ತೂಕ ನಷ್ಟಕ್ಕೆ (Weight Loss) ಡಯಟ್ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ. ತಿನ್ನುವ ಆಹಾರ ಹಾಗೂ ಕ್ಯಾಲೋರಿ (Food And Calorie) ಹೆಚ್ಚಳದ ಬಗ್ಗೆ ಸಾಕಷ್ಟು ಕಾಳಜಿ (Care) ಬೇಕು. ಇಲ್ಲದಿದ್ದರೆ ತೂಕ ಹೆಚ್ಚಳ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ ತೂಕ ನಷ್ಟ, ಕ್ಯಾಲೋರಿ ಸೇವನೆ, ಡಯಟ್ (Diet) ಬಗ್ಗೆ ಮುಖ್ಯವಾಗಿ ಗಮನ ಕೇಂದ್ರೀಕರಿಸುವುದು ಮುಖ್ಯ ಎಂದು ತಜ್ಞರು ಮತ್ತು ಸಂಶೋಧನೆಗಳು ಸೂಚಿಸುತ್ತವೆ. ತುಂಬಾ ಜನರು ತಮ್ಮ ಬಿಡುವಿಲ್ಲದ ಜೀವನಶೈಲಿಯಿಂದಾಗಿ ಅತಿಯಾದ ತೂಕ ಹೊಂದಿರಬಹುದು. ಆದರೆ ಇದನ್ನು ತೊಡೆದು ಹಾಕುವುದು ಮುಖ್ಯ. ಯಾಕಂದ್ರೆ ಬೊಜ್ಜು (Fat) ಹಲವು ಕಾಯಿಲೆಗೆ ಗುರಿಯಾಗಿಸುತ್ತದೆ.
ತೂಕ ನಷ್ಟದಲ್ಲಿ ಕ್ಯಾಲೋರಿ ಸೇವನೆ ಬಗ್ಗೆ ಕಾಳಜಿ ವಹಿಸಿ
ಸ್ಥೂಲಕಾಯ ಮತ್ತು ಕೊಬ್ಬಿನ ಶೇಖರಣೆ ಸಾಕಷ್ಟು ತೊಂದರೆ ನೀಡುತ್ತದೆ. ಇದನ್ನು ತೊಡೆದು ಹಾಕುವುದು ಸುಲಭವಲ್ಲ. ನೀವು ವ್ಯಾಯಾಮದ ಜೊತೆಗೆ ಡಯಟ್ ಹಾಗೂ ಮುಖ್ಯವಾಗಿ ಕ್ಯಾಲೋರಿ ಸೇವನೆ ಬಗ್ಗೆ ಗಮನ ಹರಿಸಬೇಕು. ಯಾಕಂದ್ರೆ ಇದು ಆರೋಗ್ಯದಲ್ಲಿ ಏರು-ಪೇರು ಉಂಟಾಗುವಂತೆ ಮಾಡುತ್ತದೆ.
ನೀವು ಹೆಚ್ಚಿನ ಕ್ಯಾಲೊರಿ ಆಹಾರ ಸೇವಿಸಿ, ಕಡಿಮೆ ಬರ್ನ್ ಮಾಡಿದ್ರೆ ಇದು ಚಯಾಪಚಯಕ್ಕೆ ತೊಂದರೆ ಉಂಟು ಮಾಡುತ್ತದೆ. ಹಾಗೂ ಚಯಾಪಚಯ ನಿಧಾನವಾಗುತ್ತದೆ.
ಅದಾಗ್ಯೂ ಋಣಾತ್ಮಕ ಕ್ಯಾಲೋರಿ ಆಹಾರ ಸೇವನೆ ಮಾಡಿದ್ರೆ ಇದು ಕಡಿಮೆ ಕ್ಯಾಲೋರಿ ಆಹಾರ ಸೇವನೆಗೆ ಸಹಾಯ ಮಾಡುತ್ತದೆ ಅಂತಾರೆ ಫಿಟ್ನೆಸ್ ತಜ್ಞರು.
ಋಣಾತ್ಮಕ ಅಂದರೆ ನಕಾರಾತ್ಮಕ ಕ್ಯಾಲೋರಿ ಆಹಾರಗಳು ಯಾವುವು?
ತೂಕ ಇಳಿಕೆಗೆ ಸಹಾಯ ಮಾಡುವ ಕಡಿಮೆ ಕ್ಯಾಲೋರಿ ಆಹಾರಗಳು ಸಾಕಷ್ಟಿವೆ. ಇದರ ಬಗ್ಗೆ ನಿಮಗೆ ಗೊತ್ತಿರಬಹುದು. ಋಣಾತ್ಮಕ ಕ್ಯಾಲೋರಿ ಆಹಾರಗಳು ಜೀರ್ಣಕ್ರಿಯೆಗೆ ಸಹಕಾರಿ. ಇವುಗಳು ಫೈಬರ್ ಮತ್ತು ನೀರನ್ನು ಹೊಂದಿರುತ್ತವೆ.
ಈ ಋಣಾತ್ಮಕ ಆಹಾರಗಳು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ, ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚು ಕ್ಯಾಲೊರಿ ಬರ್ನ್ ಮಾಡಲು ಸಹಕಾರಿ ಆಗಿದೆ. ಹೀಗಾಗಿ ಋಣಾತ್ಮಕ ಕ್ಯಾಲೋರಿ ಆಹಾರಗಳು ತೂಕ ಇಳಿಕೆಗೆ ಪ್ರಯೋಜನ ನೀಡುತ್ತವೆ.
ತೂಕ ನಷ್ಟಕ್ಕೆ ಋಣಾತ್ಮಕ ಅಂದರೆ ನಕಾರಾತ್ಮಕ ಕ್ಯಾಲೋರಿ ಆಹಾರಗಳು ಹೇಗೆ ಪ್ರಯೋಜನಕಾರಿ?
ಆಹಾರ ತಜ್ಞೆ ದೀಪ್ತಿ ಲೋಕೇಶಪ್ಪ ಅವರು, ತೂಕ ಇಳಿಕೆಗೆ ಸಹಕಾರಿಯಾಗುವ ಕೆಲವು ಆಹಾರಗಳನ್ನು ಪಟ್ಟಿ ಮಾಡಿದ್ದಾರೆ. ಈ ನೆಗೆಟಿವ್ ಕ್ಯಾಲೋರಿ ಆಹಾರಗಳು ತೂಕ ನಷ್ಟಕ್ಕೆ ಪ್ರಯೋಜನಕಾರಿ ಅಂತಾರೆ ತಜ್ಞೆ ದೀಪ್ತಿ. ಇವುಗಳ ಸೇವನೆಯು ತೂಕ ನಷ್ಟವನ್ನು ವೇಗಗೊಳಿಸುತ್ತವೆ. ಕ್ಯಾಲೋರಿ ನಷ್ಟ ಸುಲಭವಾಗುತ್ತದೆ.
ತೂಕ ನಷ್ಟಕ್ಕೆ ಋಣಾತ್ಮಕ ಅಂದ್ರೆ ನಕಾರಾತ್ಮಕ ಕ್ಯಾಲೋರಿ ಆಹಾರಗಳು ಹೀಗಿವೆ
ಲೆಟಿಸ್
ನಿಮ್ಮ ಸಲಾಡ್ ನಲ್ಲಿ ಲೆಟಿಸ್ ಸೇರಿಸಿ. ಇದು ಫೈಬರ್, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ ಹೊಂದಿದೆ. ಪೌಷ್ಟಿಕಾಂಶದ ಜೊತೆಗೆ ಲೆಟಿಸ್ 100 ಗ್ರಾಂಗೆ ಕೇವಲ 15 ಕ್ಯಾಲೊರಿ ಹೊಂದಿದೆ. ಹಾಗಾಗಿ ಇದು ತೂಕ ಇಳಿಕೆಗೆ ಸಹಕಾರಿ.
ಸೌತೆಕಾಯಿ
ಸೌತೆಕಾಯಿಯಲ್ಲಿ ಗರಿಷ್ಠ ನೀರಿದೆ. ಇದು ಖನಿಜ, ಜೀವಸತ್ವ ಮತ್ತು ಎಲೆಕ್ಟ್ರೋಲೈಟ್ ಹೊಂದಿದೆ. ಇದು ದೇಹದ ನೀರಿನ ಸಮತೋಲನ ಸುಧಾರಿಸುತ್ತದೆ. ಇದು 100 ಗ್ರಾಂಗೆ ಸುಮಾರು 16 ಕ್ಯಾಲೊರಿ ಹೊಂದಿದೆ.
ಸೇಬು
ಬೆಳಗಿನ ಉಪಾಹಾರಕ್ಕೆ ಸೇಬು ಸೇರಿಸಿ. ಇದು 100 ಗ್ರಾಂಗೆ ಸುಮಾರು 50 ಕ್ಯಾಲೊರಿ ಹೊಂದಿದೆ. ಫೈಬರ್ ಹೊಂದಿದೆ. ಸೇಬುಗಳಲ್ಲಿ ಪೆಕ್ಟಿನ್ ಇದೆ. ಇದು ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಇದು ರಕ್ತದ ಸಕ್ಕರೆ ಮಟ್ಟ ಸಮತೋಲನದಲ್ಲಿಡುತ್ತದೆ.
ಚೀನೀಕಾಯಿ
ಥೇಟ್ ಕುಂಬಳಕಾಯಿಯಂತೆ ಕಾಣುವ ಚೀನೀಕಾಯಿ 100 ಗ್ರಾಂಗೆ 18 ಕ್ಯಾಲೊರಿ ಹೊಂದಿದೆ. ಇದು ದೇಹದಲ್ಲಿ ಕೆರಳಿಸುವ ಕರುಳಿನ ಸಹಲಕ್ಷಣಗಳನ್ನು ಶಮನಗೊಳಿಸುತ್ತದೆ. ದೇಹದಲ್ಲಿ ನೀರಿನ ಸಮತೋಲನಕ್ಕೆ ಸಹಕಾರಿ.
ಟೊಮೆಟೊ
100 ಗ್ರಾಂ ಟೊಮೆಟೊ 19 ಕ್ಯಾಲೊರಿ ಹೊಂದಿದೆ. ಇದು ರಸಭರಿತ ಮತ್ತು ರುಚಿಕರ ಹಣ್ಣು. ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಪೌಷ್ಟಿಕಾಂಶದ ಫೈಬರ್ನ ಉತ್ತಮ ಮೂಲ ಇದಾಗಿದೆ.
ಬ್ರೊಕೊಲಿ
100 ಗ್ರಾಂ ಬ್ರೊಕೊಲಿಯಲ್ಲಿ 34 ಕ್ಯಾಲೊರಿಗಳಿವೆ. ಇದೊಂದು ಸೂಪರ್ ಫುಡ್ ಆಗಿದೆ. ಫೈಬರ್ ಮತ್ತು ಉತ್ಕರ್ಷಣ ನಿರೋಧಕ ಹೊಂದಿದೆ. ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ.
ಇದನ್ನೂ ಓದಿ: ನಿಮಗೆ 30 ವರ್ಷ ದಾಟಿದೆಯಾ? ಕಡ್ಡಾಯವಾಗಿ ಈ ಕೆಲಸ ಮಾಡಿ
ಕ್ಯಾರೆಟ್
100 ಗ್ರಾಂ ಕ್ಯಾರೆಟ್ ನಲ್ಲಿ 41 ಕ್ಯಾಲೋರಿಗಳಿವೆ. ಕೊಲೆಸ್ಟ್ರಾಲ್ ಮತ್ತು ಸ್ಯಾಚುರೇಟೆಡ್ ಕೊಬ್ಬಿನಂಶ, ಹೆಚ್ಚಿನ ಫೈಬರ್ ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ