ತುಪ್ಪ ಸೇವಿಸುವ ಸರಿಯಾದ ವಿಧಾನ: ಅದರಿಂದಾಗುವ ಪ್ರಯೋಜನಗಳೇನು?

ತುಪ್ಪವನ್ನು ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅನ್ನೋದು ತಿಳಿದರೆ, ಅದರಿಂದ ಸಿಗುವ ಪ್ರಯೋಜನಗಳನ್ನೂ ಸಹ ಪಡೆದುಕೊಳ್ಳಬಹುದಾಗಿದೆ.

ತುಪ್ಪ

ತುಪ್ಪ

  • Share this:
ಭಾರತೀಯ ಪಾಕ ಪದ್ಧತಿಯಲ್ಲಿ ವಿಶೇಷವಾಗಿ ಹೆಚ್ಚಾಗಿ ಬಳಸುವ ಖಾದ್ಯ ತುಪ್ಪ. ತುಪ್ಪವನ್ನು ಮೆಚ್ಚದವರು ಯಾರಿದ್ದಾರೆ ಹೇಳಿ? ಇನ್ನು ಕೆಲವರು ಇದರಲ್ಲಿ ಕೊಬ್ಬಿನ ಅಂಶಗಳು ಹೇರಳವಾಗಿದೆ ಎಂದು ನಂಬಿದ್ದಾರೆ. ಆದರೆ ಇದರಲ್ಲಿ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ತುಪ್ಪದಲ್ಲಿ ಆರೋಗ್ಯಕರ ಕೊಬ್ಬು, ವಿಟಮಿನ್ ಎ ಸೇರಿದಂತೆ ಹಲವು ಅಂಶಗಳಿವೆ. ಆಯುರ್ವೇದವು ಪರಿಶುದ್ಧವಾದ, ಕಲಬೆರಕೆಯಿಲ್ಲದ ತುಪ್ಪವನ್ನು ಸಾತ್ವಿಕ ಆಹಾರವಾಗಿ ಪರಿಗಣಿಸುತ್ತದೆ. ಕೆಲವು ಆಯುರ್ವೇದ ಔಷಧಿಗಳಲ್ಲಿ ಇದು ಪ್ರಮುಖ ಪದಾರ್ಥವಾಗಿದೆ. ಪಿತ್ತ ದೋಷ ಉಂಟಾಗುವ ಕಾಯಿಲೆಗಳಿಗೆ ತುಪ್ಪವನ್ನು ಆದ್ಯತೆಯಾಗಿ ಬಳಸಲಾಗುತ್ತದೆ.

ನ್ಯೂಟ್ರಿಷನಿಸ್ಟ್ ರುಜುತಾ ದಿವೇಕರ್ ಅವರು ಇತ್ತೀಚೆಗೆ ಇನ್‍ಸ್ಟಾಗ್ರಾಂನಲ್ಲಿ ತುಪ್ಪವನ್ನು ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಮತ್ತು ಇದರಲ್ಲಿ ಯಾವ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಎಂದು ವಿವರಿಸಿದ್ದಾರೆ.

ಎಷ್ಟು ಪ್ರಮಾಣದಲ್ಲಿ ತುಪ್ಪ ಸೇವಿಸಬೇಕು?
ನಾವು ಎಷ್ಟು ಪ್ರಮಾಣದಲ್ಲಿ ಆಹಾರವನ್ನು ತಿನ್ನುವುದನ್ನು ಆಧರಿಸಿ ನಾವು ತುಪ್ಪವನ್ನು ಸೇವಿಸಬೇಕು. ಅಕಸ್ಮಾತ್ ನೀವು ಸಿರಿಧಾನ್ಯ ಬಳಸುವುದಾದರೆ ದಾಲ್ ಮತ್ತು ಅನ್ನಕ್ಕೆ ಬಳಸುವಷ್ಟೇ ತುಪ್ಪವನ್ನೂ ಇದಕ್ಕೆ ಬಳಸಬೇಕು. ತುಪ್ಪವನ್ನು ಮುಖ್ಯವಾಗಿ ಆಹಾರದ ಪರಿಮಳವನ್ನು ಹೆಚ್ಚಿಸಲು ಬಳಸಬೇಕು. ಈ ಪ್ರಮಾಣವು ಆಹಾರದ ಪರಿಮಳವನ್ನು ಮರೆಮಾಚುವಷ್ಟು ಇರಬಾರದು ಎಂದು ರುಜುತಾ ಹೇಳುತ್ತಾರೆ.

ಇದನ್ನೂ ಓದಿ: Bigg Boss 8 Kannada: ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ಬಿಟ್ಟು ಉಳಿದವರೆಲ್ಲ ಮತ್ತೆ ನಾಮಿನೇಟ್ ಆದ್ರು..!

ತುಪ್ಪದ ಸೇವನೆಯಿಂದ ಸಿಗುವ ಪ್ರಯೋಜನಗಳು

ತುಪ್ಪವು ಅಸಂಖ್ಯಾತ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಆಯುರ್ವೇದದಲ್ಲಿ ತುಪ್ಪವನ್ನು ಔಷಧಿ ಎಂದು ಪರಿಗಣಿಸಲಾಗುತ್ತದೆ. ಇದು ಕೆಮ್ಮು ಮತ್ತು ರಕ್ತ ಸಂಚಲನವನ್ನು ಸರಿಪಡಿಸುತ್ತದೆ ಎಂದು ನಂಬಲಾಗಿದೆ. ತುಪ್ಪ ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇದು ದೇಹದಲ್ಲಿ ವಿಟಮಿನ್ ಎ ಅಂಶವನ್ನು ಹೆಚ್ಚಿಸುತ್ತದೆ, ಇದು ಕೂದಲಿನ ಉತ್ತಮ ಬೆಳವಣಿಗೆ ಮತ್ತು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: Alia Bhatt: ರಣಬೀರ್ ಕಪೂರ್​ರನ್ನು ಮಿಸ್​ ಮಾಡಿಕೊಳ್ಳುತ್ತಿರುವ ಆಲಿಯಾ ಭಟ್​ ಮಾಡಿದ್ದೇನು ಗೊತ್ತಾ..?

ತುಪ್ಪ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ಕಾರಣ, ತುಪ್ಪವು ಹೃದಯ ಸಂಬಂಧಿತ ಪ್ರಮುಖ ಕಾಯಿಲೆಗಳನ್ನು ತಡೆಯುತ್ತದೆ ಮತ್ತು ಮೆದುಳನ್ನು ಚುರುಕಾಗಿಸುತ್ತದೆ.

ಪೌಷ್ಟಿಕ ತಜ್ಞರು ಆಗಾಗ್ಗೆ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಆರೋಗ್ಯ ಮತ್ತು ಫಿಟ್ನೆಸ್​ ಸಂಬಂಧಿತ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ. ಈ ಮೊದಲು, ಅವರು ಕೆಲವು ತೂಕ ಇಳಿಸುವ ರಹಸ್ಯಗಳನ್ನು ಹಂಚಿಕೊಂಡಿದ್ದರು. ತೂಕ ನಷ್ಟವು ಕೇವಲ ತೂಕದ ಪ್ರಮಾಣದಲ್ಲಿ ಕಡಿಮೆಯಾಗುವುದರ ಬಗ್ಗೆ ಅಲ್ಲ, ಆರೋಗ್ಯಕರ ಮತ್ತು ಸಕ್ರಿಯವಾಗಿರುವುದರ ಬಗ್ಗೆಯೂ ಅವರು ವಿವರಿಸಿದರು.

ಇದನ್ನೂ ಓದಿ: Mouni Roy: ಹೈ ಸ್ಲಿಟ್​ ಡ್ರೆಸ್​ ತೊಟ್ಟು ಸ್ಮೋಕಿ ಲುಕ್​ನಲ್ಲಿ ಕಾಣಿಸಿಕೊಂಡ ಮೌನಿ ರಾಯ್​

ಇದಕ್ಕೂ ಮುನ್ನ, ಇನ್‍ಸ್ಟಾಗ್ರಾಂನಲ್ಲಿ ರುಜುತಾ ದೇಸಿ ಡೇಟ್ಸ್ ಅಥವಾ ತಾಜಾ ಖರ್ಜೂರ ಹಣ್ಣಿನ ಪ್ರಯೋಜನಗಳ ಬಗ್ಗೆ ಹಂಚಿಕೊಂಡಿದ್ದಾರೆ. ದೇಸಿ ಡೇಟ್ಸ್ ಬಗ್ಗೆ ಆರೋಗ್ಯ ಪ್ರಯೋಜನಗಳನ್ನು ವಿವರಿಸಿದ ರುಜುತಾ ಅವರು, ಎಚ್‍ಬಿ ಮತ್ತು ಶಕ್ತಿಯ ಮಟ್ಟವನ್ನು ಸುಧಾರಣೆ, ನಿದ್ರೆಯ ಕಾಯಿಲೆಗಳಿಗೆ ಚಿಕಿತ್ಸೆ, ಹೆಚ್ಚಿನ ಸೋಂಕುಗಳು ಮತ್ತು ಅಲರ್ಜಿಗೆ ಸಲಹೆಗಳನ್ನು ನೀಡಿದರು ಮತ್ತು ಮಲಬದ್ಧತೆ, ಆಮ್ಲೀಯತೆಗೆ ಪರಿಹಾರವನ್ನು ನೀಡಿದರು.


(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

Published by:Anitha E
First published: