Face Beauty: ಬ್ಲ್ಯಾಕ್ ಹೆಡ್, ವೈಟ್ ಹೆಡ್ಸ್‌ಗಳಿಂದ ನಿಮ್ಮ ಮುಖದ ಕಾಂತಿ ಹೋಗಿದ್ಯಾ? ಇದಕ್ಕೆ ಪರಿಹಾರ ಇಲ್ಲಿದೆ ಓದಿ

ಪೌಷ್ಟಿಕಾಂಶ ತಜ್ಞೆ ಅಂಜಲಿ ಮುಖರ್ಜಿ ಅವರು, ತಮ್ಮ ಇನ್ಸ್ ಸ್ಟಾಗ್ರಾಮ್ ಖಾತೆಯಲ್ಲಿ ಚರ್ಮದಲ್ಲಿ ಬ್ಲ್ಯಾಕ್‍ಹೆಡ್ ಮತ್ತು ವೈಟ್‍ಹೆಡ್‍ಗಳು ಕಾಣಿಸಿಕೊಳ್ಳಲು, ಹೇರ್ ಫಾಲಿಕಲ್ಸ್‌ಗಳ ತೆರೆಯುವಿಕೆಯಲ್ಲಿ ನಿರ್ಜೀವ ಚರ್ಮ ಮತ್ತು ಮತ್ತು ಜಿಡ್ಡಿನ ಸಂಗ್ರಹವೇ ಕಾರಣವಾಗಿರುತ್ತದೆ ಎಂದು ಬರೆದಿದ್ದಾರೆ. ಜೊತೆಗೆ, ಅವರು ಬ್ಲ್ಯಾಕ್‍ಹೆಡ್ ಮತ್ತು ವೈಟ್‍ಹೆಡ್ ಸಮಸ್ಯೆಯನ್ನು ದೂರವಿಡಲು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ ಕೂಡ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಸಾಮಾನ್ಯವಾಗಿ ಎದುರಿಸುತ್ತಿರುವ ಚರ್ಮ ಸಂಬಂಧಿ ಸಮಸ್ಯೆಗಳಲ್ಲಿ, ಬ್ಲ್ಯಾಕ್ ಹೆಡ್ ಮತ್ತು ವೈಟ್‍ಹೆಡ್ ಸಮಸ್ಯೆಗಳು (Blackhead and whitehead problem) ಕೂಡ ಒಂದು. ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಚರ್ಮದ ಆರೈಕೆಯ ಉತ್ಪನ್ನಗಳನ್ನು (Skin care product) ಬಳಸಿದ ಕೂಡಲೇ ಈ ಸಮಸ್ಯೆ ದೂರವಾಗುತ್ತದೆ ಎನ್ನುವಂತಿಲ್ಲ. ಚರ್ಮದ ಆರೋಗ್ಯದಲ್ಲಿ (Skin Problem) ನಮ್ಮ ಆಹಾರ ಕ್ರಮ ಮತ್ತು ಜೀವನ ಶೈಲಿಯ ಪಾತ್ರವೂ ಇದೆ. ಪೌಷ್ಟಿಕಾಂಶ ತಜ್ಞೆ ಅಂಜಲಿ ಮುಖರ್ಜಿ ಅವರು, ತಮ್ಮ ಇನ್ಸ್ ಸ್ಟಾಗ್ರಾಮ್ ಖಾತೆಯಲ್ಲಿ , ಚರ್ಮದಲ್ಲಿ ಬ್ಲ್ಯಾಕ್‍ಹೆಡ್ ಮತ್ತು ವೈಟ್‍ಹೆಡ್‍ಗಳು ಕಾಣಿಸಿಕೊಳ್ಳಲು, ಹೇರ್ ಫಾಲಿಕಲ್ಸ್ ಗಳ ತೆರೆಯುವಿಕೆಯಲ್ಲಿ ನಿರ್ಜೀವ ಚರ್ಮ ಮತ್ತು ಮತ್ತು ಜಿಡ್ಡಿನ ಸಂಗ್ರಹವೇ ಕಾರಣವಾಗಿರುತ್ತದೆ ಎಂದು ಬರೆದಿದ್ದಾರೆ. ಜೊತೆಗೆ, ಅವರು ಬ್ಲ್ಯಾಕ್‍ಹೆಡ್ ಮತ್ತು ವೈಟ್‍ಹೆಡ್ ಸಮಸ್ಯೆಯನ್ನು ದೂರವಿಡಲು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ ಕೂಡ.

1. ಕ್ಲೆನ್ಸಿಂಗ್ ಮತ್ತು ಸ್ಕ್ರಬ್ಬಿಂಗ್
ಅಂಜಲಿ ಮುಖರ್ಜಿ ಅವರು ಹೇಳುವ ಪ್ರಕಾರ, ಮುಖದ ಚರ್ಮಕ್ಕೆ ಕ್ಲೆನ್ಸಿಂಗ್ ಮತ್ತು ಸ್ಕ್ರಬ್ಬಿಂಗ್ ಬಹಳ ಅಗತ್ಯ. ಪ್ರತೀ ಹದಿನೈದು ದಿನಕ್ಕೊಮ್ಮೆ ಫೇಸ್ ಸ್ಕ್ರಬ್‍ಗಳನ್ನು ಬಳಸುವುದರಿಂದ , ಬ್ಲ್ಯಾಕ್ ಹೆಡ್ ಮತ್ತು ವೈಟ್‍ಹೆಡ್‍ಗಳನ್ನು ದೂರ ಇಡಲು ಸಹಾಯವಾಗುತ್ತದೆ. ಇದು ಚರ್ಮದ ಮೇಲಿನ ಆರೈಕೆಯ ವಿಷಯವಾಯಿತು. ಆದರೆ, ಚರ್ಮದೊಳಗೆ ಅಂದರೆ, ದೇಹವನ್ನು ಆಂತರಿಕವಾಗಿಯೂ ಕ್ಲೆನ್ಸಿಂಗ್ ಮಾಡುವುದು ಮುಖ್ಯ ಎನ್ನುತ್ತಾರೆ ಅಂಜಲಿ. ದೇಹವನ್ನು ಕ್ಲೆನ್ಸಿಂಗ್ ಮಾಡಲು ಹಸಿ ತರಕಾರಿ ಜ್ಯೂಸ್‍ಗಳನ್ನು ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ ಅವರು.

2. ಕಡಿಮೆ ಸಕ್ಕರೆಯುಕ್ತ ಹಣ್ಣುಗಳ ಸೇವನೆ
ಸೇಬು, ಕಿತ್ತಳೆ ಹಣ್ಣು, ದಾಳಿಂಬೆ ಮತ್ತು ಮೋಸಂಬಿ ಮುಂತಾದ ಕಡಿಮೆ ಸಕ್ಕರೆ ಪ್ರಮಾಣ ಹೊಂದಿರುವ ಹಣ್ಣುಗಳ ಜ್ಯೂಸ್‍ಗಳನ್ನು ಸೇವಿಸುವುದರಿಂದ ಕೂಡ ಚರ್ಮದ ಕ್ಲೆನ್ಸಿಂಗ್ ಸಾಧ್ಯವಿದೆ.

3. ಕರಿದ ತಿಂಡಿಗಳ ಸೇವನೆ ನಿಲ್ಲಿಸುವುದು
ಚೀಸ್, ಚಾಕೋಲೇಟ್ ಮತ್ತು ಕರಿದ ತಿಂಡಿಗಳ ಸೇವನೆಯನ್ನು ಕನಿಷ್ಟ 6 ತಿಂಗಳವರೆಗಾದರೂ ನಿಲ್ಲಿಸಬೇಕು. ಹಾಗೆ ಮಾಡುವುದರಿಂದ ದೇಹದ ಸಂಯೋಜನೆಯನ್ನು ಪುನಃ ಸ್ಥಾಪಿಸಲು ಸಹಾಯವಾಗುತ್ತದೆ.

ಇದನ್ನೂ ಓದಿ:  Neem Face Pack: ಈ ಬೇವಿನ ಫೇಸ್ ಪ್ಯಾಕ್‍ಗಳನ್ನು ಮನೆಯಲ್ಲೇ ತಯಾರಿಸಿ ಮೊಡವೆಗಳನ್ನು ಓಡಿಸಿ

4. ನಿತ್ಯವೂ ಪೌಷ್ಟಿಕಾಂಶಗಳ ಸೇವನೆ
ಪೌಷ್ಟಿಂಕಾಂಶಗಳ ಸೇವನೆ ದೇಹದ ಆರೋಗ್ಯಕ್ಕೆ ಎಷ್ಟು ಮುಖ್ಯವೆಂಬುವುದು ನಿಮಗೆ ಗೊತ್ತೇ ಇದೆ. ಅದೇ ರೀತಿ ಚರ್ಮದ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಲು ಅವುಗಳ ಅಗತ್ಯ ಇದೆ. ಹಾಗಾಗಿ ನಿಮ್ಮ ನಿತ್ಯದ ಆಹಾರಕ್ರಮದಲ್ಲಿ ಜಿಂಕ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಮುಂತಾದ ಜೀವಸತ್ವಗಳನ್ನು ಹೊಂದಿರುವ ಆಹಾರಗಳನ್ನು ಸೇರಿಸಿಕೊಳ್ಳಬೇಕು.

5. ಕಡಿಮೆ ಕೊಬ್ಬುಳ್ಳ ಆಹಾರ ಸೇವನೆ
ಆರೋಗ್ಯಕರ ಚರ್ಮಕ್ಕಾಗಿ ಕಡಿಮೆ ಕೊಬ್ಬುಳ್ಳ ಆಹಾರವನ್ನು ಸೇವಿಸಿ. ಅಂದರೆ, ನೀವು ನಿತ್ಯವೂ ಸೇವಿಸುವ ಆಹಾರಗಳಲ್ಲಿ ಕಾಳುಗಳು, ಒಣ ಬೀಜಗಳು, ಹಣ್ಣುಗಳು, ತರಕಾರಿಗಳು ಮತ್ತು ಸಣ್ಣ ಪ್ರಮಾಣದ ಧಾನ್ಯಗಳು ಸೇರಿರಲಿ.

6. ಆರೋಗ್ಯಕ ಆಹಾರ ಕ್ರಮ
“ಆರೋಗ್ಯಕ ಆಹಾರ ಕ್ರಮವು ಕೆಲವರ ತ್ವಚೆಯ ಮೇಲೆ ಅದ್ಭುತವಾದ ಪರಿಣಾಮವನ್ನು ಬೀರಬಲ್ಲದು. ನಿಮಗೆ ಪರಿಪೂರ್ಣ ತ್ವಚೆ ಬೇಕು ಎಂದಾದಲ್ಲಿ, ನೀವು ಟೊಮ್ಯಾಟೋ ಮತ್ತು ಕ್ಯಾರೆಟ್ ಮುಂತಾದ ಹಸಿ ತರಕಾರಿಗಳ ಜ್ಯೂಸನ್ನು ಸೇವಿಸುವ ಮೂಲಕ ಕ್ಲೆನ್ಸಿಂಗ್ ಆಹಾರ ಕ್ರಮವನ್ನು ಅನುಸರಿಸಬೇಕು” ಎಂದು ಅಂಜಲಿಯವರ ಪೋಸ್ಟ್ ನಲ್ಲಿ ಬರೆಯಲಾಗಿದೆ.

7. ಬೀಟ್‍ರೂಟ್ ಸೇವಿಸಿ
ವಿಟಮಿನ್ ಮತ್ತು ಆ್ಯಂಟಿಆಕ್ಸಿಡೆಂಟ್ ಸಪ್ಲಿಮೆಂಟ್‍ಗಳ ಜೊತೆ ಜೊತೆಗೆ ಬೀಟ್‍ರೂಟ್ ಅನ್ನು ಸೇವಿಸುವುದರಿಂದ ಕೂಡ ಚರ್ಮವನ್ನು ಕ್ಲೆನ್ಸಿಂಗ್ ಮಾಡಲು ಸಹಾಯ ಆಗುತ್ತದೆ.

ಇದನ್ನೂ ಓದಿ:  Health Tips: ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಸ್ವಲ್ಪ ಜೇನು ಹಾಕಿ ಕುಡಿದು ನೋಡಿ! ಇದರ ಚಮತ್ಕಾರ ಅದ್ಭುತ

8. ಒತ್ತಡ ಮುಕ್ತ ಜೀವನ
ಕೇವಲ ಆಹಾರ ಮತ್ತು ಸ್ಕ್ರಬ್ಬಿಂಗ್ ಮಾಡಿದರೆ ಮಾತ್ರ, ಆರೋಗ್ಯಕರ ಚರ್ಮ ನಿಮ್ಮದಾಗುವುದಿಲ್ಲ, ನಿಮ್ಮ ಜೀವನದ ಒತ್ತಡ ಮುಕ್ತವಾಗಿಬೇಕು ಕೂಡ. ಅಷ್ಟೇ ಅಲ್ಲ, ದೇಹಕ್ಕೆ ಅಗತ್ಯವಿರುವಷ್ಟ ನಿದ್ದೆ ಮಾಡುವುದು ಕೂಡ ಚರ್ಮದ ಆರೋಗ್ಯಕ್ಕೆ ಬಹಳ ಮುಖ್ಯ.
Published by:Ashwini Prabhu
First published: