ಕೂದಲು (Hair) ಮುಖದ (Face) ಹಾಗೂ ವ್ಯಕ್ತಿಯ ಅಂದವನ್ನು (Person Beauty) ದ್ವಿಗುಣಗೊಳಿಸುತ್ತದೆ. ತಲೆಯಲ್ಲಿ ಕೂದಲು ತುಂಬಾ ಮುಖ್ಯ. ತಲೆಗೂದಲು ಉದುರುವುದು (Hair Loss), ಡ್ರೈ (Dry) ಆಗುವುದು ಕೂದಲಿಗೆ ಹಾನಿ ಉಂಟು ಮಾಡುತ್ತದೆ. ಇದು ನಮಗೆಲ್ಲರಿಗೂ ತಿಳಿದ ಸಂಗತಿ ಆಗಿದೆ. ತಲೆಗೂದಲು ದಟ್ಟ ಮತ್ತು ಕಪ್ಪು ಇದ್ದಷ್ಟು ಇತರರು ಅವರ ವ್ಯಕ್ತಿತ್ವ ಕಂಡು ಹೆಚ್ಚು ಪ್ರಭಾವಿತರಾಗುತ್ತಾರೆ. ಅದು ಮಾಲಿನ್ಯ, ದೈಹಿಕ ಸಮಸ್ಯೆ, ಪ್ರತಿಯೊಬ್ಬರ ಪರಿಣಾಮವು ತಲೆ ಕೂದಲ ಮೇಲೆ ಮೊದಲು ಕಂಡು ಬರುತ್ತದೆ. ಕಾಲ ಕಳೆದಂತೆ ಕೂದಲಿಗೆ ಸಂಬಂಧಿಸಿದ ಸಮಸ್ಯೆ ತುಂಬಾ ಹೆಚ್ಚಾಗುತ್ತಿದೆ. ಇದರ ಹಿಂದೆ ಒಂದೇ ಒಂದು ಕಾರಣವಿದೆ ಎಂದಲ್ಲ.
ನೆತ್ತಿಯ ನೈರ್ಮಲ್ಯ ಕಾಳಜಿ
ಕೂದಲು ಉದುರಲು, ತೆಳುವಾಗಲು, ಎಣ್ಣೆಯುಕ್ತ ಕೂದಲ ಸಮಸ್ಯೆಗೆ ಹಲವು ಕಾರಣಗಳಿವೆ. ಅವುಗಳಲ್ಲಿ ಒಂದು ನೆತ್ತಿಯ ನೈರ್ಮಲ್ಯ ಕಾಳಜಿ ವಹಿಸದೇ ಇರುವುದು. ಕೂದಲಿನ ಜೊತೆಗೆ ಚರ್ಮವನ್ನು ಆರೋಗ್ಯವಾಗಿಡುವುದು ತುಂಬಾ ಅಗತ್ಯ. ಕೊಳಕು, ಎಣ್ಣೆಯುಕ್ತ ಮತ್ತು ಸೋಂಕಿತ ನೆತ್ತಿಯು ಮೊಡವೆ, ಫಂಗಲ್ ಮೊಡವೆ ಅಥವಾ ಡರ್ಮಟೈಟಿಸ್ಗೆ ಕಾರಣ ಆಗುತ್ತದೆ.
ಚರ್ಮ ರೋಗ ತಜ್ಞೆ ರಶ್ಮಿ ಶೆಟ್ಟಿ ಸಲಹೆ
ನೀವು ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ ಚರ್ಮ ರೋಗ ತಜ್ಞೆ ರಶ್ಮಿ ಶೆಟ್ಟಿ ನೀಡಿದ ಸಲಹೆಗಳನ್ನು ನೀವು ಫಾಲೋ ಮಾಡಿ ನೋಡಬಹುದು. ಈ ಬಗ್ಗೆ ತಜ್ಞೆ ರಶ್ಮಿ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಮೂಲಕ ಸಮಸ್ಯೆಯಿಂದ ಪಾರಾಗಲು ಸೂಕ್ತ ಚಿಕಿತ್ಸೆ ಬಗ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಲಗಿದಾಗ ಅತಿಯಾಗಿ ಗೊರಕೆ ಹೊಡೆಯುತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ!
ಕೂದಲು ತೊಳೆಯುವುದು ಹೇಗೆ
ತಜ್ಞರು ಹೇಳುವ ಪ್ರಕಾರ, ಶಾಂಪೂ ನಿಮ್ಮ ಸಂಪೂರ್ಣ ನೆತ್ತಿಗೆ ತಲುಪುವುದಿಲ್ಲ. ಹಾಗಾಗಿ ಕೂದಲನ್ನು ತೊಳೆಯಲು ನೀರಿನಲ್ಲಿ ಶಾಂಪೂ ಮಿಶ್ರಣ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಿ. ವಾಸ್ತವವಾಗಿ ನೀರಿನಲ್ಲಿ ಶಾಂಪೂ ಮಿಶ್ರಣ ಮಾಡಿದಾಗ ಅದು ಸ್ವಲ್ಪ ತೇವವಾಗುತ್ತದೆ. ಇದು ನೆತ್ತಿಯನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ.
ನೆತ್ತಿಯಿಂದ ಎಣ್ಣೆಯನ್ನು ತೆಗೆದು ಹಾಕುವುದು ಹೇಗೆ
ನೀವು ಹೇರ್ ವಾಶ್ ಮಾಡುವಾಗ, ಕೂದಲಿನ ಎಣ್ಣೆಯನ್ನು ಸುಲಭವಾಗಿ ತೆಗೆದು ಹಾಕಲು ಬೆರಳುಗಳಿಂದ ನೆತ್ತಿಯನ್ನು ರಬ್ ಮಾಡಬೇಕಾಗುತ್ತದೆ. ಮೊದಲನೆಯದಾಗಿ, ಶಾಂಪೂವನ್ನು ಅಂಗೈಗಳ ಮೇಲೆ ತೆಗೆದುಕೊಂಡು ಅದನ್ನು ನಿಧಾನವಾಗಿ ಉಜ್ಜಿ. ನೆತ್ತಿಯ ಎಲ್ಲೆಡೆ ಇದನ್ನು ಚಂಪಿ ಮಾಡಿ. ನಂತರ ನೀರಿನಿಂದ ತೊಳೆಯಿರಿ.
ಆತುರತೆಯಿಂದ ಶಾಂಪೂ ತೊಳೆಯಬೇಡಿ
ಶಾಂಪೂ ಹಾಕಿ ಕೂದಲು ಸ್ವಚ್ಛ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಆತುರವಾಗಿ ನೆತ್ತಿ ಸ್ವಚ್ಛ ಮಾಡುವುದು ಎಣ್ಣೆಯುಕ್ತ ನೆತ್ತಿಗೆ ಕಾರಣವಾಗುತ್ತದೆ. ವಾಸ್ತವವಾಗಿ ಶಾಂಪೂ ಕೆಲಸ ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಕೂದಲಿಗೆ ಶಾಂಪೂ ಅನ್ವಯಿಸಿದಾಗ ಕೆಲವು ನಿಮಿಷ ಬಿಡಿ. ಕನಿಷ್ಠ 2 ರಿಂದ 3 ನಿಮಿಷ ಬಿಡಿ. ನಂತರ ನೀರಿನಿಂದ ಕೂದಲನ್ನು ತೊಳೆಯಿರಿ.
ಕಂಡೀಷನರ್ ಸರಿಯಾಗಿ ಅನ್ವಯಿಸಿ
ಕಂಡೀಷನರ್ ಅನ್ನು ಕೂದಲಿಗೆ ಹಚ್ಚಬೇಕು, ನೆತ್ತಿಗೆ ಅಲ್ಲ. ಕಂಡೀಷನರ್ ಅನ್ವಯಿಸುವ ಮೊದಲು, ಕೂದಲನ್ನು ಕೆಳಕ್ಕೆ ನೇತು ಹಾಕಿ ಮತ್ತು ಕೈಯಲ್ಲಿ ಕಂಡಿಷನರ್ ಅನ್ನು ತೆಗೆದುಕೊಂಡು ಅದನ್ನು ಕೆಳಕ್ಕೆ ಅನ್ವಯಿಸಿ. ತಲೆಬುರುಡೆಗೆ ಕಂಡೀಷನರ್ ಹಚ್ಚುವುದರಿಂದ ಎಣ್ಣೆಯುಕ್ತ ತಲೆಹೊಟ್ಟು ಉಂಟಾಗುತ್ತದೆ.
ಇದನ್ನೂ ಓದಿ: ಮಹಿಳೆಯರಲ್ಲಿ ಹೆಚ್ಚುತ್ತಿದೆ ಫಿಟ್ ನೆಸ್ ಟ್ರೆಂಡ್, ಯಾವ ವ್ಯಾಯಾಮವನ್ನು ಎಷ್ಟು ಹೊತ್ತು ಮಾಡಬೇಕು?
ಕೂದಲು ತೊಳೆಯಲು ಎಷ್ಟು ದಿನಗಳು
ನಿಮ್ಮ ನೆತ್ತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಕೆಲವರು ಪ್ರತಿದಿನ ತಮ್ಮ ಕೂದಲನ್ನು ತೊಳೆಯಬೇಕು. ಬೇಸಿಗೆಯಲ್ಲಿ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅತಿಯಾದ ಕೊಳಕಿನಿಂದಾಗಿ ನೆತ್ತಿಯು ಎಣ್ಣೆಯುಕ್ತ ಮತ್ತು ಜಿಡ್ಡಿನಂತೆ ಕಾಣುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ