ತೂಕ ನಷ್ಟದಲ್ಲಿ (Weight Loss) ಚಟ್ ಪಟ್ ತಿನಿಸು ಹಾಗೂ ಸಿಹಿ ಪದಾರ್ಥಗಳ (Sweet Ingredients) ಸೇವನೆಯನ್ನು ನಿಯಮಮಿತವಾಗಿ ತಿನ್ನಲು ಆಗಲ್ಲ. ಹೀಗಾಗಿ ತುಂಬಾ ಜನರು ತೂಕ ನಷ್ಟದ ಜರ್ನಿಯನ್ನು ಅರ್ಧಕ್ಕೆ ಕೈ ಬಿಡುತ್ತಾರೆ. ಕೆಲವರು ಡಯಟ್ (Diet) ಫಾಲೋ ಮಾಡುವ ಗೋಜಿಗೆ ಹೋಗಲ್ಲ. ತಮಗೇನು ಬೇಕೋ ಅದನ್ನು ತಿನ್ನುತ್ತಾರೆ. ಆಲೂಗಡ್ಡೆ ಚಿಪ್ಸ್ ತಿನ್ನುವ ರೂಢಿ ಹೊಂದಿರುತ್ತಾರೆ. ಸೀಮಿತ ಪ್ರಮಾಣದಲ್ಲಿ ಆಲೂಗಡ್ಡೆ ಸೇವಿಸುವುದು ಪ್ರಯೋಜನಕಾರಿ ಆಗಿದೆ. ಆದರೆ ದಿನವೂ ನಿಯಮಿತವಾಗಿ ಆಲೂ ಚಿಪ್ಸ್, ಆಲೂ ಪರಾಠಾ ಸೇವನೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ನೀವು ಆಲೂಗಡ್ಡೆ ಬದಲು ಸ್ವೀಟ್ ಪೊಟ್ಯಾಟೋ ಅಂದ್ರೆ ಸಿಹಿ ಗೆಣಸು (Sweet Potat) ಸೇವನೆ ಮಾಡಬಹುದು.
ತೂಕ ನಷ್ಟ ಮತ್ತು ಸಿಹಿ ಗೆಣಸು
ಸಿಹಿ ಗೆಣಸಿನ ಸೇವನೆ ತೂಕ ಹೆಚ್ಚಳ ಮಾಡಲ್ಲ. ಅದಾಗ್ಯೂ ಅದನ್ನು ನಿಯಮಿತವಾಗಿ ಸೇವನೆ ಮಾಡಿ. ಸಿಹಿ ಆಲೂಗಡ್ಡೆ ಅಂದ್ರೆ ಸಿಹಿ ಗೆಣಸು ಆರೋಗ್ಯಕರ ಆಯ್ಕೆ ಅಗಿದೆ. ಮತ್ತು ರುಚಿಕರವೂ ಆಗಿದೆ. ಸಿಹಿ ಆಲೂಗಡ್ಡೆ ಟೇಸ್ಟಿ ಮತ್ತು ಪೌಷ್ಟಿಕ ಆಹಾರ ಆಗಿದೆ.
ಚಳಿಗಾಲದಲ್ಲಿ ಸಿಹಿ ಗೆಣಸು ಸೇವನೆ ಮಾಡಿದರೆ ಅನೇಕ ಆರೋಗ್ಯ ಪ್ರಯೋಜನ ಸಿಗುತ್ತದೆ. ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಇದರಲ್ಲಿದೆ. ಸಿಹಿ ಗೆಣಸನ್ನು ಕುದಿಸಿ ಅಥವಾ ಹುರಿದು, ಫ್ರೈ ಮಾಡಿ ಸೇವನೆ ಮಾಡಬಹುದು. ಇದು ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.
ಸಿಹಿ ಗೆಣಸಿನಲ್ಲಿ ಹಲವು ಪೋಷಕಾಂಶಗಳಿವೆ. ವಿಟಮಿನ್ ಮತ್ತು ಖನಿಜ ಹೇರಳವಾಗಿದೆ. ಪೌಷ್ಟಿಕತಜ್ಞೆ ಕರಿಷ್ಮಾ ಷಾ ಹೀಗೆ ಹೇಳ್ತಾರೆ. ಸಿಹಿ ಗೆಣಸನ್ನು ಹುರಿದು ಅಥವಾ ಕುದಿಸಿ ತಿನ್ನಬಹುದು. ರುಚಿಗೆ ಅನುಗುಣವಾಗಿ ಸೇವನೆ ಮಾಡಿ. ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಿಸಲು ಸಿಹಿ ಗೆಣಸು ಸಹಕಾರಿ.
ತೂಕ ನಷ್ಟಕ್ಕೆ ಸಿಹಿ ಗೆಣಸು ಸೇವನೆ ಹೇಗೆ ಪ್ರಯೋಜನಕಾರಿ?
ತೂಕ ನಷ್ಟದಲ್ಲಿ ಮೊದಲು ಹಸಿವನ್ನು ನಿಯಂತ್ರಿಸುವುದು ಮತ್ತು ಪದೇ ಪದೇ ತಿನ್ನುವುದು ತಡೆಯುವುದು ತುಂಬಾ ಮುಖ್ಯ. ಸಿಹಿ ಗೆಣಸು ದೀರ್ಘಕಾಲ ಹೊಟ್ಟೆ ತುಂಬಿಸಿಡುತ್ತದೆ. ಶಕ್ತಿ ನೀಡುತ್ತದೆ. ಜೀರ್ಣಕ್ರಿಯೆಗೆ ಉತ್ತಮ.
ಸಿಹಿ ಗೆಣಸು ಆಹಾರ ಸೇವನೆಯ ತೃಪ್ತ ಭಾವ ನೀಡುತ್ತದೆ. ಜಂಕ್ ಫುಡ್ ತಿನ್ನುವುದು ತಪ್ಪಿಸುತ್ತದೆ. ಹೆಚ್ಚಿನ ಫೈಬರ್ ಅಂಶವು ತೂಕ ನಷ್ಟಕ್ಕೆ ಅತ್ಯಗತ್ಯವಾಗಿ ಬೇಕು. ಫೈಬರ್ ದೇಹಕ್ಕೆ ಒದಗಿಸುತ್ತದೆ. ಇದರಲ್ಲಿರುವ ಕರಗುವ ಫೈಬರ್, ಜೀರ್ಣಕ್ರಿಯೆಗೆ ಸಹಕಾರಿ.
ಜೀರ್ಣಕ್ರಿಯೆ ಸರಿಯಾಗಿದ್ದರೆ, ಚಯಾಪಯ ಸರಿಯಾಗಿದ್ದರೆ ತೂಕ ನಷ್ಟ ಸುಲಭವಾಗುತ್ತದೆ. ಭಾರವಾದ ಆಹಾರ ಸೇವನೆ ತಪ್ಪಿಸುತ್ತದೆ. ಫೈಬರ್ನಲ್ಲಿ ಸಮೃದ್ಧವಾಗಿರುವ ಸಿಹಿ ಗೆಣಸು ತೂಕ ನಿರ್ವಹಣೆಗೆ ಸಹಕಾರಿ.
ಕಡಿಮೆ ಕ್ಯಾಲೋರಿ ಸೇವನೆಯು ತೂಕ ನಷ್ಟಕ್ಕೆ ಸಹಕಾರಿ. ಸಿಹಿ ಗೆಣಸಿನಲ್ಲಿ 77 ಪ್ರತಿಶತ ನೀರು ಮತ್ತು 13 ಪ್ರತಿಶತ ಫೈಬರ್ ಇದೆ. ಇದು ಕಡಿಮೆ ಕ್ಯಾಲೋರಿ ಹೊಂದಿದೆ. ಫೈಬರ್ ಸೇವನೆಯು ತೂಕ ನಷ್ಟಕ್ಕೆ ಸಹಕಾರಿ ಎಂಬದನ್ನು ಅಧ್ಯಯನವೊಂದು ಹೇಳಿದೆ. ಇದು ಮೆಟಬಾಲಿಸಂ ಚೆನ್ನಾಗಿಡುತ್ತದೆ.
ಇದನ್ನೂ ಓದಿ: ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ನೆನೆಸಿದ ಕಾಳು-ಬೀಜಗಳು
ವಿಟಮಿನ್ ಸಿ ಮತ್ತು ಎ ಯ ಉತ್ತಮ ಮೂಲ ಆಗಿದೆ
ಒಂದು ಕಪ್ ಕುದಿಸಿದ ಸಿಹಿ ಆಲೂಗಡ್ಡೆ ಸೇವಿಸಿದರೆ ದೈನಂದಿನ ವಿಟಮಿನ್ ಸಿ ಸಿಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪೋಷಕಾಂಶಗಳಿವೆ. ಶೀತ ಮತ್ತು ಜ್ವರ ಕಡಿಮೆ ಮಾಡುತ್ತದೆ. ಆರೋಗ್ಯಕರ ಚರ್ಮ ನೀಡುತ್ತದೆ. ತೂಕ ನಷ್ಟಕ್ಕೆ ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ