ದೇಹದ (Body) ಇತರೆ ಅಂಗಗಳಂತೆ ಮೆದುಳು ಆರೋಗ್ಯ (Brain Health) ಸಹ ತುಂಬಾ ಮುಖ್ಯ. ದೇಹದ ಅತ್ಯಂತ ಶಕ್ತಿಶಾಲಿ ಭಾಗವೆಂದು ಕರೆಯಿಸಿಕೊಳ್ಳುವ ಮೆದುಳು ಮನುಷ್ಯನ ದೇಹಕ್ಕೆ ಮುಖ್ಯವಾಗಿ ಬೇಕು. ಹಾಗಾಗಿ ಮೆದುಳಿನ ಆರೋಗ್ಯದತ್ತ ಸೂಕ್ತ ಕಾಳಜಿ (Care) ವಹಿಸಬೇಕು. ಯಾಕಂದ್ರೆ ಮೆದುಳಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರುವುದು ಬ್ರೇನ್ ಸ್ಟ್ರೋಕ್ (Brain Stroke) ಉಂಟು ಮಾಡುವ ಅಪಾಯವಿದೆ. ಬ್ರೇನ್ ಸ್ಟ್ರೋಕ್ ಎಂಬುದು ಒಂದು ಅಪಾಯಕಾರಿ ಕಾಯಿಲೆ (Disease) ಎಂಬುದು ತುಂಬಾ ಜನರಿಗೆ ಗೊತ್ತಿದೆ. ಬ್ರೇನ್ ಸ್ಟ್ರೋಕ್ ಉಂಟಾಗುವಾಗ ಮಿದುಳಿನ ರಕ್ತನಾಳ ನಿರ್ಬಂಧಕ್ಕೆ ಒಳಪಡುತ್ತದೆ ಅಥವಾ ಸಿಡಿಯುತ್ತದೆ. ಇನ್ನು ಮೆದುಳಿನ ರಕ್ತನಾಳದಲ್ಲಿ ಪ್ಲೇಕ್ ನಿರ್ಮಾಣವಾಗುತ್ತದೆ. ಇದನ್ನು ಇಸ್ಕೆಮಿಕ್ ಸ್ಟ್ರೋಕ್ ಎಂದು ಕರೆಯುತ್ತಾರೆ.
ಮೆದುಳಿನ ಅಪಾಯಕಾರಿ ಕಾಯಿಲೆಗಳು
ಮತ್ತೊಂದೆಡೆ ರಕ್ತನಾಳಗಳು ನಿರ್ಬಂಧಿಸಲ್ಪಟ್ಟಾಗ ರಕ್ತನಾಳದಿಂದ ರಕ್ತಸ್ರಾವ ಆರಂಭವಾಗುತ್ತದೆ. ಇದನ್ನು ಹೆಮರಾಜಿಕ್ ಸ್ಟ್ರೋಕ್ ಎಂದು ಕರೆಯುತ್ತಾರೆ. ಹಾಗಾದ್ರೆ ಮೆದುಳಿನಲ್ಲಿ ಉಂಟಾಗುವ ಪ್ಲೇಕ್ ಎಂದರೇನು ಎಂದು ನೋಡೋಣ.
ಪ್ಲೇಕ್ ಎಂದರೇನು?
ಪ್ಲೇಕ್ ಎಂಬುದು ಒಂದು ಜಿಗುಟಾದ ವಸ್ತು. ಅದು ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ. ಜೊತೆಗೆ ರಕ್ತನಾಳಗಳನ್ನು ನಿರ್ಬಂಧಿಸುತ್ತದೆ. ರಕ್ತನಾಳಗಳನ್ನು ನಿರ್ಬಂಧಿಸುವ ಪ್ಲೇಕ್ ಉಂಟಾಗಲು ಮುಖ್ಯ ಕಾರಣಗಳು ಅಂದ್ರೆ
ಕೊಲೆಸ್ಟ್ರಾಲ್, ಕೊಬ್ಬಿನ ಪದಾರ್ಥಗಳ ಹೆಚ್ಚಿನ ಸೇವನೆ, ಕ್ಯಾಲ್ಸಿಯಂ ಅಥವಾ ಫೈಬ್ರಿನ್ ಹೆಚ್ಚಳ ಹಾಗೂ ಸೋಡಿಯಂ ಸೇವನೆ ಕಾರಣವಾಗುತ್ತದೆ. ಸೋಡಿಯಂ ಸೇವನೆ ಅಧಿಕವಾದಾಗ ಕೂಡ ಮೆದುಳಿನ ಸ್ಟ್ರೋಕ್ ಸಮಸ್ಯೆ ಉಂಟಾಗುವ ಅಪಾಯವಿದೆ.
ಸೋಡಿಯಂ ಸೇವನೆ ಯಾಕೆ ಬ್ರೇನ್ ಸ್ಟ್ರೋಕ್ ಗೆ ಕಾರಣವಾಗುತ್ತದೆ?
ಸೋಡಿಯಂ ನ ಅತಿಯಾದ ಸೇವನೆ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಿಸುತ್ತದೆ. ಸೋಡಿಯಂ ಸೇವನೆ ಹೆಚ್ಚು ಮಾಡಿದಾಗ ಇದು ರಕ್ತನಾಳಗಳಲ್ಲಿ ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ.
ಆಗ ರಕ್ತ ವೇಗವಾಗಿ ಹರಿಯುತ್ತದೆ. ಹಾಗೂ ರಕ್ತನಾಳಗಳನ್ನು ದುರ್ಬಲಗೊಳಿಸುತ್ತದೆ. ಒಂದು ವರದಿಯ ಪ್ರಕಾರ, ಅಧಿಕ ರಕ್ತದೊತ್ತಡದ ಸಮಸ್ಯೆ ಬ್ರೇನ್ ಸ್ಟ್ರೋಕ್ ಅಪಾಯ ಹೆಚ್ಚಿಸುತ್ತದೆ ಎಂದು ತಿಳಿಸಿದೆ.
ಬ್ರೆಡ್ ಸೇವನೆ ತಪ್ಪಿಸಿ
ವರದಿಯೊಂದರ ಪ್ರಕಾರ, ಬ್ರೆಡ್ ನಲ್ಲಿ ಅತ್ಯಧಿಕ ಸೋಡಿಯಂ ಮಟ್ಟ ಇದೆ. ಹಾಗಾಗಿ ಅಧಿಕ ರಕ್ತದೊತ್ತಡ ಹೊಂದಿರುವ ಜನರು ಬ್ರೆಡ್ ಸೇವನೆ ತಪ್ಪಿಸಿ. ಯಾಕಂದ್ರೆ ಒಂದು ಬ್ರೆಡ್ ಸ್ಲೈಸ್ ಸುಮಾರು 200 ಮಿಗ್ರಾಂ ಸೋಡಿಯಂ ಹೊಂದಿದೆ. ಇದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.
ಸ್ಯಾಂಡ್ ವಿಚ್ ಸೇವನೆ ತಪ್ಪಿಸಿ
ಸೋಡಿಯಂ ಅಂಶವು ಸ್ಯಾಂಡ್‌ವಿಚ್ ಗಳಲ್ಲಿ ಹೇರಳವಾಗಿದೆ. ಇದರಲ್ಲಿ ಎರಡು ಸ್ಲೈಸ್ ಬ್ರೆಡ್, ಸಾಸಿವೆ ಸಾಸ್, ಚೀಸ್ ಇತ್ಯಾದಿ ಪದಾರ್ಥ ಸೇರಿಸಲಾಗುತ್ತದೆ. ಈ ಎಲ್ಲಾ ಪದಾರ್ಥಗಳು ಸೋಡಿಯಂ ಅಂಶವನ್ನು ಹೊಂದಿವೆ. ಹಾಗಾಗಿ ಇದು ಪಾರ್ಶ್ವವಾಯು ಸಮಸ್ಯೆಗೆ ಕಾರಣವಾಗುತ್ತದೆ.
ಮೊಟ್ಟೆ ಮತ್ತು ಆಮ್ಲೆಟ್
ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿದವರು ನಿಯಂತ್ರಿತ ಪ್ರಮಾಣದಲ್ಲಿ ಮೊಟ್ಟೆ ಮತ್ತು ಆಮ್ಲೆಟ್ ಸೇವನೆ ಮಾಡಿ. ಇವುಗಳ ಸೇವನೆ ಮಿದುಳಿನ ಅಭಿಧಮನಿ ಬ್ಲಾಕ್ ಅಥವಾ ಸ್ಫೋಟದ ಅಪಾ ಹೆಚ್ಚಿಸುತ್ತದೆ.
ಇನ್ನು ಪಿಜ್ಜಾ, ಸೂಪ್, ಚಿಕನ್, ಚೀಸ್ ಹಾಗೂ ಇತ್ಯಾದಿ ಕೆಲವು ಪದಾರ್ಥಗಳ ಬಳಕೆ ತಪ್ಪಿಸಿ. ಇದು ನಿಮ್ಮ ಆರೋಗ್ಯ ಮತ್ತು ಬ್ರೇನ್ ಹೆಲ್ತ್ ಗೆ ಉತ್ತಮ.
ಮೆದುಳಿನ ಆರೋಗ್ಯಕ್ಕಾಗಿ ಈ ಕ್ರಮಗಳನ್ನು ಫಾಲೋ ಮಾಡಿ
ಒಮೆಗಾ 3 ಕೊಬ್ಬಿನಾಮ್ಲಗಳು ಮೆದುಳಿಗೆ ಪ್ರಯೋಜನಕಾರಿ. ಬೆಳಗ್ಗೆ ಸಂಗೀತ ಕೇಳುವುದನ್ನು ರೂಢಿಸಿಕೊಳ್ಳಿ. ಸಂಸ್ಕರಿಸಿದ ಸಕ್ಕರೆ ಸೇವನೆ ಮಾಡುವುದು ಸ್ಮರಣೆ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ನಿಮ್ಮ ಮನಸ್ಸಿನಲ್ಲಿ ಆಗೋ ಬದಲಾವಣೆ ಥೈರಾಯ್ಡ್ ಕಾಯಿಲೆಯ ಸೂಚನೆಯಂತೆ!
ಹಾಗಾಗಿ ಸಂಸ್ಕರಿಸಿದ ಸಕ್ಕರೆ ಸೇವನೆಯ ಬದಲು ಬೆಲ್ಲ ಮತ್ತು ಜೇನುತುಪ್ಪ ಸೇವಿಸಿ. ಪ್ರತಿದಿನ ಸೂರ್ಯನ ಬೆಳಕನ್ನು ತೆಗೆದುಕೊಳ್ಳುವ ಜನರು ಹೆಚ್ಚು ಆರೋಗ್ಯವಾಗಿರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ