Weight Loss: ತೂಕ ಇಳಿಸಲು ಡಯಟ್ ಮಾಡುವ ಭರದಲ್ಲಿ ಒಂದೇ ಹೊತ್ತು ತಿನ್ನುವುದು ಎಷ್ಟು ಸರಿ?

ತೀವ್ರವಾದ ಆಹಾರ ಯೋಜನೆ ಕ್ರಮ ಅನುಸರಿಸುವುದು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಹಾನಿ ಉಂಟು ಮಾಡುತ್ತದೆ. ತೂಕ ನಷ್ಟಕ್ಕೆ ಆಹಾರ ನಿಯಂತ್ರಿಸುವುದು ಒಳ್ಳೆಯದು. ಆದರೆ ಕೆಲವರು ಆಹಾರ ಕ್ರಮದಲ್ಲಿ ಒಮ್ಮೆ ಮಾತ್ರ ಆಹಾರ ಸೇವಿಸುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚಿನ ದಿನಗಳಲ್ಲಿ (Now a Days) ಹೆಚ್ಚಿನ ಜನರು (People) ತೂಕ ಇಳಿಸಿಕೊಳ್ಳಲು (Weight Loss) ಡಯಟ್‌ (Diet), ಜಿಮ್ (Jim) ಮೊರೆ ಹೋಗುತ್ತಾರೆ. ಡಯಟ್ ಮಾಡಿದ್ರೆ ಸಾಕು. ಬೇರೆ ಏನನ್ನೂ ಮಾಡದೆ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಬಹುದು ಎಂದು ಜನರು ಭಾವಿಸುತ್ತಾರೆ. ಆದರೆ ಮಿತಿ ಮೀರಿದ ಆಹಾರ ಕ್ರಮವು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ನೀವು ಆಹಾರವನ್ನು ಆರೋಗ್ಯಕರ ರೂಪಕ್ಕೆ ಪರಿವರ್ತಿಸಿದರೆ ತಾನಾಗಿಯೇ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಕೆಲವರು ಡಯಟ್ ಮಾಡುವ ಭರದಲ್ಲಿ ಕೇವಲ ಒಂದೇ ಹೊತ್ತು ಆಹಾರ ಸೇವನೆ ಮಾಡುತ್ತಾರೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಎಂದು ತಿಳಿಯುತ್ತಾರೆ.

  ಆಹಾರ ಕ್ರಮದಲ್ಲಿ ಒಮ್ಮೆ ಮಾತ್ರ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕರ

  ತೀವ್ರವಾದ ಆಹಾರ ಯೋಜನೆ ಕ್ರಮ ಅನುಸರಿಸುವುದು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಹಾನಿ ಉಂಟು ಮಾಡುತ್ತದೆ. ತೂಕ ನಷ್ಟಕ್ಕೆ ಆಹಾರ ನಿಯಂತ್ರಿಸುವುದು ಒಳ್ಳೆಯದು. ಆದರೆ ಕೆಲವರು ಆಹಾರ ಕ್ರಮದಲ್ಲಿ ಒಮ್ಮೆ ಮಾತ್ರ ಆಹಾರ ಸೇವಿಸುತ್ತಾರೆ. ದೀರ್ಘಕಾಲ ಹೀಗೆ ಮಾಡುವುದರಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

  ದಿನದಲ್ಲಿ ಸಾಕಷ್ಟು ಆಹಾರ ಸೇವನೆ ಮಾಡಿದ ನಂತರ, ಸಂಜೆ ಖಂಡಿತವಾಗಿ ಲಘು ಆಹಾರ ಸೇವಿಸಿ. ನೀವು ದೀರ್ಘ ಕಾಲದವರೆಗೆ ಒಂದೇ ಆಹಾರ ಸೇವಿಸಿದರೆ, ಅದು ದೇಹದಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಗೆ ಕಾರಣ. ಆರೋಗ್ಯಕರ ದೇಹಕ್ಕೆ ಸಾಕಷ್ಟು ತಿನ್ನುವುದು ತುಂಬಾ ಮುಖ್ಯ. ಇದು ನಿಮ್ಮನ್ನು ದೀರ್ಘಕಾಲ ಆರೋಗ್ಯವಾಗಿರಿಸುತ್ತದೆ.

  ಇದನ್ನೂ ಓದಿ: ಮಹಿಳೆಯರನ್ನು ಹೆಚ್ಚು ಬಾಧಿಸುವ ಮೈಗ್ರೇನ್ ಗೆ ಕಾರಣಗಳು ಮತ್ತು ಪರಿಹಾರ ಹೇಗೆ?

  ಕ್ರ್ಯಾಶ್ ಡಯಟ್ ದೇಹದ ಮೇಲೆ ತುಂಬಾ ಅಡ್ಡ ಪರಿಣಾಮ ಬೀರುತ್ತದೆ. ಹೆಚ್ಚು ಹೊತ್ತು ತಿನ್ನದೇ ಇರುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಅನಾನುಕೂಲತೆಗಳು ಹಾಗೂ ವೇಟ್ ಲಾಸ್ ಗೆ ಯಾವ ಪರಿಣಾಮ ಬೀರುತ್ತದೆ ಎಂದು ನೋಡೋಣ.

  ಒಂದೇ ಊಟ ತಿನ್ನುವ ಅನಾನುಕೂಲತೆಗಳು

  ನೀವು ದಿನಕ್ಕೆ ಒಂದೇ ಬಾರಿ ಊಟ ತಿಂದರೆ ಅದು ನಿಮ್ಮನ್ನ ವೀಕ್ ಆಗಿಸುತ್ತದೆ. ದೀರ್ಘ ಕಾಲ ತಿನ್ನದೇ ಇದ್ದರೆ ಅದು ಕಡಿಮೆ ತೂಕಕ್ಕೆ ಕಾರಣವಾಗಬಹುದು. ಇದು ದೌರ್ಬಲ್ಯ ಮತ್ತು ಆಯಾಸಕ್ಕೆ ಕಾರಣ. ನೀವು ಶೀಘ್ರದಲ್ಲೇ ಅನಾರೋಗ್ಯಕ್ಕೆ ಒಳಗಾಗಬಹುದು. ಹಾಗಾಗಿ ಸರಿಯಾದ ಡಯಟ್ ಫಾಲೋ ಮಾಡಿ.

  ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ

  ಕಡಿಮೆ ತಿನ್ನುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸಹ ಪರಿಣಾಮ ಬೀರಬಹುದು. ಈ ಕಾರಣ  ದೇಹವು ಸರಿಯಾದ ಪ್ರಮಾಣದ ಪೋಷಣೆ ಪಡೆಯಲ್ಲ. ಇದರಿಂದಾಗಿ ಕರುಳು ಆಹಾರ ಜೀರ್ಣಿಸಿಕೊಳ್ಳಲು ಮತ್ತು ಪೋಷಕಾಂಶ ಹೀರಿಕೊಳ್ಳುವಲ್ಲಿ ತೊಂದರೆ ಉಂಟು ಮಾಡುತ್ತವೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನ ಮಾಡುತ್ತದೆ.

  ಮಲಬದ್ಧತೆಯ ಸಮಸ್ಯೆ

  ಹಲವು ಬಾರಿ ಕಡಿಮೆ ತಿನ್ನುವುದು ಕೂಡ ಮಲಬದ್ಧತೆಯ ಸಮಸ್ಯೆಗೆ ಕಾರಣ. ಆಹಾರದಲ್ಲಿ ಸಾಕಷ್ಟು ಫೈಬರ್ ಸೇವಿಸದಿರುವುದು ಸಮಸ್ಯೆಗೆ ಕಾರಣ. ಜೀರ್ಣಾಂಗ ವ್ಯವಸ್ಥೆಯ ಪ್ರಕ್ರಿಯೆ ನಿಧಾನವಾಗುತ್ತದೆ.

  ಖಿನ್ನತೆ

  ಅಗತ್ಯಕ್ಕಿಂತ ಕಡಿಮೆ ತಿನ್ನುವುದು ನಿಮ್ಮನ್ನು ವೇಟ್ ಲಾಸ್ ಗಿಂತ ಮಾನಸಿಕವಾಗಿ ಖಿನ್ನತೆಗೆ ಗುರಿಯಾಗಿಸುತ್ತದೆ. ನೀವು ತುಂಬಾ ಕಡಿಮೆ ಕ್ಯಾಲೋರಿ ಸೇವಿಸುವುದು ಆತಂಕ, ಒತ್ತಡ ಹೆಚ್ಚಿಸುತ್ತದೆ.

  ದುರ್ಬಲ ರೋಗ ನಿರೋಧಕ ಶಕ್ತಿ

  ಅನೇಕ ಬಾರಿ ಉತ್ತಮ ಹಾಗೂ ಸಾಕಷ್ಟು ಆಹಾರ ಸೇವಿಸದೇ ಹೋದರೆ ವೇಟ್ ಲಾಸ್ ಆಗುವ ಬದಲು ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳಯತ್ತದೆ. ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಇದು ಸೋಂಕು ಮತ್ತು ಶೀತದ ಸಮಸ್ಯೆ ಹೆಚ್ಚಿಸುತ್ತದೆ.

  ಆಹಾರ ಕ್ರಮದಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾದ ಅಂಶಗಳು ಸಿಗುವುದಿಲ್ಲ. ಇದು ಜೀರ್ಣಕಾರಿ ಸಮಸ್ಯೆ ಉಂಟುಮಾಡುತ್ತದೆ. ದೇಹದಲ್ಲಿ ಕಡಿಮೆ ಕ್ಯಾಲೋರಿಗಳ ಕಾರಣದಿಂದಾಗಿ, ಪಿತ್ತಗಲ್ಲುಗಳ ಅಪಾಯವೂ ಹೆಚ್ಚಾಗುತ್ತದೆ.

  ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಿಸಲು ಮತ್ತು ವಯಸ್ಸಾಗುವಿಕೆ ತಡೆಯಲು ವಿಟಮಿನ್ ಸಿ ಪ್ರಯೋಜನಕಾರಿ

  ಕಡಿಮೆ ತಿನ್ನುವುದರಿಂದ ಅಥವಾ ಆಹಾರಕ್ರಮದಿಂದ, ನಿಮ್ಮ ತೂಕವು ಹಲವು ಬಾರಿ ಹೆಚ್ಚಾಗುತ್ತದೆ. ಇದಕ್ಕೆ ಕಾರಣ ನಿಮ್ಮ ಚಯಾಪಚಯ. ಇದು ನಿಮ್ಮ ದೇಹದ ಆಕಾರವನ್ನು ಇನ್ನಷ್ಟು ಹದಗೆಡಿಸುತ್ತದೆ.
  Published by:renukadariyannavar
  First published: