• Home
 • »
 • News
 • »
 • lifestyle
 • »
 • Acidic Burps Remedy: ಹುಳಿ ತೇಗು ಸಮಸ್ಯೆ ಕಾಡುತ್ತಿದ್ರೆ ಇಲ್ಲಿದೆ ನೋಡಿ ಪರಿಹಾರ

Acidic Burps Remedy: ಹುಳಿ ತೇಗು ಸಮಸ್ಯೆ ಕಾಡುತ್ತಿದ್ರೆ ಇಲ್ಲಿದೆ ನೋಡಿ ಪರಿಹಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Avoid Acidic Burps: ಈ ಹುಳಿ ತೇಗಿಗೆ ಒಂದು ಸಾಮಾನ್ಯವಾದ ಕಾರಣವೆಂದರೆ ಹಿಯಾಟಲ್ ಹರ್ನಿಯಾ ಎಂದು ಕರೆಯಲ್ಪಡುವ ಕಿಬ್ಬೊಟ್ಟೆಯ ಅಸಹಜತೆ ಅಂತ ಹೇಳಬಹುದು. ಹೊಟ್ಟೆಯ ಮೇಲ್ಭಾಗವು ವಪೆಯ ಮೇಲೆ ಚಲಿಸಿದಾಗ ಇದು ಸಂಭವಿಸುತ್ತದೆ.

 • Share this:

ಕೆಲವರಿಗೆ ಊಟ (Food) ಮಾಡಿದ ನಂತರ ಅನೇಕ ಬಾರಿ ಈ ಹುಳಿ ತೇಗು (Acid Burp)  ಬರುವುದನ್ನು ನಾವು ನೋಡಿರುತ್ತೇವೆ ಮತ್ತು ಸ್ವತಃ ನಾವು ಸಹ ಅದನ್ನು ಒಮ್ಮೆಯಾದರೂ ಅನುಭವಿಸಿರುತ್ತೇವೆ ಎಂದು ಹೇಳಬಹುದು. ಸಾಮಾನ್ಯವಾಗಿ ಜೀರ್ಣಾಂಗ ವ್ಯವಸ್ಥೆಯು ಹೆಚ್ಚುವರಿ ಅನಿಲವನ್ನು ಬಿಡುಗಡೆ ಮಾಡಲು ಈ ತೇಗು ಒಂದು ಮಾರ್ಗವಾಗಿದೆ ಎಂದು ಹೇಳುತ್ತಾರೆ. ಆದರೆ ಇದು ಆಮ್ಲೀಯವಾಗಿರುತ್ತದೆ ಅನ್ನೋದಂತೂ ಸುಳ್ಳಲ್ಲ, ಇದನ್ನು ಸೋರ್ ಬೆಲ್ಚಿಂಗ್ ಅಥವಾ ಸಲ್ಫರ್ ಬರ್ಪ್ಸ್ ಅಂತಾಲೂ ಸಹ ಕರೆಯಲಾಗುತ್ತದೆ, ಮತ್ತು ಈ ತೇಗುಗಳು ಕಿರಿಕಿರಿ ಉಂಟು ಮಾಡುವ ಕರುಳಿನ ಸಿಂಡ್ರೋಮ್ (IBS) ಅಥವಾ ಬ್ಯಾಕ್ಟೀರಿಯಾದ ಸೋಂಕು ಎಚ್. ಪೈಲೋರಿ, ಅಥವಾ ಬಹುಶಃ ಆಹಾರದ ತಪ್ಪುಗಳಂತಹ ಹಲವಾರು ಜೀರ್ಣಕಾರಿ ಸಮಸ್ಯೆಗಳಿಂದಾಗಿ ಸಂಭವಿಸಬಹುದು. ಹೊಟ್ಟೆಯುಬ್ಬರಿಕೆ, ನೋವು ಅಥವಾ ಕಿಬ್ಬೊಟ್ಟೆಯ ಊತದಂತಹ ಇತರ ರೋಗಲಕ್ಷಣಗಳೊಂದಿಗೆ ಇದನ್ನು ಸೇರಿಸಬಹುದು.


ನೀವು ಕೂಡ ಅದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಹುಳಿ ತೇಗುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಕೆಲವು ಸರಳ ಆದರೆ ಪರಿಣಾಮಕಾರಿ ಸಲಹೆಗಳು ಇಲ್ಲಿವೆ ನೋಡಿ. ಅದಕ್ಕೂ ಮೊದಲು, ಈ ಹುಳಿ ತೇಗು ಬರಲು ಕಾರಣಗಳನ್ನು ಮೊದಲು ನೋಡೋಣ ಬನ್ನಿ.


ಹುಳಿ ತೇಗು ಬರುವುದಕ್ಕೆ ಕಾರಣಗಳೇನು?


ಈ ಹುಳಿ ತೇಗಿಗೆ ಒಂದು ಸಾಮಾನ್ಯವಾದ ಕಾರಣವೆಂದರೆ ಹಿಯಾಟಲ್ ಹರ್ನಿಯಾ ಎಂದು ಕರೆಯಲ್ಪಡುವ ಕಿಬ್ಬೊಟ್ಟೆಯ ಅಸಹಜತೆ ಅಂತ ಹೇಳಬಹುದು. ಹೊಟ್ಟೆಯ ಮೇಲ್ಭಾಗವು ವಪೆಯ ಮೇಲೆ ಚಲಿಸಿದಾಗ ಇದು ಸಂಭವಿಸುತ್ತದೆ. ಇದು ನಿಮ್ಮ ಕಿಬ್ಬೊಟ್ಟೆಯನ್ನು ನಿಮ್ಮ ಎದೆಯಿಂದ ಬೇರ್ಪಡಿಸುವ ಸ್ನಾಯುವಾಗಿದೆ. ಸಾಮಾನ್ಯವಾಗಿ, ವಪೆಯು ನಮ್ಮ ಹೊಟ್ಟೆಯಲ್ಲಿ ಆಮ್ಲವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ನೀವು ಹಿಯಾಟಲ್ ಅಂಡವಾಯುವನ್ನು ಹೊಂದಿದ್ದರೆ, ಆಮ್ಲವು ನಿಮ್ಮ ಅನ್ನನಾಳಕ್ಕೆ ಚಲಿಸಬಹುದು ಮತ್ತು ಹುಳಿ ತೇಗಿಗೆ ಕಾರಣವಾಗಬಹುದು.


ಹೀಗಾಗುವುದಕ್ಕೆ ಕಾರಣಗಳೇನು?


 • ಅತಿಯಾಗಿ ತಿನ್ನುವುದು

 • ಅಧಿಕ ತೂಕ ಅಥವಾ ಸ್ಥೂಲಕಾಯ ಹೊಂದಿರುವುದು

 • ಅತಿಯಾಗಿ ಊಟ ಮಾಡಿದ ನಂತರ ಬೆನ್ನಿನ ಮೇಲೆ ಮಲಗುವುದು

 • ರಾತ್ರಿ ತಡವಾಗಿ ತಿನ್ನುವುದು

 • ಟೊಮೆಟೊ, ಚಾಕೊಲೇಟ್, ಪುದೀನ, ಬೆಳ್ಳುಳ್ಳಿ, ಈರುಳ್ಳಿ, ಅಥವಾ ಮಸಾಲೆಯುಕ್ತ ಅಥವಾ ಕೊಬ್ಬಿನ ಆಹಾರಗಳಂತಹ ಕೆಲವು ಆಮ್ಲವನ್ನು ಉಂಟು ಮಾಡುವ ಆಹಾರಗಳನ್ನು ತಿನ್ನುವುದು

 • ಆಲ್ಕೋಹಾಲ್, ಕಾರ್ಬೊನೇಟೆಡ್ ಪಾನೀಯಗಳು, ಕಾಫಿ ಅಥವಾ ಚಹಾದಂತಹ ಹೆಚ್ಚಿನ ಪಾನೀಯಗಳನ್ನು ಕುಡಿಯುವುದು

 • ಧೂಮಪಾನ ಮಾಡುವುದು

 • ನೀವು ಗರ್ಭಿಣಿಯಾಗಿರುವ ಕಾರಣವಿರಬಹುದು

 • ನೀವು ರಕ್ತದೊತ್ತಡದ ಔಷಧಿಗಳನ್ನು ತೆಗೆದುಕೊಳ್ಳುತ್ತಿರಬಹುದು


ಹುಳಿ ತೇಗು, ಅಸಿಡಿಟಿ ಮತ್ತು ಆಸಿಡ್ ರಿಫ್ಲಕ್ಸ್ ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈ 8 ಪರಿಹಾರೋಪಾಯಗಳನ್ನು ಅನುಸರಿಸಿ:
1. ದೇಹದ ತೂಕ ಇಳಿಸಿಕೊಳ್ಳಿ


ದೇಹದಲ್ಲಿರುವ ಬೊಜ್ಜು ಆಮ್ಲದ ರಿಫ್ಲಕ್ಸ್ ಗೆ ಮುಖ್ಯ ಕಾರಣವಾಗಿದೆ. ಅತಿಯಾದ ಕಿಬ್ಬೊಟ್ಟೆಯ ಕೊಬ್ಬು ಹೊಟ್ಟೆಯ ಮೇಲೆ ಒತ್ತಡವನ್ನು ಹಾಕುತ್ತದೆ ಮತ್ತು ಗ್ಯಾಸ್ಟ್ರಿಕ್ ರಸಗಳನ್ನು ನಿಮ್ಮ ಅನ್ನನಾಳಕ್ಕೆ ತಳ್ಳುತ್ತದೆ.


2. ಆಸಿಡ್ ರಿಫ್ಲಕ್ಸ್ ಉಂಟು ಮಾಡುವ ಆಹಾರಗಳಿಂದ ದೂರವಿರಿ


ನಿಮ್ಮ ಹೊಟ್ಟೆಯಲ್ಲಿ ಆಮ್ಲದ ಉತ್ಪಾದನೆಯನ್ನು ಕಡಿಮೆ ಮಾಡಲು, ಕೊಬ್ಬಿನ ಆಹಾರಗಳು, ಮಸಾಲೆಯುಕ್ತ ಆಹಾರಗಳು, ಟೊಮೆಟೊ ಮತ್ತು ಕಿತ್ತಳೆಗಳಂತಹ ಆಮ್ಲೀಯ ಆಹಾರಗಳು, ಪುದೀನ, ಚಾಕೊಲೇಟ್, ಈರುಳ್ಳಿ, ಕಾಫಿ ಅಥವಾ ಕೆಫೀನೇಟೆಡ್ ಪಾನೀಯಗಳು ಮತ್ತು ಕಾರ್ಬೊನೇಟೆಡ್ ಪಾನೀಯಗಳಿಂದ ಆದಷ್ಟು ದೂರವಿರಿ.


3. ಕಡಿಮೆ ಆಹಾರ ಸೇವಿಸಿ


ಅತಿಯಾಗಿ ತಿನ್ನುವುದರಿಂದ ವಪೆಯ ಮೇಲೆ ಒತ್ತಡ ಬೀಳುತ್ತದೆ. ಇದು ಆಮ್ಲೀಯತೆಯನ್ನು ಹೆಚ್ಚು ಸಂಭವನೀಯವಾಗಿಸುತ್ತದೆ. ಆದ್ದರಿಂದ, ನೀವು ಸ್ವಲ್ಪ ಹೊಟ್ಟೆ ಖಾಲಿ ಇರುವಾಗಲೇ ಊಟವನ್ನು ಮುಗಿಸಿ.


4. ಊಟ ಮಾಡಿದ ತಕ್ಷಣ ಮಲಗಬೇಡಿ


ನಿಮ್ಮ ಊಟ ಆದ ತಕ್ಷಣ ಮಲಗಬೇಡಿ ಅಥವಾ ನಿದ್ರೆಗೆ ಹೋಗಬೇಡಿ. ನೀವು ಕನಿಷ್ಠ 2 ರಿಂದ 3 ಗಂಟೆಗಳ ಕಾಲ ಕಾಯಬೇಕು. ಹೆಲ್ತ್ ಜರ್ನಲ್ ಪ್ರಕಾರ, ಗುರುತ್ವಾಕರ್ಷಣೆಯು ಆಮ್ಲವು ಬೆಳೆಯದಂತೆ ತಡೆಯಲು ಸಹಾಯ ಮಾಡುತ್ತದೆ ಆದರೆ ನೀವು ಊಟ ಮಾಡಿ ನಿದ್ರೆ ಮಾಡಲು ಮಲಗಿದಾಗ, ನೀವು ಒಟ್ಟಾರೆ ಈ ಸಮೀಕರಣದಿಂದ ಹೊರಬಂದಂತಾಗುತ್ತದೆ ಹಾಗೂ ಇದು ಆಮ್ಲೀಯತೆಯನ್ನು ಏರುವಂತೆ ಮಾಡುತ್ತದೆ.


ಇದರ ಪರಿಣಾಮವಾಗಿ, ಆಮ್ಲವು ಡಯಾಫ್ರಮ್ ವಿರುದ್ಧ ಹೆಚ್ಚು ಸುಲಭವಾಗಿ ಚಲಿಸುತ್ತದೆ ಮತ್ತು ಅನ್ನನಾಳವನ್ನು ತಲುಪುತ್ತದೆ.


ಇದನ್ನೂ ಓದಿ: ತೂಕ ಇಳಿಸೋಕೆ ವಾಕಿಂಗ್ ಸಾಕಾಗಲ್ಲ, ತಜ್ಞರು ಹೇಳೋ ಈ ಟಿಪ್ಸ್ ಕೇಳಿ


5. ಧೂಮಪಾನ ಮಾಡಬೇಡಿ


ಕೆಲವು ಅಧ್ಯಯನಗಳು ನಿಕೋಟಿನ್, ವಪೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಅನ್ನನಾಳದಿಂದ ಆಮ್ಲವನ್ನು ತೆರವುಗೊಳಿಸುವ ನಿಮ್ಮ ಲಾಲಾರಸದ ಸಾಮರ್ಥ್ಯಕ್ಕೆ ಅಡ್ಡಿಪಡಿಸಬಹುದು ಎಂದು ಕಂಡು ಹಿಡಿದಿವೆ.


6. ಮದ್ಯಪಾನ ಮಾಡಬೇಡಿ


ಆಸಿಡ್ ರಿಫ್ಲಕ್ಸ್, ಇದನ್ನು ಹೆಚ್ಚಾಗಿ ಎದೆಯುರಿ ಎಂದು ಕರೆಯಲಾಗುತ್ತದೆ, ಇದು ಹೊಟ್ಟೆಯ ಆಮ್ಲವು ಗಂಟಲಿಗೆ ಏರುವ ಸ್ಥಿತಿಯಾಗಿದೆ. ಧೂಮಪಾನ ಮತ್ತು ಆಲ್ಕೋಹಾಲ್ ಪರಿಸ್ಥಿತಿಯನ್ನು ಹದಗೆಡಿಸಬಹುದು. ಸೇಬು ಅಥವಾ ಕ್ಯಾರೆಟ್ ರಸದಂತಹ ಕಡಿಮೆ ಆಮ್ಲದ ಹಣ್ಣಿನ ರಸಕ್ಕೆ ಬದಲಾಯಿಸುವ ಮೂಲಕ ಅಥವಾ ನೀರು ಕುಡಿಯುವ ಮೂಲಕ ಈ ಪರಿಣಾಮಗಳನ್ನು ಕಡಿಮೆ ಮಾಡಬಹುದು.


7. ಸಡಿಲವಾದ ಬಟ್ಟೆಗಳನ್ನು ಧರಿಸಿ


ನಿಮ್ಮ ಹೊಟ್ಟೆಯನ್ನು ಬಿಗಿಗೊಳಿಸುವ ಬೆಲ್ಟ್ ಗಳು ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ. ಅತ್ಯಂತ ಬಿಗಿಯಾದ ಬಟ್ಟೆಯು ಹೊಟ್ಟೆ ಮತ್ತು ಕರುಳಿನ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟು ಮಾಡಬಹುದು. ಇದು ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್ ನಂತಹ ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸಬಹುದು.


ಇದನ್ನೂ ಓದಿ: ನಿಮ್ಮ ಸಂಬಂಧದಲ್ಲಾಗುವ ಈ ಬದಲಾವಣೆ ಮಾನಸಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತೆ, ಎಚ್ಚರ!


8. ಗ್ಲುಟೆನ್ ಮುಕ್ತ ಆಹಾರವನ್ನು ಸೇವಿಸಿ


ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ಅಧ್ಯಯನವು ಬಾರ್ಲಿ, ರೈಸ್ ಮತ್ತು ಗೋಧಿಯಂತಹ ಧಾನ್ಯಗಳಲ್ಲಿ ಕಂಡು ಬರುವ ಗ್ಲುಟೆನ್ ಎಂಬ ಪ್ರೋಟೀನ್ ಆಮ್ಲೀಯತೆಯ ರೋಗಲಕ್ಷಣಗಳಿಗೆ ಕಾರಣವಾಗಬಹುದು ಎಂದು ಕಂಡು ಹಿಡಿದಿದೆ. ನಿಮ್ಮ ಆಹಾರದಿಂದ ಗ್ಲುಟೆನ್ ಅನ್ನು ತೆಗೆದು ಹಾಕಲು ಪ್ರಯತ್ನಿಸಿ ಮತ್ತು ಅದು ವ್ಯತ್ಯಾಸವನ್ನು ಉಂಟು ಮಾಡುತ್ತಿದೆಯೇ ಎಂದು ನೋಡಿ.

Published by:Sandhya M
First published: