Exam ಎಂಬ ಆತಂಕ ಕಾಡುತಿದ್ಯಾ; ಈ 7 ಸಲಹೆ ಮೂಲಕ ನೆನಪಿನ ಶಕ್ತಿ ಜೊತೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ

ಮಕ್ಕಳು ಪರೀಕ್ಷೆ ಎದುರಿಸಲು ಹೋಗುತ್ತಿದ್ದಾಗ ಪೋಷಕರು ಮುಕ್ತ ಮನಸ್ಸಿನಿಂದ ಹಾರೈಸುವುದರಿಂದ ಅವರ ಭಯವನ್ನು ಹೋಗಲಾಡಿಸಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಿದ್ಯಾರ್ಥಿಗಳು ಓದಿನಲ್ಲಿ ( Study ) ಎಷ್ಟೇ ಅಭ್ಯಾಸ ನಡೆಸಿದ್ದರೂ ಪರೀಕ್ಷೆ ವಿಷಯದಲ್ಲಿ ಅವರ ಆತಂಕ (Stress) ಮರೆಯಾಗುವುದಿಲ್ಲ. ಅದರಲ್ಲೂ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ (Board Exam Student)  ಈ ಪರೀಕ್ಷೆ ಗುಮ್ಮ ಇನ್ನೂ ಹೆಚ್ಚಾಗಿಯೇ ಕಾಡುತ್ತದೆ. ಕ್ಲಾಸ್​ ರೂಂ ಬಿಟ್ಟು, ಆನ್​ಲೈನ್​ನಲ್ಲಿ ತರಗತಿಗಳನ್ನು ಕೇಳುತ್ತಿರುವ ಮಕ್ಕಳು ಇದೀಗ ಆಫ್​​ಲೈನ್ ಪರೀಕ್ಷೆಗೆ ಕೊಂಚ ಹೆಚ್ಚೆ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ಚಿಂತೆ ಮಾಡವುದು ಬೇಡ. ಕೆಳಗಿನ ಈ ಏಳು ಸಲಹೆಗಳನ್ನು (Seven Tips) ಪಾಲಿಸಿದರೆ ಸಾಕು ಪರೀಕ್ಷೆ ಎಂಬ ಗುಮ್ಮ ನಮ್ಮನ್ನು ಬಿಟ್ಟು ಹೋಗಿ ಆತ್ಮವಿಶ್ವಾಸದಿಂದ (Self Confident ) ಪರೀಕ್ಷೆ ಎದುರಿಸಬಹುದಾಗಿದೆ.

  ಆನ್​ಲೈನ್​ನಿಂದ ಆಫ್​ಲೈನ್​ಗೆ
  ಕಳೆದೆರಡು ವರ್ಷಗಳಿಂದ ಕೋವಿಡ್​ನಿಂದ ಆನ್​ಲೈನ್​ ತರಗತಿ ಮೊರೆ ಹೋಗಿರುವ ವಿದ್ಯಾರ್ಥಿಗ ಅನುಕೂಲಕ್ಕೆ ಸರ್ಕಾರ ಬಹುಆಯ್ಕೆ ಉತ್ತರಗಳನ್ನು ಪರೀಕ್ಷೆಯಲ್ಲಿ ನೀಡಿದೆ. ಈ ಬಹು ಆಯ್ಕೆ ಪ್ರಶ್ನೆಗಳ ಉತ್ತರ ದೊಡ್ಡ ಉತ್ತರಗಳಲ್ಲಿ ಅಡಗಿರುತ್ತದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಅಭ್ಯಾಸ ನಡೆಸುವ ಮೂಲಕ ಪರೀಕ್ಷೆ ಆತಂಕ ಹೊಡೆದೊಡಿಸಬಹುದು. ಮನೆ ಅಥವಾ ಶಾಲೆಯಲ್ಲಿ ಪರೀಕ್ಷೆ ಎದುರಿಸುವಂತ ಸಣ್ಣ ಸಣ್ಣ ಪರೀಕ್ಷೆಗಳನ್ನು ಎದುರಿಸುವುದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

  ಆತಂಕ ಮತ್ತು ಒತ್ತಡ
  ಮಕ್ಕಳು ಪರೀಕ್ಷೆ ಎದುರಿಸುವಲ್ಲಿ ಮನೆಯ ವಾತಾವರಣ ಕೂಡ ಮುಖ್ಯವಾಗುತ್ತದೆ. ಮನೆಯಲ್ಲಿ ವಿದ್ಯಾರ್ಥಿಗಳಿಗೆ ಪೋಷಕರು ಆತಂಕ, ಒತ್ತಡ ಹೇರಿದರೆ ಮಕ್ಕಳ ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಪರೀಕ್ಷೆ ಎದುರಿಸುತ್ತಿರುವ ಮಕ್ಕಳಿಗೆ ಮನೆ ವಾತಾವರಣ ಕೂಡ ನೆಮ್ಮದಿ, ಖುಷಿ ನೀಡುವಂತೆ ಇರಬೇಕು. ಸಾಧ್ಯವಾದರೆ, ಪೋಷಕರು ಕೂಡ ಮಕ್ಕಳ ಸಹಾಯಕ್ಕೆ ಮುಂದಾಬೇಕು. ಕಾರಣ 15-18 ವರ್ಷದ ಮಕ್ಕಳು ಈಗಾಗಲೇ ದೈಹಿಕ ಹಾರ್ಮೋನುಗಳ ಬದಲಾವಣೆ ಅನುಭವಿಸುತ್ತಿರುತ್ತಾರೆ. ಅವರಿಗೆ ಮೂಡ್​ ಸ್ವಿಂಗ್​ ಆದ ಸಮಯದಲ್ಲಿ ಪೋಷಕರ ಅವಶ್ಯಕತೆ ಅತ್ಯಗತ್ಯವಾಗಿರುತ್ತದೆ.

  ಅಂಕ ಮತ್ತು ಮೈಲಿಗಲ್ಲು:
  10 ಮತ್ತ 12ನೇ ತರಗತಿ ಪರೀಕ್ಷೆಗಳು ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಮೈಲಿಗಲ್ಲು. ಹಾಗೇಂದ ಮಾತ್ರಕ್ಕೆ ಹೆಚ್ಚು ಅಂಕ ಪಡೆದಾಕ್ಷಣ ಹೀರೋ, ಕಡಿಮೆ ಅಂಕ ಪಡೆದಾಕ್ಷಣ ಜಿರೋ ಎಂದು ಅರ್ಥವಲ್ಲ. ಬೋರ್ಡ್​ ಪರೀಕ್ಷೆಗಳು ನಿಮ್ಮ ಎಲ್ಲಾ ಸಾಮಾರ್ಥ್ಯಗಳನ್ನು ಪರೀಕ್ಷೆಗೆ ಒಡ್ಡುವುದಿಲ್ಲ ಎಂಬುದನ್ನು ನೆನಪಿನಲ್ಲಿ ಇಡಬೇಕು. ಪರೀಕ್ಷೆಯಲ್ಲಿನ ನಿಮ್ಮ ಅಂಕಗಳು ಮಾತ್ರ ನಿಮ್ಮ ಪೋಷಕರನ್ನು ಖುಷಿಯಾಗಿಡುತ್ತವೆ ಎಂಬುದನ್ನು ವಿದ್ಯಾರ್ಥಿಗಳು ತಲೆಯಿಂದ ತೆಗೆದುಹಾಕಬೇಕು. ನಿಮ್ಮ ಜೀವನದ ಉದ್ದಕ್ಕೂ ಅವರು ನಿಮ್ಮ ಜೊತೆಯಲ್ಲೇ ಇರುತ್ತಾತೆ. ಇದೇ ಕಾರಣಕ್ಕೆ ಅಂಕಗಳ ಬಗ್ಗೆ ಹೆಚ್ಚಿನ ಆತಂಕಕ್ಕೆ ಒಳಗಾಗಬೇಡಿ

  ವಿರಾಮ ಮತ್ತು ನಿಯಮ ಮುರಿಯುವಿಕೆ
  ವಿದ್ಯಾರ್ಥಿಗಳು ಪ್ರತಿ 30-40 ನಿಮಿಷಗಳಿಗೆ ಒಮ್ಮೆ 10 ನಿಮಿಷ ವಿರಾಮವನ್ನು ಪಡೆಯಬೇಕು. ರಾತ್ರಿ ಇಡೀ ಓದುವುದು ಅಥವಾ ಬೆಳಗಿನ ಜಾವ ಎದ್ದು ನಿರಂತರವಾಗಿ ಅಭ್ಯಾಸ ಮಾಡುವುದು ಸರಿಯಲ್ಲ. ಕಲಿಯದೇ ಓದುವ ಓದು ವ್ಯರ್ಥ. ಈ ಹಿನ್ನಲೆ ನಿಮ್ಮ ಮನಸ್ಸಿನಲ್ಲಿ ಕಲಿಯಲು ಆರಂಭಿಸಬೇಕು. ಓದಿದ್ದನ್ನು ಸರಳವಾಗಿ ನೆನೆಪಿನಲ್ಲಿ ಇಟ್ಟುಕೊಟ್ಟುವ ಅಭ್ಯಾಸ ಆರಂಭಿಸಬೇಕು. ರೈಮ್ಸ್​, ಪದ್ಯ, ಹಾಡಿನ ಮೂಲಕ ತಲೆಯಲ್ಲಿ ಓದಿದ್ದನ್ನು ಅಚ್ಚಳಿಯದಂತೆ ನೆನಪಿನಲ್ಲಿಡುವ ತಂತ್ರ ಅನುಸರಿಸಬೇಕು.

  ಇದನ್ನು ಓದಿ: ಮಕ್ಕಳಿಗೆ ಈ ಆಹಾರಗಳನ್ನು ಕೊಟ್ರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತಂತೆ!

  ಒತ್ತಡ ಮತ್ತು ಪರಿಹಾರ
  ಪರೀಕ್ಷೆ ಬಗ್ಗೆಗಿನ ಆತಂಕವನ್ನು ನಿಮ್ಮ ನೆಚ್ಚಿನ ಶಿಕ್ಷಕರು, ಪೋಷಕರು ಅಥವಾ ಸ್ನೇಹಿತರೊಂದಿಗೆ ಚರ್ಚಿಸಿ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ನಿರಾಂತಕವಾದ 7 ಗಂಟೆ ನಿದ್ದೆ ಮಾಡಬೇಕು. ನಿದ್ರೆ ನಿಮಗೆ ಹೆಚ್ಚಿನ ಸಹಾಯ ಮಾಡಲಿದೆ, ಮಧ್ಯಾಹ್ನದ ಹೊತ್ತು ದೀರ್ಘದ ನಿದ್ದೆ ಒಳ್ಳೆಯದಲ್ಲ. ಇನ್ನು ರಾತ್ರಿ ಸಮಯದಲ್ಲಿ ಆದಷ್ಟು ಗೆಜೆಡ್ಸ್​ಗಳಿಂದ ದೂರವಿರಿ. ದಿನದಲಲಿ 30 ನಿಮಿಷ ಕೈ ಮತ್ತು ಕಾಲಿಗೆ ವ್ಯಾಯಾಮವಾಗುವ ಆಟವಾಡಿ. ಇದು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹೆಚ್ಚು ನೀರು ಕುಡಿಯುವುದರ ಜೊತೆ ಹೆಲ್ತಿ ಡಯಟ ಅಭ್ಯಾಸ ಮಾಡಬೇಕು

  ಇದನ್ನು ಓದಿ: ಒಂದೇ ತಿಂಗಳಲ್ಲಿ ಪರೀಕ್ಷೆಗೆ ರೆಡಿಯಾಗೋದು ಹೇಗೆ? ಹೀಗೆ ಮಾಡಿ ಒಳ್ಳೆ ಮಾರ್ಕ್ಸ್ ಬರುತ್ತೆ!

  ಚಿಂತೆ ನೀಡುವ ಯೋಚನೆ ಮತ್ತು ಭಾವನೆಗಳಿಂದ ದೂರಾಗಿ
  ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ನಾನು ಚೆನ್ನಾಗಿ ಓದಿಲ್ಲ. ನನಗೆ ಏನು ನೆನಪಿರುವುದಿಲ್ಲ. ನಾನು ಉತ್ತಮ ಅಂಕ ತೆಗೆಯುವುದಿಲ್ಲ ಇಂತಹ ನಕಾರಾತಮಕ ಅಂಶದಿಂದ ದೂರ ಇರಿ. ಇಂತಹ ಚಿಂತೆ ಒಂದು ವೇಳೆ ಕಾಡಿದರೆ, ಈ ವೇಳೆ ಒಂದು ವಾಕ್​, ಉತ್ತಮ ಸ್ನಾನ, ಸಂಗೀತ, ಪ್ರಾಣಾಯಾಮ ನಿಮಗೆ ಸಹಾಯವಾಗಲಿದೆ. ಇಲ್ಲವಾದಲ್ಲಿ ನಿಮ್ಮ ಅಮ್ಮನೊಂದಿಗೆ ಒಂದು ಅಪ್ಪಿಗೆ ನಿಮ್ಮ ದೂಗುಡ ದೂರ ಮಾಡುತ್ತದೆ.

  ತೊಂದರೆ ಮತ್ತು ಅಸಾಮರ್ಥ್ಯ
  ಭಾವನಾತ್ಮಕ ತೊಂದರೆ ಅಥವಾ ಮಾನಸಿಕ ತೊಂದರೆಗೆ ಸಮಾಲೋಚನೆ ಪಡೆಯುತ್ತಿರುವ ಮಕ್ಕಳಿಗೆ ವಿಶೇಷ ಕಾಳಜಿ ಬೇಕಾಗುತ್ತದೆ. ಈ ಸಮಯದಲ್ಲಿ ಶಿಕ್ಷಕರು ಅವರಿಗೆ ಒಬ್ಬ ಜೊತೆಗಾರ ಸ್ನೇಹಿತರನ್ನು ಪರಿಚಯಿಸಿ ಪರೀಕ್ಷೆ ಸಮಯದಲ್ಲಿ ಸಹಾಯ ಮಾಡಬಹುದಾಗಿದೆ. ಅದರಲ್ಲೂ ಕೋವಿಡ್​ ಸಮಯದಲ್ಲಿ ಪೋಷಕರು ಉದ್ಯೋಗ ತೊರೆಯುವಿಕೆ, ಆರ್ಥಿಕ ಸಂಕಷ್ಟ ಸೋಂಕಿಗೆ ಒಳಗಾಗುವಿಕೆ ಆತಂಕ ಎದುರಿಸಿದ್ದರೆ ಅಂತಹವರಿಗೆ ಶಿಕ್ಷಕರ ಒಂದು ಆತ್ಮೀಯ ಕರೆ ಸಾಕಷ್ಟು ಪ್ರಯೋಜನ ನೀಡಲಿದೆ.

  ಮಕ್ಕಳು ಪರೀಕ್ಷೆ ಎದುರಿಸಲು ಹೋಗುತ್ತಿದ್ದಾಗ ಪೋಷಕರು ಮುಕ್ತ ಮನಸ್ಸಿನಿಂದ ಹಾರೈಸುವುದರಿಂದ ಅವರ ಭಯವನ್ನು ಹೋಗಲಾಡಿಸಬಹುದು. ಜೊತೆಗೆ ಪರೀಕ್ಷೆ ಬರೆದಾದ ಬಳಿಕ ಪ್ರಶ್ನಾಪತ್ರಿಕೆ ಹಿಡಿದು ಉತ್ತರ ಕೇಳುವ ಪದ್ದತಿಯನ್ನು ಬಿಟ್ಟು ಅವರನ್ನು ಮುಂದಿನ ಪರೀಕ್ಷೆಗೆ ಸಿದ್ದಗೊಳ್ಳಲು ಬಿಡಬೇಕು
  Published by:Seema R
  First published: