• Home
  • »
  • News
  • »
  • lifestyle
  • »
  • Child Care: ನವಜಾತ ಶಿಶುವಿಗೆ ಎಷ್ಟು ಗಂಟೆ ನಿದ್ರೆ ಬೇಕು? ಪೋಷಕರ ಗೊಂದಲಕ್ಕೆ ಉತ್ತರ ಇಲ್ಲಿದೆ

Child Care: ನವಜಾತ ಶಿಶುವಿಗೆ ಎಷ್ಟು ಗಂಟೆ ನಿದ್ರೆ ಬೇಕು? ಪೋಷಕರ ಗೊಂದಲಕ್ಕೆ ಉತ್ತರ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Babies Sleeping Tips: ಕೆಲವೊಮ್ಮೆ ಪೋಷಕರಿಗೆ ತಮ್ಮ ಶಿಶು ಅಥವಾ ಚಿಕ್ಕ ಮಗು ಎಷ್ಟು ಹೊತ್ತು ನಿದ್ರಿಸಬೇಕು ಎಂಬುದರ ಬಗ್ಗೆ ಸಾಕಷ್ಟು ಗೊಂದಲವಿರುತ್ತದೆ. ನಿಮಗೂ ಸಹ ಆ ನಿಟ್ಟಿನಲ್ಲಿ ಕೆಲ ಸಂಶಯಗಳಿದ್ದರೆ ಈ ಲೇಖನ ನಿಮ್ಮ ಹಲವು ಸಂದೇಹಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಲಿದೆ

  • Share this:

ಆಹಾರ (Food) ಎಷ್ಟು ಮುಖ್ಯವೋ ನಿದ್ದೆ (Sleep) ಎಂಬುದು ಕೂಡ ಆರೋಗ್ಯಕ್ಕೆ (Health)  ಅಷ್ಟೇ ಮುಖ್ಯವಾಗಿದೆ. ಅದರಲ್ಲೂ ಚಿಕ್ಕ ಮಕ್ಕಳಿಗಂತೂ 9Babies) ಸಾಕಷ್ಟು ಪ್ರಮಾಣದ ನಿದ್ದೆಯ ಅಗತ್ಯವಿರುತ್ತದೆ. ಹಾಗಾಗಿ ಪೋಷಕರಾದವರು ತಮ್ಮ ಚಿಕ್ಕ ಮಗುವಿಗೆ ಸಾಕಷ್ಟು ನಿದ್ರೆ ಸಿಗುವಂತೆ ಸಾಕಷ್ಟು ಜಾಗರೂಕತೆ ವಹಿಸುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಸ್ವಲ್ಪ ಬಾಲ್ಯಾವಸ್ಥೆಗೆ ಬಂದ ಮಕ್ಕಳಲ್ಲಿ ನಿದ್ರೆಯ ದಿನಚರಿ ಸಾಮಾನ್ಯವಾಗಬಹುದು ಆದರೆ ಆಗ ತಾನೇ ಹುಟ್ಟಿದ ಶಿಶು (New Born Baby) ಹಾಗೂ ಅವು ಇನ್ನೂ ಚಿಕ್ಕದಾಗಿ ಬೆಳೆಯುತ್ತಿರುವ ಸಮಯದಲ್ಲಿ ಅವುಗಳ ನಿದ್ರೆ ವಿವಿಧ ಶ್ರೇಣಿಯಲ್ಲಿರುತ್ತದೆ ಎಂಬುದಂತೂ ಸತ್ಯ.


ಹಾಗಾಗಿ ಕೆಲವೊಮ್ಮೆ ಪೋಷಕರಿಗೆ ತಮ್ಮ ಶಿಶು ಅಥವಾ ಚಿಕ್ಕ ಮಗು ಎಷ್ಟು ಹೊತ್ತು ನಿದ್ರಿಸಬೇಕು ಎಂಬುದರ ಬಗ್ಗೆ ಸಾಕಷ್ಟು ಗೊಂದಲವಿರುತ್ತದೆ. ನಿಮಗೂ ಸಹ ಆ ನಿಟ್ಟಿನಲ್ಲಿ ಕೆಲ ಸಂಶಯಗಳಿದ್ದರೆ ಈ ಲೇಖನ ನಿಮ್ಮ ಹಲವು ಸಂದೇಹಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಲಿದೆ, ಹಾಗಾಗಿ ಇದನ್ನು ಪೂರ್ಣವಾಗಿ ಓದಿ.


ಚಿಕ್ಕ ಮಕ್ಕಳಿಗೆ ಎಷ್ಟು ನಿದ್ರೆ ಬೇಕು?


ನಿಮ್ಮ ಮಗುವಿಗೆ ಎಷ್ಟು ನಿದ್ರೆ ಬೇಕು ಎಂಬಂಶವು ಅದರ ವಯಸ್ಸು ಹಾಗೂ ಇತರೆ ಕೆಲವು ಅಂಶಗಳ ಮೇಲೆ ಅವಲಂಬಿತವಾಗಿದೆ.


ಆಗತಾನೇ ಜನಿಸಿದ ಮಗು ಮೂರು ತಿಂಗಳು ಆಗುವವರೆಗೆ:ಈ ಅವಧಿಯಲ್ಲಿ ಒಂದು ಆರೋಗ್ಯವಂತ ಮಗುವಿಗೆ ಏನಿಲ್ಲವೆಂದರೂ ಕನಿಷ್ಠ 14-17 ಗಂಟೆಗಳಷ್ಟು ನಿದ್ರೆಯ ಅಗತ್ಯವಿರುತ್ತದೆ. ಕೇವಲ ಕೆಲವು ಗಂಟೆಗಳಷ್ಟೇ ಅವು ಎದ್ದಿರುತ್ತವೆ, ಅದೂ ಸಹ ಅವುಗಳಿಗೆ ಹಾಲುಣಿಸುವುದರ ಹಾಗೂ ಇತರೆ ಕೆಲವು ದೈಹಿಕ ಚಟುವಟಿಕೆಗಳನ್ನು ಮಾಡಬೇಕಾಗಿರುವುದರಿಂದ. ಸಾಮಾನ್ಯವಾಗಿ ಈ ಅವಧಿಯಲ್ಲಿ ಮಗು ರಾತ್ರಿಯೆಲ್ಲ ಹನ್ನೆರಡು ಗಂಟೆಗಳ ಕಾಲ ನಿದ್ರಿಸುತ್ತವೆ ಹಾಗೂ ದಿನದಲ್ಲಿ ಮೂರು ನಾಲ್ಕು ಬಾರಿ ಅಲ್ಪಾವಧಿಯ ನಿದ್ರೆಯನ್ನು ಮಾಡುತ್ತವೆ.


4 ರಿಂದ 6 ತಿಂಗಳುಗಳ ಮಗು:ಈ ಅವಧಿಯಲ್ಲಿ ನಿಮ್ಮ ಮಗುವಿಗೆ ಏನಿಲ್ಲವೆಂದರೂ ದಿನದಲ್ಲಿ 12-16 ಗಂಟೆಗಳ ಕಾಲ ನಿದ್ರೆಯ ಅಗತ್ಯವಿರುತ್ತದೆ. ಇದು ಸಾಮಾನ್ಯವಾಗಿ ಆರು ತಿಂಗಳುಗಳ ಕಾಲ ಹೀಗೆ ಮುಂದುವರೆಯುತ್ತದೆ.


7 ರಿಂದ 11 ತಿಂಗಳುಗಳ ಮಗು :ಈ ಅವಧಿಯಲ್ಲೂ ಸಹ ಮಗು ಮೊದಲಿನ ರೀತಿಯಲ್ಲೇ ಮಲಗುತ್ತವೆ. ಆದರೆ, ದಿನದ ಸಮಯದಲ್ಲಿ ಮುಂಚಿನಕ್ಕಿಂತ ತುಸು ಹೆಚ್ಚು ಸಮಯ ಎಚ್ಚರವಾಗಿರುತ್ತವೆ. ಆದರೂ ದಿನದ ಸಮಯದಲ್ಲಿ ಆಗಾಗ ನಿದ್ರೆಯ ಅವಶ್ಯಕತೆ ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ಮಗುವಿನ ಜನ್ಮ ಸ್ಥಿತಿಯೂ ಮುಖ್ಯ ಪಾತ್ರವಹಿಸುತ್ತದೆ ಹಾಗೂ ಅವು ಈ ಕೆಳಗಿನಂತಿವೆ.


ಅವಧಿಗೆ ಮುನ್ನ ಜನನವಾದ ಮಗು: ಈ ರೀತಿಯಲ್ಲಿ ಜನಿಸಿದ ಮಗು ದಿನದ ಬಹುತೇಕ ಸಮಯ ನಿದ್ರೆಯಲ್ಲೇ ಕಳೆಯುತ್ತವೆ. ಇದು 22 ಗಂಟೆಗಳವರೆಗೂ ವಿಸ್ತರಿಸಬಲ್ಲದು. ಅವು ಕೇವಲ ಆಹಾರಕ್ಕಾಗಿ ಆಗಾಗ ಎಚ್ಚರಗೊಳ್ಳುತ್ತಿರುತ್ತವೆ ಎಂಬುದನ್ನು ಇಲ್ಲಿ ಗಮನಿಸಬೇಕು. ಈ ಮಕ್ಕಳು ತಮ್ಮ ಸಾಮಾನ್ಯ ನಿದ್ರೆಯ ಅವಧಿಯನ್ನು ಹನ್ನೊಂದನೇ ತಿಂಗಳು ಮುಟ್ಟಿದ ಮೇಲೆ ಪಡೆಯುತ್ತಾರೆ.


ಇದನ್ನೂ ಓದಿ: ನಿಮ್ಮ ಲೈಫ್​ಸ್ಟೈಲ್​ ಈ ರೀತಿ ಬದಲಾದ್ರೆ ಮಧುಮೇಹ ಕಂಟ್ರೋಲ್ ಮಾಡ್ಬೋದು


ಹಾಲುಣಿಸುವ ಬಗೆ: ಬಾಟಲ್ ಗಳಿಂದ ಹಾಲುಣ್ಣುವ ಮಕ್ಕಳು ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ಎಚ್ಚರಗೊಳ್ಳುವುದು ಕಡಿಮೆ ಹಾಗೂ ತಾಯಿಯ ಎದೆ ಹಾಲುಣ್ಣುವ ಮಕ್ಕಳಿಗಿಂತ ತುಸು ಹೆಚ್ಚು ಅವಧಿ ನಿದ್ರಿಸುತ್ತಾರೆ. ಏಕೆಂದರೆ ಅವರಿಗೆ ಜೀರ್ಣಕ್ರಿಯೆ ವಿಳಂಬವಾಗುವುದರಿಂದ ನಿದ್ರೆ ಹೆಚ್ಚಾಗಿರುತ್ತದೆ.


ನಿದ್ರೆಯ ವೇಳಾಪಟ್ಟಿ


ಇನ್ನು ಹಲವು ಪೋಷಕರು ತಮ್ಮ ಮಕ್ಕಳಿಗೆ ನಿದ್ರಾ ವೇಳಾಪಟ್ಟಿಯನ್ನು ಹಾಕಲು ಬಯಸುತ್ತಾರೆ, ಆದರೆ ಅವರು ಹುಟ್ಟಿದ ಮೊದಲ ಎರಡು ತಿಂಗಳುಗಳ ಕಾಲ ಹೀಗೆ ಮಾಡದಿದ್ದರೆ ಉತ್ತಮ. ಈ ಸಮಯದಲ್ಲಿ ಆ ಮಕ್ಕಳಿಗೆ ಆವಾಗಾವಾಗ ಹಾಲುಣಿಸುವುದು ಮುಖ್ಯವಾಗಿರುವುದರಿಂದ ವೇಳಾಪಟ್ಟಿ ಹಾಕುವುದು ಕಷ್ಟ ಎಂದೇ ಹೇಳಬಹುದು. ಅಲ್ಲದೆ ಮಗುವೊಂದು ಹುಟ್ಟಿ ಅದಕ್ಕೆ ಒಂದು ವರ್ಷ ಆಗುವ ತನಕ ನಿದ್ರೆ ಬಲು ಮುಖ್ಯವಾಗಿರುತ್ತದೆ ಹಾಗೂ ಅವುಗಳನ್ನು ಬೆನ್ನಿನ ಮೇಲೆಯೇ ಮಲಗುವಂತೆ ಮಾಡುವುದು ಬಲು ಅವಶ್ಯಕ.
ತಾವಾಗಿಯೇ ಬದಲಾಯಿಸುತ್ತವೆ


ಇನ್ನು ಮಕ್ಕಳು ಬೆಳೆದಂತೆ ಅಂದರೆ ಅವರು ನಾಲ್ಕು ತಿಂಗಳುಗಳಷ್ಟು ಆದಾಗ ತಾವಾಗಿಯೇ ತಮ್ಮ ಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಶಕ್ತವಾಗುತ್ತವೆ. ತದನಂತರ ಅವು ಒಂಭತ್ತು ತಿಂಗಳುಗಳಷ್ಟು ಆದಾಗ ತಮ್ಮನ್ನು ತಾವು ಕೂರುವ ಭಂಗಿಯವರೆಗೂ ತಲುಪುತ್ತವೆ, ಆದರೆ ಎಲ್ಲರೂ ಇದೇ ಅವಧಿಯಲ್ಲಿ ಹೀಗೆ ಮಾಡುತ್ತಾರೆ ಎನ್ನಲಾಗುವುದಿಲ್ಲ.


ಇದನ್ನೂ ಓದಿ: ವಿಶ್ವ ಪಾರಂಪರಿಕ ತಾಣ ಎಂದು ಹೆಸರು ಪಡೆದ ಐತಿಹಾಸಿಕ ಭಾರತೀಯ ರೈಲು ನಿಲ್ದಾಣಗಳಿವು


ಚಿಕ್ಕ ಮಗು ಸಾಕಷ್ಟು ನಿದ್ರೆ ಮಾಡುತ್ತಿಲ್ಲ ಎಂದರೆ ಏನರ್ಥ


ಒಮ್ಮೊಮ್ಮೆ ನಿರೀಕ್ಷಿಸಿದ ಪ್ರಮಾಣದಷ್ಟು ನಿಮ್ಮ ಮಕ್ಕಳು ನಿದ್ರೆ ಮಾಡದಿರುವ ಸಂದರ್ಭಗಳೂ ಇರುತ್ತವೆ. ಇಂತಹ ಸಂದರ್ಭದಲ್ಲಿ ಪೋಷಕರಾದವರು ಆತಂಕಗೊಳ್ಳದೆ ಅವುಗಳ ಮೇಲೆ ನಿಗಾ ಇರಿಸಿ ಹಾಗೂ ನಂತರ ನಿಮಗೆ ಅವು ಅಲ್ಪಾವಧಿಯಷ್ಟೇ ನಿದ್ರಿಸುತ್ತಿವೆ, ಮಲಗಲು ಕಷ್ಟಪಡುತ್ತಿವೆ ಎಂದು ಖಚಿತವಾದಲ್ಲಿ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.

Published by:Sandhya M
First published: