HOME » NEWS » Lifestyle » HOW SURYA GRAHAN WILL AFFECT YOUR ZODIAC SIGN STG KVD

Solar Eclipse 2021: ಇಂದಿನ ಗ್ರಹಣ ನಿಮ್ಮ ರಾಶಿ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ತಿಳಿಯಿರಿ

ವೃಷಭ ರಾಶಿಯವರು ಒತ್ತಡದಿಂದಾಗಿ ಯಾವುದೇ ಅಚಾತುರ್ಯದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಮಾನಹಾನಿ, ಸಂಪತ್ತು ನಷ್ಟ ಹಾಗೂ ಆರೋಗ್ಯ ಹಾಳಾಗುವುದನ್ನು ತಪ್ಪಿಸಿ.

Trending Desk
Updated:June 10, 2021, 6:08 AM IST
Solar Eclipse 2021: ಇಂದಿನ ಗ್ರಹಣ ನಿಮ್ಮ ರಾಶಿ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ತಿಳಿಯಿರಿ
ಪ್ರಾತಿನಿಧಿಕ ಚಿತ್ರ
  • Share this:

ಇಂದು ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತಿದೆ. ಇದು ಭಾರತದ ಕೆಲ ಭಾಗಗಳು ಸೇರಿ ವಿಶ್ವದ ಹಲವೆಡೆ ಗೋಚರವಾಗಲಿದೆ. ಇಡೀ ಜಗತ್ತು ಈ ಖಗ್ರಾಸ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಕೆಲವು ದಿನಗಳ ಹಿಂದೆ ಸೂಪರ್​ಮೂನ್ ಮತ್ತು ಚಂದ್ರಗ್ರಹಣವನ್ನು ವೀಕ್ಷಿಸಿದ್ದ ಜನರು ಇಂದು ಸೂರ್ಯಗ್ರಹಣವನ್ನು ವೀಕ್ಷಿಸಬಹುದು. ಇಂದು ಅಮಾವಾಸ್ಯೆ ದಿನವಾಗಿದ್ದು ಶನಿ ಜಯಂತಿ ಕೂಡ ಇದೆ. ಹೀಗಾಗಿ, ಈ ಬಾರಿಯ ಸೂರ್ಯಗ್ರಹಣ ಕೊಂಚ ವಿಶೇಷವಾಗಿರಲಿದೆ. ಈ ಹಿನ್ನೆಲೆ 2021ರ ಸೂರ್ಯ ಗ್ರಹಣವು ನಿಮ್ಮ ರಾಶಿಯ ಮೇಲೆ ಯಾವ ಪ್ರಭಾವವನ್ನು ಬೀರಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.


1) ಮೇಷ: ಸೂರ್ಯಗ್ರಹಣವು ಮೇಷ ರಾಶಿಯವರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಅವರು ಚಿಂತೆ, ಹತಾಶೆ, ಕಣ್ಣು ಅಥವಾ ಕೆಳ ದವಡೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸಬಹುದು. ಈ ಸಮಯದಲ್ಲಿ ಅವರು ಅನಿರೀಕ್ಷಿತ ಖರ್ಚನ್ನು ಕೂಡ ಎದುರಿಸುತ್ತಾರೆ.



2) ವೃಷಭ: ಈ ರಾಶಿಯವರು ಕೂಡ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವರ ಆತ್ಮವಿಶ್ವಾಸದಲ್ಲಿ ಕೊರತೆ ಉಂಟಾಗುತ್ತದೆ. ಒತ್ತಡದಿಂದಾಗಿ ಯಾವುದೇ ಅಚಾತುರ್ಯದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಮಾನಹಾನಿ, ಸಂಪತ್ತು ನಷ್ಟ ಹಾಗೂ ಆರೋಗ್ಯ ಹಾಳಾಗುವುದನ್ನು ತಪ್ಪಿಸಿ. ಆರ್ಥಿಕ ಸ್ಥಿತಿ ಸಮಾಧಾನಕರವಾಗಿ ಇರುತ್ತದೆ.


3) ಮಿಥುನ:ಆರೋಗ್ಯ ಸಾಮಾನ್ಯವಾಗಿರುತ್ತದೆ. ಅದರೆ ಒತ್ತಡ, ಕಣ್ಣು, ಹೊಟ್ಟೆ ನೋವು ಮತ್ತು ಕೆಳ ಬೆನ್ನು ನೋವಿನಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಯಾವುದೇ ಧಾರ್ಮಿಕ ಯಾತ್ರೆ ಅಥವಾ ಕಾರ್ಯ ಕೈಗೊಳ್ಳಲು ಇದು ಸೂಕ್ತ ಸಮಯ.


4)ಕಟಕ:ಸೂರ್ಯ ಗ್ರಹಣ ಈ ರಾಶಿಯವರ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ದೀರ್ಘ ಕಾಲದ ಆಸ್ತಿ ವ್ಯಾಜ್ಯಗಳು ಪರಿಹಾರವಾಗಲಿವೆ.


5)ಸಿಂಹ:ಈ ರಾಶಿಯವರಿಗೆ ಸೂರ್ಯಗ್ರಹಣ ನಕಾರಾತ್ಮಕ ಫಲ ನೀಡಬಹುದು. ಅವರಲ್ಲಿ ಹೊಟ್ಟೆನೋವು, ಕೆಳಬೆನ್ನು ನೋವು, ಕಣ್ಣು ನೋವು ಮತ್ತು ಮೂಳೆ ನೋವಿನಂತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.


6)ಕನ್ಯಾ:ಈ ರಾಶಿಯವರ ವೃತ್ತಿ ಜೀವನದಲ್ಲಿ ಸೂರ್ಯಗ್ರಹಣ ಧನಾತ್ಮಕ ಫಲ ನೀಡಲಿದೆ.ಇದು ಉದ್ಯೋಗ ಬದಲಾವಣೆ, ವ್ಯಾಪಾರ ಮತ್ತು ದೀರ್ಘ ಕಾಲಿಕ ಹೂಡಿಕೆಗೆ ಉತ್ತಮ ಸಮಯ. ಆದರೂ ಕೆಲವು ಹೊಸ ಉದ್ಯಮ ಅಥವಾ ಧಾರ್ಮಿಕ ಚಟುವಟಿಕೆಯಲ್ಲಿನ ಅಡೆತಡೆಗಳು ನಿಮ್ಮ ಮೇಲೆ ಪರಿಣಾಮ ಬೀರಬಹುದು.

7) ತುಲಾ:ಈ ವರ್ಷದ ಮೊದಲ ಸೂರ್ಯಗ್ರಹಣದಿಂದ ತುಲಾ ರಾಶಿಗೆ ಯಾವುದೇ ಸಕಾರಾತ್ಮಕ ಫಲ ಇಲ್ಲ. ಅವರು ಬಹಳ ಕಷ್ಟ, ಮಾನಹಾನಿ ಮತ್ತು ಮಾರಕ ಕಾಯಿಲೆಗಳಿಂದ ಬಳಲುವ ಸಾಧ್ಯತೆ ಇದೆ. ವಿವಾಹಿತರಿಗೆ ಸಂತಾನ ಭಾಗ್ಯ ಲಭಿಸಬಹುದು, ಆದರೆ ಎಚ್ಚರವಾಗಿರಬೇಕು.


8) ವೃಶ್ಚಿಕ:ಈ ರಾಶಿಯವರಿಗೆ 2021ರ ಸೂರ್ಯಗ್ರಹಣದಿಂದ ಮಧ್ಯಮ ಫಲ ಸಿಗಲಿದೆ. ಆಸ್ತಿಯ ಮೇಲಿನ ಹೂಡಿಕೆಯಿಂದ ಲಾಭ ಬರಬಹುದು. ಆದರೆ ಅವರು ತಮ್ಮ ಖರ್ಚಿನ ಬಗ್ಗೆ ಎಚ್ಚರದಿಂದ ಇರಬೇಕು.


9) ಧನು:ಈ ಸೂರ್ಯಗ್ರಹಣದಿಂದ ಅದೃಷ್ಟ ಕೂಡಿ ಬರಲಿದೆ. ನೀವು ಶತ್ರುವಿನಿಂದ ಮೇಲುಗೈ ಸಾಧಿಸುವಿರಿ ಮತ್ತು ನಿಮ್ಮ ಹೆಚ್ಚಾಗಲಿದೆ. ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.


10) ಮಕರ :ನಿಮ್ಮ ಮಗುವಿನ ವಿದ್ಯಾಭ್ಯಾಸದ ಬಗ್ಗೆ ಚಿಂತಿತರಾಗಿದ್ದೀರಿ ಎಂಬುದನ್ನು ಈ ಗ್ರಹಣ ಸೂಚಿಸುತ್ತಿದೆ. ಹೊಸ ಉದ್ಯಮ ಆರಂಭಿಸುವುದರ ಬಗ್ಗೆ ಯೋಚಿಸುತ್ತಿದ್ದರೆ, ಅದು ವಿಳಂಬವಾಗಬಹುದು.


11) ಕುಂಭ:ಒಟ್ಟಾರೆ ಆರೋಗ್ಯ ಚೆನ್ನಾಗಿರುತ್ತದೆ, ಇದುವರೆಗೆ ನೀವು ಬಳಲುತ್ತಿದ್ದ ಅಸಾಮಾನ್ಯ ಕಾಯಿಲೆಯಿಂದ ಮುಕ್ತಿ ಸಿಗಬಹುದು. ಅಲ್ಪಕಾಲಿಕ ಹೂಡಿಕೆಗಳು ಲಾಭ ತರಬಹುದು. ದಂಪತಿ ಈ ಸಮಯದಲ್ಲಿ ಮಗು ಮಾಡಿಕೊಳ್ಳುವ ಬಗ್ಗೆ ಯೋಚಿಸಬಹುದು.


12) ಮೀನ:ಈ ಸೂರ್ಯಗ್ರಹಣವು ಮೀನ ರಾಶಿಯವರಿಗೆ ಅಪಾರ ಸಂಪತ್ತು ಮತ್ತು ಯಶಸ್ಸನ್ನು ತಂದು ಕೊಡಲಿದೆ. ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ಪರಿಹಾರವಾಗಿ, ನೀವು ಹೊಸ ಆಸ್ತಿಯನ್ನು ಕೂಡ ಕೊಂಡುಕೊಳ್ಳುವಂತಾಗಬಹುದು.

Published by: Kavya V
First published: June 10, 2021, 6:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories