Savings Tips: ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಸರ್ಕಾರದಿಂದ-ಬೆಂಬಲಿತವಾದ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಇದು ನಿವೃತ್ತಿ ಉಳಿತಾಯದಂತಹ ದೀರ್ಘಾವಧಿಯ ಉದ್ದೇಶಗಳಿಗಾಗಿ ಸ್ಥಿರ ಪಾವತಿ ಹೊಂದಿರುವ ಸ್ವತ್ತುಗಳಲ್ಲಿ ಅಪಾಯರಹಿತವಾಗಿ ಹೂಡಿಕೆ ಮಾಡಬಹುದಾಗಿದೆ. PPF ಮಧ್ಯಮ ಆದಾಯ ನೀಡುತ್ತದೆ ಮತ್ತು ತೆರಿಗೆ ಪ್ರಯೋಜನಗಳು, ತೆರಿಗೆ ವಿನಾಯಿತಿ ಮತ್ತು ಬಂಡವಾಳದ ಭದ್ರತೆ ಒಳಗೊಂಡಿದೆ. ಆದಾಯ ತೆರಿಗೆ ಕಾಯ್ದೆಯಲ್ಲಿ ಗಳಿಸಿದ ಬಡ್ಡಿ ಹಾಗೂ ರಿಟರ್ನ್ಗಳಿಗೆ ತೆರಿಗೆ ವಿಧಿಸಲಾಗುವುದಿಲ್ಲ. ಪಿಪಿಎಫ್ ಮೇಲೆ ನೀಡಲಾಗುವ ಬಡ್ಡಿದರವು ಇದೇ ಅವಧಿಯ ಇತರ ಹೂಡಿಕೆ ಉತ್ಪನ್ನಗಳಿಗಿಂತ ಹೆಚ್ಚಿನದಾಗಿದ್ದು, ಅದು ಖಾತರಿಯ ಲಾಭ ನೀಡುತ್ತದೆ. ಪಿಪಿಎಫ್ ಹೂಡಿಕೆಯನ್ನು ಒಟ್ಟು ಮೊತ್ತದಲ್ಲಿ ಅಥವಾ ಗರಿಷ್ಠ 12 ಕಂತುಗಳಲ್ಲಿ ಮಾಡಬಹುದು. ಅನುಮತಿಸಲಾದ ಕನಿಷ್ಠ ಹೂಡಿಕೆಯು 500ರೂ. ಮತ್ತು ಗರಿಷ್ಠ ಪ್ರತಿ ಆರ್ಥಿಕ ವರ್ಷಕ್ಕೆ 1.5 ಲಕ್ಷ ರೂ. ಆಗಿದೆ. ಪ್ರಸ್ತುತ ಬಡ್ಡಿ ದರ 7.1% ಮತ್ತು PPF ಖಾತೆಯ ಅವಧಿ 15 ವರ್ಷಗಳಾಗಿವೆ.
ಪಿಪಿಎಫ್ನಲ್ಲಿ ಸರಿಯಾಗಿ ಮತ್ತು ಸ್ಥಿರ ಹೂಡಿಕೆ ಮಾಡಿದರೆ, ಉಳಿತಾಯದ ಸಮಯದಲ್ಲಿ ಒಂದು ಕೋಟಿ ಅಥವಾ ಇನ್ನೂ ಹೆಚ್ಚಿನದನ್ನು ಸಂಗ್ರಹಿಸಬಹುದು. ಹೂಡಿಕೆದಾರರು ಮಾಡಬೇಕಾಗಿರುವುದು ತಮ್ಮ ಪಿಪಿಎಫ್ ಖಾತೆಯನ್ನು 15 ವರ್ಷಗಳ ಮೆಚ್ಯೂರಿಟಿ ಅವಧಿಯ ನಂತರ ವಿಸ್ತರಿಸುವುದು ಮತ್ತು 1 ಕೋಟಿ ರೂ. ಗುರಿ ತಲುಪಲು ನಿರಂತರವಾಗಿ ಹೂಡಿಕೆ ಮಾಡುವುದನ್ನು ಮುಂದುವರಿಸುವುದಾಗಿದೆ.
ಪಿಪಿಎಫ್ ಕ್ಯಾಲ್ಕುಲೇಟರ್
ಪಿಪಿಎಫ್ನಿಂದ 1 ಕೋಟಿ ರೂ. ಸಂಗ್ರಹಿಸಲು, ಹೂಡಿಕೆದಾರರಿಗೆ ತಾಳ್ಮೆ ಅಗತ್ಯವಿದೆ. ಅದೇ ರೀತಿ ಪ್ರಸ್ತುತ 7.1 ಶೇಕಡಾ ಬಡ್ಡಿದರದಲ್ಲಿ 25 ವರ್ಷಗಳ ಕಾಲ ನಿಯಮಿತವಾಗಿ ಹೂಡಿಕೆ ಮಾಡಬೇಕು. ಒಬ್ಬ ವ್ಯಕ್ತಿ ಪಿಪಿಎಫ್ ಖಾತೆಯಲ್ಲಿ 7.1% ದರದಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂ.ಗಳನ್ನು ಹೂಡಿಕೆ ಮಾಡುತ್ತಾರೆ ಎಂದಾದಲ್ಲಿ, ಅವರು ಕೋಟ್ಯಧಿಪತಿಯಾಗಲು ತೆಗೆದುಕೊಳ್ಳುವ ಸಮಯ 25 ವರ್ಷಗಳಾಗಿವೆ.
ಹಣವನ್ನು ದೀರ್ಘಾವಧಿಯವರೆಗೆ ಹೂಡಿಕೆ ಮಾಡಿದಲ್ಲಿ ಇದು ನಿರಂತರವಾಗಿ ಅಭಿವೃದ್ಧಿಯಾಗುತ್ತಿರುತ್ತದೆ. ಉದಾಹರಣೆಗೆ ಪ್ರತಿ ತಿಂಗಳಿಗೆ ರೂ 12,500 ರಂತೆ ಹೂಡಿಕೆ ಮಾಡಿದರೆ ಇಲ್ಲವೇ ವರ್ಷಕ್ಕೆ 1.5 ಲಕ್ಷದಂತೆ ಹೂಡಿಕೆ ಮಾಡಿದಲ್ಲಿ ಇದೇ ಮೊತ್ತವನ್ನು 15 ವರ್ಷಗಳವರೆಗೆ ಮುಂದುವರಿಸಿದಲ್ಲಿ ಮೆಚ್ಯುರಿಟಿಯ ಸಮಯದಲ್ಲಿ 40.6 ಲಕ್ಷವನ್ನು ಗಳಿಸಬಹುದು ಇನ್ನು ಹೂಡಿಕೆಯ ಸಮಯಾವಧಿಯಲ್ಲಿ ಬಡ್ಡಿಯು 7.1%ನಂತೆ ಉಳಿಯುತ್ತದೆ.
ಇದೇ ಖಾತೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಿದಲ್ಲಿ, 1.5 ಲಕ್ಷವನ್ನು 20 ವರ್ಷಗಳವರೆಗೆ ಹೂಡಿಕೆ ಮಾಡಿದಲ್ಲಿ ಬಡ್ಡಿ ದರ 7.1 ಆಗಿದ್ದರೆ ಪಿಪಿಎಫ್ ಖಾತೆ ಬ್ಯಾಲೆನ್ಸ್ 66.6 ಲಕ್ಷ ರೂ ಆಗಿರುತ್ತದೆ. 5 ವರ್ಷಗಳ ಅವಧಿಗೆ ಖಾತೆಯನ್ನು ಮತ್ತೊಮ್ಮೆ ವಿಸ್ತರಿಸಿದಲ್ಲಿ ಅಂದರೆ 1.5 ಲಕ್ಷವನ್ನು ಪ್ರತೀ ವರ್ಷಕ್ಕೆ ಹೂಡಿಕೆದಾರರು ಹೂಡಿಕೆ ಮಾಡಿದಲ್ಲಿ 25 ವರ್ಷಗಳ ನಂತರ 7.1% ಬಡ್ಡಿದರದಲ್ಲಿ ಪಿಪಿಎಫ್ ಖಾತೆ ಬ್ಯಾಲೆನ್ಸ್ನಲ್ಲಿರುವ ಮೊತ್ತವು 1 ಕೋಟಿಯಾಗಿರುತ್ತದೆ.
ಪಿಪಿಎಫ್ ಖಾತೆ ವಿಸ್ತರಣೆ ನಿಯಮ
ಪಿಪಿಎಫ್ ಖಾತೆಯು 15 ವರ್ಷಗಳ ಮೆಚ್ಯೂರಿಟಿ ಅವಧಿಯನ್ನು ಹೊಂದಿದೆ, ಆದರೆ 15ನೇ ವರ್ಷದಲ್ಲಿ ಖಾತೆ ತೆರೆಯುವ ಸಮಯದಲ್ಲಿ ಪಿಪಿಎಫ್ ವಿಸ್ತರಣಾ ನಮೂನೆಯನ್ನು ಸಲ್ಲಿಸಬೇಕು ಹಾಗೂ ಹೂಡಿಕೆ ಆಯ್ಕೆ ಇರುವ ಬಡ್ಡಿಯನ್ನು ಆರಿಸಬೇಕು. ಈ ಮೂಲಕ ಪಿಪಿಎಫ್ ಖಾತೆ ವಿಸ್ತರಿಸಬಹುದಾಗಿದೆ. ಒಬ್ಬರು 5 ವರ್ಷಗಳ ಅವಧಿಯಲ್ಲಿ ಪಿಪಿಎಫ್ ಖಾತೆಯನ್ನು ಮಿತಿಯಿಲ್ಲದ ಸಮಯದವರೆಗೆ ವಿಸ್ತರಿಸಬಹುದು.
ಪಿಪಿಎಫ್ ತೆರಿಗೆ ಪ್ರಯೋಜನಗಳು:
ಪಿಪಿಎಫ್ ಖಾತೆಯು ವಿನಾಯಿತಿ-ವಿನಾಯಿತಿ-ವಿನಾಯಿತಿ (EEE) ವರ್ಗಕ್ಕೆ ಒಳಪಡುತ್ತದೆ, ಇಲ್ಲಿ ಒಬ್ಬ ವ್ಯಕ್ತಿಯ ಹೂಡಿಕೆಯು ವರ್ಷಕ್ಕೆ 1.5 ಲಕ್ಷದವರೆಗೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುತ್ತದೆ. ಇದಲ್ಲದೇ, ಪಿಪಿಎಫ್ ಬಡ್ಡಿ ದರ ಮತ್ತು ಪಿಪಿಎಫ್ ಮೆಚ್ಯೂರಿಟಿ ಮೊತ್ತವನ್ನು ಯಾವುದೇ ರೀತಿಯ ಆದಾಯ ತೆರಿಗೆ ಮುಂದುವರಿಕೆಯಿಂದ ವಿನಾಯಿತಿ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ