Brain Health: ಹೆಚ್ಚು ಓದುವುದರಿಂದ ನಿಮ್ಮ ಮೆದುಳಿಗೆ ಏನಾಗತ್ತೆ ಗೊತ್ತಾ? ನರ ವಿಜ್ಞಾನ ಹೇಳೋದೇನು ?

How Reading Changes Your Brain: ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದ್ದರೂ, ಓದುವಿಕೆ ಮೂಲತಃ ಪರಾನುಭೂತಿ ತಾಲೀಮು ಎಂಬುದನ್ನು ತಜ್ಞರು ಸಹ ಒಪ್ಪುತ್ತಾರೆ. ಇದು ನಮ್ಮ ದೃಷ್ಟಿಕೋನಕ್ಕಿಂತ ಭಿನ್ನವಾಗಿರುವ ಇತರರ ದೃಷ್ಟಿಕೋನ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನ ಯುವಜನತೆ ಪೈಕಿ ಬಹುತೇಕರು ಪುಸ್ತಕಗಳನ್ನು ಓದುವುದೇ ಕಡಿಮೆ. ಬರೀ ಮೊಬೈಲ್‌, ಇಂಟರ್‌ನೆಟ್‌, ಟಿವಿಯಲ್ಲೇ ಮುಳುಗಿರುತ್ತಾರೆ ಎಂದು ಹಿರಿಯರು ಆಗಾಗ ಹೇಳುವುದುನ್ನು ಹಾಗೂ ಅಸಮಾಧಾನ ಹೊರಹಾಕುವುದನ್ನು ನೀವು ಕೇಳಿರಬಹುದು. ಓದುವಿಕೆಯು ನಮ್ಮ ಶಬ್ದಕೋಶವನ್ನು ಸುಧಾರಿಸುತ್ತದೆ. ನಮ್ಮ ದೃಷ್ಟಿಕೋನವನ್ನು ವಿಸ್ತರಿಸುತ್ತದೆ, ಹೊಸ ಆಲೋಚನೆಗಳಿಗೆ ನಮ್ಮನ್ನು ಪರಿಚಯಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ಪ್ರತಿಯೊಬ್ಬರೂ ಬೇಗ ಅಳವಡಿಸಿಕೊಂಡು ಜೀವನ ಪರ್ಯಂತ ಅನುಸರಿಸಬೇಕಾದ ಅಭ್ಯಾಸ. ಹಾಗೆ, ಇದು ಯಶಸ್ಸಿನ ಕೀಲಿಕೈ ಎಂದು ಪರಿಗಣಿಸಲಾಗಿದೆ. ಹಾಗಾದ್ರೆ ಓದುವುದರಿಂದ ನಮ್ಮ ಮೆದುಳಿನ ಮೇಲೆ ಆಗುವ ಬದಲಾವಣೆಗಳೇನು ಅಂತೀರಾ..? ನರವಿಜ್ಞಾನ ಹೀಗೆ ಹೇಳಿದೆ ನೋಡಿ..

ನರವಿಜ್ಞಾನದ ಪ್ರಕಾರ, ಓದುವಿಕೆಯು ನಮ್ಮ ಮೆದುಳನ್ನು ಮಾಹಿತಿಯಿಂದ ತುಂಬಿಸುವುದಲ್ಲದೆ ಅದು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಒಬ್ಸೆಸಿವ್ ಓದುವಿಕೆ ನಮ್ಮ ಮೆದುಳು ಯೋಚಿಸುವ ರೀತಿಯಲ್ಲಿ ಮತ್ತು ವಿಷಯಗಳನ್ನು ಉತ್ತಮ ರೀತಿಯಲ್ಲಿ ಪ್ರಕ್ರಿಯೆಗೊಳಿಸುತ್ತದೆ ಎಂದೂ ಹೇಳಲಾಗಿದೆ.

ನೀವು ಪ್ರತಿದಿನ ಏಕೆ ಓದಬೇಕು? 

ನಾವು ಮಕ್ಕಳಾಗಿದ್ದಾಗ, ನಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ಹೊಸ ವಿಷಯಗಳನ್ನು ಓದಲು ಮತ್ತು ಕಲಿಯಲು ನಾವು ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ಆದರೆ ನಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಮತ್ತು ನಮ್ಮ ವೃತ್ತಿಜೀವನದ ಗುರಿಗಳನ್ನು ಸಾಧಿಸಿದ ನಂತರ, ನಾವು ಹೆಚ್ಚು ನಿಷ್ಕ್ರಿಯರಾಗುತ್ತೇವೆ ಮತ್ತು ಓದುವ ಅಭ್ಯಾಸ ಕ್ಷೀಣಿಸುತ್ತದೆ ಮತ್ತು ಅನೇಕ ಸಂದರ್ಭಗಳಲ್ಲಿ ಬಹುತೇಕ ಅಂತ್ಯಗೊಳ್ಳುತ್ತದೆ. ಎಲ್ಲಾ ವಯೋಮಾನದ ಜನರಿಗೆ ಓದುವುದು ಅತ್ಯಗತ್ಯ ಮತ್ತು ನಿಮಗೆ ಆಸಕ್ತಿಯಿರುವ ವಿಷಯಗಳ ಬಗ್ಗೆ 30 ನಿಮಿಷಗಳ ಕಾಲ ಓದುವುದು ಸಹ ಅದರ ಪ್ರಯೋಜನಗಳನ್ನು ಪಡೆಯಲು ಸಾಕು.

ಏಕೆಂದರೆ ಓದುವಿಕೆಯು ಅನೇಕ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಪ್ರಯೋಜನಗಳನ್ನು ಹೊಂದಿದೆ. ಇದು ನಿಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ಜಾಗೃತಿ ಹೆಚ್ಚಿಸುವ ಒಂದು ಮಾರ್ಗ ಮಾತ್ರವಲ್ಲ, ಇದು ಒಂದು ರೀತಿಯ ಮಾನಸಿಕ ತಾಲೀಮು ಕೂಡ ಆಗಿದೆ. ಇದು ದೈಹಿಕ ವ್ಯಾಯಾಮದಂತೆಯೇ ಅತ್ಯಗತ್ಯವಾಗಿದೆ.

ಇದನ್ನೂ ಓದಿ: ನಿಲ್ಲದ ಈ ಮಳೆಯಲ್ಲಿ ನಿಮ್ಮ ಮೇಕಪ್ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಮೆದುಳಿನ ರಿವೈರಿಂಗ್ ಹೇಗೆ ಸಹಾಯ ಮಾಡುತ್ತದೆ?

ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದ್ದರೂ, ಓದುವಿಕೆ ಮೂಲತಃ ಪರಾನುಭೂತಿ ತಾಲೀಮು ಎಂಬುದನ್ನು ತಜ್ಞರು ಸಹ ಒಪ್ಪುತ್ತಾರೆ. ಇದು ನಮ್ಮ ದೃಷ್ಟಿಕೋನಕ್ಕಿಂತ ಭಿನ್ನವಾಗಿರುವ ಇತರರ ದೃಷ್ಟಿಕೋನ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಮತ್ತು ಆದ್ದರಿಂದ ನಮ್ಮ ಭಾವನಾತ್ಮಕ ಅಂಶವನ್ನು (Emotional Quotient) (EQ) ಹೆಚ್ಚಿಸುತ್ತದೆ.

ಓದುವ ಪರಿಣಾಮ ಅರ್ಥಮಾಡಿಕೊಳ್ಳಲು ನಡೆಸಿದ ಅಧ್ಯಯನಗಳಲ್ಲಿ, ಸಂಶೋಧಕರು ಮೆದುಳಿನ ಅಲೆಗಳ ಮೇಲೆ ಅದರ ಪರಿಣಾಮಗಳನ್ನು ನೋಡಬಹುದು. ವ್ಯಾಯಾಮ ಮಾಡುತ್ತಿದ್ದರೆ, ನೀವು ಜಿಮ್‌ನಲ್ಲಿ ಬೆವರುತ್ತಿರುವಂತೆ ಪುಸ್ತಕ ಪಾತ್ರ ವಹಿಸುತ್ತದೆ. ಇದರಿಂದ ನಿಮ್ಮ ಮೆದುಳಿನ ಪ್ರದೇಶವು ಸಕ್ರಿಯಗೊಳ್ಳುತ್ತದೆ.

ನಿಮ್ಮ ಜೀವನ ಮತ್ತು ನಿಮ್ಮ ಸುತ್ತಲಿನ ವಿಷಯಗಳನ್ನು ಪ್ರಶ್ನಿಸುವಂತೆ ಮಾಡುವ ಪುಸ್ತಕಗಳು, ಸಂಕೀರ್ಣ ವಿಚಾರಗಳನ್ನು ಸುಲಭವಾಗಿ ಕೇಂದ್ರೀಕರಿಸಲು ಮತ್ತು ಗ್ರಹಿಸಲು ಸಹಾಯ ಮಾಡುತ್ತದೆ ಎಂದು ಇನ್ನೊಂದು ಸಂಶೋಧನೆ ಸೂಚಿಸುತ್ತದೆ.

ಈ ಚಟುವಟಿಕೆಯು ಪರ್ಯಾಯ ಮಾರ್ಗಗಳನ್ನು ಕಲ್ಪಿಸುವುದು, ವಿವರಗಳು, ದೃಶ್ಯಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಸಂಕೀರ್ಣ ಸಮಸ್ಯೆಗಳ ಮೂಲಕ ಯೋಚಿಸುವ ನಿಮ್ಮ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಇದು ನಿಮ್ಮನ್ನು ಹೆಚ್ಚು ತಿಳುವಳಿಕೆಯುಳ್ಳವರನ್ನಾಗಿ, ಚುರುಕಾಗಿ ಮಾಡುತ್ತದೆ ಮತ್ತು ನಿಮ್ಮನ್ನು ಯಶಸ್ಸಿನತ್ತ ಒಂದು ಹೆಜ್ಜೆ ಹತ್ತಿರಕ್ಕೆ ಕೊಂಡೊಯ್ಯುತ್ತದೆ.

ನೀವು ಸಾಕಷ್ಟು ಓದದಿದ್ದರೆ ಏನಾಗುತ್ತದೆ..?

ಮೊದಲನೆಯದಾಗಿ, ನೀವು ಓದದಿದ್ದರೆ ನೀವು ಯಾವುದೇ ಜ್ಞಾನ ಪಡೆಯುವುದಿಲ್ಲ, ನಿಮ್ಮ ಶಬ್ದಕೋಶವು ಸೀಮಿತವಾಗಿರುತ್ತದೆ ಮತ್ತು ತಾರ್ಕಿಕ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಅದರ ಜೊತೆಗೆ ಜನರೊಂದಿಗೆ ಏಕಾಗ್ರತೆ ಮತ್ತು ಸಹಾನುಭೂತಿ ಹೊಂದುವ ನಿಮ್ಮ ಸಾಮರ್ಥ್ಯವು ಕಾಲಾನಂತರದಲ್ಲಿ ಕ್ಷೀಣಿಸುತ್ತದೆ. ಎರಡನೆಯದಾಗಿ, ಓದದಿರುವುದು ಎಂದರೆ ಮಾನಸಿಕ ವ್ಯಾಯಾಮವಿಲ್ಲ ಮತ್ತು ಇದು ನಿಮ್ಮನ್ನು ವೃದ್ಧಾಪ್ಯದ ಮಾನಸಿಕ ಸ್ಥಿತಿಗಳಿಗೆ ಗುರಿಯಾಗಿಸುತ್ತದೆ.

ಓದುವಿಕೆ ಮತ್ತು ಸಮಸ್ಯೆ-ಪರಿಹರಿಸುವ ಆಟಗಳು ಮೆಮೋರಿ ನಷ್ಟವನ್ನು ತಡೆಯಲು, ಒತ್ತಡದ ಅಪಾಯ ಕಡಿಮೆ ಮಾಡಲು ಮತ್ತು ಹಿರಿಯ ವಯಸ್ಕರಲ್ಲಿ ವಿವಿಧ ರೀತಿಯ ಬುದ್ಧಿಮಾಂದ್ಯತೆ ತಡೆಯಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ.

ಇದರಿಂದ ನೀವು ತಿಳಿದುಕೊಳ್ಳಬೇಕಾಗಿರುವುದು ಏನು..?

ಇದನ್ನೂ ಓದಿ: ತೂಕ ಇಳಿಸೋಕೆ ರೆಡ್​ ವೈನ್​ ಕುಡಿಬೇಕಂತೆ -ಆಶ್ಚರ್ಯವಾದ್ರೂ ಸತ್ಯ

ಓದುವುದು ಒಂದು ರೀತಿಯ ಮಾನಸಿಕ ಚಟುವಟಿಕೆಯಾಗಿದ್ದು ಅದು ನಿಮ್ಮ ದಿನಚರಿಯ ಭಾಗವಾಗಿರಬೇಕು. ಮಲಗುವ ಮುನ್ನ ಕನಿಷ್ಠ 30 ನಿಮಿಷಗಳ ಕಾಲ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀವು ಏನು ಓದುತ್ತೀರಿ ಎಂಬುದು ಮುಖ್ಯವಲ್ಲ, ಅದು ಕಾಲ್ಪನಿಕವೇ ಆಗಿರಲಿ, ಕಾಲ್ಪನಿಕವಲ್ಲದ, ಪೌರಾಣಿಕ ಅಥವಾ ರಾಜಕೀಯವೇ ಆಗಿರಲಿ, ಅದೇನೇ ಆದರೂ ನಿಮ್ಮ ಓದುವ ಅಭ್ಯಾಸ ಬಿಡಬೇಡಿ.
Published by:Sandhya M
First published: