• Home
  • »
  • News
  • »
  • lifestyle
  • »
  • Mouth Care: ನಿಮ್ಮ ಟೂತ್‌ಪೇಸ್ಟ್‌ನಲ್ಲಿ ಶಕ್ತಿಯೇ ಇಲ್ಲವೇ? ಹಾಗಾದ್ರೆ ಹಲ್ಲಿನ ಸಮಸ್ಯೆಗೆ ಬಳಸಿ ಈ ಮನೆಮದ್ದು

Mouth Care: ನಿಮ್ಮ ಟೂತ್‌ಪೇಸ್ಟ್‌ನಲ್ಲಿ ಶಕ್ತಿಯೇ ಇಲ್ಲವೇ? ಹಾಗಾದ್ರೆ ಹಲ್ಲಿನ ಸಮಸ್ಯೆಗೆ ಬಳಸಿ ಈ ಮನೆಮದ್ದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಲ್ಲು ಮತ್ತು ಬಾಯಿಯ ಆರೋಗ್ಯ ಕಾಪಾಡುವುದು ತುಂಬಾ ಮುಖ್ಯ. ಬಾಯಿ ಕಾಯಿಲೆಗಳನ್ನು ಅವುಗಳ ಆರಂಭಿಕ ಹಂತಗಳಲ್ಲಿ ಕಂಡು ಹಿಡಿದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ತುಂಬಾ ಮುಖ್ಯ. ಯಾಕಂದ್ರೆ ಬಾಯಿಯ ಸಮಸ್ಯೆಯ ಆರಂಭಿಕ ಹಂತದಲ್ಲಿ ರೋಗಿಗೆ ಸುಲಭವಾಗಿ ಚಿಕಿತ್ಸೆ ನೀಡಬಹುದು.

  • Share this:

    ಎಷ್ಟೋ ಬಾರಿ ಹಲ್ಲು ನೋವಿನ ಸಮಸ್ಯೆ (Toothache Problem) ನಿಮ್ಮನ್ನು ಕಾಡಿರಬಹುದು. ಎಷ್ಟೋ ಬಾರಿ ಹಲ್ಲು ಹುಳವಾಗುವುದು, ತೂತು ಬೀಳುವುದು, ಹಲ್ಲಿನ ಪ್ಲೇಕ್ ಸಮಸ್ಯೆ, ಹಲ್ಲು ಹಳದಿಯಾಗುವುದು, ಬಾಯಿ ವಾಸನೆ (Mouth Bad Smell), ನಾಲಿಗೆ ರುಚಿಸದಿರುವುದು ಹೀಗೆ ಹಲವು ಸಮಸ್ಯೆಗಳನ್ನು (Many Problems) ನೀವು ಅನುಭವಿಸಿರಬಹುದು. ತಂಪಾದ ಹಾಗೂ ಬಿಸಿ ಆಹಾರ (Cold And Hot Food) ಸೇವಿಸುವಾಗ ಹಲ್ಲು ಜುಮ್ಮೆನ್ನುವುದು ಈ ಎಲ್ಲಾ ಸಮಸ್ಯೆ ಸಾಕಷ್ಟು ತೊಂದರೆ ಉಂಟು ಮಾಡುತ್ತದೆ. ಬಾಯಿ ಮತ್ತು ಹಲ್ಲಿನ ಆರೋಗ್ಯ ಕಾಪಾಡುವುದು ತುಂಬಾ ಮುಖ್ಯ. ಹಲ್ಲಿನ ಆರೋಗ್ಯ ಸಂಪೂರ್ಣ ಆರೋಗ್ಯವನ್ನು ಚೆನ್ನಾಗಿಡಲು ಸಹಕಾರಿ. ಯಾಕಂದ್ರೆ ನಾವು ತಿನ್ನುವ ಆಹಾರದಿಂದಲೇ ಬ್ಯಾಕ್ಟೀರಿಯಾಗಳು ದೇಹ ಸೇರುತ್ತವೆ.


    ಹಲ್ಲು ಮತ್ತು ಬಾಯಿಯ ಆರೋಗ್ಯ


    ಹಲ್ಲು ಮತ್ತು ಬಾಯಿಯ ಆರೋಗ್ಯ ಕಾಪಾಡುವುದು ತುಂಬಾ ಮುಖ್ಯ. ಬಾಯಿ ಕಾಯಿಲೆಗಳನ್ನು ಅವುಗಳ ಆರಂಭಿಕ ಹಂತಗಳಲ್ಲಿ ಕಂಡು ಹಿಡಿದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ತುಂಬಾ ಮುಖ್ಯ.


    ಯಾಕಂದ್ರೆ ಬಾಯಿಯ ಸಮಸ್ಯೆಯ ಆರಂಭಿಕ ಹಂತದಲ್ಲಿ ರೋಗಿಗೆ ಸುಲಭವಾಗಿ ಚಿಕಿತ್ಸೆ ನೀಡಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ಹಲ್ಲು ನೋವನ್ನು ನಿರ್ಲಕ್ಷ್ಯ ಮಾಡುವುದು ಅತವಾ ಹಲ್ಲು ನೋವನ್ನು ಲಘುವಾಗಿ ಪರಿಗಣಿಸುವ ಕೆಲಸ ಮಾಡಬೇಡಿ ಅಂತಾ ವೈದ್ಯರು ಸಲಹೆ ನೀಡುತ್ತಾರೆ.


    ಯಾಕಂದ್ರೆ ಹಲ್ಲಿನಲ್ಲಿ ಉಂಟಾಗುವ ಕುಳಿಗಳ ಸಮಸ್ಯೆ ಹಲ್ಲಿನ ಕೊಳೆಯುವಿಕೆಯ ಮುಖ್ಯ ಲಕ್ಷಣ ಆಗಿರಬಹುದು. ಹಾಗಾಗಿ ತಕ್ಷಣ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ತುಂಬಾ ಮುಖ್ಯ. ಜೊತೆಗೆ ನೀವು ಕೆಲವು ಮನೆಮದ್ದುಗಳಿಂದ ಹಲ್ಲು ನೋವಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬಹುದು.




    ಹಲ್ಲು ಕೊಳೆಯುವಿಕೆ ಸಮಸ್ಯೆ


    ಒರಾಕ್ಯುರಾದ ಸಂಸ್ಥಾಪಕ ಸಾಗರ್ ಅವತಾಡೆ ಅವರು ಹೇಳುವ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬಲ್ ಓರಲ್ ಹೆಲ್ತ್ ಸ್ಟೇಟಸ್ ರಿಪೋರ್ಟ್ 2022 ನ್ನು ಉಲ್ಲೇಖಿಸಿ ಹೇಳಿದ್ದಾರೆ. ಅದರ ಪ್ರಕಾರ ಪ್ರಪಂಚದಾದ್ಯಂತ ಸುಮಾರು 3.5 ಶತಕೋಟಿ ಜನರು ಬಾಯಿ ಕಾಯಿಲೆ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲಿ ಹೆಚ್ಚು ಜನರು ಹಲ್ಲಿನ ಕೊಳೆತ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.


    ಭಾರತದಲ್ಲಿಯೂ ಅಧಿಕ ಜನರು ಹಲ್ಲಿನ ಕೊಳೆಯುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತುಂಬಾ ಕಡೆಗಳಲ್ಲಿ ಹಾಗೂ ತುಂಬಾ ಜನರಲ್ಲಿ ಬಾಯಿ ಆರೋಗ್ಯ, ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಅರಿವಿನ ಕೊರತೆ ಇದೆ ಅಂತಾರೆ ತಜ್ಞರು.


    ಬಾಯಿ ನೈರ್ಮಲ್ಯ ಕಾಪಾಡಲು ಮುಖ್ಯ ಸಲಹೆ ಹೀಗಿದೆ


    ಸಾಗರ್ ಅವತಾಡೆ ಅವರು ಹೇಳುವ ಪ್ರಕಾರ, ಸುಮಾರು 51 ಪ್ರತಿಶತ ಭಾರತೀಯರು ಟೂತ್ ಬ್ರಷ್ ಮತ್ತು ಟೂತ್‌ ಪೇಸ್ಟ್‌ ನಿಂದ ಹಲ್ಲು ಕ್ಲೀನ್ ಮಾಡ್ತಾರೆ. ಆದರೆ ಇದು ಇಂದಿನ ಜೀವನಶೈಲಿಗೆ ಸಾಕಾಗಲ್ಲ.


    ಕೆಲವು ಬಾಯಿ ನೈರ್ಮಲ್ಯ ಕಾಪಾಡುವ ವಿಷಯಗಳನ್ನು ಫಾಲೋ ಕೂಡ ಮಾಡಬೇಕು. ಮೌಖಿಕ ನೈರ್ಮಲ್ಯ ತುಂಬಾ ಮುಖ್ಯ. ಹೀಗಾಗಿ ತಜ್ಞರು ಬಾಯಿ ಆರೋಗ್ಯಕ್ಕೆ ಕೆಲವು ಅಗತ್ಯ ಸಲಹೆ ತಿಳಿಸಿದ್ದಾರೆ. ಅದಕ್ಕೂ ಮೊದಲು ಹಲ್ಲು ನೋವು ಉಂಟಾಗಲು ಮುಖ್ಯ ಕಾರಣಗಳು ಯಾವವು ಎಂಬುದನ್ನು ನೋಡೋಣ.


    ಹಲ್ಲುನೋವು ಬರಲು ಸರಿಯಾಗಿ ಹಲ್ಲುಜ್ಜದೇ ಇರುವುದು, ಅನಾರೋಗ್ಯಕರ ಆಹಾರ ಸೇವನೆ, ಆಹಾರ ಸೇವನೆ ನಂತರ ಬಾಯಿ ಮುಕ್ಕಳಿಸದೇ ಇರುವುದು, ಅತಿಯಾದ ಲಘು ಆಹಾರ ಸೇವನೆ, ಮೌಖಿಕ ನೈರ್ಮಲ್ಯ ಕಾಪಾಡಲು ಅಸಡ್ಡೆ ತೋರುವುದು, ತುಂಬಾ ಸಿಹಿ ಪದಾರ್ಥ ಸೇವಿಸುವುದು, ಚಾಕೋಲೇಟ್ ಮತ್ತು ಸಂಸ್ಕರಿಸಿದ ಆಹಾರ ಸೇವಿಸುವುದು ಕಾರಣವಾಗಿದೆ.


    ಸಾಂದರ್ಭಿಕ ಚಿತ್ರ


    ಹಲ್ಲು ನೋವನ್ನು ನಿರ್ಲಕ್ಷಿಸಬೇಡಿ ಅಂತಾರೆ ತಜ್ಞರು. ಹಲ್ಲುಗಳು ಮತ್ತು ಒಸಡುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದು ಬಾಯಿ ಮತ್ತು ಹಲ್ಲಿನ ಸಮಸ್ಯೆ ತಡೆಯಲು ಸಹಕಾರಿ. ಹಲ್ಲಿನ ಕೊಳೆತ ತಪ್ಪಿಸಬಹುದು.


    ಹಲ್ಲು ನೋವು ನಿವಾರಣೆಗೆ ಮನೆಮದ್ದು


    ದಿನಕ್ಕೆ ಒಮ್ಮೆಯಾದರೂ ಪವರ್ ಬ್ರಶಿಂಗ್ ಮತ್ತು ವಾಟರ್ ಫ್ಲೋಸಿಂಗ್ ಬಳಕೆ ಮಾಡಿ.


    ಪ್ರತಿ ಊಟದ ನಂತರ ಬಾಯಿ ಮುಕ್ಕಳಿಸುವುದು ಮರೆಯಬೇಡಿ.


    ಕನಿಷ್ಠ ವಾರಕ್ಕೊಮ್ಮೆ ವಾಟರ್ ಫ್ಲೋಸರ್ ಅಥವಾ ಯಾವುದೇ ಎಣ್ಣೆಯಿಂದ ಒಸಡುಗಳನ್ನು ಮಸಾಜ್ ಮಾಡಿ


    ಸಕ್ಕರೆ ಆಹಾರ ಮತ್ತು ಪಾನೀಯ ಸೇವನೆ ಆದಷ್ಟು ತಪ್ಪಿಸಿ


    ಆಗಾಗ್ಗೆ ತಿಂಡಿ ಸೇವನೆ ತಪ್ಪಿಸಿ


    ಸಣ್ಣ ಹಲ್ಲು ಕಿರಿಕಿರಿ ಮತ್ತು ನೋವಿನಿಂದ ಪರಿಹಾರ ಪಡೆಯಲು ಉಪ್ಪು ನೀರಿನಿಂದ ಗ್ಲಾರ್ಗಿಂಗ್ ಮಾಡಿ.


    ಲವಂಗ ಎಣ್ಣೆ ಹಚ್ಚಿರಿ. ಲವಂಗ ಎಣ್ಣೆ ಬಲವಾದ ನೋವು ನಿವಾರಕ ಮತ್ತು ಉರಿಯೂತದ ಪರಿಣಾಮ ಹೊಂದಿದೆ. ಇದು ನಂಜುನಿರೋಧಕವಾಗಿದೆ.


    ಇದನ್ನೂ ಓದಿ: ಚಳಿಗಾಲದಲ್ಲಿ ಮೂಲಂಗಿಯನ್ನು ಈ ರೀತಿ ಸಂಗ್ರಹಿಸಿಡಿ, ಇಲ್ಲವಾದರೆ ರುಚಿ ಕೆಡುತ್ತೆ


    ಐಸ್ ಪ್ಯಾಕ್ ಹಾಕಿ. ಇದು ಹಲ್ಲಿನ ನೋವು ಕಡಿಮೆಯಾಗಲು ಸಹಕಾರಿ. ಊತ ಕಡಿಮೆ ಮಾಡುತ್ತದೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು