Triphala Side Effects: ತ್ರಿಫಲ ಚೂರ್ಣವನ್ನು ಹೇಗೆ ತೆಗೆದುಕೊಳ್ಳಬೇಕು? ಯಾರು ತಿನ್ನಬಾರದು? ತಜ್ಞರ ಸಲಹೆ

ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು ತ್ರಿಫಲ ತೆಗೆದುಕೊಳ್ಳಲು ಸಲಹೆ ನೀಡಲಾಗುವುದಿಲ್ಲ. ತ್ರಿಫಲದ ಪದಾರ್ಥಗಳಲ್ಲಿ ಒಂದಾದ ಹರಿತಕಿ ಗರ್ಭಿಣಿಯರಲ್ಲಿ ಗರ್ಭಪಾತ ಉಂಟು ಮಾಡುತ್ತದೆ. ಯಾವುದೇ ವೈಜ್ಞಾನಿಕ ಅಧ್ಯಯನವು ಅವರ ಸುರಕ್ಷತೆ ಖಾತರಿ ಪಡಿಸುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ತ್ರಿಫಲ ಚೂರ್ಣದ (Triphala ) ಹೆಸರನ್ನು (Name) ನೀವು ಕೇಳಿಯೇ ಇರ್ತೀರಿ. ಅನೇಕ ಜನರು (People) ತಮಗೆ ಅನಾರೋಗ್ಯವಾದಾಗ (Unhealthy) ತ್ರಿಫಲ ಚೂರ್ಣ ಸೇವನೆ ಮಾಡುವುದನ್ನು ನೀವು ನೋಡಿರಬಹುದು. ವಾಸ್ತವದಲ್ಲಿ ತ್ರಿಫಲ ಚೂರ್ಣವು ಹಳೆಯ ಆಯುರ್ವೇದ (Ayurveda) ಮತ್ತು ಗಿಡಮೂಲಿಕೆಗಳ ಪರಿಹಾರ ಆಗಿದೆ. ಇದನ್ನು ಭಾರತೀಯ ನೆಲ್ಲಿಕಾಯಿ, ಬಿಭಿಟಕಿ ಮತ್ತು ಹರಿತಕಿ ಎಂಬ ಮೂರು ವಿಭಿನ್ನ ಪದಾರ್ಥಗಳಿಂದ ತಯಾರು ಮಾಡುತ್ತಾರೆ. ಇದು ಪುಡಿ, ಕ್ಯಾಪ್ಸುಲ್, ಜ್ಯೂಸ್ ಅಥವಾ ಸಾರ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಗಳಿಗೆ ಈ ಆಯುರ್ವೇದ ಮೂಲಿಕೆ ಅತ್ಯುತ್ತಮ ಚಿಕಿತ್ಸೆ ಆಗಿದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

  ತ್ರಿಫಲಾ - ಎಲ್ಲಾ ದೋಷಗಳ ನಿವಾರಣೆ

  ತ್ರಿಫಲ ಚೂರ್ಣದ ಬಗ್ಗೆ ಜೀವನಶೈಲಿ ತರಬೇತುದಾರ ಮತ್ತು ಲೇಖಕ ಲ್ಯೂಕ್ ಕಾಂಟಿಹೋ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ತ್ರಿದೋಷ ಎಂದು ಬರೆದುಕೊಂಡಿದ್ದಾರೆ. ಅಂದರೆ ಇದು ಎಲ್ಲಾ ದೋಷಗಳ ನಿವಾರಣೆಗೆ ಮುಖ್ಯವಾಗಿ ಬೇಕಾದ ಗಿಡಮೂಲಿಕೆ ಎಂದು ತಿಳಿಸಿದ್ದಾರೆ. ವೃದ್ಧರು, ರೋಗಿಗಳು, ಹದಿಹರೆಯದವರು, ಮಕ್ಕಳು ಮತ್ತು ಯುವಕರು ತ್ರಿಫಲ ಬಳಕೆ ಮಾಡಬಹುದು.

  ತ್ರಿಫಲ ಸೇವಿಸುವ ಮುನ್ನ ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಲ್ಯೂಕ್ ಕಾಂಟಿಹೋ ಸಲಹೆ ನೀಡಿದ್ದಾರೆ. ಟ್ವಿಟರ್‌ನಲ್ಲಿಯೂ ಅವರು ತ್ರಿಫಲದ ಪ್ರಯೋಜನಗಳ ಹಲವು ಬಾರಿ ತಿಳಿಸಿದ್ದಾರೆ. ಈ ಮಧ್ಯೆ ತ್ರಿಫಲದ ಎಲ್ಲಾ ಅನುಕೂಲತೆಗಳ ಹೊರತಾಗಿ, ಅದರ ಅನಾನುಕೂಲತೆಗಳ ಬಗ್ಗೆಯೂ ನೀವು ತಿಳಿದುಕೊಳ್ಳುವುದು ತುಂಬಾ ಮುಖ್ಯ ಎಂದಿದ್ದಾರೆ ಲ್ಯೂಕ್ ಕಾಂಟಿಹೋ.

  ಇದನ್ನೂ ಓದಿ: ಹಲವು ಕಾಯಿಲೆಗಳಿಗೆ ಕಾರಣವಾಗುವ ಯೂರಿಕ್ ಆಸಿಡ್ ಕಡಿಮೆ ಮಾಡಲು ಆಯುರ್ವೇದ ಪರಿಹಾರವೇನು?

  ತ್ರಿಫಲ ಜೀರ್ಣಕ್ರಿಯೆ ಸುಧಾರಿಸುತ್ತದೆ

  ಲ್ಯೂಕ್ ಕಾಂಟಿಹೋ ಅವರ ಪ್ರಕಾರ, ತ್ರಿಫಲ ಜೀರ್ಣಕ್ರಿಯೆ ಸುಧಾರಿಸುತ್ತದೆ. ಜೊತೆಗೆ ಉರಿಯೂತದ ಮತ್ತು ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ. ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದು ಹೆಚ್ಚಿದ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಇದನ್ನು ಸೇವಿಸುವ ಮೂಲಕ ನೀವು ತೂಕ ಸಹ ಕಳೆದುಕೊಳ್ಳಬಹುದು.

  ತ್ರಿಫಲ ಸೇವನೆಯ ಅನಾನುಕೂಲತೆಗಳು

  ಹೊಟ್ಟೆ ನೋವು ಮತ್ತು ಅತಿಸಾರದ ಸಮಸ್ಯೆ

  ತ್ರಿಫಲ ನೈಸರ್ಗಿಕವಾಗಿ ವಿರೇಚಕ ಗುಣ ಹೊಂದಿದೆ. ಇದು ಗ್ಯಾಸ್, ಕಿಬ್ಬೊಟ್ಟೆಯ ನೋವು ಮತ್ತು ಅತಿಸಾರ, ಸೆಳೆತ ಮತ್ತು ಹಲವಾರು ಜಠರಗರುಳಿನ ಅಡ್ಡ ಪರಿಣಾಮ ಉಂಟು ಮಾಡುವ ಸಾಧ್ಯತೆ ಹೆಚ್ಚು. ನೀವು ಯಾವ ರೀತಿಯ ತ್ರಿಫಲ ಸೇವನೆ ಮಾಡುತ್ತೀರಿ ಎಂಬುದರ ಮೇಲೆ ಅಡ್ಡ ಪರಿಣಾಮಗಳ ಬಗ್ಗೆ ಹೇಳಲಾಗುತ್ತದೆ. ಅದರ ರೋಗ ಲಕ್ಷಣಗಳು ಸೌಮ್ಯದಿಂದ ತೀವ್ರವಾಗಿರಬಹುದು.

  ಮೂಗೇಟುಗಳು ಮತ್ತು ರಕ್ತಸ್ರಾವ

  ಆಮ್ಲಾ ತ್ರಿಫಲದಲ್ಲಿ ಗಾಯದ ಹೆಚ್ಚಿನ ಅಪಾಯ ಕಂಡು ಬರುತ್ತದೆ. ಇದು ಮೂಗೇಟುಗಳು ಮತ್ತು ರಕ್ತಸ್ರಾವ ಉಂಟು ಮಾಡುವ ಒಂದು ಘಟಕಾಂಶ ಆಗಿದೆ.

  ಗರ್ಭಾವಸ್ಥೆಯಲ್ಲಿ ಹಾನಿಕಾರಕ

  ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು ತ್ರಿಫಲ ತೆಗೆದುಕೊಳ್ಳಲು ಸಲಹೆ ನೀಡಲಾಗುವುದಿಲ್ಲ. ತ್ರಿಫಲದ ಪದಾರ್ಥಗಳಲ್ಲಿ ಒಂದಾದ ಹರಿತಕಿ ಗರ್ಭಿಣಿಯರಲ್ಲಿ ಗರ್ಭಪಾತ ಉಂಟು ಮಾಡುತ್ತದೆ. ಯಾವುದೇ ವೈಜ್ಞಾನಿಕ ಅಧ್ಯಯನವು ಅವರ ಸುರಕ್ಷತೆ ಖಾತರಿ ಪಡಿಸುವುದಿಲ್ಲ. ಅಷ್ಟೇ ಅಲ್ಲ, ರಕ್ತ ತೆಳುವಾಗಿಸುವ ಔಷಧಿಗಳ ಪರಿಣಾಮ ಕಡಿಮೆ ಮಾಡುತ್ತದೆ.

  ತ್ರಿಫಲ ಬಳಸುವುದು ಹೇಗೆ?

  ತ್ರಿಫಲಕ್ಕೆ ಸಾಮಾನ್ಯವಾಗಿ ಯಾವುದೇ ಪ್ರಮಾಣಿತ ಡೋಸೇಜ್ ಇಲ್ಲ. ಪೌಡರ್, ಜ್ಯೂಸ್, ಕ್ಯಾಪ್ಸುಲ್, ಟ್ಯಾಬ್ಲೆಟ್ ಹೊರತುಪಡಿಸಿ, ಇದು ಇನ್ನೂ ಅನೇಕ ರೂಪಗಳಲ್ಲಿ ಲಭ್ಯವಿದೆ. ಸಮಸ್ಯೆಗೆ ಅನುಗುಣವಾಗಿ ತ್ರಿಫಲ ಬಳಸಬಹುದು.

  ತಜ್ಞರ ಪ್ರಕಾರ, ಗಿಡಮೂಲಿಕೆಗಳನ್ನು ಉತ್ತಮವಾಗಿ ಹೀರಿಕೊಳ್ಳಲು ತ್ರಿಫಲ ಊಟದ ನಡುವೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದನ್ನು ಊಟಕ್ಕೆ ಮೊದಲು ಬೆಚ್ಚಗಿನ ನೀರಿನಲ್ಲಿ ಬೆರೆಸಿದ ಪುಡಿಯ ರೂಪದಲ್ಲಿ ಸೇವಿಸಬಹುದು.

  ಯಾರು ತ್ರಿಫಲ ಸೇವಿಸಬಾರದು?

  ಲ್ಯೂಕ್ ಕಾಂಟಿಹೋ ಪ್ರಕಾರ, ಅಪಸ್ಮಾರ ನಿವಾರಕ ಔಷಧ ಸೇವಿಸುವವರು ತ್ರಿಫಲ ಸೇವಿಸಬಾರದು ಎಂದಿದ್ದಾರೆ. ಜೀನ್ ಮ್ಯುಟೇಶನ್ ಸಮಸ್ಯೆ ಇರುವವರು ವೈದ್ಯರನ್ನು ಸಂಪರ್ಕಿಸಿದ ನಂತರ ಸೇವಿಸಬೇಕು.

  ಇದನ್ನೂ ಓದಿ: ಮಧುಮೇಹ ನಿಯಂತ್ರಣ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಶುಂಠಿ !

  Contiho ಪ್ರಕಾರ, ನೀವು ಈ ಯಾವುದೇ ಸಮಸ್ಯೆ ಇರದಿದ್ದರೆ ನಿಮ್ಮ ಜೀವನಶೈಲಿಯಲ್ಲಿ ಸೇರಿಸಿಕೊಳ್ಳಬಹುದು. ತ್ರಿಫಲ ಸೇವನೆಯಿಂದ ಗ್ಯಾಸ್, ಅತಿಸಾರ ಕೆಲವು ಸಮಸ್ಯೆಗಳು ಬರಬಹುದು. ಇದು ದೇಹವನ್ನು ನಿರ್ವಿಷಗೊಳಿಸುವ ಸಂಕೇತವಾಗಿರಬಹುದು. ಆದರೆ ರೋಗಲಕ್ಷಣಗಳು ಮುಂದುವರಿದರೆ, ಅದರ ಸೇವನೆಯನ್ನು ತಕ್ಷಣವೇ ನಿಲ್ಲಿಸಿ.
  Published by:renukadariyannavar
  First published: