Face Care: ಮುಲ್ತಾನಿ ಮಿಟ್ಟಿ ಫೇಸ್​ ಪ್ಯಾಕ್ ಹಳೆಯ ವಿಧಾನವಾದ್ರೂ ಈ ಸಮಸ್ಯೆಗಳಿಗೆ ಅದೇ ಮದ್ದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ಮುಲ್ತಾನಿ ಮಿಟ್ಟಿ ಬಳಕೆ ಮಾಡಲಾಗುತ್ತದೆ. ಪ್ರತಿ ಬಾರಿ ಪಾರ್ಲರ್ ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳಲು ಆಗಲ್ಲ. ಹೀಗಿರುವಾಗ ನೀವು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಹಾಕಿದರೆ ನ್ಯಾಚುರಲ್ ಆಗಿ ನಿಮ್ಮ ತ್ವಚೆಯ ಆರೈಕೆಗೆ ಇದು ಸಹಾಯ ಮಾಡುತ್ತದೆ.

  • Share this:

    ಮುಖದ ಆರೈಕೆಗೆ (Face Care) ಹಲವು ರೀತಿಯ ಪ್ರಯತ್ನಗಳನ್ನು ಮಹಿಳೆಯರು (Women’s) ಮಾಡುತ್ತಲೇ ಇರುತ್ತಾರೆ. ತುಂಬಾ ಮಹಿಳೆಯರಿಗೆ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ (Multani Mitti Face Pack) ಬಗ್ಗೆ ತಿಳಿದಿದೆ. ಇನ್ನು ಕೆಲವರಿಗೆ ತಿಳಿದಿಲ್ಲ. ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಅನ್ವಯಿಸುವುದು ತ್ವಚೆಯನ್ನು ಚೆನ್ನಾಗಿರಿಸುತ್ತದೆ. ಜೊತೆಗೆ ತ್ವಚೆಯ ಆರೈಕೆಗೆ (Skin Care) ಮುಲ್ತಾನಿ ಮಿಟ್ಟಿ ತುಂಬಾ ಪ್ರಯೋಜನಕಾರಿ (Beneficial) ಆಗಿದೆ. ಮುಲ್ತಾನಿ ಮಿಟ್ಟಿ ಬಳಕೆ ಇಂದು ನಿನ್ನೆಯದ್ದಲ್ಲ. ನಮ್ಮ ಅಜ್ಜಿಯರ ಕಾಲದಿಂದಲೂ ಇದರ ಬಳಕೆ ಇದೆ. ಮುಲ್ತಾನಿ ಮಿಟ್ಟಿಯನ್ನು ತ್ವಚೆಯ ಅಂದಕ್ಕೆ ಮತ್ತು ಕಲೆ ರಹಿತ ಚರ್ಮ ಪಡೆಯಲು ಬಳಕೆ ಮಾಡಲಾಗುತ್ತಿತ್ತು.


    ತ್ವಚೆಯ ಆರೈಕೆಗೆ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್


    ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ಮುಲ್ತಾನಿ ಮಿಟ್ಟಿ ಬಳಕೆ ಮಾಡಲಾಗುತ್ತದೆ. ಇದು ಸಾಕಷ್ಟು ಪ್ರಯೋಜನ ತಂದು ಕೊಡುತ್ತದೆ. ಪ್ರತಿ ಬಾರಿ ಪಾರ್ಲರ್ ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳಲು ಆಗಲ್ಲ. ಹೀಗಿರುವಾಗ ನೀವು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಹಾಕಿದರೆ ನ್ಯಾಚುರಲ್ ಆಗಿ ನಿಮ್ಮ ತ್ವಚೆಯ ಆರೈಕೆಗೆ ಇದು ಸಹಾಯ ಮಾಡುತ್ತದೆ. ಪಾರ್ಲರ್ ಗೆ ಹೋಗುವುದು ತುಂಬಾ ದುಬಾರಿ.


    ಹಾಗಾಗಿ ನೀವು ಮನೆಯಲ್ಲೇ ನ್ಯಾಚುರಲ್ ಆಗಿ ತ್ವಚೆಯ ಆರೈಕೆ ಮಾಡಬಹುದು. ಮುಖದ ಮೇಲೆ ಹೆಚ್ಚು ರಾಸಾಯನಿಕಯುಕ್ತ ವಸ್ತುಗಳ ಅನ್ವಯಿಸುವುದು ತ್ವಚೆಯನ್ನು ಬೇಗ ಹಾಳು ಮಾಡುತ್ತದೆ.




    ರಾಸಾಯನಿಕ ಮುಕ್ತ ಮುಲ್ತಾನಿ ಮಿಟ್ಟಿ


    ಮುಲ್ತಾನಿ ಮಿಟ್ಟಿ ಅಗ್ಗದ ಮತ್ತು ರಾಸಾಯನಿಕ ಮುಕ್ತ ಪದಾರ್ಥವಾಗಿದೆ. ಇದು ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಅಲ್ಯೂಮಿನಿಯಂ ಮೆಗ್ನೀಸಿಯಮ್ ಸಿಲಿಕೇಟ್‌ನಲ್ಲಿ ಸಮೃದ್ಧವಾಗಿದೆ ಮುಲ್ತಾನಿ ಮಿಟ್ಟಿ. ಇದು ಒಂದು ರೀತಿಯ ಜೇಡಿಮಣ್ಣು ಆಗಿದೆ.


    ಮುಲ್ತಾನಿ ಮಿಟ್ಟಿ ಪಾಕಿಸ್ತಾನದ ನಗರ ಮುಲ್ತಾನ್‌ನಿಂದ ಬಂದಿದೆ. ಹೀಗಾಗಿ ಇದಕ್ಕೆ ಮುಲ್ತಾನಿ ಮಿಟ್ಟಿ ಎಂದು ಕರೆಯುತ್ತಾರೆ. ಈ ಜೇಡಿಮಣ್ಣು ಅನೇಕ ಗಿಡಮೂಲಿಕೆಗಳ ಗುಣ ಹೊಂದಿದೆ. ಇದು ಚರ್ಮ ಮತ್ತು ಕೂದಲು ಆರೈಕೆಗೆ ಸಹಕಾರಿ.


    ಮುಲ್ತಾನಿ ಮಿಟ್ಟಿ ಎಣ್ಣೆಯುಕ್ತ ಚರ್ಮದ ಆರೈಕೆಗೆ ಸಹಕಾರಿ


    ಮುಲ್ತಾನಿ ಮಿಟ್ಟಿ ಚರ್ಮವನ್ನು ತಂಪಾಗಿಸುತ್ತದೆ. ಇದು ಎಣ್ಣೆಯುಕ್ತ ಮತ್ತು ಮೊಡವೆ ಪೀಡಿತ ಚರ್ಮಕ್ಕೆ ಆರೈಕೆ ನೀಡುತ್ತದೆ. ಚರ್ಮದ ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ. ಮಾಲಿನ್ಯದಿಂದ ಹಾನಿಗೊಳಗಾದ ಚರ್ಮವನ್ನು ಸ್ವಚ್ಛಗೊಳಿಸುತ್ತದೆ.


    ಮುಲ್ತಾನಿ ಮಿಟ್ಟಿ ಎಕ್ಸ್‌ಫೋಲಿಯೇಟಿಂಗ್ ಗುಣಲಕ್ಷಣ ಹೊಂದಿದ್ದು, ಚರ್ಮವನ್ನು ಇನ್ನಷ್ಟು ಟೋನ್ ಮಾಡುತ್ತದೆ. ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ರಿಮೂವ್ ಮಾಡುತ್ತದೆ.


    ಸಾಂದರ್ಭಿಕ ಚಿತ್ರ


    ಮುಲ್ತಾನಿ ಮಿಟ್ಟಿಯಲ್ಲಿ ಉರಿಯೂತ ನಿವಾರಕ ಗುಣವಿದೆ. ತ್ವಚೆಯಲ್ಲಿರುವ ಎಣ್ಣೆಯಂಶ ತೆಗೆದು ಹಾಕುತ್ತದೆ. ಚರ್ಮದ ರಂಧ್ರಗಳನ್ನು ಮುಚ್ಚುತ್ತದೆ. ಮೊಡವೆ ಹೋಗಲಾಡಿಸುತ್ತದೆ. ಸನ್ಬರ್ನ್ ತೆಗೆದು ಹಾಕುತ್ತದೆ.


    ಮುಲ್ತಾನಿ ಮಿಟ್ಟಿಯಲ್ಲಿ ತ್ವಚೆಯನ್ನು ತಂಪಾಗಿಸುವ ಅಂಶವಿದೆ. ಮುಲ್ತಾನಿ ಮಿಟ್ಟಿಗೆ ರೋಸ್ ವಾಟರ್ ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ ಅನ್ವಯಿಸುವುದು ಉತ್ತಮ ಫೀಲ್ ನೀಡುತ್ತದೆ. ಇದು ಎಣ್ಣೆಯುಕ್ತ ಚರ್ಮ ಸಮಸ್ಯೆ ಹೋಗಲಾಡಿಸುತ್ತದೆ.


    ಒಣ ತ್ವಚೆ ಇರುವವರು ಮುಲ್ತಾನಿ ಮಿಟ್ಟಿ ನೇರವಾಗಿ ಅನ್ವಯಿಸುವುದನ್ನು ತಪ್ಪಿಸಿ. ಕೆಲವು ಪದಾರ್ಥ ಬೆರೆಸಿ ಅನ್ವಯಿಸಿ.


    ಇದನ್ನೂ ಓದಿ: ಈ ಪದಾರ್ಥಗಳ ಸೇವನೆಯಿಂದ ಆಸಿಡಿಟಿ ಸಮಸ್ಯೆ ಹೆಚ್ಚುತ್ತದೆ, ಹುಷಾರು!


    ಚರ್ಮದ ಆರೈಕೆಗೆ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್


    1/4 ಕಪ್ ಹಾಲು, ರೋಸ್ ವಾಟರ್, 1 ಟೀಸ್ಪೂನ್ ಮುಲ್ತಾನಿ ಮಿಟ್ಟಿ ಪುಡಿ ತೆಗೆದುಕೊಳ್ಳಿ. ಎಲ್ಲಾ ಪದಾರ್ಥಗಳನ್ನು ಚಿಕ್ಕ ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತ್ವಚೆಗೆ ಅನ್ವಯಿಸಿ. ಸ್ವಲ್ಪ ಹೊತ್ತಿನ ನಂತರ ಉಗುರು ಬೆಚ್ಚಗಿನ ಶುದ್ಧ ನೀರಿನಿಂದ ತೊಳೆದು, ಚೆನ್ನಾಗಿ ಒರೆಸಿಕೊಳ್ಳಿ.

    Published by:renukadariyannavar
    First published: