Exercises for disabled: ವಿಶೇಷ ಚೇತನರಿಗೆ ವಿಶಿಷ್ಟ ವ್ಯಾಯಾಮ, ಅವರ ಆರೋಗಕ್ಕೆ ಇದು ಬಹಳ ಉಪಕಾರಿ!

ಅಂಗವೈಕಲ್ಯತೆಯಿಂದ ಬಳಲುತ್ತಿರುವವರಲ್ಲಿ ತಾವು ವ್ಯಾಯಾಮ ಮಾಡುವುದೇ, ಮಾಡಿದರೂ ಎಂತಹ ವ್ಯಾಯಾಮ ಮಾಡಬೇಕು ಎಂಬುದರ ಬಗ್ಗೆ ಅನೇಕ ಗೊಂದಲಗಳಿರುತ್ತವೆ. ಇಂತಹ ಗೊಂದಲಗಳಿಗೆ ಇಲ್ಲಿದೆ ಉತ್ತರ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಬ್ಬ ವ್ಯಕ್ತಿಯು ಆರೋಗ್ಯವಾಗಿರಬೇಕೆಂದರೆ ಮತ್ತು ದಿನವಿಡೀ ತುಂಬಾನೇ ಉತ್ಸಾಹದಿಂದ ಇರಬೇಕೆಂದರೆ ಪ್ರತಿದಿನ ಬೆಳಗ್ಗೆ (Morning) ವ್ಯಾಯಾಮ ಮಾಡುವುದು ತುಂಬಾ ಅಗತ್ಯವಾಗಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಎಷ್ಟು ಗಂಟೆಗಳ ಕಾಲ ವ್ಯಾಯಾಮ (Exercise) ಮಾಡಿದರೆ ದೇಹಕ್ಕೆ ಒಳ್ಳೆಯದು ಮತ್ತು ಯಾವ ತರಹದ ವ್ಯಾಯಾಮಗಳನ್ನು ಮಾಡಿದರೆ ದೇಹದ ಆರೋಗ್ಯಕ್ಕೆ ಒಳ್ಳೆಯದು ಎಂಬುದರ ಬಗ್ಗೆ ಅನೇಕ ಜನರಿಗೆ ಈಗಲೂ ಅನೇಕ ರೀತಿಯ ಗೊಂದಲಗಳಿರುತ್ತವೆ. ಅಂತೆಯೇ ನಾವು ತೆಗೆದುಕೊಳ್ಳುವ ಆಹಾರ ಸಹ ಇದಕ್ಕೆ ತುಂಬಾನೇ ಪೂರಕವಾಗುತ್ತದೆ. ಒಟ್ಟಿನಲ್ಲಿ ಒಬ್ಬ ವ್ಯಕ್ತಿ ಪೌಷ್ಟಿಕ ಆಹಾರ ಸೇವಿಸುವುದರೊಂದಿಗೆ, ಉತ್ತಮ ಜೀವನಶೈಲಿಯನ್ನು (lifestyle) ರೂಢಿಸಿಕೊಂಡು ಪ್ರತಿದಿನ ತಪ್ಪದೆ ವ್ಯಾಯಾಮ ಮಾಡಿದರೆ ಸಾಕು. ಇದರಿಂದ ನಮ್ಮ ದೈಹಿಕ ಆರೋಗ್ಯವಲ್ಲದೆ, ಮಾನಸಿಕ ಆರೋಗ್ಯವು ಸಹ ವೃದ್ದಿಸುತ್ತದೆ. ಆದರೆ ವಿಶೇಷ ಚೇತನರಿಗೆ (Disabled Person) ತಾವು ವ್ಯಾಯಾಮ ಮಾಡುವುದೇ, ಮಾಡಿದರೂ ಎಂತಹ ವ್ಯಾಯಾಮ ಮಾಡಬೇಕು ಎಂಬುದರ ಬಗ್ಗೆ ಅನೇಕ ಗೊಂದಲಗಳಿರುತ್ತವೆ.

ಆದರೆ ಯುವ ವಿಶೇಷ ಚೇತನರು ತಮ್ಮ ದೇಹವನ್ನು ಆರೋಗ್ಯವಾಗಿ ಇರಿಸಿಕೊಳ್ಳಲು, ತಮ್ಮ ಮಿತಿಗಳಲ್ಲಿಯೇ ಹೇಗೆ ಮತ್ತು ಎಷ್ಟು ವ್ಯಾಯಾಮ ಮಾಡಿದರೆ ಒಳ್ಳೆಯದು ಎಂಬುದರ ಬಗ್ಗೆ ನಾವು ತಿಳಿದುಕೊಳ್ಳೋಣ. ವಿಶೇಷ ಚೇತನರ ವ್ಯಾಯಾಮದ ಕುರಿತು ಯುಕೆ ಸಂಶೋಧನಾ ವರದಿಯನ್ನು ನೀಡಿದೆ. ಅದರಲ್ಲಿ ತನ್ನ ಮೊದಲ ದೈಹಿಕ ಚಟುವಟಿಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅದು ಯುವ ವಿಶೇಷ ಚೇತನರಿಗೆ ಕೆಲವು ಪರಿಣಾಮಕಾರಿ ಸಲಹೆಗಳನ್ನು ನೀಡಿದೆ. ವಿಶಾಲ ಶ್ರೇಣಿಯ ದೈಹಿಕ ಚಟುವಟಿಕೆಗಳೊಂದಿಗೆ 176 ವಿಭಿನ್ನ ಅಧ್ಯಯನಗಳಿಂದ ಪ್ರಮಾಣಿತ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಈ ಸಲಹೆಗಳನ್ನು 2 ರಿಂದ 17 ವರ್ಷ ವಯಸ್ಸಿನ ವಿಶೇಷ ಚೇತನ ಯುವಕರಿಗಾಗಿ ಮಾಡಲಾಗಿದೆ ಎಂದು ಯುಕೆ ತಿಳಿಸಿದೆ.

ಯುಕೆಯ ಮೊದಲ ದೈಹಿಕ ಚಟುವಟಿಕೆ ಮಾರ್ಗಸೂಚಿಗಳಲ್ಲಿ ಪಟ್ಟಿ ಮಾಡಲಾದ ಕೆಲವು ಅಂಶಗಳು:

ವಿವಿಧ ವಯೋಮಾನದವರು, ಲಿಂಗ ಮತ್ತು ಅಂಗವೈಕಲ್ಯದ ಜನರನ್ನು ಗಮನದಲ್ಲಿಟ್ಟುಕೊಂಡು ಈ ಮಾರ್ಗಸೂಚಿಗಳನ್ನು ಮಾಡಲಾಗಿದೆ. ಇವರು ಸಹ ದೈಹಿಕವಾಗಿ ಸುರಕ್ಷಿತವಾಗಿರಲು ಮತ್ತು ಸದೃಢವಾಗಿರಲು ಯುವ ವಿಶೇಷ ಚೇತನರು ವಾರಕ್ಕೆ 120 ರಿಂದ 180 ನಿಮಿಷಗಳ (2-3 ಗಂಟೆ) ದೈಹಿಕ ಚಟುವಟಿಕೆಯನ್ನು ಮಾಡುವ ಗುರಿಯನ್ನು ಹೊಂದಿರಬೇಕು. ಅವರ ಅನುಕೂಲಕ್ಕಾಗಿ, ನೀವು ಸೆಷನ್ ಅನ್ನು ದಿನಕ್ಕೆ 20 ನಿಮಿಷಗಳು ಅಥವಾ ಪ್ರತಿ ವಾರ 3 ಬಾರಿ 40 ನಿಮಿಷಗಳಾಗಿ ವಿಂಗಡಿಸಬಹುದು.

ಇದನ್ನೂ ಓದಿ: Depression: ದಿನಾ ಈ ವ್ಯಾಯಾಮ ಮಾಡಿದ್ರೆ ಖಿನ್ನತೆ ನಿಮ್ಮ ಹತ್ತಿರಕ್ಕೂ ಸುಳಿಯಲ್ವಂತೆ!

ಯಾವ ರೀತಿಯ ವ್ಯಾಯಾಮ ಮಾಡಬೇಕು?:

ಯುವ ವಿಶೇಷ ಚೇತನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮವನ್ನು ಮಾಡಬೇಕು. ಅದರಲ್ಲಿ ಪ್ರಮುಖವಾಗಿ ಏರೋಬಿಕ್ ವ್ಯಾಯಾಮಗಳಾದ ನೃತ್ಯ, ಸೈಕ್ಲಿಂಗ್, ಜಿಮ್ನಾಸ್ಟಿಕ್ಸ್ ಅಥವಾ ವೀಲ್ ಚೇರ್ ಕ್ರೀಡೆಗಳು ಹೆಚ್ಚು ಮಾಡುವುದು ಸೂಕ್ತವಾಗಿವೆ. ಈ ವ್ಯಾಯಾಮಗಳು ಕಾರ್ಡಿಯೋ ಆರೋಗ್ಯವನ್ನು ಸುಧಾರಿಸಬಹುದು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ಅವರಿಗೆ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಅವರಲ್ಲಿ ಉತ್ತಮ ಶಕ್ತಿಯನ್ನು ತುಂಬುವುದಲ್ಲದೆ, ಅವರ ಏಕಾಗ್ರಚಿತ್ತವನ್ನು ಹೆಚ್ಚಿಸಲು ಬಹಳ ಸಹಾಯ ಮಾಡುತ್ತದೆ.

ಇದನ್ನೂ ಓದಿ: Weight Loss Tips: ಬೆಳಗ್ಗೆ ವ್ಯಾಯಾಮ ಮಾಡುವ ಮೊದಲು ಆಹಾರ ತಿನ್ನಬಹುದಾ? ವೈದ್ಯರು ಹೇಳೋದೇನು ನೋಡಿ

ಸಂಯೋಶಧನಾ ವರದಿ:

250 ವಿವಿಧ ವಿಶೇಷ ಚೇತನ ಯುವಕರನ್ನು ಈ ಸಂಶೋಧನೆಗಾಗಿ ಪರಿಗಣನೆಗೆ ತೆಗೆದುಕೊಂಡಾಗ, ಅವರು ಮೋಜಿನ ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಾರೆ ಮತ್ತು ಇದು ಅವರ ಶಕ್ತಿ ವರ್ಧನೆಗೆ ಸಹಾಯ ಮಾಡುತ್ತದೆ ಎಂದು ತೀರ್ಮಾನಿಸಲಾಯಿತು. ಸಂಶೋಧನೆಯಲ್ಲಿ, ವಿಶೇಷ ಚೇತನ ಯುವ ಜನರು ನಿಯಮಿತವಾಗಿ ತಮ್ಮ ವಯಸ್ಸಿಗೆ ಅನುಗುಣವಾಗಿ ದೈಹಿಕ ಮತ್ತು ಮಾನಸಿಕ ಕಾರ್ಯವನ್ನು ಸೂಕ್ತ ಮಟ್ಟದಲ್ಲಿ ಮಾಡಿದಾಗ ಅವರ ಆರೋಗ್ಯ ಮತ್ತು ಮಾನಸಿಕ ಸ್ಥಿತಿ ಉತ್ತಮವಾಗಿರುವುದು ಕಂಡುಬಂದಿದೆ ಎಂದು ಯುಕೆ ತನ್ನ ವರದಿಯಲ್ಲಿ ತಿಳಿಸಿದೆ.
Published by:shrikrishna bhat
First published: