ಪಿಯಾನೊ ಕಲಿಕೆಯಿಂದ ಮಕ್ಕಳ ಭಾಷಾ ಕೌಶಲ್ಯ ಹೆಚ್ಚಿಸಬಹುದು : ಅಧ್ಯಯನ

news18
Updated:June 28, 2018, 9:05 AM IST
ಪಿಯಾನೊ ಕಲಿಕೆಯಿಂದ ಮಕ್ಕಳ ಭಾಷಾ ಕೌಶಲ್ಯ ಹೆಚ್ಚಿಸಬಹುದು : ಅಧ್ಯಯನ
news18
Updated: June 28, 2018, 9:05 AM IST
-ನ್ಯೂಸ್ 18 ಕನ್ನಡ

ಮಕ್ಕಳು ಭಾಷೆ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದರೆ ಅಂತಹ ಮಕ್ಕಳಿಗೆ ಪಿಯಾನೋ ಕಲಿಸುವುದರಿಂದ ಭಾಷಾ ಕೌಶಲ್ಯವನ್ನು ಹೆಚ್ಚಿಸಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಪಿಯಾನೋ ಸಂಗೀತ ಪಾಠಗಳು ಮಕ್ಕಳ ಮನಸಿಗೆ ಮುದ ನೀಡುವುದಲ್ಲದೆ, ಭಾಷಾ ಕಲಿಕಾ ಸಾಮರ್ಥ್ಯ ಉತ್ತಮಗೊಳಿಸಲು ನೆರವಾಗುತ್ತದೆ ಎಂದು ಈ ಸಂಶೋಧನೆಯಿಂದ ತಿಳಿದು ಬಂದಿದೆ.

ಪದ ಗ್ರಹಿಕೆಯಲ್ಲಿ ಹಿಂದೆ ಉಳಿದಿರುವ ಮಕ್ಕಳಿಗೆ ಪಿಯಾನೋ ಕಲಿಸಿದಾಗ ಗ್ರಹಿಕಾ ಸಾಮರ್ಥ್ಯದಲ್ಲಿ ಸುಧಾರಣೆ ಕಂಡಿರುವುದಾಗಿ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಾಬರ್ಟ್ ಡೆಸಿಮೋನ್ ತಿಳಿಸಿದ್ದಾರೆ.

ಈ ಅಧ್ಯಯನಕ್ಕಾಗಿ ನಾಲ್ಕು ಮತ್ತು ಐದು ವರ್ಷಗಳ ಅಂತರದ 100 ಮಕ್ಕಳನ್ನು ಪರೀಕ್ಷಿಸಿದ್ದು, ಇವರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ವಾರಕ್ಕೆ 45 ನಿಮಿಷ ಪಿಯಾನೋ ಪಾಠ ಹೇಳಿ ಕೊಡಲಾಗಿದೆ.

ಆರು ತಿಂಗಳ ಬಳಿಕ ಪಿಯಾನೋ ಕಲಿತಿರುವ ಮತ್ತು ಇತರೆ ಭಾಷಾ ಕಲಿಕೆಯನ್ನು ಪರಿಶೀಲಿಸಿದಾಗ ಪಿಯಾನೋ ಅಭ್ಯಸಿಸಿದ ಮಕ್ಕಳ ಸ್ವರ ಉಚ್ಚಾರಣೆಯ ಮತ್ತು ಪದಗಳನ್ನು ಗ್ರಹಿಸುವ ಸಾಮರ್ಥ್ಯ ಹೆಚ್ಚಾಗಿರುವುದು ಕಂಡು ಬಂದಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.

ಎಳೆ ವಯಸ್ಸಿನಲ್ಲಿ ಭಾಷಾ ಕಲಿಕೆಯಿಂದ ಮಕ್ಕಳಲ್ಲಿ ವಿಷಯ ಗ್ರಹಿಕೆ ಮತ್ತು ಅರಿವಿನ ಸಾಮರ್ಥ್ಯ ಹೆಚ್ಚುತ್ತದೆ. ಅಲ್ಲದೆ ಮಕ್ಕಳ ಭಾಷಾ ಕೌಶಲ್ಯವನ್ನು ಉತ್ತಮ ಪಡಿಸಲು ಶಾಲೆಗಳಲ್ಲಿ ಸಂಗೀತವನ್ನು ಕಲಿಸುವುದು ಉತ್ತಮ ಎಂದು ಸಂಶೋಧನಾ ತಂಡದ ಡೆಸಿಮೋನ್ ಅಭಿಪ್ರಾಯ ಪಟ್ಟಿದ್ದಾರೆ.
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ