ತೂಕ ನಷ್ಟಕ್ಕೆ (Weight Loss) ತುಂಬಾ ಜನರು (People) ಮಾತ್ರೆ ಸೇವನೆ ಮಾಡ್ತಾರೆ. ಕೆಲವರು ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ವೇಟ್ ಲಾಸ್ ಮಾತ್ರೆ, ಔಷಧ, ಪ್ರೊಟೀನ್ ಶೇಖ್ ಹೀಗೆ ಹಲವು ತರಹದ ಸ್ಟೀರಾಯ್ಡ್ ಗಳನ್ನು (Steroids) ಸಹ ಸೇವನೆ ಮಾಡುತ್ತಾರೆ. ಅಸ್ತಮಾ, ಬೊಜ್ಜು ಕರಗಿಸಲು, ಬೆಲ್ಲಿ ಫ್ಯಾಟ್ ಕರಗಿಸಲು, ಎಸ್ಜಿಮಾ, ಕರುಳಿನ ಉರಿಯೂತ, ಸಂಧಿವಾತ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆಗೆ ತುಂಬಾ ಜನರು (People) ಸ್ಟೀರಾಯ್ಡ್ ಸೇವನೆ ಮಾಡ್ತಾರೆ. ಆದರೆ ಇವುಗಳು ನಿಜವಾಗಿಯೂ ತೂಕ ಇಳಿಕೆಗೆ ಸಹಾಯ ಮಾಡುತ್ತವೆಯೇ? ಆದರೀಗ ಕೆಲವು ಸ್ಟೀರಾಯ್ಡ್ ಗಳು ತೂಕ ಹೆಚ್ಚಿಸುತ್ತವೆ (Weight Gain) ಎಂದು ಹೇಳಲಾಗುತ್ತದೆ.
ತೂಕ ಇಳಿಕೆಗೆ ಸ್ಟೀರಾಯ್ಡ್ ಗಳು ಎಷ್ಟು ಆರೋಗ್ಯಕರ?
ದಿನವೂ ನಾವು ತೂಕ ನಷ್ಟದ ಟಿಪ್ಸ್, ಡಯಟ್, ವ್ಯಾಯಾಮದ ಬಗ್ಗೆ ತಿಳಿದುಕೊಳ್ಳುತ್ತೇವೆ. ಆದರೆ ಇಂದು ನಾವು ತೂಕ ನಷ್ಟದ ಸಮಯದಲ್ಲಿ ತೆಗೆದುಕೊಳ್ಳುವ ಸ್ಟೀರಾಯ್ಡ್ ಗಳು ಹೇಗೆ ಆರೋಗ್ಯ ತೊಂದರೆ ಉಂಟು ಮಾಡುತ್ತವೆ. ಸ್ಟೀರಾಯ್ಡ್ ಗಳು ಹೇಗೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂಬುದನ್ನು ನೋಡೋಣ.
ಆರೋಗ್ಯದ ಮೇಲೆ ವಿವಿಧ ಸ್ಟೀರಾಯ್ಡ್ ಗಳು ಅಡ್ಡ ಪರಿಣಾಮ ಬೀರುತ್ತವೆ. ಕೆಲವು ಔಷಧ ತಯಾರಿಸಲು ಸ್ಟೀರಾಯ್ಡ್ ಬಳಕೆ ಮಾಡಲಾಗುತ್ತದೆ. ಆದರೆ ನೀವು ತೆಗೆದುಕೊಳ್ಳುವ ಹೆಚ್ಚಿನ ಸ್ಟೀರಾಯ್ಡ್ ಗಳು ಅನೇಕ ಗಂಭೀರ ಸಮಸ್ಯೆ ಉಂಟು ಮಾಡುತ್ತವೆ ಅಂತಾರೆ ತಜ್ಞರು.
ಹಾಗಾಗಿ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಸ್ಟೀರಾಯ್ಡ್ ಪಡೆಯಬೇಕು. ಜೊತೆಗೆ ಎಷ್ಟು ಪ್ರಮಾಣದಲ್ಲಿ ಮಾಡಬೇಕು ಎಂಬುದನ್ನೂ ಸಹ ತಿಳಿದುಕೊಳ್ಳಿ. ಸ್ಟೀರಾಯ್ಡ್ಗಳ ಡೋಸೇಜ್ ದೇಹದ ಅಗತ್ಯತೆಗೆ ಅನುಗುಣವಾಗಿ ಇರುತ್ತದೆ. ಹಾಗಾಗಿ ವೈದ್ಯರ ಸಲಹೆ ಪಡೆದೇ ಸ್ಟೀರಾಯ್ಡ್ ತೆಗೆದುಕೊಳ್ಳಿ. ದೀರ್ಘಕಾಲದ ಸ್ಟೀರಾಯ್ಡ್ ಸೇವನೆ ದೇಹದ ಮೇಲೆ ಅನೇಕ ರೀತಿಯ ಅಡ್ಡ ಪರಿಣಾಮ ಬೀರುತ್ತದೆ.
ಸ್ಟೀರಾಯ್ಡ್ ಸೇವನೆಯ ಗಂಭೀರ ಅಡ್ಡ ಪರಿಣಾಮಗಳು
ತೂಕ ಹೆಚ್ಚಳಕ್ಕೆ ಕಾರಣವಾಗಬಹುದು
ಕೆಲವು ಸ್ಟೀರಾಯ್ಡ್ ಗಳಿಂದ ಚಯಾಪಚಯ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದು ದೇಹದಲ್ಲಿ ಕೊಬ್ಬಿನ ಶೇಖರಣೆ ಹೆಚ್ಚಿಸುತ್ತದೆ. ಹೊಟ್ಟೆ ಭಾಗದ ಕೊಬ್ಬನ್ನು ಹೆಚ್ಚಿಸಲು ಕಾರಣವಾಗುತ್ತದೆ. ದೇಹದ ಎಲೆಕ್ಟ್ರೋಲೈಟ್ ಮತ್ತು ನೀರಿನ ಸಮತೋಲನ ಅಸಮತೋಲನಗೊಳಿಸುತ್ತದೆ.
ಹೀಗಾಗಿ ಆಗಾಗ್ಗೆ ಹಸಿವು ಉಂಟಾಗುವುದು, ದೇಹದ ಭಾಗದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆಯಿದೆ. ಇದು ತೂಕ ಹೆಚ್ಚಿಸುತ್ತದೆ. ಸ್ಟೀರಾಯ್ಡ್ ಪಡೆದ ಸುಮಾರು 70 ಪ್ರತಿಶತ ಜನರು ಬೊಜ್ಜು ಹೊಂದಿರುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.
ನಿದ್ರಾಹೀನತೆ ಸಮಸ್ಯೆ
ಸ್ಟೀರಾಯ್ಡ್ ನಿದ್ರಾಹೀನತೆ ಸಮಸ್ಯೆ ಉಂಟು ಮಾಡುತ್ತದೆ. ಸಂಜೆ ವೇಳೆ ಸ್ಟೀರಾಯ್ಡ್ ಸೇವನೆಯು ನಿದ್ರಾಹೀನತೆ ಸಮಸ್ಯೆ ಉಂಟು ಮಾಡುತ್ತದೆ. ನಿದ್ರೆಯ ಕೊರತೆಯು ಅನೇಕ ಇತರ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಮಲಗುವ ಕೆಲವು ಗಂಟೆಗಳ ಮೊದಲು ಸ್ಟೀರಾಯ್ಡ್ ಪಡಯುವುದು ತಪ್ಪಿಸಿ. ವೈದ್ಯರ ಸಲಹೆ ಪಡೆಯಿರಿ.
ಮಾನಸಿಕ ಆರೋಗ್ಯ ಹದಗೆಡಿಸುತ್ತದೆ
ಸ್ಟೀರಾಯ್ಡ್ ಗಳ ನಿಯಮಿತ ಸೇವನೆಯು ಮಾನಸಿಕ ಆರೋಗ್ಯ ಕೆಡಿಸುತ್ತದೆ. ಮನಸ್ಥಿತಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆತಂಕ ಮತ್ತು ಖಿನ್ನತೆ ಉಂಟು ಮಾಡುತ್ತದೆ.
ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
ಸ್ಟೀರಾಯ್ಡ್ ಗಳು ಚರ್ಮದಲ್ಲಿ ಮೊಡವೆ ಸಮಸ್ಯೆ ಉಂಟು ಮಾಡುತ್ತವೆ. ಇದು ನೆತ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಇದು ಚರ್ಮ ಮತ್ತು ನೆತ್ತಿಯನ್ನು ಎಣ್ಣೆಯುಕ್ತವಾಗಿಸುತ್ತದೆ.
ಯಕೃತ್ತು ಆರೋಗ್ಯ ಕೆಡುತ್ತದೆ
ಸ್ಟೀರಾಯ್ಡ್ ಯಕೃತ್ತಿನ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚು. ಹಾಗೆಯೇ ಇದು ಗಡ್ಡೆಗಳು ಮತ್ತು ಪೆಲಿಯೋಸಿಸ್ ಹೆಪಾಟಿಸ್ನಂತಹ ಗಂಭೀರ ತೊಡಕುಂಟು ಮಾಡುತ್ತದೆ.
ಸ್ಟೀರಾಯ್ಡ್ ಅಧಿಕ ರಕ್ತದೊತ್ತಡ ಉಂಟು ಮಾಡುತ್ತವೆ. ಹೃದಯದ ಕುಹರದ ಕಾರ್ಯ ನಿಧಾನಗೊಳಿಸುತ್ತದೆ. ಇದು ಹೃದಯಾಘಾತ, ಅಪಧಮನಿ ಹಾನಿ ಮತ್ತು ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆ ಉಂಟು ಮಾಡುತ್ತದೆ.
ಇದನ್ನೂ ಓದಿ: ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ಮೊಡವೆಗಳ ನಿಯಂತ್ರಣಕ್ಕೆ ಹೀಗೆ ಮಾಡಿ
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗಲು ಕಾರಣವಾಗುತ್ತದೆ. ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಮೆದುಳು ಮತ್ತು ಹೃದಯಕ್ಕೆ ಸರಿಯಾಗಿ ರಕ್ತ ತಲುಪುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ