ಮನೆಯಲ್ಲೇ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳೋದು ಹೇಗೆ?; ಇಲ್ಲಿದೆ ಉತ್ತರ

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರೆ ನಿಮ್ಮ ದೇಹ ಆರೋಗ್ಯವಾಗಿರಬೇಕು. ಅದಕ್ಕಾಗಿ ನಿತ್ಯ ಆರೋಗ್ಯಕರ ಆಹಾರ ಸೇವನೆ,  ವ್ಯಾಯಾಮ, ಆರೋಗ್ಯಕರ ದೇಹ ತೂಕ, ನಿತ್ಯ 8-9 ಗಂಟೆ ನಿದ್ದೆ, ದೇಹ ನೈರ್ಮಲ್ಯವಾಗಿಟ್ಟುಕೊಳ್ಳಬೇಕು. ಒತ್ತಡ ತೆಗೆದುಕೊಳ್ಳಬಾರದು.

news18-kannada
Updated:September 22, 2020, 4:56 PM IST
ಮನೆಯಲ್ಲೇ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳೋದು ಹೇಗೆ?; ಇಲ್ಲಿದೆ ಉತ್ತರ
ಆರೋಗ್ಯ
  • Share this:
ವಿಶ್ವಾದ್ಯಂತ ಕೊರೋನಾ ವೈರಸ್​ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕೊರೋನಾ ವೈರಸ್​ಗೆ ಬಲಿಯಾಗುತ್ತಿರುವರಲ್ಲಿ ಚಿಕ್ಕ ಮಕ್ಕಳು ಹಾಗೂ ವಯಸ್ಸಾದವರ ಸಂಖ್ಯೆ ಹೆಚ್ಚು. ಕೊರೋನಾ ವೈರಸ್​ ನಿಂದ ಯುವಕರು ಮೃತಪಡುವ ಸಾಧ್ಯತೆ ತುಂಬಾನೇ ಅಪರೂಪ. ಏಕೆಂದರೆ, ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು. ಆದಾಗ್ಯೂ, ಕೆಲವರಲ್ಲಿ ಈ ವೈರಸ್​ ಕಾಣಿಸಿಕೊಳ್ಳುತ್ತಿದೆ. ಕೆಲವರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈಗಾಗಲೇ ಕೆಲ ಔಷಧಿಗಳ ಮೊರೆ ಹೋಗುತ್ತಿದ್ದಾರೆ. ಹಾಗಾದರೆ, ಮನೆಯಲ್ಲೇ ಕುಳಿತು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳೋದು ಹೇಗೆ? ಅದಕ್ಕೆ ಇಲ್ಲಿದೆ ಉತ್ತರ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರೆ ನಿಮ್ಮ ದೇಹ ಆರೋಗ್ಯವಾಗಿರಬೇಕು. ಅದಕ್ಕಾಗಿ ನಿತ್ಯ ಆರೋಗ್ಯಕರ ಆಹಾರ ಸೇವನೆ,  ವ್ಯಾಯಾಮ, ಆರೋಗ್ಯಕರ ದೇಹ ತೂಕ, ನಿತ್ಯ 8-9 ಗಂಟೆ ನಿದ್ದೆ, ದೇಹ ನೈರ್ಮಲ್ಯ, ಕಡಿಮೆ ಒತ್ತಡ ಕಾಯ್ದುಕೊಳ್ಳಬೇಕು.

ಜಿಂಕ್:

ಜಿಂಕ್​ ಅಂಶ ಇರುವ ಆಹಾರ ಸೇವನೆ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಾಂಸ, ಮೀನು, ಬೇಳೆಗಳಲ್ಲಿ ಜಿಂಕ್​ ಅಂಶ ಇರುತ್ತದೆ.

ಕಬ್ಬಿಣ:
ಕಬ್ಬಿಣದ ಅಂಶ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತದಲ್ಲಿ ಆಮ್ಲಜನಕದ ಪ್ರಮಾಣದ ಹೆಚ್ಚುತ್ತದೆ. ಇದು ಕೂಡ ದೇಹ ಆರೋಗ್ಯ ಉತ್ತಮವಾಗಲು ಸಹಾಯಕಾರಿ. ತರಕಾರಿ, ಕುಂಬಳಕಾಯಿ ಬೀಜದಲ್ಲಿ ಕಬ್ಬಿಣದ ಅಂಶ ಇರಲಿದೆ.

ವಿಟಾಮಿನ್​ ಎ:ವಿಟಾಮಿನ್​ ಎ ಇರುವ ಆಹಾರ ಪದಾರ್ಥಗಳನ್ನು ತಿಂದರೆ ನಿಮ್ಮ ಆರೋಗ್ಯ ಶಕ್ತಿ ಹೆಚ್ಚಲಿದೆ. ಗೆಣಸು, ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ವಿಟಾಮಿನ್​ ಎ ಅಂಶ ಸಿಗಲಿದೆ.

ಮಸಾಲೆ ಪದಾರ್ಥ:

ಮಸಾಲೆ ಪದಾರ್ಥಗಳು ದೇಹಕ್ಕೆ ತುಂಬಾನೇ ಹೀಟ್​ ಎನ್ನುವುದು ಗೊತ್ತಿರುವ ವಿಚಾರ. ಆದರೆ, ಇದನ್ನು ಮಿತ ಪ್ರಮಾಣದಲ್ಲಿ ತಿಂದರೆ ನಿಮ್ಮ ದೇಹದ ಆರೋಗ್ಯ ಉತ್ತಮವಾಗಿರಲಿದೆ ಎನ್ನುತ್ತದೆ ಅಧ್ಯಯನ.
Published by: Rajesh Duggumane
First published: September 22, 2020, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading