Gowri Festival: ಮೊದಲ ಗೌರಿ ಹಬ್ಬಕ್ಕೆ ಏನೇನು ಮಾಡ್ಬೇಕು? ಟೆನ್ಶನ್​ ಬಿಡಿ, ಇಲ್ಲಿದೆ ಎಲ್ಲಾ ಮಾಹಿತಿ!

How to Celebrate First Gowri: ಇನ್ನು ಈ ಕಳಶವನ್ನು ನೇರವಾಗಿ ನೆಲದ ಮೇಲೆ ಅಥವಾ ಮಣೆ ಮೇಲೆ ಇಡಬಾರದು. ಮೊದಲು ರಂಗೋಲಿ ಹಾಕಿ, ಅದರ ಮೇಲೆ ಒಂದು ತಟ್ಟೆಯನ್ನು ಇಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗೌರಿ ಹಬ್ಬ (Gowri Festival) ಹೆಂಗಳೆಯರಿಗೆ ಬಹಳ ವಿಶೇಷವಾದ ಹಬ್ಬ. ಹಿಂದೂ ಸಂಪ್ರದಾಯದಲ್ಲಿ ಬಹಳ ಮಹತ್ವದ ಸ್ಥಾನವನ್ನು ಈ ಹಬ್ಬ ಪಡೆದುಕೊಂಡಿದೆ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ತದಿಗೆಯಂದು ನಡೆಯುವ ಗೌರಿ ಹಬ್ಬ ಆಚರಿಸುವ ಪದ್ಧತಿ ಸಹ ವಿಭಿನ್ನವಾಗಿದೆ. ಅದರಲ್ಲೂ ಮೊದಲ ಬಾರಿಗೆ ಗೌರಿ ಪೂಜೆ ಮಾಡುವುದಾದರೆ ಅದರ ಬಗ್ಗೆ ಮಾಹಿತಿ ಕಡಿಮೆ ಇರುತ್ತದೆ. ಈ ಪೂಜೆಯನ್ನು (Pooja)  ಹೇಗೆ ಮಾಡಬೇಕು, ಏನೆಲ್ಲಾ ಕಟ್ಟು ನಿಟ್ಟುಗಳಿವೆ ಎಂಬುದು ಇಲ್ಲಿದೆ.  

ಇನ್ನು ಈ ದಿನ ಮಾಡುವ ಸ್ವರ್ಣ ಗೌರಿ ವ್ರತದಿಂದ ಮಹಿಳೆಯರ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಈ ಹಬ್ಬವನ್ನು ಸಾಮಾನ್ಯವಾಗಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಬಹಳ ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಾರೆ. ಗೌರಿಯನ್ನು ಮಗಳು ಎಂದು ಹೇಳಲಾಗುತ್ತದೆ. ಈ ಹಬ್ಬದ ದಿನ ತವರಿಗೆ ಬರುವ ಗೌರಿಯನ್ನು, ಆಕೆಯ ಮಗ ಗಣಪತಿ ಬಂದು ಮರಳಿ ಕರೆದುಕೊಂಡು ಹೋಗುತ್ತಾನೆ ಎನ್ನುವುದು ಈ ಹಬ್ಬದ ಕತೆ. ಅಲ್ಲದೇ, ಈ ದಿನ ಗೌರಿಗೆ ವಿವಿಧ ರೀತಿಯ ಉಡುಗೊರೆಗಳನ್ನು ಸಹ ನೀಡುತ್ತಾರೆ. ಈ ದಿನ ಹೆಂಗಸರಿಗೆ ಬಾಗಿನ ಸಹ ಇದೇ ಕಾರಣಕ್ಕೆ ನೀಡಲಾಗುತ್ತದೆ. ಈ ಉಡುಗೊರೆಯನ್ನು ಮಂಗಳ ದ್ರವ್ಯ ಎಂದು ಕರೆಯಲಾಗುತ್ತದೆ.

ಅಲ್ಲದೇ, ಈ ದಿನ ಮದುವೆಯಾದ ಮಹಿಳೆಯರು ಕುಟುಂಬದ ಶ್ರೇಯಸ್ಸಿಗಾಗಿ ಗೌರಿ ಪೂಜೆಯನ್ನು ಮಾಡುತ್ತಾರೆ. ನಂತರ ಐದು ಮುತ್ತೈದೆಯರಿಗೆ ಬಾಗಿನ ನೀಡಿ ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸುತ್ತಾರೆ. ಅಲ್ಲದೇ, ಈ ದಿನ ದಾನಗಳನ್ನು ಮಾಡುವುದು ಇನ್ನೂ ಒಳ್ಳೆಯದು.

ಪೂಜೆಯನ್ನು ಹೇಗೆ ಮಾಡುವುದು

ಶುದ್ಧವಾದ ಬಟ್ಟೆ ಧರಿಸಬೇಕು

ಸಾಮಾನ್ಯವಾಗಿ ಹಬ್ಬ ಎಂದರೆ ಹೊಸ ಬಟ್ಟೆ ಖರೀದಿ ಮಾಡಿರುತ್ತೇವೆ. ಆದರೆ ಅದನ್ನು ತೊಳೆದು ಶುದ್ಧವಾಗಿ ಇಟ್ಟುಕೊಂಡು ಪೂಜೆಯ ದಿನ ಧರಿಸಬೇಕು. ಹೊಸ ಬಟ್ಟೆ ಖರೀದಿಸಲು ಸಾಧ್ಯವಿಲ್ಲ ಎಂದರೂ ಸಹ ಈ ದಿನ ಹಳೆಯ ಬಟ್ಟೆಯನ್ನೇ ಶುದ್ಧವಾಗಿ ಹಾಕುವುದು ಮಾತ್ರ ಮುಖ್ಯ.

ಗೌರಿ ಪ್ರತಿಮೆ

ಸಂಪೂರ್ಣ ವಿಧಾನದಲ್ಲಿ ನೀವು ಗೌರಿ ಪೂಜೆಯನ್ನು ಮಾಡಬೇಕು ಎಂದರೆ, ಮಾರುಕಟ್ಟೆಯಲ್ಲಿ ಗೌರಿಯ ಪ್ರತಿಮೆ ಸಿಗುತ್ತದೆ. ಅದನ್ನು ತಂದು ಶಾಸ್ತ್ರೋಕ್ತವಾಗಿ ಪೂಜೆ ಮಾಡಬಹುದು. ಗೌರಿಯನ್ನು ಈ ರೀತಿ ಪೂಜೆ ಮಾಡುವಾಗ ಭಟ್ಟರ ಅವಶ್ಯಕತೆ ಇರುತ್ತದೆ. ಇನ್ನು ನಿಮ್ಮ ಮನೆಯಲ್ಲಿ ಗೌರಿ ಪ್ರತಿಮೆ ತಂದು ಪೂಜೆ ಮಾಡಲು ಸಾಧ್ಯವಿಲ್ಲ ಎಂದರೆ ಯಾರ ಮನೆಯಲ್ಲಿ ಗೌರಿ ಪೂಜೆ ಮಾಡುತ್ತಾರೆ ಅಲ್ಲಿ ಹೋಗಿ ನೀವು ಸಹ ಮಾಡಬಹುದು.  ನಿಮಗೆ ಗೌರಿ ಮಂಟಪ ಮಾಡಲು ಸಾಧ್ಯವಿದೆ ಎಂದರೆ ಮಾಡುವುದು ಉತ್ತಮ. ಸ್ಪೆಷಲ್ ಮಂಟಪವನ್ನು ಅಲಂಕಾರ ಮಾಡಿ ಗೌರಿಯನ್ನು ಅದರಲ್ಲಿಟ್ಟು ಪೂಜೆ ಮಾಡಬಹುದು.

how to prepare gowri baagina for this festival
ಗೌರಿ ಬಾಗಿನ


ಇದನ್ನೂ ಓದಿ: ಹೀಗೆ ಯೂಸ್​ ಮಾಡಿದ್ರೆ ನಾನ್​ ಸ್ಟಿಕ್​ ವಸ್ತುಗಳು ಹೆಚ್ಚು ದಿನ ಬಾಳಿಕೆ ಬರುತ್ತಂತೆ

ಕಳಶ

ಒಂದು ಕಳಶ ತೆಗೆದುಕೊಳ್ಳಿ, ಅಂದರೆ ಸ್ಟೀಲ್ ಅಥವಾ ತಾಮ್ರದ ಸಣ್ಣ ಚೊಂಬನ್ನು  ತೆಗೆದುಕೊಳ್ಳಿ. ಅದಕ್ಕೆ ಅರಿಶಿಣ ಮತ್ತು ಕುಂಕುಮವನ್ನು ಚೆನ್ನಾಗಿ ಬಳಿದು ಅದರಲ್ಲಿ ನೀರನ್ನು ತುಂಬಿಸಿ. ಆ ನೀರಿಗೆ ಕುಂಕುಮ, ಅರಿಶಿಣ, ಅಕ್ಷತೆ ಮತ್ತು ನಾಣ್ಯಗಳನ್ನು ಹಾಕಿ. ನಂತರ ಒಂದು ತೆಂಗಿನಕಾಯಿಗೆ ಅರಿಶಿಣ-ಕುಂಕುಮ ಬಳಿದು, ಅದನ್ನು ಮತ್ತು ವೀಳ್ಯದಲೆ ತೆಗೆದುಕೊಂಡು, ಕಳಶದ ಮೇಲೆ ಇಡಿ.  ಇನ್ನು ಈ ಕಳಶವನ್ನು ನೇರವಾಗಿ ನೆಲದ ಮೇಲೆ ಅಥವಾ ಮಣೆ ಮೇಲೆ ಇಡಬಾರದು. ಮೊದಲು ರಂಗೋಲಿ ಹಾಕಿ, ಅದರ ಮೇಲೆ ಒಂದು ತಟ್ಟೆಯನ್ನು ಇಡಿ. ಆ ತಟ್ಟೆಗೆ ಅಕ್ಕಿ ಹಾಕಿ, ಅದರ ಮೇಲೆ ಕಳಶ ಇಡಿ.  ನಂತರ ಹದಿನಾರು ಸುತ್ತಿನ ಪವಿತ್ರ ದಾರಕ್ಕೆ ಅರಿಶಿನ, ಕುಂಕುಮ ಹಚ್ಚಿ ಪೂಜಿಸಿ, ಸುಮಂಗಲಿಯರು ತಮ್ಮ ಕೈಗೆ ಕಟ್ಟಿಕೊಳ್ಳಬೇಕು.

best and unique rangoli designs for gowri festival
ರಂಗೋಲಿ


ಇದನ್ನೂ ಓದಿ: ಬೆಳಗ್ಗೆ ಈ ರೀತಿ ತಿಂಡಿ ತಿಂದ್ರೆ ಶುಗರ್ ಹೆಚ್ಚಾಗುತ್ತಂತೆ ನೋಡಿ

ಇನ್ನು ಮುಖ್ಯವಾಗಿ ಗೌರಿ ಹಬ್ಬದಂದು ಸುಮಂಗಲಿಯರಿಗೆ ಬಾಗಿನ ಕೊಡುವುದು ಮರೆಯಬಾರದು. ಈ ದಿನ ಕನಿಷ್ಠ ಐದು ಮುಜತ್ತೈದೆಯರಿಗೆ  ಬಾಗಿನ ನೀಡಬೇಕು. ಅದರಲ್ಲಿ ಅರಿಶಿಣ-ಕುಂಕುಮ, ಹಸಿರು ಬಳೆ, ಕರಿಮಣಿ, ಬಾಚಣಿಗೆ, ಸೀರೆ ಅಥವಾ ಬ್ಲೌಸ್ ಪೀಸ್, ಕಾಯಿ, ಹಣ್ಣು, ಧಾನ್ಯಗಳನ್ನು ಇಟ್ಟು ಮೊರದಲ್ಲಿ ಬಾಗಿನ ಕೊಡಬೇಕು. ಹಾಗೆಯೇ ಈ ದಿನ ಕೋಸಂಬರಿ ಹಾಗೂ ವಿವಿಧ ಸ್ವೀಟ್​ ಗಳನ್ನು ಮಾಡಿ ದೇವರಿಗೆ ನೈವೇದ್ಯ ಮಾಡಬೇಕು.
Published by:Sandhya M
First published: