ನಮ್ಮ ದೈನಂದಿನ ಜೀವನದಲ್ಲಿ (Life) ನಮಗೆ ಅಗತ್ಯವಿರುವ ಪ್ರಮುಖ ವಸ್ತುಗಳಲ್ಲಿ ನಮ್ಮ ಹಲ್ಲುಜ್ಜುವ ಬ್ರಷ್ (Tooth Brush) ಕೂಡ ಒಂದು. ಹಲ್ಲುಜ್ಜುವ ಬ್ರಷ್ ಹಲ್ಲಿನ ಸ್ವಚ್ಛತೆ ಕಾಪಾಡಲು ಅನಿವಾರ್ಯವಾಗಿರುವುದರಿಂದ, ಅದನ್ನು ಆಯ್ಕೆಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಲವಾರಿದೆ. ನಾವು ತಪ್ಪಾಗಿ ಈ ಹಲ್ಲುಜ್ಜುವ ಬ್ರಷ್ಗಳನ್ನು ಆಯ್ಕೆ ಮಾಡಿದರೆ ಹಾಗೂ ಅದನ್ನು ಬಳಸುವಾಗ ಎಚ್ಚರಿಕೆ ವಹಿಸದಿದ್ದರೆ ಅಪಾಯ ಜಾಸ್ತಿ. ಹೀಗಾಗಿ ಈ ವಿಚಾರದಲ್ಲಿ ಸಹ ನಾವು ಕೆಲ ಟಿಪ್ಸ್ (Tips) ಫಾಲೋ ಮಾಡಬೇಕು. ಆಗ ಮಾತ್ರ ನಮ್ಮ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದ್ರೆ ಹಲ್ಲುಜ್ಜುವ ಬ್ರಷ್ ಖರೀದಿ ಮಾಡುವುದು ಹೇಗೆ ಮತ್ತು ಅದರ ಕಾಳಜಿವಹಿಸುವುದು ಹೇಗೆ ಎಂಬುದು ಇಲ್ಲಿದೆ.
ಸಾಮಾನ್ಯವಾಗಿ ನಾವು ಹಲ್ಲುಜ್ಜುವ ಬ್ರಷ್ ಅನ್ನು ಅದು ಸಂಪೂರ್ಣವಾಗಿ ಹಾಳಾಗುವವರೆಗೆ ಬಳಸುತ್ತೇವೆ. ಅದನ್ನು ಯಾವಾಗ ಬದಲಾಯಿಸಬೇಕು ಎನ್ನುವ ಬಗ್ಗೆ ನಾವು ಆಲೋಚನೆ ಮಾಡುವುದಿಲ್ಲ. ಹೀಗಿರುವಾಗ ಟೂತ್ ಬ್ರಷ್ ನ ಎಕ್ಸ್ ಪೈರಿ ಡೇಟ್ ಯಾವುದು ಎಂದು ತಿಳಿಯಬೇಕು. ಬಹುಶಃ ನೀವು ಖರೀದಿಸುವಾಗ ಅದರ ಬಗ್ಗೆ ಗಮನ ಹರಿಸಿರುವುದಿಲ್ಲ. ಇದು ಎಲ್ಲರೂ ಸಾಮಾನ್ಯವಾಗಿ ಮಾಡುವ ದೊಡ್ಡ ತಪ್ಪು ಎನ್ನಬಹುದು. ಇದು ನಮ್ಮ ಹಲ್ಲುಗಳು ಹಾಗೂ ಬಾಯಿಯ ಆರೋಗ್ಯ ಹಾಳಾಗಲು ಕಾರಣವಾಗುತ್ತದೆ.
ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಿ
ತಜ್ಞರ ಪ್ರಕಾರ, ಹಲ್ಲುಜ್ಜುವ ಬ್ರಷ್ ಬಾಯಿಯ ಆರೋಗ್ಯಕ್ಕೆ ಅತ್ಯಗತ್ಯ. ಆದರೆ ಅದರ ಸರಿಯಾದ ಆಯ್ಕೆ ಕೂಡ ಬಹಳ ಅವಶ್ಯಕ. ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಬೇಕು. ಅಲ್ಲದೆ, ಟೂತ್ ಬ್ರಷ್ ಅನ್ನು ಖರೀದಿಸುವಾಗ, ಅದರ ಸರಿಯಾದ ಬ್ರ್ಯಾಂಡ್ ಅನ್ನು ಆಯ್ಕೆ ಮಾಡಬೇಕು.
ಸರಿಯಾದ ಹಲ್ಲುಜ್ಜುವ ಬ್ರಷ್ ಅನ್ನು ಆರಿಸುವುದರಿಂದ ನಿಮ್ಮ ಮೌಖಿಕ ನೈರ್ಮಲ್ಯವನ್ನು ನೀವು ಕಾಪಾಡಿಕೊಳ್ಳಬಹುದು. ಅಲ್ಲದೇ, ನೀವು ಗಮನಿಸಿರಬಹುದು ವೈದ್ಯರು ದಿನಕ್ಕೆ 2 ಬಾರಿ ಬ್ರಷ್ ಮಾಡುವಂತೆ ಹೇಳುತ್ತಾರೆ. ಹೇಗೆ ನಾವು ಬ್ರಷ್ ಮಾಡುವುದು ಬಾಯಿಯ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆಯೋ, ಹಾಗೆಯೇ ನಾವು ಆಯ್ಕೆ ಮಾಡುವ ಬ್ರಷ್ ಸಹ ಬಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮೃದುವಾದ ಬ್ರಷ್ ಆಯ್ಕೆ ಮಾಡಿಕೊಳ್ಳಿ
ಮೃದುವಾದ ಬ್ರಷ್ ಆರಿಸಿಕೊಳ್ಳಿ. ಹಲ್ಲುಜ್ಜುವ ಬ್ರಷ್ ಮೃದುವಾಗಿದ್ದರೆ ನಿಮ್ಮ ಹಲ್ಲುಗಳ ಅಂಚುಗಳಲ್ಲಿ ಚೆನ್ನಾಗಿ ಬಳಸಬಹುದು. ತುಂಬಾ ಗಟ್ಟಿಯಾಗಿರುವ ಟೂತ್ ಬ್ರಷ್ ಹಲ್ಲುಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವುದಿಲ್ಲ. ಹಲ್ಲುಗಳಲ್ಲಿ ಕೊಳೆ ಹಾಗೆಯೇ ಉಳಿಯುತ್ತದೆ. ಅಲ್ಲದೆ, ಬ್ರಷ್ ಗಟ್ಟಿಯಾಗಿದ್ದರೆ, ವಸಡುಗಳಿಗೆ ಹಾನಿ ಉಂಟಾಗುತ್ತದೆ. ಆದ್ದರಿಂದ, ಒಸಡುಗಳಿಗೆ ಉತ್ತಮವಾದ ಬ್ರಷ್ ಅನ್ನು ಆಯ್ಕೆ ಮಾಡುವುದು ಮುಖ್ಯ ಎಂಬುದು ನೆನಪಿರಲಿ.
ಬ್ರಷ್ ಅನ್ನು ಈ ರೀತಿ ನೋಡಿಕೊಳ್ಳಿ
ಟೂತ್ ಬ್ರಶ್ ಬಳಸಿದ ನಂತರ ಅದನ್ನು ಅಲ್ಲಿ ಇಲ್ಲಿ ಇಡಬೇಡಿ. ಹಲ್ಲುಜ್ಜುವ ಬ್ರಷ್ ಒಣಗಿದಾಗ ಮಾತ್ರ ಅದನ್ನು ಒಂದು ಮೂಲೆಯಲ್ಲಿ ಇಡಿ. ಇಲ್ಲದಿದ್ದರೆ ಬ್ರಷ್ ಒದ್ದೆ ಇರುವ ಕಾರಣ, ಅದರಲ್ಲಿ ವಿವಿಧ ಸೂಕ್ಷ್ಮಜೀವಿಗಳು ಮತ್ತು ಶಿಲೀಂಧ್ರಗಳು ಬೆಳೆಯುತ್ತದೆ. ಇದನ್ನು ತಡೆಯಲು, ಅದನ್ನು ಸ್ವಲ್ಪ ಸಮಯದವರೆಗೆ ಉದ್ದವಾಗಿ ನಿಲ್ಲಿಸಿ. ಈ ರೀತಿ ನಿಲ್ಲಿಸುವುದರಿಂದ ಅದರಲ್ಲಿರುವ ನೀರು ಹರಿದು, ಒಣಗುತ್ತದೆ.
ಕ್ಯಾಪ್ ಇರುವ ಬ್ರಷ್ ಆಯ್ಕೆ ಮಾಡಿ
ಕ್ಯಾಪ್ ಇರುವ ಬ್ರಷ್ ಅನ್ನು ಆರಿಸುವುದು ಉತ್ತಮ. ಬ್ರಷ್ ಒಣಗಿದ ನಂತರ, ಕ್ಯಾಪ್ ಅನ್ನು ಹಾಕಿ. ಇದು ಧೂಳಿನಿಂದ ರಕ್ಷಿಸುತ್ತದೆ. ಹಲ್ಲುಜ್ಜುವ ಬ್ರಷ್ ಅನ್ನು ಖರೀದಿಸುವಾಗ, ಸಣ್ಣ ಬ್ರಷ್ ಆರಿಸಿ. ಇದು ಬಾಯಿಯ ವಿವಿಧ ಮೂಲೆಗಳನ್ನು ಸುಲಭವಾಗಿ ತಲುಪುತ್ತವೆ. ಹಲ್ಲುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ. ಆದರೆ ನೀವು ದೊಡ್ಡ ಬ್ರಷ್ ಅನ್ನು ಆರಿಸಿದರೆ, ಕೊಳಕುಗಳ ಹಲ್ಲುಗಳಲ್ಲಿ ಉಳಿದು ಬಿಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ