'ಉಪ್ಪಿಗಿಂತ (Salt) ರುಚಿಯಿಲ್ಲ(Taste), ತಾಯಿಗಿಂತ (Mother) ಬಂಧುವಿಲ್ಲ' ಎಂಬ ಗಾದೆ ಮಾತೊಂದಿದೆ. ಯಾವುದೇ ಭಕ್ಷ್ಯ ಪದಾರ್ಥದಲ್ಲೂ ಉಪ್ಪು ಸ್ವಲ್ಪ ಏರುಪೇರಾದರೂ ನಾಲಿಗೆ ರುಚಿಯನ್ನು ಕೆಡಿಸುತ್ತದೆ. ಆಹಾರದ (Food) ರುಚಿಗೆ ಅಲ್ಲದೆ ಮನೆಮದ್ದಾಗಿಯು ಉಪ್ಪು ಬಹಳ ಪ್ರಯೋಜನಕಾರಿ. ಹೀಗಾಗಿಯೇ ಸಾಮಾನ್ಯವಾಗಿ ಉಪ್ಪು ಎಂದಾಕ್ಷಣ ನಮಗೆ ಆಹಾರದ ರುಚಿಯನ್ನು ನೆನಪಾಗುತ್ತದೆ. ಉಪ್ಪುನ್ನು ಆಯುರ್ವೇದದಲ್ಲಿ (Ayurveda) ದೇಹವನ್ನು (Body)ತಂಪಾಗಿಸುವ ಪಧಾರ್ಥ ಎಂದು ಹೇಳಲಾಗಿದೆ ಮತ್ತು ಇದನ್ನು ಜೀರ್ಣಕ್ರಿಯೆಗಾಗಿ ಬಳಸಲಾಗುತ್ತದೆ. ಇದು ವಾಯು ಮತ್ತು ಎದೆಯುರಿ ನಿವಾರಣೆಯಲ್ಲಿ ಇದು ತುಂಬಾ ಉಪಯೋಗಕಾರಿ. ಗಳಗಂಡ ರೋಗವನ್ನು ಗುಣಪಡಿಸಲು ಜಮ್ಮುವಿನಲ್ಲಿ ಇದನ್ನು ಬಳಸಲಾಗುತ್ತದೆ. ದಂತಮಂಜನವನ್ನು ತಯಾರಿಸಲು ಸಹ ಇದನ್ನು ಬಳಸಲಾಗುತ್ತದೆ.. ಇದಿಷ್ಟೇ ಅಲ್ಲದೆ ಉಪ್ಪಿನಿಂದ ಇನ್ನೂ ಅನೇಕ ಆರೋಗ್ಯಕಾರಿ ಪ್ರಯೋಜನಗಳು ಇವೆ. ಅದರಲ್ಲೂ ಬಹುಮುಖ್ಯವಾಗಿ ಉಪ್ಪು ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ..
ದಿನಕ್ಕೆ ನಾವು ಎಷ್ಟು ಗ್ರಾಂ ಉಪ್ಪು ಸೇವನೆ ಮಾಡಬೇಕು..
ನಾವು ಮನೆಯಲ್ಲಿ ಮಾಡುವ ಪ್ರತಿಯೊಂದು ಆಹಾರ ಪದಾರ್ಥಗಳಿಗೆ ಉಪ್ಪು ಮಾಡಿಯೇ ಮಾಡುತ್ತೇವೆ. ಉಪ್ಪಿಲ್ಲದ ಊಟ ರುಚಿಯಿರುವುದಿಲ್ಲ.. ಹೀಗಾಗಿ ಕೆಲವರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಉಪನ ತಮ್ಮ ಊಟದಲ್ಲಿ ಸೇರಿಸಿಕೊಂಡು ಸೇವನೆ ಮಾಡುತ್ತಾರೆ.. ಹೀಗಾಗಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಉಪ್ಪು ಸೇರಿಸಿ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ..
ಹಾಗಿದ್ರೆ ನಾವು ದಿನಕ್ಕೆ ಎಷ್ಟು ಉಪ್ಪು ತಿನ್ನಬೇಕು ಎಂದು ಕೆಲವರಿಗೆ ಗೊತ್ತಿಲ್ಲ.. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯವಂತ ವ್ಯಕ್ತಿಯು ಪ್ರತಿದಿನ ಗರಿಷ್ಠ ಕೇವಲ ಐದು ಗ್ರಾಂ ಉಪ್ಪು ಮಾತ್ರ ಸೇವನೆ ಮಾಡಬೇಕಂತೆ. ಗರಿಷ್ಠ ಐದು ಗ್ರಾಂ ಉಪ್ಪಿಗಿಂತ ಹೆಚ್ಚಿನ ಪ್ರಮಾಣದ ಉಪನ ಮನುಷ್ಯ ಪ್ರತಿನಿತ್ಯ ಸೇವನೆ ಮಾಡುತ್ತಾ ಹೋದರೆ ಹೃದಯಾಘಾತ ಹಾಗೂ ಅಧಿಕ ರಕ್ತದೊತ್ತಡದ ಸಮಸ್ಯೆಗಳಿಗೆ ಈಡಾಗುವ ಸಾಧ್ಯತೆ ಇರುತ್ತದೆ..
ಇದನ್ನೂ ಓದಿ: ಉಪ್ಪು ಲಕ್ಷ್ಮಿ ಸ್ವರೂಪ: ಕಲ್ಲುಪ್ಪಿನಿಂದ ಹೀಗೆ ಮಾಡಿದ್ರೆ ನಿಮ್ಮ ಮನೆಯಲ್ಲಿ ಸುಖ-ಸಂತೋಷ-ಸಂಪತ್ತು ನೆಲೆಸಲಿದೆ
ದೇಹಕ್ಕೆ ಸೋಡಿಯಂ-ಪೊಟ್ಯಾಸಿಯಮ್ ಅಗತ್ಯ..
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಬ್ಬ ವ್ಯಕ್ತಿ ಸದೃಡವಾಗಿರಲು ಆತನ ದೇಹಕ್ಕೆ ಸೋಡಿಯಂ ಹಾಗೂ ಪೊಟ್ಯಾಶಿಯಂ ಎರಡರ ಅಗತ್ಯವಿದೆ.. ಹೀಗಾಗಿ ಆತ ಪ್ರತಿನಿತ್ಯ ಊಟದಲ್ಲಿ 5ಗ್ರಾಂ ವರೆಗೂ ಉಪನ್ಯಾಸ ಸೇವಿಸಿದರೆ ಸೋಡಿಯಂ ಹಾಗೂ ಪೊಟ್ಯಾಷಿಯಂ ಎರಡನ್ನೂ ಸಮ ಪ್ರಮಾಣದಲ್ಲಿ ದೇಹಕ್ಕೆ ಸೇರಿಸಿಕೊಳ್ಳಬಹುದು. ಆದರೆ ಉಪ್ಪನ ಹೆಚ್ಚು ತಿನ್ನುವುದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಳವಾಗಿ ಮೂಳೆಗಳು ದುರ್ಬಲವಾಗುತ್ತದೆ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳಲಿದೆ.. ಅಧಿಕ ರಕ್ತದೊತ್ತಡದ ಸಮಸ್ಯೆ ಇರುತ್ತದೆ. ಅಧಿಕ ಬಿಪಿ ಸಮಸ್ಯೆ ಇದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವೂ ಹೆಚ್ಚಾಗುತ್ತದೆ.
ಹೆಚ್ಚು ಉಪ್ಪು ಸೇವನೆಯಿಂದ ಪ್ರತಿ ವರ್ಷ 30 ಲಕ್ಷ ಜನರ ಸಾವು
ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಆಘಾತಕಾರಿ ಮಾಹಿತಿ ಪ್ರಕಾರ ಅತಿ ಹೆಚ್ಚು ಉಪ್ಪು ಸೇವನೆ ಮಾಡುತ್ತಿರುವ ಜನರ ಪೈಕಿ ಪ್ರತಿ ವರ್ಷ 30 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ ಪ್ರಪಂಚದ ಹೆಚ್ಚಿನ ಜನರು ಪ್ರತಿದಿನ 9 ರಿಂದ 12 ಗ್ರಾಂ ಉಪ್ಪನ್ನು ಸೇವಿಸುತ್ತಾರೆ, ಇದು ಅಗತ್ಯಕ್ಕಿಂತ ಎರಡು ಪಟ್ಟು ಹೆಚ್ಚು. ಉಪ್ಪು ಸೇವನೆ ಕಡಿಮೆಯಾದರೆ ಸುಮಾರು 25 ಲಕ್ಷ ಜೀವಗಳನ್ನು ಉಳಿಸಬಹುದು.
ಹೆಚ್ಚು ಉಪ್ಪು ಸೇವನೆಯಿಂದ ರಕ್ತದೊತ್ತಡದ ಸಮಸ್ಯೆ ಅಧಿಕ
ಉಪ್ಪು ಸೋಡಿಯಂ ಮತ್ತು ಪೊಟ್ಯಾಷಿಯಂ ಎಂಬ ಎರಡು ಅಂಶಗಳನ್ನು ಒಳಗೊಂಡಿದ್ದು, ಸಾಮಾನ್ಯವಾಗಿ ನಾವು ಸೇವಿಸುವ ಉಪ್ಪಿನಲ್ಲಿ ಸೋಡಿಯಂ ಪ್ರಮಾಣವು ತುಂಬಾ ಹೆಚ್ಚಿರುತ್ತದೆ ಮತ್ತು ಪೊಟ್ಯಾಸಿಯಮ್ ಪ್ರಮಾಣವು ತುಂಬಾ ಕಡಿಮೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸೋಡಿಯಂ ಅನ್ನು ಹೆಚ್ಚು ಸೇವಿಸುವ ಜನರು ರಕ್ತದೊತ್ತಡಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಅಂತಹವರಿಗೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಯಾವಾಗಲೂ ಇರುತ್ತದೆ.
ಇದನ್ನೂ ಓದಿ: ಒಂದು ಚಿಟಿಕೆ ಸಮುದ್ರ ಉಪ್ಪಿನಿಂದ ಸಿಗುವ ಅನೇಕ ಪ್ರಯೋಜನಗಳನ್ನು ತಿಳಿಯಿರಿ
ಕಡಿಮೆ ಉಪ್ಪು ಸೇವನೆ ಮಾಡುವುದು ಹೇಗೆ..?
ಉಪ್ಪಿನ ಸೇವನೆ ನಮ್ಮ ದೇಹದ ಮೇಲೆ ಪರಿಣಾಮ ಬೀರುವುದರಿಂದ ನಾವು ಸೇವಿಸುವ ಆಹಾರದಲ್ಲಿ ಉಪ್ಪು ಬಳಕೆ ಬಗ್ಗೆ ಎಚ್ಚರವಹಿಸಬೇಕು.. ಹಗಾಗಿಯೇ ಆಹಾರ ತಯಾರಿಕಾ ಮೊದಲೇ ಕಡಿಮೆ ಬಳಕೆ ಮಾಡಿಕೊಳ್ಳಬೇಕು ಚಿಪ್ಸ್, ಕ್ರಿಸ್ಪ್ಸ್ ನಂತಹ ಖಾರದ ತಿಂಡಿಗಳನ್ನು ಕಡಿಮೆ ಸೇವನೆ ಮಾಡಬೇಕು.. ಅಲ್ಲದೆ ಕಡಿಮೆ ಸೋಡಿಯಂ ಆಹಾರ ಪದಾರ್ಥಗಳನ್ನು ಖರೀದಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ