ಅಡುಗೆ ಮನೆ (Kitchen) ಅಂದರೆ ಹೇಳಬೇಕಾ ? ಪ್ರತಿನಿತ್ಯ ಕ್ಲೀನಿಂಗ್, ಕುಕ್ಕಿಂಗ್ ಇದ್ದದ್ದೇ. ಹಾಗೆಯೇ ಮೊಟ್ಟೆ, ಬಾಳೆಹಣ್ಣು(Banana), ಪುದೀನಾದಂತಹ (Mint) ಒಂದಷ್ಟು ವಸ್ತುಗಳು ನಮಗೆ ದಿನವೂ ಕೈಗೆ ಸಿಗುವಂತಿರಬೇಕು. ಸ್ವಲ್ಪ ಪುದೀನಾಗೋಸ್ಕರ, ಒಂದೆರಡು ಮೊಟ್ಟೆಗಾಗಿ ದಿನಾ ಮಾರ್ಕೆಟ್ಗೆ (Market) ಹೋಗೋಕೆ ಯಾರಿಗೂ ಟೈಂ ಇಲ್ಲ. ಕನಿಷ್ಠ ವಾರಕ್ಕೊಮ್ಮೆ ಹೋದರೂ ಸರಿ. ಆದರೆ ವಾರದ ಆರಂಭದಲ್ಲಿ ತಂದ ಈ ವಸ್ತುಗಳೆಲ್ಲ ವಾರದ ಕೊನೆಯ ತನಕ ಉಳಿಯಬೇಕಲ್ಲ ? ತರೋವಾಗ ಫ್ರೆಶ್ ಆಗಿದ್ದ ವಸ್ತುಗಳೆಲ್ಲ ಕೆಲವೇ ದಿನಗಳಲ್ಲಿ ಹೇಗಾಗುತ್ತೆ ಅಲ್ವಾ ? ಬಾಳೆ ಹಣ್ಣಿನ ಬಣ್ಣ ಕುಂದುತ್ತದೆ, ಹಸಿ ಮೆಣಸಿನ ಕಾಯಿ ಮೆಲ್ಲನೆ ದಂಟಿನಿಂದ ಹಾಳಾಗುತ್ತಾ ಬರುತ್ತದೆ, ಪುದೀನಾ ಸೊಪ್ಪು ಕೊಳೆತು ಇಟ್ಟಲ್ಲೇ ಅಂಟಿಬಿಡುತ್ತದೆ. ಅಬ್ಬಾ..! ಪ್ರಾಬ್ಲೆಮ್ ಒಂದಾ ಎರಡಾ ?
ಆದರೆ ಕೆಲವೊಂದು ಟಿಪ್ಸ್ ಫಾಲೋ ಮಾಡಿದರೆ ಇವೆಲ್ಲ ಸಮಸ್ಯೆಗಳಿಗೆ ಬ್ರೇಕ್ ಹಾಕಬಹುದು. ಒಂದಷ್ಟು ಟ್ರಿಕ್ಸ್ ಎಪ್ಲೈ ಮಾಡಿದ್ರೆ ಸಾಕು. ವಾರ ಪೂರ್ತಿ ಆಹಾರ ವಸ್ತುಗಳನ್ನು ಕೆಡದಂತೆ ರಕ್ಷಿಸಬಹುದು. ಹಾಗಾದರೆ ನೀವು ಮಾಡಬೇಕಾಗಿರೋದು ಏನು ?
ಆಲೂಗಡ್ಡೆ:
ಆಲೂಗಡ್ಡೆ (Potatoes) ನಮ್ಮ ಅಡುಗೆ ಮನೆಯಲ್ಲಿ ಹೆಚ್ಚು ಬಳಸುವ ಪದಾರ್ಥಗಳಲ್ಲಿ ಒಂದು. ಆಲೂ ಪಲ್ಯದಿಂದ ಆಲೂ ಪರೋಟ, ಆಲೂ ಬಿರಿಯಾನಿಯವರೆಗೆ, ಆಲೂಗಡ್ಡೆ ಕೈಗೆ ಸಿಗುವಂತಿರಬೇಕು. ಆಲೂಗಡ್ಡೆಗಳು ಪರಿಪೂರ್ಣ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೂ ಸರಿಯಾಗಿ ಹೊಂದಿಕೊಳ್ಳುತ್ತದೆ.
ಇದನ್ನೂ ಓದಿ: ದಿನಕ್ಕೆ ಎಷ್ಟು ಮೊಟ್ಟೆ ಸೇವಿಸುತ್ತೀರಿ?; ಅಯ್ಯೋ ಅತಿಯಾಗಿ ಸೇವಿಸಿದರೆ ಹೀಗಾಗುತ್ತಂತೆ!
ಆಲೂಗಡ್ಡೆಯನ್ನು ಸ್ಟೋರ್ ಮಾಡುವ ಮೊದಲು ಅವುಗಳನ್ನು ತೊಳೆಯಬೇಡಿ. ತೇವಾಂಶವು ಕೊಳೆಯುವಿಕೆ ಕಾರಣವಾಗುತ್ತದೆ. ಅರ್ಧ ಕತ್ತರಿಸಿದ ಆಲೂಗಡ್ಡೆಯನ್ನು ತೆಗೆದಿಡಬೇಡಿ. ಅವು ಪರಿಸರದಲ್ಲಿರುವ ತೇವಾಂಶಕ್ಕೆ ಒಡ್ಡಿಕೊಳ್ಳುವುದರಿಂದ ಮಸುಕಾಗಿ ಹಾಳಾಗುತ್ತವೆ. ಆಲೂಗಡ್ಡೆಯನ್ನು ತಂಪಾದ, ಶುಷ್ಕ ಮತ್ತು ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಸಂಗ್ರಹಿಸಿ.
ಟೊಮ್ಯಾಟೋ:
ನಮ್ಮಲ್ಲಿ ಟೊಮ್ಯಾಟೋ (Tomatoes) ಇಲ್ಲದ ಮನೆ ಹುಡಕೋದು ಕಷ್ಟ. ಟೊಮ್ಯಾಟೊ ರೈಸ್, ಸಾರು, ರಸಂ, ಗೊಜ್ಜು ಎಲ್ಲದಕ್ಕೂ ಬೇಕು. ಟೊಮೆಟೊಗಳನ್ನು ಅವುಗಳ ದಂಟಿನೊಂದಿಗೆ ಸಂಗ್ರಹಿಸಬಾರದು. ಕಾಂಡಗಳು ಹಣ್ಣಿನೊಂದಿಗೆ ಜೋಡಿಸಲಾದ ಪ್ರದೇಶವು ತೇವಾಂಶ ಮತ್ತು ತಾಜಾತನದ ನಷ್ಟಕ್ಕೆ ಕಾರಣವಾಗುತ್ತದೆ. ಹಾಗಾಗಿ ಟೊಮ್ಯಾಟೋ ದಂಟು ತೆಗೆದು ಸ್ಟೋರ್ ಮಾಡಿ.
ಮೆಣಸಿನಕಾಯಿ:
ಬಳಸಲು ಸುಲಭವಾಗಲಿ ಎಂದು ನೀರಲ್ಲಿ ತೊಳೆದು ಮೆಣಸಿನಕಾಯಿ (Green Chilly) ಸಂಗ್ರಹಿಸುತ್ತೀರಾ ? ಆ ತಪ್ಪು ಮಾಡಬೇಡಿ. ಅವುಗಳನ್ನು ಗಾಳಿಯಾಡದ ಕಂಟೇನರ್, ಜಿಪ್ ಲಾಕ್ ಬ್ಯಾಗ್ ಅಥವಾ ಅಲ್ಯೂಮಿನಿಯಂ ಫಾಯಿಲ್ನಲ್ಲಿ ಸಂಗ್ರಹಿಸಿ.
ಇದನ್ನೂ ಓದಿ: ಮೊಟ್ಟೆ ಜೊತೆ ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬೇಡಿ
ಬಾಳೆಹಣ್ಣು:
ಹೆಚ್ಚಿನ ಮನೆಗಳಲ್ಲಿ ಬಾಳೆ ಹಣ್ಣು (Banana) ಸಾಮಾನ್ಯವಾಗಿ ದಿನಬಳಕೆಯ ಹಣ್ಣು. ಆದರೂ ಈ ಹಣ್ಣುಗಳನ್ನು ಸಂಗ್ರಹಿಸುವಾಗ ಸ್ವಲ್ಪ ಎಚ್ಚರವಹಿಸಿದರೆ ಹಣ್ಣು ಕೆಡದಂತೆ ಕಾಪಾಡಬಹುದು. ಬಾಳೆ ಹಣ್ಣನ್ನು ಕಿತ್ತು ಬಿಡಿಬಿಡಿಯಾಗಿ ತೆರೆದಿಡುವುದರಿಂದ ಅದು ಬೇಗನೆ ಹಾಳಾಗುತ್ತದೆ. ಹೆಚ್ಚು ಸಮಯ ಹಾಳಾಗದಂತೆ ಉಳಿಯಲು ಅಲ್ಯೂಮಿನಿಯಂ ಫಾಯಿಲ್ನಲ್ಲಿ ತೆಗೆದಿಟ್ಟುಕೊಳ್ಳಿ.
ಗಿಡಮೂಲಿಕೆಗಳು:
ಧನಿಯಾ ಮತ್ತು ಪುದಿನಾ ಮುಂತಾದವುಗಳನ್ನು ಬಹುತೇಕ ಎಲ್ಲ ಅಡುಗೆಗೂ ಬಳಸುತ್ತಾರೆ. ಇವುಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಬಯಸಿದರೆ, ನೀವು ಅವುಗಳನ್ನು ಮಾರುಕಟ್ಟೆಯಿಂದ ಖರೀದಿಸಿದ ಅದೇ ಸ್ಥಿತಿಯಲ್ಲಿ ಸಂಗ್ರಹಿಸಬೇಡಿ. ಧೂಳನ್ನು ತೆಗೆಯಲು ಸಾಫ್ಟ್ ಆಗಿ ತೊಳೆದುಕೊಳ್ಳಿ. ನಂತರ ಕಾಂಡಗಳನ್ನು ಕತ್ತರಿಸಿ ಚೆನ್ನಾಗಿ ಒಣಗಲು ಬಿಡಿ. ಸ್ವಲ್ಪ ನೀರು ಇರುವ ಜಾರ್ನಲ್ಲಿ ಸಂಗ್ರಹಿಸಿ ಮತ್ತು ಜಿಪ್ ಲಾಕ್ ಬ್ಯಾಗ್ ಬಳಸಿ ಮುಚ್ಚಿ.
ಬೆಣ್ಣೆ:
ಬ್ರೇಕ್ಫಾಸ್ಟ್ ಹಾಗೂ ಇತರ ಆಹಾರದಲ್ಲಿ ಬೆಣ್ಣೆ ಬೇಕೇ ಬೇಕು. ಒಂದು ಸ್ಪೂನ್ ಬೆಣ್ಣೆ ಆಹಾರದ ಸ್ವಾದ ಹೆಚ್ಚಿಸುತ್ತೆ ಎನ್ನುವುದರಲ್ಲಿ ನೋ ಡೌಟ್. ಆದರೆ, ಬೆಣ್ಣೆಯನ್ನು ಶೇಖರಿಸುವಾಗ ಸ್ಟ್ರಾಂಗ್ ಸ್ಮೆಲ್ ಇರುವ ಯಾವುದೇ ಪದಾರ್ಥಗಳ ಬಳಿ ನೀವು ಬೆಣ್ಣೆಯನ್ನು ಇಡಬಾರದು. ಬೆಣ್ಣೆಯು ಸುವಾಸನೆಯನ್ನು (Smell) ಹೀರಿಕೊಳ್ಳುವ ಗುಣ ಹೊಂದಿದೆ. ಫ್ರೀಜರ್ನಲ್ಲಿ ಬೆಣ್ಣೆಯನ್ನು ಸಂಗ್ರಹಿಸುವುದು ಉತ್ತಮ.
ಮೊಟ್ಟೆಗಳು:
ನಾವು ಮೊಟ್ಟೆಗಳನ್ನು (Egg) ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಶೇಖರಿಸುತ್ತೇವೆ. ಮೊಟ್ಟೆಗಳು ದೀರ್ಘಕಾಲದವರೆಗೆ ತಾಜಾ ಮತ್ತು ಸುರಕ್ಷಿತವಾಗಿರಲು ಅವುಗಳು ಬರುವ ಮೂಲ ಕಂಟೈನರ್ ಏನಿದೆ ಅದರಿಂದ ಅವುಗಳನ್ನು ತೆಗೆದು ಶಿಫ್ಟ್ ಮಾಡಬೇಡಿ. ಏಕೆಂದರೆ ಈ ಕಂಟೇನರ್ಗಳಲ್ಲಿ (Container) ಚೆನ್ನಾಗಿ ಗಾಳಿಯಾಡುತ್ತವೆ. ಇವು ತೇವಾಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತವೆ. ಮೊಟ್ಟೆಗಳನ್ನು ದೀರ್ಘಕಾಲದವರೆಗೆ ಫ್ರಿಜ್ನಲ್ಲಿ ಇಡುವುದರಿಂದ ಮೊಟ್ಟೆಗಳ ಚಿಪ್ಪುಗಳ ಮೇಲೆ ಘನೀಕರಣವಾಗಬುದು. ಇದು ಬ್ಯಾಕ್ಟೀರಿಯಾವನ್ನು ದುರ್ಬಲವಾಗಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ