ತುಂಬಾ ಜನರು (People) ತಮ್ಮ ಮುಖದ ಆರೈಕೆಗೆ (Face Care) ತೆಗೆದುಕೊಳ್ಳುವ ಸಮಯವನ್ನು (Time) ದೇಹದ ಆರೋಗ್ಯ (Body Health) ಮತ್ತು ದೇಹದ ಚರ್ಮದ ಆರೈಕೆಗೆ (Body Skin Care) ಕೊಡವುದಿಲ್ಲ. ಮುಖದ ಕಾಳಜಿಗೆ ಕೊಡುವ ಮಹತ್ವವನ್ನು ದೇಹದ ತ್ವಚೆಯ ಆರೈಕೆಗೆ ಮೀಸಲು ಇಡುವುದಿಲ್ಲ. ಆದರೆ ಮುಖದ ಆರೈಕೆ ಜೊತೆಗೆ ದೇಹದ ತ್ವಚೆಯ ಆರೋಗ್ಯ ಕಾಪಾಡಲು ಸೂಕ್ತ ಕೇರ್ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಯಾಕಂದ್ರೆ ನಮ್ಮ ಮುಖದ ಬಣ್ಣವು ಸ್ಪಷ್ಟವಾಗಿ ಹೊಳೆಯುತ್ತೆ. ಆದ್ರೆ ಕೈ ಮತ್ತು ಕಾಲು ಹಾಗೂ ಬೆನ್ನು ಚರ್ಮವು ಕಪ್ಪಾಗಿರುತ್ತದೆ. ಇದು ಅನೇಕ ಜನರಲ್ಲಿ ಕಂಡು ಬರುತ್ತದೆ.
ದೇಹದ ಚರ್ಮದ ನೈಸರ್ಗಿಕ ಹೊಳಪಿಗಾಗಿ ಹೀಗೆ ಆರೈಕೆ ಮಾಡಿ
ಕಾರಣ ದೇಹದ ಚರ್ಮದ ಆರೈಕೆಗೆ ಹೆಚ್ಚು ಕಾಳಜಿ ವಹಿಸದೇ ಇರುವುದು ಮತ್ತು ಹೆಚ್ಚು ಲೋಷನ್ಗಳು ಮತ್ತು ರಾಸಾಯನಿಕಗಳನ್ನು ಬಳಸುವುದು ಆಗಿದೆ. ಯಾಕಂದ್ರೆ ಕಠಿಣ ರಾಸಾಯನಿಕಗಳು ನಿಮ್ಮ ಚರ್ಮವನ್ನು ಕಾಲಾನಂತರದಲ್ಲಿ ಹಾನಿ ಉಂಟು ಮಾಡುತ್ತವೆ. ಇಲ್ಲವೇ ಕಪ್ಪಾಗಿಸಬಹುದು. ಹಾಗಾದ್ರೆ ನಾವು ಇಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ, ನೈಸರ್ಗಿಕವಾಗಿ ಮನೆಯಲ್ಲೇ ದೇಹದ ಚರ್ಮದ ಬಣ್ಣದ ಹೊಳಪಿಗೆ ಸಹಾಯ ಮಾಡುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ.
ದೇಹದ ಚರ್ಮವನ್ನು ನೈಸರ್ಗಿಕವಾಗಿ ಸ್ವಚ್ಛ ಮತ್ತು ಹೊಳೆಯುವಂತೆ ಮಾಡುವ ಮನೆಮದ್ದುಗಳು
ಎಣ್ಣೆ ಮಸಾಜ್
ತೈಲ ಮಸಾಜ್ ಅತ್ಯಂತ ಹಳೆಯ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗ. ಚರ್ಮವನ್ನು ಸ್ವಚ್ಛಗೊಳಿಸುವುದು ಚರ್ಮಕ್ಕೆ ಪ್ರಯೋಜನಕಾರಿ. ಇದು ನಿಮ್ಮ ಭುಜ ಮತ್ತು ಬೆನ್ನಿನ ಸ್ನಾಯುಗಳಲ್ಲಿನ ಗಂಟುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ.
ಚರ್ಮಕ್ಕೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಸ್ನಾಯುವಿನ ಒತ್ತಡ ನಿವಾರಿಸುತ್ತದೆ. ಎಣ್ಣೆ ಮಸಾಜ್ ಗಾಗಿ ನೀವು ಯಾವುದೇ ಎಣ್ಣೆ ಬೇಕಾದ್ರೂ ಆಯ್ಕೆ ಮಾಡಬಹುದು. ತೆಂಗಿನ ಎಣ್ಣೆ ಉತ್ತಮ.
ನಿಂಬೆ ಮತ್ತು ತೆಂಗಿನ ಎಣ್ಣೆ
ನಿಂಬೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಚರ್ಮದ ಬಣ್ಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಒಳಗಿನಿಂದ ಚರ್ಮದ ಟೋನ್ ಅನ್ನು ಹೊಳೆಯುವಂತೆ ಮಾಡುತ್ತದೆ. ಚರ್ಮದ ಆರೈಕೆಯ ದಿನಚರಿಯಲ್ಲಿ ನಿಂಬೆ ಸೇರಿಸಲು ನೀವು ಬಯಸಿದರೆ ತೆಂಗಿನ ಎಣ್ಣೆಯ ಜೊತೆಗೆ ಅದನ್ನು ನಿಮ್ಮ ಚರ್ಮಕ್ಕೆ ಪ್ರತಿದಿನ ಅನ್ವಯಿಸಿ.
ಅರಿಶಿನ ಮತ್ತು ಕಡಲೆಹಿಟ್ಟು
ಅರಿಶಿನ ಮತ್ತು ಕಡಲೆ ಹಿಟ್ಟು ಎರಡೂ ಚರ್ಮಕ್ಕೆ ಪ್ರಯೋಜನಕಾರಿ. ಅರಿಶಿನವು ಕರ್ಕ್ಯುಮಿನ್ ಹೊಂದಿದೆ. ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ತರುತ್ತದೆ. ಕಡಲೆ ಹಿಟ್ಟು ಸ್ಕ್ರಬ್ಬಿಂಗ್ ಗುಣಲಕ್ಷಣ ಹೊಂದಿದೆ. ಕಲ್ಮಶ ಕತ್ತರಿಸುತ್ತದೆ.
ಆದ್ದರಿಂದ ನೀವೂ ಒಂದು ಚಮಚ ಅರಿಶಿನ, ಒಂದು ಚಮಚ ಬೇಳೆ ಹಿಟ್ಟು, ಮೊಸರು ಮತ್ತು ಜೇನುತುಪ್ಪ ಬೆರೆಸಿ ಪೇಸ್ಟ್ ತಯಾರಿಸಿ. ಅದನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಸರಳ ನೀರಿನಿಂದ ತೊಳೆಯಿರಿ ಮತ್ತು ಸೋಪ್ ಅನ್ನು ಬಳಸಬೇಡಿ.
ಹಿಟ್ಟು ಮತ್ತು ಹಾಲು
ಸ್ನಾನ ಮಾಡುವಾಗ ಸೋಪಿನ ಬದಲಿಗೆ ಹಿಂದಿನ ಜನರು ಹಿಟ್ಟನ್ನು ಬಳಸುತ್ತಿದ್ದರು. ಹಿಟ್ಟಿನಲ್ಲಿ ಚರ್ಮ ಸ್ವಚ್ಛಗೊಳಿಸಲು ಮತ್ತು ಅದರ ಬಣ್ಣವನ್ನು ಹೆಚ್ಚಿಸುತ್ತದೆ. ಹಾಲು ಚರ್ಮ ಮೃದುಗೊಳಿಸುತ್ತದೆ. ಈ ಎರಡೂ ಎಳೆಗಳು ಕಲೆ ತೆಗೆದು ಹಾಕಲು ಸಹಾಯ ಮಾಡುತ್ತದೆ.
ಸಾಬೂನಿನ ಬದಲು ಮೈದಾ ಹಿಟ್ಟು ಮತ್ತು ಹಾಲಿನ ಸಹಾಯದಿಂದ ದಪ್ಪನೆಯ ಪೇಸ್ಟ್ ತಯಾರಿಸಿ ಚರ್ಮಕ್ಕೆ ಹಚ್ಚಿ. ಸ್ನಾನ ಮಾಡಿ. ಚರ್ಮವು ನೈಸರ್ಗಿಕವಾಗಿ ಹೊಳೆಯಲು ಇದು ಸಹಕಾರಿ.
ಇದನ್ನೂ ಓದಿ: ಸೌತ್ ಇಂಡಿಯನ್ ಸ್ಟೈಲ್ ನಲ್ಲಿ ‘ಘೀ ಚಿಕನ್ ಕರಿ’ ಹೇಗೆ ಮಾಡುವುದು ಗೊತ್ತಾ? ಈ ಟೇಸ್ಟಿ ರೆಸಿಪಿ ನಿಮಗಾಗಿ
ಅಕ್ಕಿ ಹಿಟ್ಟು
ಅಕ್ಕಿ ಹಿಟ್ಟು ನಿಮ್ಮ ಚರ್ಮದ ಬಣ್ಣವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸ್ನಾನ ಮಾಡುವ ಮೊದಲು, ನಿಮ್ಮ ಚರ್ಮಕ್ಕೆ ಅಕ್ಕಿ ಹಿಟ್ಟು ಮತ್ತು ನೀರಿನಿಂದ ಮಾಡಿದ ದಪ್ಪ ಪೇಸ್ಟ್ ಅನ್ನು ಅನ್ವಯಿಸಿ. ಇದು ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ