ಔಷಧ ಖರೀದಿಸುವಾಗ Expiry Date ಜೊತೆ ಈ ಅಂಶಗಳನ್ನೂ ಗಮನಿಸಿ; ಎಚ್ಚರ ವಹಿಸದಿದ್ದರೆ ಮೋಸ ಹೋಗ್ತೀರಿ!

ಔಷಧಿಗಳ ಖರೀದಿಗೆ ಮಕ್ಕಳನ್ನು ಕಳುಹಿಸುವುದು ತುಂಬಾನೇ ಅಪಾಯಕಾರಿ. ಪೋಷಕರು ಹೇಳಿರುವ ಔಷಧಿ ಖರೀದಿಸುವ ಮಕ್ಕಳು ಮಾರ್ಗ ಮಧ್ಯೆ ಸೇವಿಸುವ ಸಾಧ್ಯತೆಗಳಿರುತ್ತವೆ. ಪ್ರತಿನಿತ್ಯ ಅಜ್ಜ ಅಥವಾ ಅಜ್ಜಿ ಮಾತ್ರೆ ಸೇವಿಸುತ್ತಿರೋದನ್ನು ಮಕ್ಕಳು ಗಮನಿಸಿರುತ್ತವೆ. ಕುತೂಹಲದಿಂದ ಮಕ್ಕಳು ಮಾತ್ರೆಗಳನ್ನು ಸೇವಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಸಾಮಾನ್ಯವಾಗಿ ಮೆಡಿಕಲ್ ಶಾಪ್ ಗೆ (Medical Shop) ಹೋದ್ರೆ ಜನರು ಮಾತ್ರೆಯ Expiry Date ಗಮನಿಸಿ ತೆಗೆದುಕೊಳ್ಳುತ್ತಾರೆ. ಆದರೆ ಸಾಮಾನ್ಯ ಜನರಿಗೆ ಔಷಧಿಗಳ ಬಗ್ಗೆಯಾಗಲಿ ಅಥವಾ ಅದರ ಎಕ್ಸ್​ಪೇರಿ ಡೇಟ್ ಬಗ್ಗೆ ಗೊತ್ತಗಲ್ಲ. ಡಾಕ್ಟರ್ ಚೀಟಿ ಕೊಡುತ್ತಾರೆ (Doctor Description). ಅದನ್ನು ಮೆಡಿಕಲ್​ಗೆ ಒಯ್ದು, ಅಂಗಡಿಯವರು ಕೊಟ್ಟ ಮೆಡಿಸನ್ ನಾವು ಹಾಗೆ ತಂದು ಬಿಡುತ್ತೇವೆ. ಆದರೆ, ಹೀಗೆ ಮಾಡುವುದರಿಂದ ಕೆಲವೊಮ್ಮೆ ನಾವೇ ಅಪಾಯಗಳಿಗೆ ಆಹ್ವಾನ ನೀಡಿದಂತೆ ಆಗುತ್ತದೆ. ಏಕೆಂದರೆ ಹಲವು ಔಷಧಗಳ ಅವಧಿ ಮುಗಿದಿದ್ದರೂ, ಅದು ಯಾವ ಔಷಧ ಎಂದು ಯಾರೂ ಗಮನಿಸದ ಅದೇ ಔಷಧವನ್ನು ಕೊಟ್ಟು ಬಿಡಬಿಹುದು. ಹೀಗಾಗಿ ಯಾವುದೇ ಔಷಧ ಕೊಂಡರೂ ಅದರ ಅಂತಿಮ ಗಡುವು ಯಾವಾಗ, ಅದು ಯಾವ ಔಷಧ ಎಂಬುದನ್ನು ಪರಿಶೀಲಿಸುವುದು ಒಳ್ಳೆಯ ಅಭ್ಯಾಸ. ಎಲ್ಲ ಅಂಶಗಳು ತಿಳಿಯದಿದ್ದರೂ ಕೆಲವೊಂದು ಅಂಶಗಳನ್ನು ಗಮನಿಸಬಹುದು. ಇಲ್ಲವಾದಲ್ಲಿ ನೀವು ಮೋಸಕ್ಕೆ ಒಳಗಾಗೋದು ಖಂಡಿತ. ಈ ಗುರುತುಗಳು ಔಷಧೀಯ ಪ್ರಮುಖ ಸಂಕೇತಗಳು. ಔಷಧಿ ಖರೀದಿಸುವಾಗ ಯಾವ ಅಂಶಗಳನ್ನು ಗಮನಿಸಬೇಕೆಂಬುದು ಸಂಪೂರ್ಣ ಮಾಹಿತಿ ಇಲ್ಲಿದೆ.

  XRx ಗುರುತು

  ಮೆಂಟಲ್ ಡಿಸ್ ಆರ್ಡರ್ ಚಿಕಿತ್ಸೆಗೆ ಸಂಬಂಧಿಸಿದ ಮೆಡಿಸಿನ್ ಗಳ ಮೇಲೆ XRx ಎಂದು ಬರೆದಿರಲಾಗುತ್ತದೆ. ಈ ಔಷಧಗಳು ನಶೆಯ ಅಂಶವನ್ನು ಹೊಂದಿರುತ್ತವೆ. ವೈದ್ಯರ ಸೂಚನೆ ಅಥವಾ ಪ್ರಿಸ್​ಕ್ರಿಪ್ಷನ್ ಇಲ್ಲದೇ ಈ ಔಷಧಗಳನ್ನು ಯಾವುದೇ ಮೆಡಿಕಲ್ ಸ್ಟೋರ್ ಗಳಲ್ಲಿ ಕೊಡುವುದಿಲ್ಲ. ಜೊತೆಗೆ ಔಷಧಿ ಮಾರಾಟದ ಬಳಿದ ವೈದ್ಯರ ಪ್ರಿಸ್ಕ್ರಿಪ್ಷನ್ ಎರಡು ವರ್ಷಗಳವರೆಗೆ ಜೋಪಾನವಾಗಿ ಇಟ್ಟುಕೊಳ್ಳಬೇಕು.

  NRx ಗುರುತು

  ಈ ರೀತಿಯ ಗುರುತು ಇರುವ ಔಷಧಗಳನ್ನು ಡಿಪ್ರೆಶನ್, ಆಂಕ್ಸಿಟಿ ಸೇರಿದಂತೆ ಕೆಟ್ಟ ಚಟಗಳನ್ನು ದೂರ ಮಾಡಲು NRx ಗುರುತು ಮೆಡಿಸನ್ ನೀಡಲಾಗುತ್ತದೆ. ಈ ಔಷಧಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬೇಕು. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ಈ ಔಷಧಿಗಳನ್ನು ಮಾರಾಟ ಮಾಡುವಂತಿಲ್ಲ.

  Rx ಗುರುತು

  ಈ ಗುರುತುಗಳನ್ನು ಸಾಮಾನ್ಯ ಔಷಧಿಗಳ ಮೇಲೆ ಹಾಕಲಾಗಿರುತ್ತದೆ. ಇವುಗಳನ್ನ ಸಹ ವೈದ್ಯರ ಸಲಹೆ ಪಡೆದು ತೆಗೆದುಕೊಳ್ಳಬೇಕು.

  ಕೆಂಪು ಲೈನ್: (Red Line)

  ಮಾತ್ರೆಯ ರ್ಯಾಪರ್ ಮೇಲೆ ಕೆಂಪು ಲೈನ್ ಹಾಕಿರುವ ಮಾತ್ರೆಗಳನ್ನು ಸಹ ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬೇಕು. ಕೆಂಪು ಲೈನ್ ಗಳಿರುವ ಔಷಧಿ ಆಂಟಿಬಯೋಟಿಕ್ ಮೆಡಿಸಿನ್ ಆಗಿರುತ್ತವೆ. ಈ ರೀತಿಯ ಮಾತ್ರೆಗಳನ್ನು ಖರೀದಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.

  ಇನ್ಮುಂದೆ ಮಾತ್ರೆಗಳನ್ನು Expiry ದಿನಾಂಕದ ಜೊತೆ ಈ ಎಲ್ಲ ಅಂಶಗಳನ್ನು ಗಮನಿಸಿ. ನೀವು ಯಾವ ರೀತಿಯ ಮಾತ್ರೆ ಸೇವಿಸುತ್ತಿದ್ದೀರಿ ಎಂಬುದರ ಮಾಹಿತಿ ನಿಮಗೆ ಗೊತ್ತಾಗಲಿದೆ. ನೀವು ನಿಗದಿತ ಮೆಡಿಕಲ್ ಸ್ಟೋರ್ ಗಳಲ್ಲಿ ತೆಗೆದುಕೊಳ್ಳುತ್ತಿದ್ದ ಮಾತ್ರೆಗಳನ್ನು ಬೇರೆ ಮೆಡಿಕಲ್ ಶಾಪ್ ಗಳಲ್ಲಿ ಖರೀದಿಸುವಾಗ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ. ಇನ್ನೂ ನಿಮ್ಮ ಮನೆಯಲ್ಲಿ ಶುಗರ್, ಬಿಪಿ ಕಾಯಿಲೆಗಳಿರುವ ಜನರಿದ್ರೆ, ಅವರ ಮಾತ್ರೆಗಳ ಮೇಲೆ ಯಾವ ಗುರುತುಗಳಿವೆ ಎಂಬುದನ್ನು ಚೆಕ್ ಮಾಡಿಕೊಳ್ಳಿ.

  ಇದನ್ನು ಓದಿ: Contraceptives: ಸರಿಯಾದ ಗರ್ಭನಿರೋಧಕಗಳನ್ನು ಆರಿಸುವುದು ಹೇಗೆ? ಯಾರಿಗೆ ಯಾವುದು ಸೂಕ್ತ? ತಜ್ಞರು ವಿವರಿಸಿದ್ದಾರೆ

  ಔಷಧಿಗಳ ಖರೀದಿಗೆ ಮಕ್ಕಳನ್ನು ಕಳುಹಿಸುವುದು ತುಂಬಾನೇ ಅಪಾಯಕಾರಿ. ಪೋಷಕರು ಹೇಳಿರುವ ಔಷಧಿ ಖರೀದಿಸುವ ಮಕ್ಕಳು ಮಾರ್ಗ ಮಧ್ಯೆ ಸೇವಿಸುವ ಸಾಧ್ಯತೆಗಳಿರುತ್ತವೆ. ಪ್ರತಿನಿತ್ಯ ಅಜ್ಜ ಅಥವಾ ಅಜ್ಜಿ ಮಾತ್ರೆ ಸೇವಿಸುತ್ತಿರೋದನ್ನು ಮಕ್ಕಳು ಗಮನಿಸಿರುತ್ತವೆ. ಕುತೂಹಲದಿಂದ ಮಕ್ಕಳು ಮಾತ್ರೆಗಳನ್ನು ಸೇವಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದ್ದರಿಂದ ಪೋಷಕರೇ ಔಷಧಿ ಖರೀದಿಸುವುದು ಒಳಿತು. ಇಂದಿನ ಡಿಜಿಟಲ್ ದುನಿಯಾದಲ್ಲಿ ಮನೆಯಲ್ಲಿಯೇ ಕುಳಿತು ಔಷಧಿ ಖರೀದಿಸುವ ವ್ಯವಸ್ಥೆ ಬಂದಿವೆ. ಈ ಮೂಲಕ ಔಷಧಿ ಖರೀದಿಸೋದು ಸುರಕ್ಷಿತವಾಗಿರುತ್ತದೆ. ತುರ್ತು ಸಂದರ್ಭಗಳಲ್ಲಿ ಹೊಸ ಔಷಧಿ ತೆಗೆದುಕೊಳ್ಳುವ ಬದಲು ಆನ್‍ಲೈನ್ ನಲ್ಲಿಯೇ ವೈದ್ಯರ ಸಲಹೆ ಪಡೆದುಕೊಳ್ಳಬಹುದು. ಹಲವು ಖ್ಯಾತ ಆಸ್ಪತ್ರೆಗಳು ಈ ವ್ಯವಸ್ಥೆಯನ್ನು ತಮ್ಮ ರೋಗಿಗಗಳಿಗೆ ನೀಡುತ್ತಿವೆ.
  Published by:HR Ramesh
  First published: