Relationship Tips: ನಿಮ್ಮ ಸಂಗಾತಿ ಜೊತೆಗಿದ್ದಾಗ ನೀವು ಯಾವ ರೀತಿ ವರ್ತಿಸಬೇಕು? ಇಲ್ಲಿವೆ ಟಿಪ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪರಸ್ಪರ ಅರ್ಥಮಾಡಿಕೊಳ್ಳುವುದು, ಸ್ಪಂದಿಸುವುದು, ಪ್ರೀತಿ ತೋರಿಸುವುದು ಹೀಗೆ ಇವೆಲ್ಲವೂ ಒಂದು ಉತ್ತಮ ಸಂಬಂಧದ ಸೂತ್ರಗಳು. ಒಂದು ಸಂಬಂಧವನ್ನು ಉಳಿಸಿಕೊಳ್ಳಲು, ಕಾಪಾಡಿಕೊಳ್ಳಲು ಹೊಂದಾಣಿಕೆ ಮತ್ತು ಸಂಗಾತಿಗೆ ಅನುಗುಣವಾದ ಕೆಲ ಗುಣಗಳನ್ನು ತ್ಯಾಗ ಕೂಡ ಮಾಡಬೇಕಾಗುತ್ತದೆ.

  • Share this:

ಸಂಬಂಧಗಳಿಗೆ ಪ್ರೀತಿ (Love), ಹೊಂದಾಣಿಕೆ, ಗೌರವಗಳಂತಹ ನೀರನ್ನು ಎರೆಯುತ್ತಿದ್ದರೆ ಮಾತ್ರ ಅವು ಗಟ್ಟಿಯಾಗಿ ಮತ್ತು ದೀರ್ಘವಾಗಿ ಉಳಿಯುತ್ತದೆ. ಪರಸ್ಪರ ಅರ್ಥಮಾಡಿಕೊಳ್ಳುವುದು, ಸ್ಪಂದಿಸುವುದು, ಪ್ರೀತಿ ತೋರಿಸುವುದು ಹೀಗೆ ಇವೆಲ್ಲವೂ ಒಂದು ಉತ್ತಮ ಸಂಬಂಧದ ಸೂತ್ರಗಳು. ಒಂದು ಸಂಬಂಧವನ್ನು ಉಳಿಸಿಕೊಳ್ಳಲು, ಕಾಪಾಡಿಕೊಳ್ಳಲು ಹೊಂದಾಣಿಕೆ ಮತ್ತು ಸಂಗಾತಿಗೆ ಅನುಗುಣವಾದ ಕೆಲ ಗುಣಗಳನ್ನು ತ್ಯಾಗ ಕೂಡ ಮಾಡಬೇಕಾಗುತ್ತದೆ.


ಸಂಬಂಧದಲ್ಲಿ ಪ್ರತಿಕ್ರಿಯಿಸುವ ವಿಧಾನ ಮುಖ್ಯ


ಅದರಲ್ಲೂ ಸಂಬಂಧದಲ್ಲಿ ಈ ಸ್ಪಂದನೆ ಅಥವಾ ಪ್ರತಿಕ್ರಿಯೆ ಅನ್ನೋದು ತುಂಬಾ ಮುಖ್ಯ. ನಾವು ಪ್ರತಿಕ್ರಿಯಿಸುವ ರೀತಿ ಮತ್ತು ನಾವು ಪ್ರತಿಕ್ರಿಯಿಸುವ ವಿಧಾನದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಪ್ರತಿಯೊಂದು ಸಂಬಂಧದಲ್ಲೂ ಏರಿಳಿತ, ಕಷ್ಟದ ಸಮಯ, ಖುಷಿ ಕ್ಷಣ ಎಲ್ಲವೂ ಮಿಶ್ರವಾಗಿರುತ್ತದೆ. ಕೆಲ ಕೆಟ್ಟ ಪರಿಸ್ಥಿತಿಯಲ್ಲಿ ಮುಖಕ್ಕೆ ಹೊಡೆದ ಹಾಗೆ ಮಾತನಾಡಿ ಬಿಡುತ್ತೇವೆ. ಹಾಗೆ ಅದಕ್ಕೆ ಮರುಕ ಪಡುವುದು ಇದೆ. ಪ್ರೀತಿಯಲ್ಲಿ ಯಾವುದೇ ಮಾತನಾಡುವಾಗ ಯೋಚಿಸಬೇಕು. ಆರೋಗ್ಯಕರ ಮತ್ತು ಪ್ರೀತಿ, ಸ್ಪಂದನೆ ತುಂಬಿದ ಸಂಬಂಧವನ್ನು ಕಟ್ಟಿಕೊಳ್ಳುವುದು ನಮ್ಮ ಕೈಯಲ್ಲಿರುವ ವಿಷಯ. ಹೀಗಾಗಿ ಕೆಲ ಪ್ರಾಥಮಿಕ ಅಂಶಗಳನ್ನು ಅರ್ಥ ಮಾಡಿಕೊಳ್ಳಲೇ ಬೇಕು.


ಸಾಂದರ್ಭಿಕ ಚಿತ್ರ


ಸಂಬಂಧದಲ್ಲಿ ರಿಯಾಕ್ಟ್‌ ಮತ್ತು ರೆಸ್ಪಾಂಡ್‌ ಅಂಶಗಳು ಮುಖ್ಯವಾಗಿದ್ದು, ಈ ಎರಡರ ನಡುವಿನ ವ್ಯತ್ಯಾಸವನ್ನು ಸೈಕೋಥೆರಪಿಸ್ಟ್ ಸದಾಫ್ ಸಿದ್ದಿಕಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿವರಿಸಿದ್ದಾರೆ. "ನೀವು ಮೊದಲು ನಿಮ್ಮ ಸ್ವಂತ ಆಂತರಿಕ ಭಾವನಾತ್ಮಕ ಪ್ರಕ್ರಿಯೆಗಳನ್ನು ನಿಯಂತ್ರಿಸುವ ಅಗತ್ಯವಿದೆ. ಇದು ನಿಮಗೆ ಚಿಂತನಶೀಲವಾಗಿ, ಉದ್ದೇಶಪೂರ್ವಕವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ" ಎಂದು ವಿವರಿಸಿದ್ದಾರೆ.


ಹಾಗೆಯೇ ಇವರು ಸಂಬಂಧದಲ್ಲಿ ಸಂಗಾತಿಗಳು ಹೇಗೆ ರೆಸ್ಪಾನ್ಸ್‌ ಮಾಡಬೇಕು, ರೆಸ್ಪಾಂಡ್‌ ಮಾಡುವ ಮುನ್ನ ತೆಗೆದುಕೊಳ್ಳಬೇಕಾದ ಹಂತಗಳು ಯಾವುವು ಎಂಬುದನ್ನು ಸೈಕೋಥೆರಪಿಸ್ಟ್ ಸದಾಫ್ ಸಿದ್ದಿಕಿ ವಿವರಿಸಿದ್ದಾರೆ. ಈ ಹಂತಗಳನ್ನು ನಾವು ನಾಲ್ಕು ಪಿ ( 4 P) ಎಂದು ಸಹ ಕರೆಯಬಹುದು.


ಇದನ್ನೂ ಓದಿ: ಕ್ಯಾಪ್ಸುಲ್​ ತಯಾರಾಗೋದು ಹೇಗೆ? ದೇಹ ಸೇರೋ ಪ್ಲಾಸ್ಟಿಕ್​ನಂತಹ ಕವರ್ ಏನಾಗುತ್ತೆ?


ಹಾಗಾದರೆ ಸಂಬಂಧದಲ್ಲಿ ಸ್ಪಂದಿಸುವಾಗ ಸಹಕರಿಸುವ ನಾಲ್ಕು ವಿಧಾನದ ಬಗ್ಗೆ ತಿಳಿಯೋಣ.


ವಿರಾಮ (Pause): ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸಲು ಆರು ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ, ಇದು ನಾವು ಪ್ರಚೋದಿಸಿದಾಗ ಶಾಂತಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಯಾವುದೇ ಸಿಟ್ಟಿನ ಅಥವಾ ನಮ್ಮನ್ನು ಪ್ರಚೋದಿಸುವ ಸಂದರ್ಭಗಳು ಎದುರಾದಲ್ಲಿ ನಾವು ಒಂದಿಷ್ಟು ಸೆಕೆಂಡ್‌ ವಿರಾಮ ತೆಗೆದುಕೊಂಡು ನಂತರ ಅದಕ್ಕೆ ಪ್ರತಿಕ್ರಿಯಿಸಬೇಕು. ನಾವು ಆರು ಸೆಕೆಂಡುಗಳ ಕಾಲ ವಿರಾಮ ತೆಗೆದುಕೊಳ್ಳಬೇಕು ಮತ್ತು ನಂತರ ಅದಕ್ಕೆ ಸ್ಪಂದಿಸಬೇಕು ಎಂದು ಸೈಕೋಥೆರಪಿಸ್ಟ್ ಸದಾಫ್ ಸಿದ್ದಿಕಿ ಹೇಳಿದ್ದಾರೆ.




ಪ್ರಕ್ರಿಯೆ (Process)̲: ಕೆಲವೊಮ್ಮೆ ಪ್ರಚೋದನೆಯ ದೊಡ್ಡ ಭಾಗವು ಅದನ್ನು ಆಂತರಿಕವಾಗಿ ಪ್ರಕ್ರಿಯೆಗೊಳಿಸುವುದಾಗಿರುತ್ತದೆ. ಹೀಗಾಗಿ ನಾವು ಎದುರಿಸುತ್ತಿರುವ ಭಾವನೆಗಳನ್ನು ನಾವು ವ್ಯಕ್ತಪಡಿಸಬೇಕು ಮತ್ತು ನಾವು ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಅರಿವು ಹೊಂದಿರಬೇಕು. ಇದು ಕೂಡ ಸಂಬಂಧದಲ್ಲಿ ರೆಸ್ಪಾಂಡ್‌ ಮಾಡಲು ಸಹಕರಿಸುವ ಹಂತವಾಗಿದೆ.


ಯೋಜನೆ (Plan): ಸ್ಪಂದಿಸುವಾಗ ಪ್ಲಾನ್‌ ಮಾಡಲು ಸಮಯ ತೆಗೆದುಕೊಳ್ಳಬೇಕು. ನಾವು ಯೋಜನೆ ಮಾಡಲು ವಿರಾಮಗೊಳಿಸಿದಾಗ, ಮೆದುಳಿನ ಭಾವನಾತ್ಮಕ ಭಾಗವು ಮೆದುಳಿನ ತಾರ್ಕಿಕ ಭಾಗದೊಂದಿಗೆ ಸಹಕರಿಸಲು ಸಹಾಯ ಮಾಡುತ್ತದೆ. ಇದು ನಾವು ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಅದರ ಪರಿಣಾಮಗಳು ಏನಾಗಬಹುದು ಎಂಬುದರ ಕುರಿತು ಒಂದು ಅವಲೋಕನ ನೀಡುತ್ತದೆ.

First published: