New Year 2022: ಸ್ನೇಹಿತರಿಲ್ಲದೇ ಒಬ್ಬರೇ ಹೊಸ ವರ್ಷ ಆಚರಿಸ್ತಿದ್ದೀರಾ? ಹೀಗೆ ಸೆಲೆಬ್ರೇಟ್ ಮಾಡಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Alone New Year Celebration: ಏಕಾಂಗಿತನ ನಮ್ಮ ಮನಸ್ಸಿನಲ್ಲಿ ಹಲವಾರು ಯೋಜನೆಗಳನ್ನು ತಂದು ಕೊಡುತ್ತದೆ.. ನಾವು ಹಿಂದೆ ಮಾಡಿದ ತಪ್ಪು ತಪ್ಪಿನ ಕಾರಣಗಳನ್ನು ಹುಡುಕಲು ಅದು ಸೂಕ್ತವಾದ ಸಮಯವಾಗಿರುತ್ತದೆ.. ಭವಿಷ್ಯದಲ್ಲಿ ನಮ್ಮ ತಪ್ಪುಗಳು ಮರುಕಳಿಸದಂತೆ ನಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತೊಡೆದುಹಾಕಲು ಏಕಾಂಗಿತನ ಉತ್ತಮವಾದ ಅವಕಾಶ

ಮುಂದೆ ಓದಿ ...
  • Share this:

ಹೊಸ ವರ್ಷ(New Year) ಬಂದಿದೆ ಎಲ್ಲರೂ ತಮ್ಮ ತಮ್ಮ ಸ್ನೇಹಿತರ(Friends) ಜೊತೆ ಅದ್ದೂರಿಯಾಗಿ ಹೊಸವರ್ಷವನ್ನು ಸೆಲೆಬ್ರೇಟ್(Celebrate) ಮಾಡಿಕೊಂಡಿದ್ದಾರೆ.. ಅಲ್ಲದೆ ಹೊರಗಡೆ ಸ್ನೇಹಿತರ ಜೊತೆ ಹೋಗಿ ಪಾರ್ಟಿ(Party) ವಸ್ತುಗಳ ವಿನಿಮಯ, ಹೊಟ್ಟಿಗೆ ಕಾಲಕಳೆಯುವುದು ಹೀಗೆ ನಾನಾ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ..ಅಲ್ಲದೆ ಹೊಸವರ್ಷವನ್ನ ವಿಭಿನ್ನವಾಗಿ ಆಚರಣೆ ಮಾಡಲು ಇಡೀ ನಾನಾ ಕಾರ್ಯಕ್ರಮಗಳ (Programs)ಆಯೋಜನೆ ಮಾಡಿಕೊಂಡಿದ್ದಾರೆ.. ಆದ್ರೆ ನೀವು ಒಬ್ಬಂಟಿಯಾಗಿ ಇದು ನನ್ನ ಜೊತೆ ಹೊಸ ವರ್ಷದ ಸೆಲೆಬ್ರೇಶನ್ ಮಾಡಲು ಯಾರು ಇಲ್ಲ ಎಂದು ಚಿಂತೆ ಮಾಡುತ್ತಿದ್ದೀರಾ.. ಈ ಚಿಂತೆಯ ಬಿಟ್ಟು ಒಬ್ಬಂಟಿಯಾಗಿಯೇ ಹೊಸ ವರ್ಷವನ್ನು ಹೊಸಬಗೆಯಲ್ಲಿ ಆಚರಣೆ ಮಾಡುವಮೂಲಕ ಎಲ್ಲರಿಗಿಂತ ವಿಭಿನ್ನವಾಗಿ ನೀವು ನಿಮ್ಮ ಹೊಸ ವರ್ಷವನ್ನು ಆಚರಣೆ ಮಾಡಿ.. ಅರೆ ಒಬ್ಬಂಟಿಯಾಗಿ ಹೇಗೆ ಹೊಸವರ್ಷ ಆಚರಣೆ ಮಾಡುವುದು ಎನ್ನುತ್ತೀರಾ ಹೇಳುವ ರೀತಿ ಮಾಡಿದರೆ ಏಕಾಂಗಿಯಾಗಿ ಹೊಸವರ್ಷಾಚರಣೆ ಮಾಡಿ ಮತ್ತಷ್ಟು ಹೊಸ ಫೀಲ್ ಮಾಡಬಹುದು.


1) ನಿಮ್ಮ ಮನೆಯಲ್ಲಿ ಅಲಂಕಾರ ಮಾಡಿ: ನೀವು ಏಕಾಂಗಿಯಾಗಿ ವಾಸ ಮಾಡುತ್ತಿದ್ದೀರಾ ಎಂದಮಾತ್ರಕ್ಕೆ ಹೊಸವರ್ಷದ ದಿನದಂದು ನಿಮ್ಮ ಮನೆಯನ್ನು ಅಲಂಕಾರ ಮಾಡಬಾರದು ಎಂದು ಅರ್ಥವಲ್ಲ.. ಎಲ್ಲರಂತೆ ನೀವು ಕೂಡ ನಿಮಗೆ ಇಷ್ಟವಾದ ರೀತಿಯಲ್ಲಿ ನಿಮ್ಮ ಮನೆಯನ್ನು ಹೊಸವರ್ಷಕ್ಕೆ ವಿಭಿನ್ನವಾಗಿ ಅಲಂಕಾರ ಮಾಡಿ. ಹೊಸ ವರ್ಷ ಆಚರಣೆಗೆ ನಿಮ್ಮ ಮನೆಗೆ ಯಾವುದೇ ಅತಿಥಿಗಳು ಬರದೇ ಇದ್ದರೂ ನೀವು ಕೇವಲ ನಿಮಗೋಸ್ಕರ ನಿಮ್ಮ ಮನೆ ನಿಮ್ಮ ಮನೆ ಸುಂದರವಾಗಿ ಅಲಂಕಾರ ಮಾಡಿಕೊಳ್ಳಬಹುದು.ಮಿನುಗುವ ದೀಪಗಳು ಪೀಠೋಪಕರಣಗಳು ಅಲಂಕಾರಿಕ ವಸ್ತುಗಳನ್ನು ಖರೀದಿಸಿ ನಿಮ್ಮ ಮನೆಗೆ ಹೊಸ ರೂಪ ನೀಡಿ, ಖುಷಿಖುಷಿಯಾಗಿ ಹೊಸ ವರ್ಷವನ್ನು ಏಕಾಂಗಿಯಾಗಿಯೇ ನೀವು ಆಚರಣೆ ಮಾಡಿಕೊಳ್ಳಬಹುದು.


ಇದನ್ನೂ ಓದಿ: ಹೊಸವರ್ಷವನ್ನು ನೀವು ಹೀಗೂ ಆಚರಿಸಬಹುದು


2)ಒಳ್ಳೆಯ ಪುಸ್ತಕವನ್ನು ಓದಿ: ಹೊಸ ವರ್ಷದ ದಿನ ಎಲ್ಲರೂ ಸ್ನೇಹಿತರು ಎಂದು ಪಾರ್ಟಿ ಹೋಗಿ ಪ್ರವಾಸಿ ತಾಣಗಳಿಗೆ ಪ್ರವಾಸ ಹೋಗುತ್ತಿದ್ದೇವೆ ನೀವು ಏಕಾಂಗಿಯಾಗಿ ನಿಮ್ಮ ಮನೆಯಲ್ಲಿ ಕಾಲ ಕಳೆಯುತ್ತಿದ್ದರೆ ಚಿಂತೆ ಮಾಡಬೇಡಿ. ಏಕಾಂಗಿಯಾಗಿ ನಿಮ್ಮ ಮನೆಯಲ್ಲಿ ನಿಮಗಿಷ್ಟವಾದ ರೀತಿಯಲ್ಲಿ ನೀವು ಹೊಸವರ್ಷವನ್ನು ಆರಂಭ ಮಾಡಬಹುದು. ಹೊಸ ವರ್ಷದ ದಿನ ಒಂದು ಒಳ್ಳೆಯ ಪುಸ್ತಕವನ್ನು ಓದುವ ಮೂಲಕ ಹೊಸ ವರ್ಷಕ್ಕೆ ನೀವು ಹೊಸ ಹವ್ಯಾಸವನ್ನು ಬೆಳೆಸಿಕೊಳ್ಳಬಹುದು.


3) ರುಚಿಯಾದ ಅಡುಗೆಯನ್ನು ತಯಾರಿಸಿ: ಹೊಸ ವರ್ಷ ಆಚರಣೆಗೆ ಸ್ನೇಹಿತರ ಜೊತೆ ಗುಂಪುಕಟ್ಟಿಕೊಂಡು ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಿಗೆ ಹೋಗಬೇಕು ಎಂದೇನಿಲ್ಲ.. ಏಕಾಂಗಿಯಾಗಿ ಇರುವ ನೀವು ಹೊಸ ವರ್ಷದ ದಿನ ನಿಮ್ಮ ಮನೆಯಲ್ಲಿ ನಿಮಗಿಷ್ಟವಾದ ಆಹಾರ ಪದಾರ್ಥವನ್ನು ತಯಾರು ಮಾಡುವುದರ ಜೊತೆಗೆ ಹೊಸ ಹೊಸ ತಿನಿಸುಗಳನ್ನು ತಯಾರಿಸಿಕೊಂಡು ತಿನ್ನುವುದರಿಂದ ಪಿಯು ಕೂಡ ಹೊಸವರ್ಷದಲ್ಲಿ ಎಲ್ಲರಂತೆ ಖುಷಿಖುಷಿಯಾಗಿ ಇರಬಹುದು.ಅಡುಗೆ ಮಾಡುವುದರಲ್ಲಿ ನೀವು ಹೆಚ್ಚಿನ ಸಮಯ ಮೀಸಲಿಟ್ಟರೆ ನಿಮ್ಮ ಹೊಸ ವರ್ಷಕ್ಕೆ ಒಂದು ಹೊಸ ಅರ್ಥ ಬರುತ್ತದೆ.. ನೀವು ಮಾಡುವ ಅಡುಗೆಯನ್ನು ಪ್ರೀತಿಯಿಂದ ಮಾಡಿ ತಿನ್ನಿ.. ಒಂದು ವೇಳೆ ನಿಮಗೆ ಅಡುಗೆ ಮಾಡಲು ಬರುವುದಿಲ್ಲ ಅಂದರೆ ನಿಮ್ಮ ನೆಚ್ಚಿನ ರೆಸ್ಟೋರೆಂಟ್ ನಿನ್ನ ಆನ್ಲೈನ್ ಮೂಲಕ ಫುಡ್ ಆರ್ಡರ್ ಮಾಡಿ ತಿನ್ನಿ


4)ಪ್ಯಾಂಪರಿಂಗ್ ಸೆಷನ್: ಬಿಡುವಿಲ್ಲದ ವೇಳಾಪಟ್ಟಿಗಳು ಅಥವಾ ಕೆಲಸದ ಹೊರೆಯಿಂದಾಗಿ ನೀವು ವಿಳಂಬ ಮಾಡುತ್ತಿರುವ ಪ್ಯಾಂಪರಿಂಗ್ ಸೆಷನ್‌ನನ್ನು ಪ್ರಾರಂಭಿಸಲು ಇದು ಉತ್ತಮ ಸಮಯವಾಗಿದೆ. ಹೊಸ ವರ್ಷದ ಈ ಸಂಭ್ರಮದಲ್ಲಿ ನಿಮಗಾಗಿ ಸಮಯ ನೀಡಿ. ಕೈ, ಕಾಲಿನ ತ್ವಚೆಯನ್ನು ಅಂದವಾಗಿಸುವ ಮೆನಿಕ್ಯೂರ್, ಪೆಡಿಕ್ಯೂರ್ ಮಾಡಿಸಿಕೊಳ್ಳಿ.


ಇದನ್ನೂ ಓದಿ: ರಾಜ್ಯದ ಯಾವ ಊರಲ್ಲಿ ಇವತ್ತು ರಾತ್ರಿ ಪಾರ್ಟಿ ಮಾಡೋಕೆ ಪರ್ಮಿಶನ್? ಎಷ್ಟು ಗಂಟೆಗೆ ರೆಸ್ಟೊರೆಂಟ್-ಬೀಚ್ ಕ್ಲೋಸ್? ಫುಲ್ ಡೀಟೈಲ್ಸ್ ಇಲ್ಲಿದೆ


5) ನಿಮ್ಮನ್ನು ನೀವು ಪರಾಮರ್ಶೆ ಗೊಳಿಸಿ: ಏಕಾಂಗಿತನ ನಮ್ಮ ಮನಸ್ಸಿನಲ್ಲಿ ಹಲವಾರು ಯೋಜನೆಗಳನ್ನು ತಂದು ಕೊಡುತ್ತದೆ.. ನಾವು ಹಿಂದೆ ಮಾಡಿದ ತಪ್ಪು ತಪ್ಪಿನ ಕಾರಣಗಳನ್ನು ಹುಡುಕಲು ಅದು ಸೂಕ್ತವಾದ ಸಮಯವಾಗಿರುತ್ತದೆ.. ಭವಿಷ್ಯದಲ್ಲಿ ನಮ್ಮ ತಪ್ಪುಗಳು ಮರುಕಳಿಸದಂತೆ ನಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತೊಡೆದುಹಾಕಲು ಏಕಾಂಗಿತನ ಉತ್ತಮವಾದ ಅವಕಾಶ.. ಈ ಅವಕಾಶವನ್ನು ಬಳಸಿಕೊಂಡು ಹೊಸವರ್ಷದ ಸಮಯದಲ್ಲಿ ನಿಮ್ಮ ಹಿಂದಿನ ಜೀವನದ ತಪ್ಪುಗಳನ್ನು ತೊಡೆದುಹಾಕಿ ಭವಿಷ್ಯದ ಬಗ್ಗೆ ಆಲೋಚನೆ ಮಾಡಿ.. ಹೀಗೆ ನಿಮ್ಮಲ್ಲಿನ ನಕಾರಾತ್ಮಕ ಶಕ್ತಿ ಗಳನ್ನು ನೀವು ಏಕಾಂಗಿಯಾಗಿದ್ದಾಗ ಅವರ ಹಾಕುವುದರಿಂದ ಹೊಸ ವರ್ಷದಲ್ಲಿ ಹೊಸ ಜೀವನ ಆರಂಭ ಮಾಡುವ ಅವಕಾಶ ನಿಮ್ಮದಾಗಲಿದೆ.

First published: