Almonds And Health: ಕರುಳಿನ ಆರೋಗ್ಯಕ್ಕೆ ಬಾದಾಮಿಯನ್ನು ಹೀಗೆ ತಿಂದರೆ ಪ್ರಯೋಜನಕಾರಿ ಅನ್ನುತ್ತೆ ಆಯುರ್ವೇದ!

ಬಾದಾಮಿಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಬಾದಾಮಿ ಸೇವನೆ ದೇಹದ ದೌರ್ಬಲ್ಯ ನಿವಾರಿಸುತ್ತದೆ. ಬಾದಾಮಿಯಲ್ಲಿರುವ ಪೋಷಕಾಂಶಗಳು ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತವೆ. ಹಾಗಾದ್ರೆ ಆಯುರ್ವೇದದ ಪ್ರಕಾರ ಬಾದಾಮಿ ಸೇವನೆ ಯಾವೆಲ್ಲಾ ಪ್ರಯೋಜನಗಳನ್ನು ನೀಡುತ್ತದೆ ಎಂದು ಇಲ್ಲಿ ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಿಮ್ಮ ಮನೆಗಳಲ್ಲಿ (Home) ನಿಮಗೆ ಹಿರಿಯರು ಪ್ರತಿದಿನ (Daily) ಬಾದಾಮಿ ತಿನ್ನುವಂತೆ (Almond Eating) ಸಲಹೆ ನೀಡಿರಬಹುದು. ಹೆಚ್ಚಾಗಿ ಚಿಕ್ಕ ಮಕ್ಕಳ ಬುದ್ಧಿ ಬೆಳವಣಿಗೆ ಆಗಲೆಂದು ಬಾದಾಮಿ ತಿನ್ನಿಸಿ ಎಂದು ಸಲಹೆ ನೀಡಿರುವುದು ನಿಮಗೆ ಗೊತ್ತೇ ಇರುತ್ತದೆ. ಹಾಗಾದ್ರೆ ಬಾದಾಮಿಯನ್ನು ಕೇವಲ ಬುದ್ಧಿ ಹೆಚ್ಚಳಕ್ಕೆ ಮಾತ್ರ ತಿನ್ನಲಾಗುತ್ತದೆಯೇ? ಇಲ್ಲ. ಬಾದಾಮಿ ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ತ್ವಚೆಯ ಆರೈಕೆಯಿಂದ ಹಿಡಿದು, ಕರುಳಿನ ಆರೋಗ್ಯ ಕಾಪಾಡುವಲ್ಲಿಯೂ ಪ್ರಯೋಜನಕಾರಿ ಆಗಿದೆ. ಬಾದಾಮಿ ಸೇವನೆ ಜ್ಞಾಪಕಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ದೇಹವನ್ನು ಬಲಪಡಿಸುವಲ್ಲಿಯೂ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೀಗೆ ಒಂದೆರಡಕ್ಕೆ ಮಾತ್ರ ಬಾದಾಮಿಯ ಪ್ರಯೋಜನಗಳು ಸೀಮಿತವಾಗಿಲ್ಲ.

  ಬಾದಾಮಿಯಲ್ಲಿರುವ ವಿಶೇಷ ಪೋಷಕಾಂಶಗಳು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಣೆ ಮಾಡಲು ಸಹಕಾರಿ ಆಗಿವೆ. ಹಾಗಾದ್ರೆ ಆಯುರ್ವೇದದ ಪ್ರಕಾರ, ಬಾದಾಮಿ ಸೇವನೆ ಯಾವೆಲ್ಲಾ ಪ್ರಯೋಜನಗಳನ್ನು ನೀಡುತ್ತದೆ ಎಂದು ಇಲ್ಲಿ ನೋಡೋಣ.

  ಆಯುರ್ವೇದದ ಪ್ರಕಾರ ಬಾದಾಮಿ ಸೇವನೆಯ ಪ್ರಯೋಜನಗಳು

  ಬಾದಾಮಿಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಜೊತೆಗೆ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಆಯುರ್ವೇದದ ಪ್ರಕಾರ, ಬಾದಾಮಿ ಸೇವನೆ ದೇಹದ ದೌರ್ಬಲ್ಯ ನಿವಾರಿಸುತ್ತದೆ. ಹಾಗೆಯೇ ಹಸಿವು ಉಂಟಾಗಲು ಬಾದಾಮಿ ಸೇವನೆ ಹೆಚ್ಚು ಪ್ರಯೋಜನಕಾರಿ ಆಗಿದೆ. ಜ್ಞಾಪಕಶಕ್ತಿ ಹೆಚ್ಚಿಸುವುದರ ಜೊತೆಗೆ ಬಾದಾಮಿ ಸೇವನೆ ಹಲವು ಲಾಭಗಳನ್ನು ತಂದು ಕೊಡುತ್ತದೆ.

  ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಾಗುವುದು ಆರೋಗ್ಯಕರ? ತಜ್ಞರು ಹೇಳೋದೇನು?

  ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ

  ಬಾದಾಮಿ ಬೀಜಗಳು ಕಡಿಮೆ ಕಾರ್ಬೋಹೈಡ್ರೇಟ್‌ ಹೊಂದಿವೆ. ಜೊತೆಗೆ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಹಾಗಾಗಿ ಇದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ 1991 ರ ಸಂಶೋಧನೆಯ ಪ್ರಕಾರ, ಮೆಗ್ನೀಸಿಯಮ್ ಬಾದಾಮಿಯಲ್ಲಿ ಹೇರಳವಾಗಿದೆ. ದೇಹದಲ್ಲಿ ಮೆಗ್ನೀಸಿಯಮ್ ಮಟ್ಟ ಸುಧಾರಿಸುವುದು, ಟೈಪ್ 2 ಮಧುಮೇಹದಲ್ಲಿ ಪ್ರಯೋಜನಕಾರಿ ಆಗಿದೆ.

  ಮುಖದ ಮೇಲೆ ಸುಕ್ಕು ನಿವಾರಣೆ ಮಾಡುತ್ತದೆ

  ವಯಸ್ಸು ಹೆಚ್ಚಾದಂತೆ ಮುಖದ ಮೇಲೆ ಸುಕ್ಕುಗಳು ಉಂಟಾಗುತ್ತವೆ. ಇದನ್ನು ನಿವಾರಿಸಲು ಬಾದಾಮಿ ತಿನ್ನಿ. ಚಿಕ್ಕ ವಯಸ್ಸಿನಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುವುದು ಚರ್ಮದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆಯುರ್ವೇದದ ಪ್ರಕಾರ, ಸುಕ್ಕುಗಳ ಸಮಸ್ಯೆ ಇರುವವರು ಬಾದಾಮಿಯನ್ನು ಪ್ರತಿದಿನ ಸೇವಿಸಿ. ಹಾಗೂ ಬಾದಾಮಿ ಪೇಸ್ಟ್ ಅನ್ನು ಮುಖಕ್ಕೆ ಅನ್ವಯಿಸಿ. ಇದು ಸುಕ್ಕುಗಳ ಸಮಸ್ಯೆ ನಿವಾರಣೆ ಮಾಡುವಲ್ಲಿ ಪ್ರಯೋಜನಕಾರಿ.

  ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತದೆ ಬಾದಾಮಿ

  ತಜ್ಞರ ಪ್ರಕಾರ ಪ್ರತಿದಿನ ಒಂದು ಹಿಡಿ ನೆನೆಸಿದ ಬಾದಾಮಿ ಸೇವಿಸುವುದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿದರೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಜೂನ್ 2010 ರಲ್ಲಿ, ಪಬ್ಮೆಡ್ ಸೆಂಟ್ರಲ್ ಒಂದು ಅಧ್ಯಯನ ಮಾಡಿದೆ.

  ಇದರಲ್ಲಿ ಪ್ರಿಡಿಯಾಬಿಟಿಸ್ ಹೊಂದಿರುವ 65 ಜನರನ್ನು 16 ವಾರಗಳವರೆಗೆ ಅಧ್ಯಯನ ಮಾಡಲಾಯಿತು. ಬಾದಾಮಿ ಪ್ರತಿದಿನ ಸೇವಿಸಿದರೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು 12.4 ಮಿಗ್ರಾಂ ಕಡಿಮೆ ಮಾಡಬಹುದು ಎಂದು ಈ ಸಂಶೋಧನೆ ತಿಳಿಸಿದೆ. ಇದರಿಂದ ನಿಮ್ಮ ಹೃದಯವು ಹೆಚ್ಚು ಆರೋಗ್ಯಕರವಾಗಿರುತ್ತದೆ.

  ತೂಕ ಕಡಿಮೆ ಮಾಡಲು ಬಾದಾಮಿ ಸೇವನೆ ಪರಿಣಾಮಕಾರಿ

  ಬಾದಾಮಿ ಬೀಜಗಳ ಸೇವನೆ ತೂಕ ನಷ್ಟದ ಪ್ರಯಾಣದಲ್ಲಿ ಅತ್ಯಗತ್ಯ. ಇದು ಅವುಗಳು ಆರೋಗ್ಯಕರ ಫೈಬರ್ ಮತ್ತು ಕೊಬ್ಬನ್ನು ಹೊಂದಿವೆ. ದೇಹದ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ ಬಾದಾಮಿ ಸೇವನೆ ನಿಮಗೆ ದೀರ್ಘಕಾಲ ಹಸಿವುಂಟಾಗದಂತೆ ತಡೆಯುತ್ತದೆ. ಇದು ನೀವು ಕಡಿಮೆ ಕ್ಯಾಲೊರಿ ಸೇವಿನೆಗೆ ಸಹಕಾರಿ.

  ಇದನ್ನೂ ಓದಿ: ಟ್ಯಾನ್ ಆಗಿದ್ರೆ ಕಾಫಿ ಫೇಸ್​ ಪ್ಯಾಕ್ ಹಾಕಿ ಸಾಕು, ಆಮೇಲೆ ಮ್ಯಾಜಿಕ್ ನೋಡಿ

  ಕರುಳಿನ ಸಮಸ್ಯೆ ನಿವಾರಿಸುತ್ತದೆ

  ಬಾದಾಮಿಯು ನಮ್ಮ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿಡುತ್ತದೆ. ಕರುಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆಯುರ್ವೇದದ ಪ್ರಕಾರ ಕರುಳಿಗೆ ಸಂಬಂಧಿಸಿದ ಸಮಸ್ಯೆ ಇರುವವರು ಬಾದಾಮಿಯನ್ನು ಅಂಜೂರದ  ಜೊತೆ ಅರೆದು ಸೇವಿಸಿದರೆ ಕರುಳಿನ ಸಮಸ್ಯೆ ನಿವಾರಣೆಯಾಗುತ್ತದೆ.
  Published by:renukadariyannavar
  First published: