• Home
  • »
  • News
  • »
  • lifestyle
  • »
  • Almond: ವ್ಯಾಯಾಮ ಮಾಡುವವರರು ಯಾವಾಗ್ಲೂ ಬಾದಾಮಿ ತಿನ್ಬೇಕಂತೆ! ತಜ್ಞರು ಸಲಹೆಗಳನ್ನು ನೀಡುತ್ತಾರೆ ಕೇಳಿ

Almond: ವ್ಯಾಯಾಮ ಮಾಡುವವರರು ಯಾವಾಗ್ಲೂ ಬಾದಾಮಿ ತಿನ್ಬೇಕಂತೆ! ತಜ್ಞರು ಸಲಹೆಗಳನ್ನು ನೀಡುತ್ತಾರೆ ಕೇಳಿ

ಬಾದಾಮಿ

ಬಾದಾಮಿ

ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ಪ್ರೋಟೀನ್, ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳಿವೆ.

  • Share this:

ಬಾದಾಮಿ (Almond) ಪ್ರಯೋಜನ ಎಲ್ಲರಿಗೂ ಗೊತ್ತಿರುವಂತದ್ದೇ, ಇದು ಅಗತ್ಯ ಪೋಷಕಾಂಶಗಳ ಭಂಡಾರವಾಗಿದೆ. ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅದರ ಸಿಪ್ಪೆ ಬಿಡಿಸಿ ತಿನ್ನುವುದನ್ನು ಬಹುತೇಕರು ಅಭ್ಯಾಸ ಮಾಡಿಕೊಂಡಿರುತ್ತಾರೆ. ‌ ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ಪ್ರೋಟೀನ್, ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳಿವೆ. ಇವೆಲ್ಲವೂ ಬಾದಾಮಿ ಒಣಗಿದ್ದಾಗ ಲಭಿಸುವುದಕ್ಕಿಂತ ಹೆಚ್ಚಾಗಿ ನೆನೆಸಿಟ್ಟು ಹಸಿಯಾದಾಗ ಲಭಿಸುತ್ತವೆ. ದಿನದ ಪ್ರಾರಂಭವನ್ನು ಅತ್ಯುತ್ತಮವಾಗಿ ಪ್ರಾರಂಭಿಸಲು ಈ ಎಲ್ಲಾ ಪೋಷಕಾಂಶಗಳು ನೆರವಾಗುತ್ತವೆ. ಹೊಸ ಅಧ್ಯಯನ ಕೂಡ ಬಾದಾಮಿ ಸೇವನೆಯ ಪ್ರಯೋಜನದ ಬಗ್ಗೆ ಹೇಳಿದೆ. ಅಧ್ಯಯನವೊಂದರ ಪ್ರಕಾರ ಪ್ರತಿದಿನ ವ್ಯಾಯಾಮ ಮಾಡುವವರು ಬಾದಾಮಿಯನ್ನು ತಿನ್ನುವುದರಿಂದ ದೊಡ್ಡ ಮಟ್ಟದಲ್ಲಿ ಪ್ರಯೋಜನ ಪಡೆಯುತ್ತಾರೆ. ವ್ಯಾಯಾಮದ ನಂತರ ದೇಹವು (Body) ವೇಗವಾಗಿ ಚೇತರಿಸಿಕೊಳ್ಳಲು ಬಾದಾಮಿ ಅನುವು ಮಾಡಿಕೊಡುತ್ತದೆ ಎಂದು ಸಂಶೋಧನೆ ಹೇಳುತ್ತದೆ.


ಪ್ರಯೋಗದಲ್ಲಿ ವ್ಯಾಯಾಮ ಮಾಡುವ ಮಹಿಳೆ ಮತ್ತು ಪುರುಷರಿಗೆ ಒಂದು ತಿಂಗಳ ಕಾಲ ಪ್ರತಿದಿನ 57 ಗ್ರಾಂ ಬಾದಾಮಿ ತಿನ್ನಲು ನೀಡಲಾಯಿತು. ಪ್ರಯೋಗದಲ್ಲಿ ಭಾಗವಹಿಸಿದವರ 12,13-ಡೈಹೈಡ್ರಾಕ್ಸಿ-9Z-ಆಕ್ಟಾಡೆಸೆನೊಯಿಕ್ ಆಮ್ಲ (12,13-ಡೈಹೋಮ್) ಹೆಚ್ಚು ಪ್ರಯೋಜನಕಾರಿ ಕೊಬ್ಬನ್ನು ಹೊಂದಿದ್ದರು. ಹೀಗಿದ್ದರೂ ಅವರು ವ್ಯಾಯಾಮದ ನಂತರದ ಯಾವುದೇ ರೀತಿಯಲ್ಲಿ ಹೆಚ್ಚಿನ ಆಯಾಸಕ್ಕೆ ಒಳಗಾಗಿಲ್ಲ ಎಂದು ಅಧ್ಯಯನ ತಿಳಿಸಿದೆ.


ಉತ್ತರ ಕೆರೊಲಿನಾ ರಿಸರ್ಚ್ ಕ್ಯಾಂಪಸ್‌ನಲ್ಲಿರುವ ಅಪ್ಪಲಾಚಿಯನ್ ಸ್ಟೇಟ್ ಯೂನಿವರ್ಸಿಟಿ ಹ್ಯೂಮನ್ ಪರ್ಫಾರ್ಮೆನ್ಸ್ ಲ್ಯಾಬೊರೇಟರಿಯ ಪ್ರೊಫೆಸರ್ ಮತ್ತು ನಿರ್ದೇಶಕ ಡಾ ಡೇವಿಡ್ ಸಿ ನೀಮನ್ ಮಾತನಾಡಿ: “ವ್ಯಾಯಾಮ ಮಾಡುವವರಿಗೆ ಒಂದು ತಿಂಗಳವರೆಗೆ ಪ್ರತಿದಿನ 57 ಗ್ರಾಂ ಬಾದಾಮಿ ನೀಡಲಾಯಿತು. ವ್ಯಾಯಾಮದ ನಂತರ ಅವರ ರಕ್ತದಲ್ಲಿ 12,13-ಡೈಹೋಮ್ ಹೆಚ್ಚು ಪ್ರಯೋಜನಕಾರಿಯಾಗಿದೆ. ಇತರರಿಗಿಂತ ವ್ಯಾಯಾಮದ ನಂತರ ಇವರು ಕಡಿಮೆ ಆಯಾಸ ಮತ್ತು ಉದ್ವೇಗ, ಕಡಿಮೆ ಸ್ನಾಯು ಸೆಳೆತ ಅನುಭವಿಸಿದರು" ಎಂದು ಹೇಳಿದರು.


ಪ್ರಯೋಗ ನಡೆದಿದ್ದು ಹೇಗೆ?
ಅಧ್ಯನದ ಪ್ರಯೋಗದಲ್ಲಿ 30 ರಿಂದ 65 ವರ್ಷ ವಯಸ್ಸಿನ 38 ಪುರುಷರು ಮತ್ತು 26 ಮಹಿಳೆಯರು ಪಾಲ್ಗೊಂಡಿದ್ದರು. ಪ್ರತಿದಿನ ವ್ಯಾಯಾಮ ಮಾಡುವ ಇವರಿಗೆ 57 ಗ್ರಾಂ ಬಾದಾಮಿಯನ್ನು ನೀಡಲಾಗುತ್ತಿತ್ತು ಮತ್ತು ಬಾದಾಮಿಯೊಂದಿಗೆ ನಾಲ್ಕು ವಾರಗಳ ಆಹಾರ ಪೂರಕ ಸಹ ನೀಡಲಾಗಿತ್ತು. ಸಂಶೋಧಕರು ನಾಲ್ಕು ವಾರಗಳ ಆಹಾರ ಪೂರಕಗಳ ಮೊದಲು ಮತ್ತು ನಂತರ ರಕ್ತ ಮತ್ತು ಮೂತ್ರದ ಮಾದರಿಗಳನ್ನು ತೆಗೆದುಕೊಳ್ಳುತ್ತಿದ್ದರು.


ಇದನ್ನೂ ಓದಿ: ಫ್ರೀ ಆರೋಗ್ಯ ತಪಾಸಣೆ, ಇಲ್ಲಿದೆ ನೋಡಿ ತಜ್ಞವೈದ್ಯರಿಂದ ಉಚಿತ ಶಿಬಿರ


ನಂತರ ಅವರಿಗೆ ಶಟಲ್‌ ಆಡಲು, ಜಂಪಿಂಗ್ ವ್ಯಾಯಾಮ, ಬೆಂಚ್ ಪ್ರೆಸ್ ಮತ್ತು ಲೆಗ್-ಬ್ಯಾಕ್ ಸ್ಟ್ರೆಂತ್ ವ್ಯಾಯಾಮಗಳನ್ನು ಸುಮಾರು 90 ನಿಮಿಷಗಳ ಕಾಲ ಮಾಡಲು ಹೇಳಲಾಗಿತ್ತು. ಹಾಗೆಯೇ ವ್ಯಾಯಾಮದ ನಂತರವೂ ಸಹ ರಕ್ತ ಮತ್ತು ಮೂತ್ರದ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತಿತ್ತು.‌ ಅದೇ ರೀತಿ ಬಾದಾಮಿ ಸೇವಿಸದೇ ಇರುವವರಿಗೂ ಇದೇ ಕ್ರಮ ಅನುಸರಿಸಲಾಗಿತ್ತು.


ನಂತರ ರಕ್ತದ ಪರೀಕ್ಷೆಯ ಬಳಿಕ ಕೆಲವು ಪ್ರಯೋಗದಲ್ಲಿ ಭಾಗವಹಿಸುವವರ ಮಾನಸಿಕ ಸ್ಥಿತಿಯನ್ನು ಅಳೆಯಲು 'ಪ್ರೊಫೈಲ್ ಆಫ್ ಮೂಡ್ ಸ್ಟೇಟ್ಸ್' (POMS) ಎಂಬ ಪ್ರಶ್ನಾವಳಿಯನ್ನು ನೀಡಲಾಯಿತು. ಇಲ್ಲಿ ಬಾದಾಮಿಯ ಸೇವನೆಯ ನಂತರದ ವ್ಯಾಯಾಮದ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಸಂಶೋಧಕರ ನಿರೀಕ್ಷೆಯಂತೆ ಅಧ್ಯಯನದ ಫಲಿತಾಂಶವು ಬಾದಾಮಿ ಸೇವಿಸದೇ ವ್ಯಾಯಾಮ ಮಾಡಿದವರಿಗಿಂತ ಬಾದಾಮಿ ತಿಂದು ವ್ಯಾಯಾಮ ಮಾಡಿದವರಲ್ಲಿ ಕಡಿಮೆ ಆಯಾಸ, ಹೆಚ್ಚಿನ ಚೈತನ್ಯ, ಕಡಿಮೆ ಆತಂಕ, ಖಿನ್ನತೆ ಕಂಡು ಬಂದಿದೆ.


ರಕ್ತದ ಪ್ಲಾಸ್ಮಾದಲ್ಲಿ 69% ಹೆಚ್ಚಳ
ಮುಖ್ಯವಾಗಿ, ವ್ಯಾಯಾಮದ ನಂತರ ತಕ್ಷಣವೇ, ಪ್ರಯೋಜನಕಾರಿಯಾದ 12,13-DiHOME ನ ಸಾಂದ್ರತೆಯು ನಿಯಂತ್ರಣ ಗುಂಪಿನಲ್ಲಿ ಭಾಗವಹಿಸುವವರಿಗಿಂತ ಬಾದಾಮಿ ಗುಂಪಿನಲ್ಲಿ ಭಾಗವಹಿಸುವವರ ರಕ್ತದ ಪ್ಲಾಸ್ಮಾದಲ್ಲಿ 69% ಹೆಚ್ಚಾಗಿದೆ. 12,13-ಡೈಹೋಮ್ ಕೊಬ್ಬಿನಾಮ್ಲದ ಸಾಗಣೆಯನ್ನು ಹೆಚ್ಚಿಸುತ್ತದೆ ಮತ್ತು ಅಸ್ಥಿಪಂಜರದ ಸ್ನಾಯುಗಳಿಂದ ಅದರ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ, ವ್ಯಾಯಾಮದ ನಂತರ ಒಟ್ಟಾರೆ ಚಯಾಪಚಯ ಚೇತರಿಕೆಯು ಬಾದಾಮಿ ಸೇವಿಸಿ ವ್ಯಾಯಾಮ ಮಾಡುವವರಲ್ಲಿ ಕಂಡುಬಂದಿದೆ.


ಬಾದಾಮಿ ಸಿಪ್ಪೆಯಲ್ಲಿರುವ ಪಾಲಿಫಿನಾಲ್‌ ಉತ್ತಮ ಪೋಷಕಾಂಶ
ಹಲವರು ಬಾದಾಮಿ ನೆನೆಸಿ ಅದನ್ನು ಬೆಳಿಗ್ಗೆ ಸಿಪ್ಪೆ ಬಿಡಿಸಿ ತಿನ್ನುತ್ತಾರೆ. ಆದರೆ ಇದು ತಪ್ಪಾದ ಕ್ರಮ ಎಂದು ಕೆಲವರು ಹೇಳುತ್ತಾರೆ. ಸಿಪ್ಪೆ ತೆಗೆದ ಬಾದಾಮಿಗಿಂತ ಸಿಪ್ಪೆ ಇರುವ ಬದಾಮಿ ಆರೋಗ್ಯಕ್ಕೆ ಉತ್ತಮವಾದುದ್ದು. ಸಿಪ್ಪೆಯಲ್ಲಿ ಸಮೃದ್ಧವಾದ ನಾರಿನಂಶ ಇರುತ್ತದೆ. ಇದು ಜೀರ್ಣ ಕ್ರಿಯೆಗೆ ಮತ್ತು ಆರೋಗ್ಯಕ್ಕೆ ಉತ್ತಮವಾದುದ್ದು ಎನ್ನಲಾಗುವುದು. ಇದು ವ್ಯಾಯಾಮದ ವೇಳೆ ಉಂಟಾಗುವ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ವ್ಯಾಯಾಮದ ನಂತರ ದೇಹವು ವೇಗವಾಗಿ ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಸಂಶೋಧನೆ ಹೇಳುತ್ತದೆ.




"ಬಾದಾಮಿಯಲ್ಲಿರುವ ಪೋಷಕಾಂಶ ಮತ್ತು ಪಾಲಿಫಿನಾಲ್ ಮಿಶ್ರಣವು ಉತ್ತಮ ಆರೋಗ್ಯಕ್ಕೆ ಸಹಕಾರಿ, ಅದು ಒತ್ತಡದ ಮಟ್ಟದ ವ್ಯಾಯಾಮದಿಂದ ಚಯಾಪಚಯ ಚೇತರಿಕೆಗೆ ಸಹಾಯ ಮಾಡುತ್ತದೆ. ಬಾದಾಮಿಯಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್, ಆರೋಗ್ಯಕರ ರೀತಿಯ ಕೊಬ್ಬುಗಳು, ವಿಟಮಿನ್ ಇ, ಖನಿಜಗಳು ಮತ್ತು ಫೈಬರ್ ಇದೆ. ಮತ್ತು ಬಾದಾಮಿಯ ಕಂದು ಬಣ್ಣದ ಚರ್ಮವು ಪಾಲಿಫಿನಾಲ್‌ಗಳನ್ನು ಹೊಂದಿರುತ್ತದೆ ಮತ್ತು ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ" ಎಂದು ನೀಮನ್‌ ಹೇಳಿದರು.

First published: