Beauty Tips: ದೈನಂದಿನ ತ್ವಚೆಯ ಕಾಳಜಿ ಹೀಗಿರಲಿ! ಆಹಾರದಲ್ಲಿ ಇವುಗಳನ್ನು ಮಿಸ್ ಮಾಡಬೇಡಿ

ಚರ್ಮದ ಆರೈಕೆಯಲ್ಲಿ ನಿಮ್ಮ ಆಹಾರ ಪದ್ಧತಿ ಮುಖ್ಯ ಪಾತ್ರ ವಹಿಸುತ್ತದೆ. ನಿಮ್ಮ ಆಹಾರ ಪದ್ಧತಿ ಬದಲಾಗದ ಹೊರತು ದೋಷರಹಿತ ತ್ವಚೆಯ ಕನಸು ನನಸಾಗುವುದು ಕಷ್ಟ. ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ಚರ್ಮದ ಆರೈಕೆ ಬಗ್ಗೆ ಪೋಸ್ಟ್ ಒಂದನ್ನ ಶೇರ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸೌಂದರ್ಯ (Beauty) ಎಂಬುದು ಹೆಣ್ಣು (Woman) ಮತ್ತು ಗಂಡಿನ (Men) ಪ್ರಥಮ ಆದ್ಯತೆಯಾಗಿದೆ. ಹಾಗಾಗಿ ಜನರು (People) ಸೌಂದರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಸೌಂದರ್ಯದ ವಿಚಾರ ಬಂದಾಗ ಅದರಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶವೇ ಚರ್ಮದ (Skin) ನೋಟ ಮತ್ತು ಆರೈಕೆ. ಹೀಗಾಗಿ ಅನೇಕ ಜನರು ತಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್ ನ ವಿವಿಧ ರೀತಿಯ ಹಲವು ಬ್ಯೂಟಿ ಪ್ರೊಡಕ್ಟ್ ಗಳಿಗೆ ಮೊರೆ ಹೋಗ್ತಾರೆ. ಇದರಲ್ಲಿ ಕೆಲವರು ಕ್ರೀಮುಗಳಿಗೆ, ಇನ್ನು ಕೆಲವರು ಸೌಂದರ್ಯ ಚಿಕಿತ್ಸೆಗೆ ಖರ್ಚು ಮಾಡುತ್ತಾರೆ.

  ಚರ್ಮದ ಆರೈಕೆಯಲ್ಲಿ ಆಹಾರ ಪದ್ಧತಿ ಪಾತ್ರ

  ಆದರೆ ನಿಮ್ಮ ಚರ್ಮದ ಆರೈಕೆಯಲ್ಲಿ ನಿಮ್ಮ ಆಹಾರ ಪದ್ಧತಿ ಮುಖ್ಯ ಪಾತ್ರ ವಹಿಸುತ್ತದೆ. ನಿಮ್ಮ ಆಹಾರ ಪದ್ಧತಿ ಬದಲಾಗದ ಹೊರತು ದೋಷರಹಿತ ತ್ವಚೆಯ ಕನಸು ನನಸಾಗುವುದು ಕಷ್ಟ. ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ಚರ್ಮದ ಆರೈಕೆ ಬಗ್ಗೆ ಪೋಸ್ಟ್ ಒಂದನ್ನ ಶೇರ್ ಮಾಡಿದ್ದಾರೆ.

  ಅದರಲ್ಲಿ ಅವರು, ಚರ್ಮದ ಆರೈಕೆಗಾಗಿ ಆಹಾರ ಪದ್ಧತಿಯಲ್ಲಿ ಏನನ್ನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ಹೇಳಿದ್ದಾರೆ. ಈ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದಾರೆ. ಇದರೊಂದಿಗೆ ಇನ್ನೂ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಇಲ್ಲಿ ಹೇಳಲಾದ ಆಹಾರದ ಸಲಹೆಗಳು ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸಲು ಮತ್ತು ತ್ವಚೆಯ ಕಾಳಜಿಯಲ್ಲಿ ನೀವು ಮಾಡುವ ತಪ್ಪನ್ನು ಸರಿ ಮಾಡಲು ಸಹಕಾರಿಯಾಗಲಿದೆ.

  ಇದನ್ನೂ ಓದಿ: ತೂಕ ಹೆಚ್ಚಿಸಿಕೊಳ್ಳೋಕೆ ಈ ಆಹಾರಗಳು ಬೆಸ್ಟ್! ಪೋಷಕಾಂಶವೂ ಸಿಗುತ್ತೆ

  ಚರ್ಮಕ್ಕೆ ಪ್ರತಿದಿನ ಕಾಳಜಿ ಮಾಡುವುದು ಅತ್ವಗತ್ಯ

  ಪೌಷ್ಟಿಕ ತಜ್ಞೆ ಮುಖರ್ಜಿ ಪ್ರಕಾರ, ನಮ್ಮ ಚರ್ಮವು ತನ್ನನ್ನು ತಾನೇ ಪುನರುಜ್ಜೀವನಗೊಳಿಸುವ ಶಕ್ತಿ ಹೊಂದಿದೆ. ವಯಸ್ಸಾದಂತೆ ಚರ್ಮದ ಮೇಲೆ ಸುಕ್ಕು ಮತ್ತು ಕಲೆಗಳು ಕಾಣಿಸಿಕೊಳ್ಳುತ್ತವೆ. ನೋಟದ ಜೊತೆಗೆ ಚರ್ಮದ ರಚನೆಯಲ್ಲೂ ಸಹ ಸಾಕಷ್ಟು ಬದಲಾವಣೆ ಗೋಚರವಾಗಲು ಪ್ರಾರಂಭವಾಗುತ್ತದೆ.

  ಕಾಲಾನಂತರದಲ್ಲಿ ಸ್ವತಃ ಸರಿಪಡಿಸುವ ಚರ್ಮದ ಸಾಮರ್ಥ್ಯವು ಕಡಿಮೆಯಾಗಲು ಶುರುವಾಗುತ್ತದೆ. ಹಾಗಾಗಿ ನಾವು ಪ್ರತಿದಿನ ನಮ್ಮ ಚರ್ಮದ ಬಗ್ಗೆ ಸ್ವಲ್ಪ ಹೆಚ್ಚು ಕಾಳಜಿ ವಹಿಸುವುದು ಮುಖ್ಯ.

  ತರಕಾರಿ ರಸ ಸೇವನೆಯಿಂದ ತ್ವಚೆಯ ಆರೈಕೆ

  ಪ್ರತಿದಿನ ಒಂದು ಲೋಟ ತರಕಾರಿ ರಸ ಕುಡಿಯಲು ತಜ್ಞೆ ಮುಖರ್ಜಿ ಸಲಹೆ ನೀಡಿದ್ದಾರೆ. ಕ್ಯಾರೆಟ್, ಟೊಮೆಟೊ ಮತ್ತು ಬೀಟ್‌ರೂಟ್ ರಸವು ಚರ್ಮ ಮತ್ತು ಯಕೃತ್ತಿನ ವಿಷವನ್ನು ಶುದ್ಧೀಕರಿಸುತ್ತದೆ. ಸಸ್ಯಾಧಾರಿತ ಆಹಾರವು ದೇಹಕ್ಕೆ ವಿಟಮಿನ್-ಸಿ, ವಿಟಮಿನ್-ಇ ಮತ್ತು ಸೆಲೆನಿಯಮ್ ಅನ್ನು ಒದಗಿಸುತ್ತದೆ. ಇದು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ. ಮತ್ತು ಹೊಸ ಕೋಶಗಳ ರಚನೆಗೆ ಸಹಕಾರಿ.

  ಧೂಮಪಾನ ಮಾಡದಿರಲು ಸಲಹೆ

  ಧೂಮಪಾನ ತ್ಯಜಿಸಲು ಪೌಷ್ಟಿಕ ತಜ್ಞರು ಸಲಹೆ ನೀಡಿದ್ದಾರೆ. ಧೂಮಪಾನದಿಂದ ಚರ್ಮಕ್ಕೆ ಹೆಚ್ಚಿನ ಹಾನಿಯಾಗುತ್ತದೆ. ಜೊತೆಗೆ ಕರಿದ ಮತ್ತು ಹೆಚ್ಚಿದ ಹಸಿಮೆಣಸಿನ ಖಾದ್ಯ ಸೇವಿಸದಂತೆ ಸೂಚಿಸಿದ್ದಾರೆ. ಕರಿದ ಪದಾರ್ಥ ಮತ್ತು ಧೂಮಪಾನ ವಿಷಕಾರಿ ಮಟ್ಟ ಹೆಚ್ಚಿಸುತ್ತದೆ. ಇದು ದೇಹ ಮತ್ತು ಚರ್ಮಕ್ಕೆ ಒಳ್ಳೆಯದಲ್ಲ.

  ಆಹಾರದಲ್ಲಿ ಯಾವ ಪದಾರ್ಥಗಳನ್ನು ಸೇರಿಸಬೇಕು?

  ಅಂಜಲಿ ಮುಖರ್ಜಿ ಪ್ರಕಾರ, ಕೊಬ್ಬಿನ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಜೊತೆಗೆ ಹೊಳೆಯುವ ತ್ವಚೆಗಾಗಿ ಆರೋಗ್ಯಕರ ಕೊಬ್ಬು ಹೊಂದಿರುವ ಆಹಾರ ಪದಾರ್ಥಗಳ ಸೇವನೆ ಹೆಚ್ಚಿಸಬೇಕು ಎಂದಿದ್ದಾರೆ. ವಿಶೇಷವಾಗಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಮತ್ತು ಒಮೆಗಾ ಕೊಬ್ಬಿನಾಮ್ಲಗಳಾದ ಮೀನಿನ ಎಣ್ಣೆ, ಆಲಿವ್ ಎಣ್ಣೆ, ಕ್ಯಾನೋಲಾ ಎಣ್ಣೆ ಮತ್ತು ವಾಲ್ನಟ್ಸ್ ಸೇರಿಸಿ ಸೇವಿಸಿ.

  ಇದನ್ನೂ ಓದಿ: ಆರೋಗ್ಯಕರ ಜೀವಕೋಶ ಹೊಂದಲು ದಿನಕ್ಕೆಷ್ಟು ಪ್ರೋಟೀನ್ ಬೇಕು ಗೊತ್ತೇ?

  ಹೊಳೆಯುವ ತ್ವಚೆಗಾಗಿ ಏನು ಸೇವಿಸಬೇಕು?

  ಹೊಳೆಯುವ ಚರ್ಮ ಪಡೆಯಲು ಫೈಬರ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ ಪದಾರ್ಥ ಸೇವನೆ ಹೆಚ್ಚಿಸಿ. ಹಣ್ಣು, ತರಕಾರಿ, ಧಾನ್ಯ ಸೇವಿಸಿ. ಇವು ದೇಹದ ವ್ಯವಸ್ಥೆಯನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತವೆ. ಸಂಸ್ಕರಿತ ಆಹಾರದ ಬದಲು ಮನೆಯಲ್ಲೇ ನೀವೇ ತಯಾರಿಸಿದ ಆಹಾರ ಸೇವಿಸಿ. ವಿಟಮಿನ್-ಎ, ಬಿ, ಸಿ, ಇ, ಜಿಂಕ್, ಗಾಮಾ ಲಿನೋಲೆನಿಕ್ ಆಸಿಡ್ ಸೇವಿಸಲು ಸೂಚಿಸಿದ್ದಾರೆ.
  Published by:renukadariyannavar
  First published: