Health Tips: ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಬೇಕಾ? ಹಾಗಿದ್ರೆ ಆಯ್ಕೆ ಈ ರೀತಿ ಇರಲಿ...!

Organic Food: ಸಾವಯವ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಪೋಷಕಾಂಶಗಳು ಹೆಚ್ಚಾಗುತ್ತವೆ ಎಂಬುದನ್ನು ನಾವು ಮರೆಯಬಾರದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾವಯವ (Organic) ಆಹಾರಗಳು ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮವಾದದ್ದು. ಏಕೆಂದರೆ ಅವು ಸಂಶ್ಲೇಷಿತ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬಳಸುವ ಪ್ರಕ್ರಿಯೆಯನ್ನು ವಿರೋಧಿಸುವುದಲ್ಲದೇ, ಅವುಗಳನ್ನು ಬಳಸುವುದಿಲ್ಲ. ಸಾವಯವ ಕೃಷಿಯು ಉತ್ತಮ ಜೈವಿಕ ವೈವಿಧ್ಯಮಯ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ, ಇದು ನೈಸರ್ಗಿಕ ನೀರು, ಆರೋಗ್ಯಕರ ಮಣ್ಣು, ಶುದ್ಧ ಗಾಳಿ, ದಟ್ಟವಾದ ವನ್ಯಜೀವಿಗಳು, ಉತ್ತಮ ಕೃಷಿ ಕಾರ್ಮಿಕರು ಮತ್ತು ಸಮತೋಲಿತ ವಾತಾವರಣವನ್ನು ಸಂರಕ್ಷಿಸಲು ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ. ಸಾವಯವ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಪೋಷಕಾಂಶಗಳು ಹೆಚ್ಚಾಗುತ್ತವೆ ಎಂಬುದನ್ನು ನಾವು ಮರೆಯಬಾರದು.

ಸಾವಯವ ಹಣ್ಣುಗಳು:

ಸಂಪೂರ್ಣ ಸಾವಯವ ಮತ್ತು ಕೀಟನಾಶಕ ರಹಿತ ಹಣ್ಣುಗಳನ್ನು ಬೆಳೆಯುತ್ತಿರುವ ಹಲವಾರು ಜನರಿದ್ದಾರೆ.  ಈ ಹಣ್ಣುಗಳು ಯಾವುದೇ ಹಾನಿಕಾರಕ ರಾಸಾಯನಿಕಗಳು ಅಥವಾ ಕೀಟನಾಶಕಗಳನ್ನು ಹೊಂದಿರುವುದಿಲ್ಲ ಮತ್ತು ಎಲ್ಲ ರೀತಿಯಿಂದಲೂ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಸಂಶೋಧನೆಯ ಪ್ರಕಾರ, ಸಾವಯವ ಆಹಾರವನ್ನು ಸೇವಿಸುವುದರಿಂದ ಮುಖ ಮತ್ತು ದೇಹದ ಮೇಲೆ ಕಾಣಿಸಿಕೊಳ್ಳುವ ಮೊಡವೆಗಳ ಪ್ರಮಾಣವನ್ನು ಕಡಿಮೆ ಮಾಡಬಹುದು.

ಸಾವಯವ ಕೃಷಿ ಮತ್ತು ಬೆಳೆಗಳು  ಒಳ್ಳೆಯದು ಮಾತ್ರವಲ್ಲದೆ ಪರಾಗಸ್ಪರ್ಶಕ ಸ್ನೇಹಿಯಾಗಿವೆ ಎಂಬುದು ಮುಖ್ಯವಾಗುತ್ತದೆ ಸಾವಯವ ಪದ್ಧತಿ ಬಳಸುವುದರಿಂದ ಜೇನುನೊಣಗಳು, ಪರಾಗಸ್ಪರ್ಶ ಜೀವಿಗಳು  ಮತ್ತು ಇತರ ವನ್ಯಜೀವಿಗಳನ್ನು ವಿಷಕಾರಿ ರಾಸಾಯನಿಕಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:ಫೈಬರ್‌ಯುಕ್ತ ಆಹಾರ ಎಂದರೇನು? ಮಳೆಗಾಲದಲ್ಲಿ ಈ 7 ಆಹಾರಗಳನ್ನು ಸೇವಿಸಿ

ಸಾವಯವ ಕಾಳುಗಳು


ಕಾಳುಗಳಲ್ಲಿ  ಹೆಚ್ಚಿನ ಕೊಬ್ಬು ಮತ್ತು ಕ್ಯಾಲೋರಿಗಳ ಹೊರತಾಗಿಯೂ, ಕಾಳುಗಳುತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇವುಗಳು ಸೂಪರ್‌ಫುಡ್‌ಗಳಾಗಿವೆ. ಇವು ಮೆಗ್ನೀಸಿಯಮ್ ಮತ್ತು ವಿಟಮಿನ್ ಇ ಯಂತಹ ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ. ಈ ಕಾಳುಗಳು ಆರೋಗ್ಯಕರವಾದ ವಿಟಮಿನ್‌ಗಳು ಮತ್ತು ಖನಿಜಗಳಾದ ತಾಮ್ರ, ಸತು, ವಿಟಮಿನ್ ಎ, ಸಿ ಮತ್ತು ಇ ಯನ್ನು ಹೊಂದಿವೆ. ಈ ವಿಟಮಿನ್ಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಅಂದವನ್ನು ಹೆಚ್ಚಿಸುತ್ತದೆ.

ಬೆರಿ ಹಣ್ಣುಗಳು

ಪ್ರಪಂಚದ ಅತ್ಯಂತ ಜನಪ್ರಿಯ ಆರೋಗ್ಯ ಆಹಾರಗಳ ಪೈಕಿ ಈ ಬೆರಿ ಹಣ್ಣುಗಳು ಪ್ರಮುಖವಾಗುತ್ತದೆ. ಈ ಸಣ್ಣ  ಹಣ್ಣುಗಳು ಬಹಳ  ರುಚಿಕರವಾದ ಮತ್ತು ಪೌಷ್ಟಿಕವಾಗಿರುತ್ತದೆ.  ಇನ್ನು ಇದನ್ನು ಯಾವ ರೀತಿಯಲ್ಲಿ ಬೇಕಾದರೂ ಸೇವನೆ ಮಾಡಬಹುದು. ಸಾವಯವವಾಗಿ ಈ ಹಣ್ಣುಗಳನ್ನು ಬೆಳೆದಾಗ ನಮ್ಮ ದೇಹಕ್ಕೆ ನೈಸರ್ಗಿಕ ಪೋಷಕಾಂಶಗಳು ಸೇರುವುದರಿಂದ  ಆರೋಗ್ಯಕರವಾಗಿರುತ್ತದೆ. ಅಲ್ಲದೆ, ಹಣ್ಣುಗಳು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬೆನ್ನು ಮತ್ತು ಕುತ್ತಿಗೆ ನೋಯುತ್ತಿದೆಯೇ? ಈ ಸ್ಟ್ರೆಚ್‌ಗಳನ್ನು ಮಾಡಿ

ಸಾವಯವ ತರಕಾರಿಗಳು:

ಯಾವುದೇ ಸಿಂಥೆಟಿಕ್ ಕೀಟನಾಶಕವಿಲ್ಲದ ಹೊಲದಲ್ಲಿ ಇವುಗಳನ್ನು ಬೆಳೆಯುವುದರಿಂದ ಅವು ನಮಗೆ ಹೆಚ್ಚಿನ ವಿಟಮಿನ್ ಮತ್ತು ಖನಿಜಾಂಶಗಳನ್ನು ನೀಡುವುದಲ್ಲದೆ ನಮ್ಮ ಕರುಳು ಮತ್ತು ಮೆದುಳಿನ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ.

ಸಾವಯವ ಧಾನ್ಯಗಳು, ದ್ವಿದಳ ಧಾನ್ಯಗಳು, ರಾಗಿ

ಸಾವಯವ ಧಾನ್ಯಗಳು ಮತ್ತು ರಾಗಿ ತಮ್ಮ ಸಾಂಪ್ರದಾಯಿಕ   ಆಹಾರ ಅಭ್ಯಾಸಗಳಲ್ಲಿ ಒಂದು. ಅದರಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳು ಲಭಿಸುತ್ತವೆ. ಅವುಗಳು ವಿಟಮಿನ್‌ಗಳು ಮತ್ತು ಇತರ ಆ್ಯಂಟಿಆಕ್ಸಿಡೆಂಟ್‌ಗಳಿಂದ ತುಂಬಿರುತ್ತವೆ ಮತ್ತು ನಿಮ್ಮನ್ನು ಆರೋಗ್ಯಯುತ ಮತ್ತು ಸದೃಢರನ್ನಾಗಿಸುತ್ತದೆ. ಅವುಗಳು ಹೆಚ್ಚಿನ ಪೋಷಕಾಂಶಗಳು ಮತ್ತು ಫೈಬರ್ ಅನ್ನು ಹೊಂದಿರುವುದಲ್ಲದೆ, ಈ ಆಹಾರಗಳ ನಿಯಮಿತ ಸೇವನೆಯು ಬೊಜ್ಜು ಮತ್ತು ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆದ್ದರಿಂದ, ನಿಮ್ಮ ಆಹಾರಕ್ರಮವನ್ನು ಬದಲಾಯಿಸಲು ನೀವು ಇಷ್ಟಪಡುವುದಾದರೇ ಸಾವಯಾವ ನಿಮಗೆ ಉತ್ತಮ ಆಯ್ಕೆ. ಅದು ನೈಸರ್ಗಿಕ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಇರುವ ಏಕೈಕ ಮಾರ್ಗ.  ಯೋಗ ಮತ್ತು ವ್ಯಾಯಾಮವು ಆರೋಗ್ಯಕರ ಮತ್ತು ಫಿಟ್ ಆಗಿರಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಮಗೆ ತಿಳಿದಿದೆ, ಆದರೆ ನಾವು ಸೇವಿಸುವ ಆಹಾರ ನಮ್ಮ ಆರೋಗ್ಯವನ್ನು ನಿರ್ಧಾರ ಮಾಡುತ್ತದೆ ಎಂಬುದನ್ನ ಮರೆಯಬಾರದು.
Published by:Sandhya M
First published: