯು ಸಾಮಾನ್ಯವಾಗಿ ಮಿಲಿ ಲೀಟರ್ ಗೆ 200 ರಿಂದ 900 ಪಿಕೋಗ್ರಾಮ್ ಗಳ ನಡುವೆ ಇರುತ್ತದೆ. ನಿಮ್ಮ ವಿಟಮಿನ್ ಬಿ12 ಮಟ್ಟವು ಈ ಶ್ರೇಣಿಗಿಂತ ಕಡಿಮೆಯಿದ್ದರೆ, ಅಲ್ಲಿ ಕೊರತೆ ಇದೆಯಂತ ಅರ್ಥ.


How to check Vitamin B12 deficiency, How can I check my B12 level at home, How can I tell if my B12 levels are low, health care, lifestyle news, ಕನ್ನಡ ನ್ಯೂಸ್​, kannada news, ಬಿ12 ವಿಟಮಿನ್​ ಕಡಿಮೆ ಆಗಿದ್ರೆ ಏನು ಮಾಡಬೇಕು, ಆರೋಗ್ಯದ ಸಲಹೆಗಳು, ಉತ್ತಮ ಆರೋಗ್ಯಕ್ಕಾಗಿ ಏನು ಮಾಡಬೇಕು
ವಿಟಮಿನ್​ ಬಿ12


ವಿಟಮಿನ್ ಬಿ12 ಕೊರತೆಯನ್ನು ಪತ್ತೆ ಹಚ್ಚಲು ರಕ್ತ ಪರೀಕ್ಷೆ ಮಾತ್ರ ಸಾಕಾಗುವುದಿಲ್ಲ, ವಿಟಮಿನ್ ಬಿ12 ನ ಸಾಮಾನ್ಯ ಮಟ್ಟವನ್ನು ಹೊಂದಿರುವ ಕೆಲವು ಜನರು ಇನ್ನೂ ಕೊರತೆಯ ಲಕ್ಷಣಗಳನ್ನು ಹೊಂದಿರಬಹುದು ಮತ್ತು ಕಡಿಮೆ ಮಟ್ಟವನ್ನು ಹೊಂದಿರುವ ಇತರರು ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲದಿರಬಹುದು. ರೋಗನಿರ್ಣಯವನ್ನು ದೃಢೀಕರಿಸಲು ನಿಮ್ಮ ವೈದ್ಯರು ಹೆಚ್ಚುವರಿ ಪರೀಕ್ಷೆಗಳನ್ನು ಸಹ ಮಾಡಬೇಕಾಗಬಹುದು.


ಮೀಥೈಲ್ಮಲೋನಿಕ್ ಆಸಿಡ್ (ಎಂಎಂಎ) ಟೆಸ್ಟ್: ವಿಟಮಿನ್ ಬಿ12 ಕೊರತೆಯನ್ನು ಪರೀಕ್ಷಿಸಲು ಮೀಥೈಲ್ಮಲೋನಿಕ್ ಆಸಿಡ್ ಟೆಸ್ಟ್ ಅನ್ನು ಸಹ ಮಾಡಲಾಗುತ್ತದೆ.


ಈ ಟೆಸ್ಟ್ ನಿಮ್ಮ ರಕ್ತ ಅಥವಾ ಮೂತ್ರದಲ್ಲಿನ ಎಂಎಂಎ ಮಟ್ಟವನ್ನು ಅಳೆಯುತ್ತದೆ. ಎಂಎಂಎ ಎಂಬುದು ವಿಟಮಿನ್ ಬಿ12 ಮಟ್ಟಗಳು ಕಡಿಮೆಯಾದಾಗ ದೇಹದಲ್ಲಿ ಸಂಗ್ರಹವಾಗುವ ವಸ್ತುವಾಗಿದೆ. ಹೆಚ್ಚಿದ ಎಂಎಂಎ ಮಟ್ಟಗಳು ವಿಟಮಿನ್ ಬಿ12 ಕೊರತೆಯನ್ನು ಸೂಚಿಸಬಹುದು.


ಇದನ್ನೂ ಓದಿ: ಮೊಸರು ಮತ್ತು ಯೋಗರ್ಟ್ ನಡುವಿನ ವ್ಯತ್ಯಾಸವೇನು? ಇವೆರಡರಲ್ಲಿ ಯಾವುದು ಬೆಸ್ಟ್?


ಹೋಮೋಸಿಸ್ಟೈನ್ ಟೆಸ್ಟ್: ಹೋಮೋಸಿಸ್ಟೈನ್ ಟೆಸ್ಟ್ ವಿಟಮಿನ್ ಬಿ12 ಕೊರತೆಯನ್ನು ಪರೀಕ್ಷಿಸಲು ಬಳಸಬಹುದಾದ ಮತ್ತೊಂದು ರಕ್ತ ಪರೀಕ್ಷೆಯಾಗಿದೆ. ಈ ಟೆಸ್ಟ್ ನಿಮ್ಮ ರಕ್ತದಲ್ಲಿನ ಹೋಮೋಸಿಸ್ಟೈನ್ ಮಟ್ಟವನ್ನು ಅಳೆಯುತ್ತದೆ. ಹೋಮೋಸಿಸ್ಟೈನ್ ಒಂದು ಅಮೈನೋ ಆಮ್ಲವಾಗಿದ್ದು, ದೇಹವು ಪ್ರೋಟೀನ್ ಅನ್ನು ವಿಭಜಿಸಿದಾಗ ಉತ್ಪತ್ತಿಯಾಗುತ್ತದೆ. ಹೆಚ್ಚಿದ ಹೋಮೋಸಿಸ್ಟೈನ್ ಮಟ್ಟವು ವಿಟಮಿನ್ ಬಿ12 ಕೊರತೆಯನ್ನು ಸೂಚಿಸಬಹುದು.


ಇಂಟ್ರಿನ್ಸಿಕ್ ಫ್ಯಾಕ್ಟರ್ ಯಾಂಟಿಬಾಡಿ ಟೆಸ್ಟ್: ಕೆಲವು ಸಂದರ್ಭಗಳಲ್ಲಿ, ವಿಟಮಿನ್ ಬಿ12 ಕೊರತೆಯು ಆಂತರಿಕ ಅಂಶವನ್ನು ಉತ್ಪಾದಿಸುವ ಹೊಟ್ಟೆಯ ಜೀವಕೋಶಗಳ ಮೇಲೆ ದಾಳಿ ಮಾಡುವ ಆಟೋಇಮ್ಯೂನ್ ಅಸ್ವಸ್ಥತೆಯಿಂದ ಉಂಟಾಗಬಹುದು.


top videos



    ಆಂತರಿಕ ಅಂಶವು ದೇಹದಲ್ಲಿ ವಿಟಮಿನ್ ಬಿ12 ಅನ್ನು ಹೀರಿಕೊಳ್ಳಲು ಅಗತ್ಯವಾದ ಪ್ರೋಟೀನ್ ಆಗಿದೆ. ಆಂತರಿಕ ಅಂಶದ ಮೇಲೆ ದಾಳಿ ಮಾಡುವ ಪ್ರತಿಕಾಯಗಳ ಉಪಸ್ಥಿತಿಯನ್ನು ಪರೀಕ್ಷಿಸಲು ಆಂತರಿಕ ಅಂಶ ಪ್ರತಿಕಾಯ ಪರೀಕ್ಷೆಯನ್ನು ಬಳಸಬಹುದು. ಈ ಮೇಲಿನ ಟೆಸ್ಟ್ ಗಳ ಫಲಿತಾಂಶಗಳನ್ನು ಅವಲಂಬಿಸಿ ನಿಮ್ಮ ವೈದ್ಯರು ಹೆಚ್ಚುವರಿ ಪರೀಕ್ಷೆಗಳು ಅಥವಾ ಚಿಕಿತ್ಸೆಗಳನ್ನು ನಿಮಗೆ ಶಿಫಾರಸು ಮಾಡಬಹುದು.

    First published: