• Home
  • »
  • News
  • »
  • lifestyle
  • »
  • Uric Acid: ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಎಷ್ಟಿರಬೇಕು? ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?

Uric Acid: ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಎಷ್ಟಿರಬೇಕು? ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯೂರಿಕ್ ಆಮ್ಲವನ್ನು ದೇಹದಿಂದ ತೆಗೆದು ಹಾಕಲಾಗಿದ್ದರೂ ಸಹ ಕೆಲವೊಮ್ಮೆ ಮೂತ್ರಪಿಂಡಗಳು ಅದನ್ನು ಮೂತ್ರದ ಮೂಲಕ ತೆಗೆದು ಹಾಕಲು ಸಾಧ್ಯ ಆಗಿರುವುದಿಲ್ಲ. ಇದು ಯೂರಿಕ್ ಆಮ್ಲವು ಹೆಚ್ಚಾಗಲು ಕಾರಣ ಆಗುತ್ತದೆ. ಪ್ಯೂರಿನ್ ಸಮೃದ್ಧ ಆಹಾರಗಳ ಅತಿಯಾದ ಸೇವನೆ ಸಾಮಾನ್ಯ ಯೂರಿಕ್ ಆಮ್ಲ ಮಟ್ಟ ಹೆಚ್ಚಿಸುತ್ತದೆ.

ಮುಂದೆ ಓದಿ ...
  • Share this:

    ಹೆಚ್ಚುತ್ತಿರುವ ಯೂರಿಕ್ ಆಸಿಡ್ (Gaining Uric Acid) ಮಟ್ಟವು ಗಂಭೀರ ಸಮಸ್ಯೆ (Serious Problem) ಉಂಟು ಮಾಡುತ್ತದೆ. ರಕ್ತದಲ್ಲಿ (Blood) ಈ ತ್ಯಾಜ್ಯ ವಸ್ತುಗಳ ಸಂಗ್ರಹ ಹೆಚ್ಚಳ ಅಥವಾ  ಶೇಖರಣೆ ಆಗುವುದು ಇದು ಕೀಲು ರೋಗ ಗೌಟ್ (Gout Disease) ಮತ್ತು ಮೂತ್ರಪಿಂಡದ ಕಲ್ಲುಗಳು (Kidney Stones) ಸೇರಿದಂತೆ ಅನೇಕ ರೋಗಗಳ ಅಪಾಯ ಹೆಚ್ಚಳ ಮಾಡುತ್ತದೆ. ಯೂರಿಕ್ ಆಮ್ಲವನ್ನು ದೇಹದಿಂದ ತೆಗೆದು ಹಾಕಲಾಗಿದ್ದರೂ ಸಹ ಕೆಲವೊಮ್ಮೆ ಮೂತ್ರಪಿಂಡಗಳು ಅದನ್ನು ಮೂತ್ರದ ಮೂಲಕ ತೆಗೆದು ಹಾಕಲು ಸಾಧ್ಯ ಆಗಿರುವುದಿಲ್ಲ. ಇದು ಯೂರಿಕ್ ಆಮ್ಲವು ಹೆಚ್ಚಾಗಲು ಕಾರಣ ಆಗುತ್ತದೆ. ಸಾಮಾನ್ಯ ಯೂರಿಕ್ ಆಮ್ಲದ ಮಟ್ಟ ಎಷ್ಟು ಇರಬೇಕು?


    ಯೂರಿಕ್ ಆಮ್ಲದ ಮಟ್ಟ ಎಷ್ಟು ಇರಬೇಕು?


    ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, ಯೂರಿಕ್ ಆಮ್ಲದ ಸಾಮಾನ್ಯ ವ್ಯಾಪ್ತಿ ಪುರುಷರಲ್ಲಿ 2.5 ರಿಂದ 7.0 mg/dL ಮತ್ತು ಮಹಿಳೆಯರಲ್ಲಿ 1.5 ರಿಂದ 6.0 mg/dL ಆಗಿರಬೇಕು. ಇದರ ಮಟ್ಟವು ಪುರುಷರಲ್ಲಿ 7.0 mg/dl ಮತ್ತು ಮಹಿಳೆಯರಲ್ಲಿ 6.0 mg/dl ಇದ್ದರೆ ಇದು ಆರೋಗ್ಯಕ್ಕೆ ಉತ್ತಮ.


    ಹೆಚ್ಚಿದ ಯೂರಿಕ್ ಆಮ್ಲದ ಮಟ್ಟವು ಪ್ಯೂರಿನ್ ಸಮೃದ್ಧ ಆಹಾರಗಳ ಅತಿಯಾದ ಸೇವನೆ, ಅಧಿಕ ತೂಕ, ಮಧುಮೇಹ ಕಾಯಿಲೆ, ಕೆಲವು ಮೂತ್ರವರ್ಧಕ ಔಷಧಗಳು ಮತ್ತು ಅತಿಯಾದ ಮದ್ಯಪಾನ ಯೂರಿಕ್ ಆಮ್ಲ ಹೆಚ್ಚಿಸಲು ಪ್ರಮುಖ ಕಾರಣಗಳು ಆಗಿವೆ. ಹೆಚ್ಚು ಬಿಯರ್, ಆಲ್ಕೋಹಾಲ್, ಹಿಟ್ಟು ಅಥವಾ ಮಾಂಸ ಬಳಸಿದರೆ ನೀವು ಈ ಸಮಸ್ಯೆ ಎದುರಿಸಬಹುದು.


    ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


    ಬಿಯರ್ ಯೂರಿಕ್ ಆಮ್ಲ ಹೆಚ್ಚಿಸಬಹುದು


    ನೀವು ಅತೀಹೆಚ್ಚು ಬಿಯರ್ ಕುಡಿಯುತ್ತಿದ್ದರೆ ನಿಮ್ಮ ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಎನ್‌ಸಿಬಿಐನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಸಂಶೋಧನೆಯಲ್ಲಿ ಒಳಗೊಂಡಿರುವ ಹೆಚ್ಚಿನ ಗೌಟ್ ರೋಗಿಗಳು ಹೆಚ್ಚು ಬಿಯರ್ ಅಥವಾ ಆಲ್ಕೋಹಾಲ್ ಸೇವಿಸಿರುತ್ತಾರೆ ಎಂದು  ಸಂಶೋಧಕರು ಹೇಳುತ್ತಾರೆ. ಬಿಯರ್‌ನಲ್ಲಿ ಪ್ಯೂರಿನ್‌ಗಳು ಅಧಿಕವಾಗಿ ಇರುವುದೇ ಇದಕ್ಕೆ ಕಾರಣ.


    ಮೊಮೊಸ್ ಹಿಟ್ಟು ಕೂಡ ಯೂರಿಕ್ ಆಮ್ಲ ಹೆಚ್ಚಿಸುತ್ತದೆ


    ಭಾರತದಲ್ಲಿ ಪ್ರಸಿದ್ಧ ಮತ್ತು ಯುವಜನರ ಪೇವರಿಟ್ ಫುಡ್ ಮೊಮೊಸ್ ಆಗಿದೆ. ಮೊಮೊಸ್ ಹಿಟ್ಟು ಯೂರಿಕ್ ಆಸಿಟ್ ಮಟ್ಟ ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ತಪ್ಪಿಸಬೇಕು. ಆಹಾರ ಬರಹಗಾರ ತರ್ಲಾ ದಲಾಲ್ ಅವರ ಪ್ರಕಾರ, ಹೆಚ್ಚು ಧಾನ್ಯಗಳನ್ನು ಸೇವಿಸಬೇಕು ಎಂದು ಹೇಳುತ್ತಾರೆ.


    ಏಕೆಂದರೆ ಅವುಗಳು ಎಲ್ಲಾ ಅಗತ್ಯ ಪೋಷಕಾಂಶ ಹೊಂದಿರುತ್ತದೆ. ಮೈದಾ ಹಿಟ್ಟು ನಿಮ್ಮ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಿಸುವ ಪೋಷಕಾಂಶಗಳಿಂದ ಕೂಡಿದೆ.


    ಕೋಳಿ ಮತ್ತು ಗೋಮಾಂಸ ಯೂರಿಕ್ ಆಮ್ಲದ ಮೂಲ


    ಚಿಕನ್ ನ್ನು ಸಾಮಾನ್ಯವಾಗಿ ಮಧ್ಯಮ ಪ್ಯೂರಿನ್ ಆಹಾರ ಎಂದು ಕರೆಯುತ್ತಾರೆ. ಆದರೆ ಇದರಲ್ಲಿರುವ ಪ್ಯೂರಿನ್ ಪ್ರಮಾಣ ಕಡಿಮೆಯಿಂದ ಹೆಚ್ಚು ಇರಬಹುದು. ನೀವು ಯೂರಿಕ್ ಆಮ್ಲದಿಂದ ಬಳಲುತ್ತಿದ್ದರೆ ಅದನ್ನು ತಪ್ಪಿಸುವುದು ಉತ್ತಮ.


    ಮೇಯೊ ಕ್ಲಿನಿಕ್ ಪ್ರಕಾರ, ಕೆಂಪು ಮಾಂಸವು ಹೆಚ್ಚಿನ ಮಟ್ಟದ ಯೂರಿಕ್ ಆಮ್ಲ ಹೊಂದಿದೆ. ಮತ್ತು ನಿಮ್ಮ ಸೇವನೆಯನ್ನು ಕಡಿಮೆ ಮಾಡಬೇಕು.


    ಹೆಚ್ಚಿದ ಯೂರಿಕ್ ಆಮ್ಲದ ಇತರೆ ಕಾರಣಗಳು ಯಾವವು?


    ಕೆಲವು ಮೂತ್ರವರ್ಧಕ ಔಷಧಗಳು, ಹೆಚ್ಚು ಮದ್ಯಪಾನ, ಜೆನೆಟಿಕ್ಸ್ ಅನುವಂಶಿಕ ಕಾಯಿಲೆ, ಹೈಪೋಥೈರಾಯ್ಡಿಸಮ್, ಬೊಜ್ಜು, ಸೋರಿಯಾಸಿಸ್, ಪ್ಯೂರಿನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರ ಹೆಚ್ಚು ತಿನ್ನುವುದು, ಮೂತ್ರಪಿಂಡ ವೈಫಲ್ಯ ಯೂರಿಕ್ ಆಮ್ಲದ ಹೆಚ್ಚಳಕ್ಕೆ ಕಾರಣ ಆಗುತ್ತದೆ.


    ಯೂರಿಕ್ ಆಮ್ಲದ ಹೆಚ್ಚಳವಿದ್ದಾಗ ಈ ರೋಗಲಕ್ಷಣಗಳು ಕಂಡು ಬರುತ್ತವೆ


    ಕೀಲು ನೋವು, ಊದಿಕೊಂಡ ಕೀಲುಗಳು, ಕೀಲುಗಳ ಸ್ಪರ್ಶಿಸಲು ಬಿಸಿಯಾವಗುವುದು, ಕೀಲುಗಳ ಸುತ್ತಲಿನ ಚರ್ಮದ ಹೊಳೆಯುವ ಬಣ್ಣ, ಬೆನ್ನು ನೋವು, ನೋವು, ಆಗಾಗ್ಗೆ ಮೂತ್ರ ವಿಸರ್ಜನೆ, ವಾಂತಿ ಅಥವಾ ವಾಕರಿಕೆ ರೋಗ ಲಕ್ಷಣಗಳು ಕಂಡು ಬರುತ್ತವೆ.


    ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


    ಯೂರಿಕ್ ಆಮ್ಲದ ಹೆಚ್ಚಳ ಕಡಿಮೆ ಮಾಡಲು ಏನು ಮಾಡಬೇಕು?


    ಯೂರಿಕ್ ಆಸಿಡ್ ಸೇವನೆ ಕಡಿಮೆ ಮಾಡಲು ಪ್ಯೂರಿನ್‌ಗಳ ಸೇವನೆ ಕಡಿಮೆ ಮಾಡಿ. ಸಕ್ಕರೆ, ಹಿಟ್ಟು ಮತ್ತು ಕೆಂಪು ಮಾಂಸ, ಆಲ್ಕೋಹಾಲ್, ಬಿಯರ್ ಸೇವನೆ ತಪ್ಪಿಸಿ. ಹೆಚ್ಚು ನೀರು ಕುಡಿಯಿರಿ. ಕಾಫಿ ಕುಡಿಯುವುದು, ತೂಕ ಇಳಿಕೆ, ರಕ್ತದ ಸಕ್ಕರೆ ನಿರ್ವಹಿಸುವುದು, ಫೈಬರ್‌ ಅಧಿಕ ಸೇವನೆ ಇತ್ಯಾದಿ ಸಹಕಾರಿ.

    Published by:renukadariyannavar
    First published: