Drinking Water: ನಾವು ಸೇವಿಸುವ ನೀರು ಎಷ್ಟು ಪ್ರಮಾಣದಲ್ಲಿರಬೇಕು? ಏನು ಹೇಳುತ್ತೆ ಆಯುರ್ವೇದ

ದೇಹದ ಆರೋಗ್ಯದ ವಿಷಯದಲ್ಲಿ ಹಿತಮಿತವಾಗಿ ನೀರು ಸೇವಿಸುವುದು ಮಹತ್ವಪೂರ್ಣವಾದುದಾಗಿದೆ. ನೀರು ಪ್ರತಿಯೊಂದು ರೋಗಕ್ಕೂ ಔಷಧವಾಗಿದೆ ಎಂಬುದು ನಮ್ಮ ಹಿರಿಯರ ಕಾಲದಿಂದಲೂ ಕೇಳುತ್ತಿರುವ ಮಾತಾಗಿದೆ. ದಿನಂಪ್ರತಿ ನೀರು ಸೇವನೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು, ದೇಹವನ್ನು ಹೈಡ್ರೇಟ್ ಆಗಿರಿಸಲು ನೀರು ಜೀವಾಧಾರವಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ದೇಹದ ಆರೋಗ್ಯದ (Health) ವಿಷಯದಲ್ಲಿ ಹಿತಮಿತವಾಗಿ ನೀರು ಸೇವಿಸುವುದು ಮಹತ್ವಪೂರ್ಣವಾದುದಾಗಿದೆ. ನೀರು ಪ್ರತಿಯೊಂದು ರೋಗಕ್ಕೂ ಔಷಧವಾಗಿದೆ (medicine) ಎಂಬುದು ನಮ್ಮ ಹಿರಿಯರ ಕಾಲದಿಂದಲೂ ಕೇಳುತ್ತಿರುವ ಮಾತಾಗಿದೆ. ದಿನಂಪ್ರತಿ ನೀರು ಸೇವನೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು (Health Benefit) ಹೊಂದಿದೆ. ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು, ದೇಹವನ್ನು ಹೈಡ್ರೇಟ್ ಆಗಿರಿಸಲು ನೀರು ಜೀವಾಧಾರವಾಗಿದೆ. ಆದರೆ ಆಯುರ್ವೇದ (Ayurveda) ಹೇಳುವಂತೆ ನೀರು ಸೇವನೆಯು ಕೆಲವೊಂದು ನಿಯಮಗಳನ್ನು ಅನುಸರಿಸಿದೆ ಎಂದಾಗಿದೆ. ಜೀರ್ಣಕ್ರಿಯೆಯಿಂದ ಹಿಡಿದು, ದೇಹದ ಉಷ್ಣತೆಯನ್ನು ನಿಯಂತ್ರಿಸಲು, ಪೋಷಕಾಂಶಗಳನ್ನ (Nutrient) ದೇಹಾದ್ಯಂತ ಸಾಗಿಸಲು ನೀರು (Water) ಅತ್ಯಗತ್ಯವಾದುದು.

ಬಾಯಾರಿಕೆಯಾಗುವುದು ಮೆದುಳಿನ ಸಂಕೇತ 
ನಿಮಗೆ ಬಾಯಾರಿಕೆಯಾಗುತ್ತಿರುವುದು ಮೆದುಳಿನ ಸಂಕೇತ ಎಂಬುದು ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತು? ಹೌದು ದೇಹವು ನಿರ್ಜಲೀಕರಣಗೊಂಡಿದ್ದು ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ದ್ರವಾಂಶಗಳನ್ನು ಹೊಂದಿಲ್ಲ ಎಂಬ ಸೂಚನೆಯನ್ನು ಮೆದುಳು ಬಾಯಾರಿಕೆಯ ಮೂಲಕ ನೀಡುತ್ತದೆ. ಅದಾಗ್ಯೂ ನಾವು ದಿನಂಪ್ರತಿ ಎಷ್ಟು ಲೀಟರ್ ನೀರು ಕುಡಿಯಬೇಕು ಎಂಬ ಗೊಂದಲ ನಮ್ಮಲ್ಲಿ ಇದ್ದೇ ಇರುತ್ತದೆ.

ಆಧುನಿಕ ಜೀವನಶೈಲಿಯಲ್ಲಿ ತರಾತುರಿಯಲ್ಲೇ ನಾವು ಕೆಲಸ ಮಾಡುತ್ತೇವೆ. ನೀರು ಕೂಡ ಆತುರ ಆತುರವಾಗಿ ಗಟಗಟನೆ ಕುಡಿದು ಬಿಡುತ್ತೇವೆ. ಆದರೆ ಆಯುರ್ವೇದ ಈ ವಿಧಾನವನ್ನು ತಪ್ಪು ಎಂದು ತಿಳಿಸುತ್ತದೆ. ಫ್ರಿಡ್ಜ್‌ನಿಂದ ನೇರವಾಗಿ ತಂಪು ನೀರನ್ನು ಸೇವಿಸುತ್ತೇವೆ, ಆದರೆ ದೇಹದ ಪಾದರಸದ ಮಟ್ಟ ಏರಿದ್ದಾಗ ಈ ತಣ್ಣಗಿನ ನೀರು ನಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ:  Kitchen Hacks: ಈ ವಸ್ತುಗಳನ್ನು ಫ್ರಿಡ್ಜ್​ನಲ್ಲಿ ಇಡಲೇಬಾರದಂತೆ, ಇಲ್ಲಿದೆ ನೋಡಿ ಲಿಸ್ಟ್

ಆಯುರ್ವೇದ ವೈದ್ಯರಾದ ಡಾ. ರೇಖಾ ರಾಧಾಮಣಿ ನೀರನ್ನು ಹೇಗೆ ಕುಡಿಯಬೇಕು ಯಾವ ಪ್ರಮಾಣದಲ್ಲಿ ಸೇವಿಸಬೇಕು ಎಂಬ ಸಲಹೆಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಆ ಸಲಹೆಗಳೇನು ಎಂಬುದನ್ನು ಅರಿತುಕೊಳ್ಳೋಣ.

ನೀವು ಎಷ್ಟು ಪ್ರಮಾಣದಲ್ಲಿ ನೀರು ಸೇವಿಸಬೇಕು
ನೀವು ಗ್ಯಾಲನ್‌ಗಟ್ಟಲೆ ನೀರು ಸೇವಿಸಬೇಕಾಗಿಲ್ಲ. ಆಯುರ್ವೇದ ಹೇಳುವಂತೆ ನೀರು ಕೂಡ ಜೀರ್ಣವಾಗಬೇಕು ಎಂದಾಗಿದೆ. ನಿಮಗೆ ಜಾಸ್ತಿ ಬೆವರುತ್ತಿಲ್ಲ ಎಂದಾದಲ್ಲಿ, ಮಲಬದ್ಧತೆ ಸಮಸ್ಯೆ ಇದ್ದರೆ, ಬಾಯಿ ಒಣಗುತ್ತಿದ್ದರೆ, ಮೂತ್ರವು ಗಾಢ ಹಳದಿ ಬಣ್ಣದಲ್ಲಿದ್ದರೆ ನೀವು ಕಡಿಮೆ ನೀರು ಸೇವಿಸುತ್ತಿದ್ದೀರಿ ಎಂದರ್ಥವಾಗಿದೆ.

ಯಾವಾಗ ನೀರು ಸೇವಿಸಬೇಕು?
ಊಟಕ್ಕೆ ಮೊದಲು ಅಥವಾ ನಂತರ 30 ನಿಮಿಷಗಳಾದ ಬಳಿಕ ನೀರು ಸೇವಿಸಿ. ಊಟಕ್ಕೂ 30 ನಿಮಿಷಗಳ ಮುನ್ನ ಹಾಗೂ ಊಟವಾದ ಮೇಲೆ 30 ನಿಮಿಷಗಳ ತರುವಾಯ ನೀರು ಸೇವಿಸುವುದು ಆಯುರ್ವೇದ ಸೂಚಿಸುತ್ತದೆ. ಊಟದ ನಂತರ 30 ನಿಮಿಷಗಳ ತರುವಾಯ ನೀರು ಸೇವಿಸುವುದು ವಾತ ದೋಷವಿರುವ ವ್ಯಕ್ತಿಗೆ ಉತ್ತಮ ಅಂತೆಯೇ ಊಟಕ್ಕೂ 30 ನಿಮಿಷಗಳಿಗೆ ಮುನ್ನ ನೀರು ಸೇವಿಸುವುದು ಕಫ ದೋಷವಿರುವವರಿಗೆ ಉತ್ತಮ

ನೀವು ಸೇವಿಸುವ ಬೆಚ್ಚಗಿನ ನೀರಿಗೆ ಏನನ್ನು ಸೇರಿಸಬೇಕು?
ಮನೆಯಲ್ಲಿ ರೇಖಾ ಅವರು ಜೀರಿಗೆ ಸೇರಿಸಿದ ಬಿಸಿ ನೀರನ್ನು ಕಾಯಿಸಿ ಕುಡಿಯುತ್ತಾರೆ ಎಂದು ಹೇಳಿದ್ದಾರೆ. ಇನ್ನು ಬೇಸಿಗೆಯಲ್ಲಿ ಲಾವಂಚದ ಬೇರು ಹಾಕಿ ಕುದಿಸಿದ ನೀರನ್ನು ಸೇವಿಸುತ್ತಾರೆ.

ನೀರನ್ನು ಹೇಗೆ ಸೇವಿಸಬೇಕು ಮತ್ತು ಹೇಗೆ ಸೇವಿಸಬಾರದು  

  • ಕುಳಿತುಕೊಂಡಿರುವಾಗ ನೀರು ಸೇವಿಸಿ

  • ವಾತಾವರಣದ ತಾಪಮಾನಕ್ಕೆ ಅನುಗುಣವಾಗಿ ಬೆಚ್ಚಗಿನ ನೀರು ಸೇವಿಸಿ. ಫ್ರಿಡ್ಜ್‌ನಿಂದ ನೇರವಾಗಿ ತಣ್ಣಗಿನ ನೀರು ಸೇವಿಸಬೇಡಿ. ತಣ್ಣಗಿನ ನೀರು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ

  • ಮಣ್ಣಿನ ಮಡಿಕೆ, ತಾಮ್ರ, ಸ್ಟೀಲ್ ಪಾತ್ರೆಗಳಲ್ಲಿ ನೀರು ಸಂಗ್ರಹಿಸಿ. ಪೈಪ್ ಅಥವಾ ನಲ್ಲಿಗಳಿಂದ ಬರುವ ನೀರನ್ನು ನೇರವಾಗಿ ಸೇವಿಸದಿರಿ. ಸಂಗ್ರಹಿಸಿದ ನೀರನ್ನು ಮಾತ್ರವೇ ಕುಡಿಯಿರಿ.


ಇದನ್ನೂ ಓದಿ:  Weight Loss: ಗ್ರೀನ್ ಟೀ ಕುಡಿಯಿರಿ, ತೂಕ ಇಳಿಸಿಕೊಳ್ಳಿ! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

  • ಜೀರ್ಣಕ್ರಿಯೆ ಉತ್ತಮಗೊಳ್ಳಲು ಕುದಿಸಿ ಆರಿಸಿದ ನೀರು ಸೇವಿಸಿ.

  • ಬೆಳಗ್ಗೆ ಎದ್ದೊಡನೆ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸಿ

Published by:Ashwini Prabhu
First published: