Weight Loss: ಸ್ನಾಯುಗಳ ಬಲವರ್ಧನೆಗೆ, ತೂಕ ಇಳಿಕೆಗೆ ಹಾಲು ಸೇವನೆ ಹೇಗೆ ಸಹಕಾರಿ?

ಹಾಲಿನಲ್ಲಿರುವ ಪೋಷಕಾಂಶಗಳು ನಮ್ಮ ಸಂಪೂರ್ಣ ದೇಹವನ್ನು ಪೋಷಿಸುತ್ತದೆ. ಆಗ ಮಾತ್ರ ಇದರ ಸೇವನೆಯಿಂದ ಮಕ್ಕಳ ಒಟ್ಟಾರೆ ಆರೋಗ್ಯ ಸದೃಢವಾಗಿ ಬೆಳವಣಿಗೆಯಾಗುತ್ತದೆ. ಜೊತೆಗೆ ಹಾಲು ವೇಟ್ ಲಾಸ್ ನಲ್ಲೂ ಸಾಕಷ್ಟು ಕೊಡುಗೆ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಾಲು (Milk) ಪ್ರಮುಖ ಆಹಾರ ಪದಾರ್ಥಗಳಲ್ಲಿ (Food Ingredients) ಒಂದು. ದಿನ ನಿತ್ಯವೂ ನಾವು ಹಾಲನ್ನು ಹಲವು ರೀತಿಯಲ್ಲಿ ಬಳಸುತ್ತೇವೆ. ಕೀರ್ ಮಾಡಲು, ಪಾಯಸ (Payasa) ಮಾಡಲು, ಪೂಜೆ, ಅಭಿಷೇಕ, ಸ್ಟ್ರಾಂಗ್ ಮೂಳೆಗಳಿಗೆ, ದೈಹಿಕ ಸದೃಢ ಬೆಳವಣಿಗೆ (Physical Growth), ಚಹಾದಲ್ಲಿ (Tea) ಹೀಗೆ ಹತ್ತು ಹಲವು ರೀತಿಯಲ್ಲಿ ನಾವು ಹಾಲನ್ನು ಬಳಸುತ್ತೇವೆ. ಪ್ರತಿಯೊಬ್ಬರೂ ಹಾಲಿನ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಹೊಂದಿದ್ದಾರೆ. ಹಾಲು ಆರೋಗ್ಯದ ನಿಧಿ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅದಕ್ಕಾಗಿಯೇ ಆಯುರ್ವೇದವು ಇದನ್ನು ಸಂಪೂರ್ಣ ಆಹಾರವೆಂದು ಪರಿಗಣಿಸುತ್ತದೆ. ಅಂದ ಹಾಗೆ ಹಾಲು ಎಷ್ಟೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ ಎಂಬುದು ನಿಮಗೂ ಗೊತ್ತಿದೆ.

  ಮಕ್ಕಳ ಒಟ್ಟಾರೆ ಆರೋಗ್ಯ ಸದೃಢ ಬೆಳವಣಿಗೆ

  ಹಾಲಿಗೆ ಸಂಬಂಧಪಟ್ಟಂತೆ ಕೆನಡಾದ ಬ್ರಾಕ್ ವಿಶ್ವವಿದ್ಯಾಲಯದ ಅನ್ವಯಿಕ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಡಾ. ಬ್ರಿಯಾನ್ ರಾಯ್, ಹಾಲಿನಲ್ಲಿರುವ ಪೋಷಕಾಂಶಗಳು ನಮ್ಮ ಸಂಪೂರ್ಣ ದೇಹವನ್ನು ಪೋಷಿಸುತ್ತದೆ. ಆಗ ಮಾತ್ರ ಇದರ ಸೇವನೆಯಿಂದ ಮಕ್ಕಳ ಒಟ್ಟಾರೆ ಆರೋಗ್ಯ ಸದೃಢವಾಗಿ ಬೆಳವಣಿಗೆಯಾಗುತ್ತದೆ. ಜೊತೆಗೆ ಹಾಲು ವೇಟ್ ಲಾಸ್ ನಲ್ಲೂ ಸಾಕಷ್ಟು ಕೊಡುಗೆ ನೀಡುತ್ತದೆ.

  ಹಾಲು ಕೊಬ್ಬನ್ನು ಕಡಿಮೆ ಮಾಡುತ್ತದೆ

  ಜಿಮ್‌ಗೆ ಹೋಗಿ ಆರೋಗ್ಯ ಹೆಚ್ಚಿಸಿಕೊಳ್ಳುವವರ ಬಗ್ಗೆ ಹಾಲಿನ ಕುರಿತು ಸುದೀರ್ಘ ಸಂಶೋಧನೆಯ ಫಲಿತಾಂಶ ಮತ್ತು ಅನುಭವ ಹಂಚಿಕೊಂಡಿದ್ದಾರೆ ತಜ್ಞರು. ಅಂದ್ರೆ ಸ್ನಾಯುಗಳು ವೇಗವಾಗಿ ರೂಪುಗೊಳ್ಳಲು ಪ್ರಾರಂಭಿಸಿದಾಗ ಕೊಬ್ಬು ತ್ವರಿತವಾಗಿ ಕಡಿಮೆ ಆಗುತ್ತದೆ.

  ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ಸಮಯದಲ್ಲಿ ಮನೆ-ಆಫೀಸ್ ಕೆಲಸ ನಿರ್ವಹಿಸಲು ಇಲ್ಲಿವೆ ಟಿಪ್ಸ್

  ಹಾಗಾಗಿ ನೀವು ನಿಮ್ಮ ಸ್ನಾಯುಗಳ ಬಲವರ್ಧನೆಗೆ ವ್ಯಾಯಾಮದ ನಂತರ ಹಾಲು ಸೇವನೆ ಮಾಡಿ. ಇದು ನಿಮ್ಮ ತೂಕ ಇಳಿಕೆ ಜೊತೆ ನಿಮ್ಮ ದೈಹಿಕ ಸ್ಟ್ರೆಂತ್ ಹೆಚ್ಚಿಸುತ್ತದೆ.

  ಹಾಲಿನಿಂದ ಮಾಡಿದ ಇತರೆ ಆಹಾರಗಳು ಹೇಗೆ ಪ್ರಯೋಜನಕಾರಿ ಆಗಿದೆ?

  ನೀವು ಹಾಲು ಕುಡಿಯಲು ಇಷ್ಟ ಪಡದೇ ಹೋದರೆ ಹಾಲಿನಿಂದ ಮಾಡಿದ ಇತರ ಆಹಾರಗಳಾದ ಪನೀರ್, ತೋಫು, ಮೊಸರು ಇತ್ಯಾದಿ ಸೇವನೆ ಮಾಡುವುದು ಸ್ನಾಯುಗಳ ಬೆಳವಣಿಗೆ ಆಗುತ್ತದೆಯೇ? ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಬರಬಹುದು. ಹಾಗಾಗಿ ಈ ವಿಷಯದಲ್ಲಿ ಡಾ. ರಾಯ್ ಅವರು ಹಾಲಿನ ಬದಲು,

  ವ್ಯಾಯಾಮದ ನಂತರ ಯುವ ಜನರು ಹಾಲಿನಿಂದ ಮಾಡಿದ ಇತರೆ ವಸ್ತುಗಳನ್ನು ಸೇವನೆ ಮಾಡಿದರೆ, ಅವರಲ್ಲಿ ಸ್ನಾಯುಗಳ ರಚನೆಯ ವೇಗವು ನಿಧಾನವಾಗುತ್ತದೆ. ಅಂದ್ರೆ ನಿಮ್ಮ ಸ್ನಾಯುಗಳು ರೂಪುಗೊಳ್ಳುತ್ತವೆ.

  ಹೆಚ್ಚು ಹಾಲು ಕುಡಿಯುವುದು

  ಹಾಲು ಕುಡಿಯುವುದರಿಂದ ಸ್ನಾಯುಗಳು ನಿರ್ಮಾಣವಾಗುತ್ತವೆ. ಮತ್ತು ಕೊಬ್ಬು ಕಡಿಮೆ ಆಗುತ್ತದೆ. ಇದನ್ನು ತಿಳಿದ ನಂತರ ನಿಮಗೆ ಈ ಆಸೆ ಇದ್ದರೆ ದಿನವಿಡೀ ಹಾಲು ಮಾತ್ರ ಕುಡಿಯಬೇಕು. ಏಕೆಂದರೆ ಇದು ಸಂಪೂರ್ಣ ಆಹಾರ ಆಗಿದೆ. ಇದು ಕೊಬ್ಬನ್ನು ಹೆಚ್ಚಿಸುವುದಿಲ್ಲ. ಜೊತೆಗೆ ಸ್ನಾಯುಗಳನ್ನು ನಿರ್ಮಿಸುತ್ತದೆ ಎಂದು ನೀವು ಭಾವಿಸಿದರೆ ಅದು ತಪ್ಪು ತಿಳಿವಳಿಕೆ. ಯಾಕೆಂದರೆ ಹೆಚ್ಚು ಹಾಲು ಕುಡಿಯುವುದನ್ನು ನಿಷೇಧಿಸಲಾಗಿದೆ.

  ಕೇವಲ ಹಾಲು ಕುಡಿಯುವುದು ಹೃದ್ರೋಗದ ಅಪಾಯ ಹೆಚ್ಚಿಸಬಹುದು. ಮತ್ತು ಇತರೆ ಜೀರ್ಣಕಾರಿ ಕಾಯಿಲೆಗೂ ಇದು ಕಾರಣವಾಗುತ್ತದೆ. ಒಂದು ಮಾತ್ರದಲ್ಲಿ ಹಾಲು ಸೇವನೆ ಮಾಡುವುದು ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ.

  ಹಾಗಾಗಿ ಹಾಲಿನಿಂದ ಕೊಬ್ಬನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ನೀವು ವ್ಯಾಯಾಮ ಮಾಡುವುದು. ಆಗ ಮಾತ್ರ ಹಾಲು ನಿಮ್ಮ ಕೊಬ್ಬನ್ನು ಕರಗಿಸಲು ಮತ್ತು ವಕ್ರಾಕೃತಿ ಸರಿ ಮಾಡಲು ಸಹಾಯ ಮಾಡುತ್ತದೆ.

  ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಹಾಲು ಕುಡಿಯಬೇಕು?

  ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಎಷ್ಟು ಹಾಲು ಕುಡಿಯಬೇಕು? ಇದು ನಿಮ್ಮ ಜೀವನಶೈಲಿ ಏನು ಮತ್ತು ನೀವು ಎಷ್ಟು ಕ್ಯಾಲೊರಿ ಬರ್ನ್ ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ. ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಮೂರು ಲೋಟ ಹಾಲು ಕುಡಿಯಬಹುದು.

  ಇದನ್ನೂ ಓದಿ: ಕಾಸ್ಟ್ಲಿ ಲಿಪ್‌ಸ್ಟಿಕ್ ಮುರಿದು ಹೋಯ್ತಾ? ತಲೆ ಕೆಡಿಸಿಕೊಳ್ಳಬೇಡಿ, ಹೀಗೆ ಮಾಡಿ!

  ಆದರೆ ಕೃಷಿ ಕೆಲಸ ಅಥವಾ ಕಾರ್ಮಿಕ ಸಂಬಂಧಿತ ಕೆಲಸ, ಕ್ರೀಡೆ, ಜಿಮ್ನಾಸ್ಟ್ ಇತ್ಯಾದಿ ದೈಹಿಕ ಶ್ರಮವನ್ನು ಮಾಡುವವರಿಗಿಂತ ಕುಳಿತು ಕೆಲಸ ಮಾಡುವವರ ಜೀರ್ಣಕ್ರಿಯೆ ತುಂಬಾ ದುರ್ಬಲವಾಗಿರುತ್ತದೆ. ಹಾಲು ಇಂತವರಿಗೆ ಈಸಿ ಮತ್ತು ಕಠಿಣವಾಗಿರುತ್ತದೆ. ಈ ಜನರು ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಹಾಗಾಗಿ ಇದು ವೇಟ್ ಲಾಸ್ ಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
  Published by:renukadariyannavar
  First published: