Weight Loss: ತೂಕ ಇಳಿಸಲು ದಿನವೂ ಎಷ್ಟು ಪ್ರಮಾಣದಲ್ಲಿ ದಾಲ್ಚಿನ್ನಿ ಸೇವಿಸಬೇಕು?

ದಾಲ್ಚಿನ್ನಿ ದೇಹದ ಚಯಾಪಚಯ ಹೆಚ್ಚಿಸುತ್ತದೆ. ಇದು ತೂಕ ನಷ್ಟವನ್ನು ವೇಗಗೊಳಿಸುತ್ತದೆ. ದಾಲ್ಚಿನ್ನಿ ಕೆಲವು ಗುಣಗಳನ್ನು ಹೊಂದಿದೆ. ಹಸಿವನ್ನು ಅನುಭವಿಸುವುದಿಲ್ಲ. ದಾಲ್ಚಿನ್ನಿ ಅಥವಾ ದಾಲ್ಚಿನ್ನಿ ಪುಡಿಯನ್ನು ತರಕಾರಿ ಕಷಾಯ ಚಹಾ ಇತ್ಯಾದಿಗಳಲ್ಲಿ ಬಳಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತೀಯ (Indian) ಅಡುಗೆ ಮನೆಗಳಲ್ಲಿ (Kitchen Room) ಕಂಡು ಬರುವ ಮಸಾಲೆಗಳಲ್ಲಿ ದಾಲ್ಚಿನ್ನಿ (Cinnamon) ಕೂಡ ಒಂದು. ಇದನ್ನು ಎಲ್ಲಾ ರೀತಿಯ ಅಡುಗೆಗಳಲ್ಲಿ ಬಳಸುತ್ತಾರೆ. ತರಕಾರಿ (Vegetables), ಕೇಕ್ , ಉಪ್ಪು ಹಾಗೂ ಸಿಹಿ ಹೀಗೆ ಎಲ್ಲಾ ಪದಾರ್ಥಗಳ ತಯಾರಿಕೆಯಲ್ಲಿ ಬಳಸುತ್ತಾರೆ. ದಾಲ್ಚಿನ್ನಿ ರುಚಿ ಸ್ವಲ್ಪ ಕಹಿ ಮತ್ತು ತೀಕ್ಷ್ಣ. ಇದು ಆಹಾರದ ರುಚಿ ಹೆಚ್ಚಿಸುತ್ತದೆ. ಜೊತೆಗೆ ತೂಕ ಕಡಿಮೆ ಮಾಡಲು ಇದು ಸಹಕಾರಿ. ನೀವು ತೂಕ ಇಳಿಸಲು ಇಂದಿನಿಂದಲೇ ದಾಲ್ಚಿನ್ನಿಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಪ್ರಯೋಜನ ನೀಡುತ್ತದೆ. ದಾಲ್ಚಿನ್ನಿ ಹೇಗೆ ಕೆಲಸ ಮಾಡುತ್ತದೆ? ದಾಲ್ಚಿನ್ನಿ ಏಕೆ ವಿಶೇಷವಾಗಿದೆ ಎಂಬುದನ್ನು ತಿಳಿಯೋಣ.

    ದಾಲ್ಚಿನ್ನಿ ದೇಹದ ಚಯಾಪಚಯ ಹೆಚ್ಚಿಸುತ್ತದೆ. ಇದು ತೂಕ ನಷ್ಟವನ್ನು ವೇಗಗೊಳಿಸುತ್ತದೆ. ದಾಲ್ಚಿನ್ನಿ ಕೆಲವು ಗುಣಗಳನ್ನು ಹೊಂದಿದೆ. ಹಸಿವನ್ನು ಅನುಭವಿಸುವುದಿಲ್ಲ. ನೀವು ಸಂಪೂರ್ಣ ದಾಲ್ಚಿನ್ನಿ ಅಥವಾ ದಾಲ್ಚಿನ್ನಿ ಪುಡಿಯನ್ನು ತರಕಾರಿ, ಕಷಾಯ, ಚಹಾ ಇತ್ಯಾದಿಗಳಲ್ಲಿ ಬಳಸಬಹುದು.

    ತೂಕ ನಷ್ಟಕ್ಕೆ ದಾಲ್ಚಿನ್ನಿ ಹೇಗೆ ಕೆಲಸ ಮಾಡುತ್ತದೆ?

    ದಾಲ್ಚಿನ್ನಿ ಹಲವು ಲಿಪಿಡ್ ಹನಿಗಳು ಮತ್ತು ಕಬ್ಬಿಣ ಸಮೃದ್ಧ ಮೈಟೊಕಾಂಡ್ರಿಯಾ ಹೊಂದಿದೆ. ಇದು ಆಹಾರವನ್ನು ಉಪಯುಕ್ತ ಶಕ್ತಿಯ ಮೂಲವಾಗಿ ಪರಿವರ್ತಿಸುತ್ತದೆ. ತಣ್ಣನೆಯ ವಾತಾವರಣದಲ್ಲಿ ಶಾಖ ಉತ್ಪಾದಿಸುವ ಮೂಲಕ ದೇಹವನ್ನು ಬೆಚ್ಚಗಾಗಿಸುತ್ತದೆ. ಹಾಗಾಗಿ ದಾಲ್ಚಿನ್ನಿಯನ್ನು ಶೀತ ಪ್ರದೇಶಗಳಲ್ಲಿ ಮಾಡುವ ಭಕ್ಷ್ಯಗಳಲ್ಲಿ ಬಳಸುತ್ತಾರೆ.

    ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

    ದಾಲ್ಚಿನ್ನಿ ಸಾರವು ಚರ್ಮದ ಅಡಿಯಲ್ಲಿರುವ ಕೊಬ್ಬಿನ ಕೋಶಗಳನ್ನು ಕರಗಿಸುತ್ತದೆ. ಹೊಟ್ಟೆಯ ಕೊಬ್ಬು ಕರಗಿಸಲು ದಾಲ್ಚಿನ್ನಿ ಒಳ್ಳೆಯದು. ಸೊಂಟ ಅಥವಾ ಹೊಟ್ಟೆಯ ಸುತ್ತಲಿನ ಕೊಬ್ಬು ಕಡಿಮೆ ಮಾಡುತ್ತದೆ.

    ದಾಲ್ಚಿನ್ನಿ ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸುತ್ತದೆ

    ದಾಲ್ಚಿನ್ನಿಯಲ್ಲಿರುವ ಪಾಲಿಫಿನಾಲ್‌ಗಳು ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸುತ್ತದೆ. ಇನ್ಸುಲಿನ್ ರಕ್ತದ ಗ್ಲೂಕೋಸ್ ಮಟ್ಟ ನಿಯಂತ್ರಿಸುತ್ತದೆ. ನಿಮ್ಮ ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸದಿದ್ದಾಗ ಅಥವಾ ಇನ್ಸುಲಿನ್ ನಿರೋಧಕವಾಗಿದ್ದರೆ, ರಕ್ತದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ.

    ಇದು ಕೊಬ್ಬಿನ ಶೇಖರಣೆ, ಬೊಜ್ಜು, ಮಧುಮೇಹ ಮತ್ತು ಸ್ಥೂಲಕಾಯಕಾಯಿಲೆಗಳಿಗೆ ಕಾರಣವಾಗಬಹುದು. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಹೊಂದಿರುವ ಮಹಿಳೆಯರಲ್ಲಿ ಇನ್ಸುಲಿನ್ ಪ್ರತಿರೋಧ ಕಡಿಮೆ ಮಾಡುತ್ತದೆ.

    ದಾಲ್ಚಿನ್ನಿ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ ಕಡಿಮೆ ಮಾಡುತ್ತದೆ

    ಕೆಟ್ಟ ಅಥವಾ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅಪಧಮನಿಗಳ ಗೋಡೆಗಳಲ್ಲಿ ಸಂಗ್ರಹವಾಗುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ. ಎರಡು ಪ್ರತ್ಯೇಕ

    NCBI ಅಧ್ಯಯನಗಳು ದಾಲ್ಚಿನ್ನಿ LDL ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ರಕ್ತದ ಗ್ಲೂಕೋಸ್ ಮತ್ತು ಟ್ರೈಗ್ಲಿಸರೈಡ್ ಮಟ್ಟ ವೇಗಗೊಳಿಸುತ್ತದೆ ಎಂದಿದೆ. ದಾಲ್ಚಿನ್ನಿ ಸೇವನೆ ಸೊಂಟದ ಗಾತ್ರ ಮತ್ತು ದೇಹದ ತೂಕ ಕಡಿಮೆ ಮಾಡುತ್ತದೆ.

    ತೂಕ ನಷ್ಟಕ್ಕೆ ಪ್ರತಿದಿನ ದಾಲ್ಚಿನ್ನಿ ಸೇವನೆ ಎಷ್ಟು ಸರಿ?

    ವಯಸ್ಕರರು ದಿನಕ್ಕೆ: 1 ರಿಂದ 2 ಚಮಚ ದಾಲ್ಚಿನ್ನಿ ಪುಡಿ ಅಥವಾ 1 ಇಂಚಿನ ದಾಲ್ಚಿನ್ನಿ ತೊಗಟೆ ಸೇವಿಸಬೇಕು. ಹೆಚ್ಚು ದಾಲ್ಚಿನ್ನಿ ಸೇವನೆ ಬೇಡ.

    ದಾಲ್ಚಿನ್ನಿ ಮತ್ತು ಜೇನುತುಪ್ಪದ ಚಹಾ

    ಚಮಚ ದಾಲ್ಚಿನ್ನಿ ಪುಡಿ, ಒಂದು ಚಮಚ ನಿಂಬೆ ರಸ, ಒಂದು ಚಮಚ ಜೇನುತುಪ್ಪ, ಒಂದು ಕಪ್ ನೀರು ಬೇಕು. ಒಂದು ಕಪ್ ನೀರನ್ನು ಕುದಿಸಿ ಮತ್ತು ಅದಕ್ಕೆ ದಾಲ್ಚಿನ್ನಿ ಪುಡಿ ಸೇರಿಸಿ. ನೀರಿನ ಪ್ರಮಾಣ ಅರ್ಧಕ್ಕೆ ಇಳಿಸುವವರೆಗೆ ಕುದಿಸಿ. ಒಂದು ಕಪ್ನಲ್ಲಿ ಶೋಧಿಸಿ. ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ ಕುಡಿಯಿರಿ.

    ದಾಲ್ಚಿನ್ನಿ ಮತ್ತು ಆಪಲ್ ಸೈಡರ್ ವಿನೆಗರ್

    ಟೀ ಚಮಚ ದಾಲ್ಚಿನ್ನಿ ಪುಡಿ, 1 ಟೀಸ್ಪೂನ್ ಆಪಲ್ ಸೈಡರ್ ವಿನೆಗರ್, 1 ಕಪ್ ನೀರು ಬೇಕು. 1 ಕಪ್ ನೀರನ್ನು ಕುದಿಸಿ ಮತ್ತು ಅದಕ್ಕೆ ದಾಲ್ಚಿನ್ನಿ ಪುಡಿ ಸೇರಿಸಿ. ನೀರನ್ನು ತಣ್ಣಗಾಗಲು ಬಿಡಿ. ಆಪಲ್ ಸೈಡರ್ ವಿನೆಗರ್ ಸೇರಿಸಿ ಮತ್ತು ಮಿಶ್ರಣ ಮಾಡಿ.

    ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

    ದಾಲ್ಚಿನ್ನಿ ಫ್ಯಾಟ್ ಬರ್ನರ್ ಡಿಟಾಕ್ಸ್ ವಾಟರ್

    ಒಂದು ಇಂಚಿನ ದಾಲ್ಚಿನ್ನಿ ತೊಗಟೆ, 4-5 ನಿಂಬೆ ಹೋಳು , ಒಂದು ಹಿಡಿ ಪುದೀನ ಎಲೆಗಳು, 1 ಕಪ್ ನೀರು ಬೇಕು. ದಾಲ್ಚಿನ್ನಿ ತೊಗಟೆಯನ್ನು ರಾತ್ರಿಯಿಡೀ ಒಂದು ಕಪ್ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ, ನೀರನ್ನು ಮೇಸನ್ ಜಾರ್ನಲ್ಲಿ ಸುರಿಯಿರಿ. ಕತ್ತರಿಸಿದ ಪುದೀನ ಎಲೆಗಳು ಮತ್ತು ನಿಂಬೆ ಹೋಳು ಸೇರಿಸಿ.
    Published by:renukadariyannavar
    First published: