Health Tips: ಸ್ಟ್ರಾಬೆರಿ ಹಣ್ಣುಗಳಲ್ಲಿರುವ ಟಾಪ್ 5 ಆರೋಗ್ಯ ಪ್ರಯೋಜನಗಳು .

Strawberry Benefits : ಸ್ಟ್ರಾಬೆರಿ ಹಣ್ಣುಗಳಲ್ಲಿ ಹಲವು ಆರೋಗ್ಯಕರ ಪ್ರಯೋಜನಗಳಿವೆ.  80 ಗ್ರಾಂ ಸ್ಟ್ರಾಬೆರಿಗಳನ್ನು  7 ಬಗೆಯ ಪೋಷಕಾಂಶಗಳಿರುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ಟ್ರಾಬೆರಿ ಹಣ್ಣು ಅಂದರೆ ಯಾರಿಗೆ ತಾನೇ ಇಷ್ಟ ಇರಲ್ಲ. ಈ ಹಣ್ಣಿನ ರುಚಿಯೇ ವಿಭಿನ್ನ. ಈ ಸ್ಟ್ರಾಬೆರಿ ಫ್ರಾಗೇರಿಯಾವು ಗುಲಾಬಿ ತಳಿಯ ಕುಟುಂಬಕ್ಕೆ ಸೇರಿವೆ. ಇದು ವಿಶ್ವದ ಅತ್ಯಂತ ಜನಪ್ರಿಯ ಬೆರ್ರಿ ಹಣ್ಣುಗಳಲ್ಲಿ ಒಂದಾಗಿದೆ. ಪರಿಮಳ, ಗಾತ್ರ ಮತ್ತು ವಿನ್ಯಾಸದಲ್ಲಿ ಭಿನ್ನವಾಗಿರುವ 10 ಕ್ಕೂ ಹೆಚ್ಚು ಜಾತಿಯ ಫ್ರಾಗೇರಿಯಾಗಳಿವೆ. ಆದರೆ ಇದರ ವಿಶೇಷತೆ ಎಂದರೆ  ಅವೆಲ್ಲವೂ ಹೃದಯದ ಆಕಾರದ, ಕೆಂಪು  ಮೇಲ್ಪದರವನ್ನು ಹೊಂದಿವೆ. ಸ್ಟ್ರಾಬೆರಿಗಳು ವಾಸ್ತವವಾಗಿ ಹಣ್ಣುಗಳಲ್ಲ ಏಕೆಂದರೆ ಅವುಗಳಲ್ಲಿ ಬೀಜಗಳು ಹೊರ ಭಾಗದಲ್ಲಿ ಕಾಣಸಿಗುತ್ತವೆ.

ಹಾಗೆಯೇ ಈ ಹಣ್ಣುಗಳಲ್ಲಿ ಹಲವು ಆರೋಗ್ಯಕರ ಪ್ರಯೋಜನಗಳಿವೆ.  80 ಗ್ರಾಂ ಸ್ಟ್ರಾಬೆರಿಗಳನ್ನು  ಈ ಕೆಳಗಿನ ಪೋಷಕಾಂಶಗಳಿರುತ್ತವೆ.

0.6 ಗ್ರಾಂ ಪ್ರೋಟೀನ್

0.2 ಗ್ರಾಂ ಕೊಬ್ಬಿನ ಅಂಶ

6 ಗ್ರಾಂ ಕಾರ್ಬೋಹೈಡ್ರೇಟ್ಗಳು

1.6 ಗ್ರಾಂ ಫೈಬರ್

136 ಮಿಗ್ರಾಂ ಪೊಟ್ಯಾಸಿಯಮ್

49 ಎಂಸಿಜಿ ಫೋಲೇಟ್

46 ಮಿಗ್ರಾಂ ವಿಟ್ ಸಿ

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ರಕ್ಷಣಾತ್ಮಕ  ಗುಣ ಮತ್ತು ಪರಿಣಾಮವನ್ನು ಹೊಂದಿರುವ ಸ್ಟ್ರಾಬೆರಿಗಳು  ವಿಧ ವಿಧವಾದ ವರ್ಣದ್ರವ್ಯಗಳಿಂದ ಸಮೃದ್ಧವಾಗಿವೆ. ಈ ಹಣ್ಣು,  ಉರಿಯೂತವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೇ ಈ ಹಣ್ಣುಗಳಲ್ಲಿರುವ ಪೋಷಕಾಂಶಗಳು ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು  ತಡೆಯುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: ನಿಮ್ಮ ಹಲವು ಆರೋಗ್ಯ ಸಮಸ್ಯೆಗಳಿಗೆ ನುಗ್ಗೆ ಸೊಪ್ಪಿನಲ್ಲಿದೆ ಪರಿಹಾರ

ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸುತ್ತದೆ

ಸ್ಟ್ರಾಬೆರಿಗಳನ್ನು ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆ ನಿಧಾನವಾಗುತ್ತದೆ ಮತ್ತು ಇನ್ಸುಲಿನ್ ಬಳಕೆಯನ್ನು ಮಿತಗೊಳಿಸುತ್ತದೆ, ವಿಶೇಷವಾಗಿ ಅವುಗಳನ್ನು  ಆಹಾರದೊಂದಿಗೆ ಸೇವಿಸಿದಾಗ. ನಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಟೈಪ್ 2 ಡಯಾಬಿಟಿಸ್​ಗೆ ಪರಿಹಾರ

ಸ್ಟ್ರಾಬೆರಿಗಳು ಪಾಲಿಫಿನಾಲ್‌ಗಳೆಂದು ಕರೆಯಲ್ಪಡುವ ರಕ್ಷಣಾತ್ಮಕ ಅಂಶವನ್ನು ಒಳಗೊಂಡಿವೆ, ಅವುಗಳಲ್ಲಿ ಎರಡು - ಎಲಾಜಿಕ್ ಆಸಿಡ್ ಮತ್ತು ಎಲಾಜಿಟಾನಿನ್‌ಗಳು . ಇವು ಟೈಪ್ 2 ಡಯಾಬಿಟಿಸ್‌ನ ಕೆಲವು ಪರಿಣಾಮಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಅರಿಯಾಗಿ ಹೇಳುವುದಾದರೆ, ಅದು  ರಕ್ತದ ಸಕ್ಕರೆಯನ್ನು ನಿಯಂತ್ರಿಸಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಬೆಂಡೆಕಾಯಿಯಲ್ಲಿ ಯಾವೆಲ್ಲ ಪೋಷಕಾಂಶಗಳಿಗೆ ಗೊತ್ತಾ?

ಕ್ಯಾನ್ಸರ್ ತಡೆಯುತ್ತದೆ

ಸ್ಟ್ರಾಬೆರಿಗಳು ಕೆಲವು ಕ್ಯಾನ್ಸರ್‌ಗಳನ್ನು ತಡೆಗಟ್ಟಬಹುದು ಗುಣವನ್ನು ಹೊಂದಿದೆ ಎಂದು ಅಧ್ಯಯನಗಳು ಹೇಳಿವೆ. ಪ್ರಾಣಿಗಳ ಮೇಲೆ  ನಡೆದ ಅಧ್ಯಯನದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ ಎಲಾಜಿಕ್ ಆಸಿಡ್ ಮತ್ತು ಎಲಾಜಿಟಾನಿನ್‌ಗಳು ಕಾರಣವಾಗುತ್ತವೆ ಎಂಬುದು ಸಾಬೀತಾಗಿದೆ. ಆದರೆ ಮನುಷ್ಯನ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡುವ ಶಕ್ತಿ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಇನ್ನು ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎನ್ನಲಾಗಿದೆ.

ತೂಕ ಇಳಿಸಲು ಸಹಾಯ ಮಾಡುತ್ತದೆ

ಸ್ಟ್ರಾಬೆರಿಗಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು (ಜಿಐ) ಹೊಂದಿರುತ್ತವೆ. ಇದರ ಸೇವನೆಯಿಂದ ತೂಕ ನಿರ್ವಹಣೆಗೆ ಸಹಾಯವಾಗುತ್ತದೆ ಮತ್ತು ಬೊಜ್ಜಿಗೆ ಸಂಬಂಧಿತ ರೋಗಗಳು ಬರುವುದನ್ನ ತಡೆಯುತ್ತದೆ. ಸ್ಟ್ರಾಬೆರಿಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದು ಇನ್ನು ಉಪಯುಕ್ತವಾಗುತ್ತದೆ.

ಸ್ಟ್ರಾಬೆರಿಗಳನ್ನು ಯಾರು ಬೇಕಾದರೂ ತಿನ್ನಬಹುದು, ಆದರೆ ಅಲರ್ಜಿ ಹೊಂದಿರುವವರು ಸೇವಿಸುವು ಒಳ್ಳೆದಲ್ಲ. ಅಂದರೆ ಸೇಬು ಹಣ್ಣಿನ ಅಲರ್ಜಿ ಇದ್ದಲ್ಲಿ ಸ್ಟ್ರಾಬೆರಿ ಸೇವನೆ ಮಾಡಿದರೇ, ಆ ಅಲರ್ಜಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಚಿಕ್ಕ ಮಕ್ಕಳಿಗೆ ನೀಡುವಾಗ ಹೆಚ್ಚು ಕಾಳಜಿವಹಿಸಬೇಕು.

ಸೇಬು, ಪೀಚ್, ಆವಕಾಡೊ ಮತ್ತು ಬೆರಿಹಣ್ಣುಗಳು ಸೇರಿದಂತೆ ಸ್ಟ್ರಾಬೆರಿಗಳು ಸ್ಯಾಲಿಸಿಲೇಟ್ಸ್ ಎಂಬ ನೈಸರ್ಗಿಕ ರಾಸಾಯನಿಕಗಳನ್ನು ಹೊಂದಿರುತ್ತವೆ. ಇದು ಬಹಳ ಸೂಕ್ಷ್ಮ ಆರೋಗ್ಯವನ್ನು ಹೊಂದಿರುವವರಲ್ಲಿ ಅಲರ್ಜಿಗೆ ಕಾರಣವಾಗುತ್ತದೆ. ಸ್ಟ್ರಾಬೆರಿಯಲ್ಲಿ  ಗಾಯಿಟ್ರೋಜೆನ್ಸ್ ಗಳನ್ನು ಹೊಂದಿರುತ್ತದೆ, ಇದು ಥೈರಾಯ್ಡ್ ಸಮಸ್ಯೆ ಇರುವವರಿಗೆ ಆರೋಗ್ಯದ ತೊಂದರೆಯನ್ನು ಹೆಚ್ಚು ಮಾಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಥೈರಾಯ್ಡ್ ಇರುವವರ ಇದರ ಸೇವನೆ ಕಡಿಮೆ ಮಾಡಿದರೆ ಅಥವಾ ಸೇವನೆ ಮಾಡದೇ ಇದ್ದಲ್ಲಿ ಆರೋಗ್ಯಕ್ಕೆ ಒಳಿತು.
Published by:Sandhya M
First published: