ಚಳಿಗಾಲ (Winter), ಮಳೆಗಾಲ ಹಾಗೂ ಬೇಸಿಗೆ ಕಾಲ ಯಾವುದೇ ಸೀಸನ್ (Season) ಇರಲಿ, ಚಹಾ (Tea) ಕುಡಿಯುವುದು ದೈನಂದಿನ ಭಾಗವಾಗಿದೆ. ಜನರು (People) ಎರಡು ಹೊತ್ತು ಕಡ್ಡಾಯವಾಗಿ ಚಹಾ ಕುಡಿದೇ ಕುಡಿಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಲವು ವೆರೈಟಿ ಚಹಾ ಪುಡಿ ಹಾಗೂ ಚಹಾ ಮಾಡುವುದನ್ನು ನೀವು ನೋಡಿರಬಹುದು. ವಿವಿಧ ಚಹಾಗಳು ತನ್ನದೇ ಆದ ಪರಿಮಳ ಮತ್ತು ರುಚಿ ಹೊಂದಿವೆ. ಅದಾಗ್ಯೂ ಚಳಿಗಾಲದಲ್ಲಿ ಶುಂಠಿ ಚಹಾ ಹೆಚ್ಚು ಆರೋಗ್ಯ ಲಾಭ (Health Benefits) ತಂದು ಕೊಡುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಿಂತಲೂ ಹೆಚ್ಚು ಮಸಾಲಾ ಚಹಾ (Masala Tea) ಆರೋಗ್ಯಕ್ಕೆ ಲಾಭದಾಯಕವಾಗಿದೆ. ಯಾಕಂದ್ರೆ ಈ ಮಸಾಲಾ ಚಹಾದಲ್ಲಿ ವಿವಿಧ ಮಸಾಲೆ ಪದಾರ್ಥ ಬಳಕೆ ಮಾಡಲಾಗುತ್ತದೆ.
ಚಳಿಗಾಲದಲ್ಲಿ ಮಸಾಲಾ ಚಹಾ
ಇದು ಚಳಿಗಾಲದಲ್ಲಿ ದೇಹದ ಆರೋಗ್ಯ ಕಾಪಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಮಸಾಲಾ ಚಹಾ ಸೇವನೆ ಗಂಟಲು ನೋವು ಕಡಿಮೆ ಮಾಡುತ್ತದೆ. ದೇಹದಲ್ಲಿ ವಿಭಿನ್ನ ಶಕ್ತಿ ಮತ್ತು ಚುರುಕುತನ ನೀಡುತ್ತದೆ. ಯಾವೆಲ್ಲಾ ಪದಾರ್ಥಗಳನ್ನು ಬಳಸಿ ಮಸಾಲಾ ಚಹಾ ಮಾಡುತ್ತಾರೆ ಎಂಬುದನ್ನು ನೋಡೋಣ.
ಮಸಾಲಾ ಚಹಾ ಹೇಗೆ ಪ್ರಯೋಜನ ನೀಡುತ್ತದೆ?
ಮಸಾಲಾ ಚಹಾದ ಬಗ್ಗೆ ಪ್ರಕೃತಿ ವೈದ್ಯ ಅನಿಲ್ ಬನ್ಸಾಲ್ ಹೇಳಿದ್ದಾರೆ. ಮಸಾಲಾ ಚಹಾ ದೇಹವನ್ನು ನಿರ್ವಿಷಗೊಳಿಸುತ್ತದೆ. ಋತುವಿನಲ್ಲಿ ಉಂಟಾಗುವ ಕೆಮ್ಮು ಮತ್ತು ಶೀತ ಸಮಸ್ಯೆಯಿಂದ ರಕ್ಷಣೆ ನೀಡುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ.
ಮಸಾಲಾ ಚಹಾ ಆರೋಗ್ಯವಾಗಿಸುವ ಪದಾರ್ಥಗಳು ಹೀಗಿವೆ
ದಾಲ್ಚಿನ್ನಿ
ಚಹಾಕ್ಕೆ ನೀರು ಕುದಿಯುವಾಗ ದಾಲ್ಚಿನ್ನಿ ಸೇರಿಸಿ. ರುಚಿಗೆ ತಕ್ಕಷ್ಟು ಚಹಾ ಎಲೆ, ಸಕ್ಕರೆ ಮತ್ತು ಹಾಲು ಸೇರಿಸಿ. ದಾಲ್ಚಿನ್ನಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣ ಹೊಂದಿದೆ. ದಾಲ್ಚಿನ್ನಿ ಚಹಾ ಆರೋಗ್ಯ ಸುಧಾರಿಸಲು ಸಹಕಾರಿ. ದಾಲ್ಚಿನ್ನಿ ಚಹಾ ಚಯಾಪಚಯ ಸುಧಾರಿಸುತ್ತದೆ. ಔಷಧಿಯಾಗಿ ದಾಲ್ಚಿನ್ನಿ ಕೆಲಸ ಮಾಡುತ್ತದೆ.
ಶುಂಠಿ
ಶುಂಠಿ ದೇಹವನ್ನು ಬೆಚ್ಚಗಾಗಿಸುತ್ತದೆ. ಚಹಾಕ್ಕೆ ಸುವಾಸನೆ ಮತ್ತು ಶಾಖ ನೀಡುತ್ತದೆ. ಶುಂಠಿ ಪುಡಿ ಮಾಡಿ ಚಹಾ ನೀರಿನಲ್ಲಿ ಕುದಿಸಿ ಸೇವಿಸಿ. ಶುಂಠಿ ಚಹಾವು ಶೀತ ಹವಾಮಾನ ರೋಗಗಳ ದಾಳಿಯಿಂದ ರಕ್ಷಣೆ ನೀಡುತ್ತದೆ. ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ.
ಅರಿಶಿನ
ಕರ್ಕ್ಯುಮಿನ್ ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣ ಹೊಂದಿದೆ. ದೇಹವನ್ನು ಕಾಲೋಚಿತ ರೋಗಗಳ ಬಲೆಯಿಂದ ಹೊರ ಬರಲು ಕೆಲಸ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸಲು ಇದು ಪರಿಣಾಮಕಾರಿಯಾಗಿದೆ.
ಚಳಿಗಾಲದಲ್ಲಿ ಉಂಟಾಗುವ ಆಲಂ ಸಮಸ್ಯೆ ಪರಿಹರಿಸುತ್ತದೆ. ಇದು ದೇಹದಲ್ಲಿ ಹೊಸ ಶಕ್ತಿ ನೀಡುತ್ತದೆ. ದೇಹದ ಆಯಾಸ, ಆಲಸ್ಯ ಹೋಗಲಾಡಿಸಿ ತಾಜಾತನ ನೀಡುತ್ತದೆ.
ಲವಂಗ
ಲವಂಗ ಬಿಸಿ ಮಸಾಲೆಯಾಗಿದೆ. ಚಹಾ ಕುದಿಸಿ ಮತ್ತು ಕುಡಿದರೆ ಸ್ನಾಯು ನೋವು ಮತ್ತು ಹಲ್ಲುನೋವು ಸಮಸ್ಯೆಗಳು ನಿವಾರಣೆ ಆಗುತ್ತವೆ. ಚಹಾ ಆರೋಗ್ಯ ವರ್ಧಕವಾಗಿದೆ. ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಅತಿಯಾದ ಬಳಕೆ ಬೇಡ ಎಂಬುದನ್ನು ನೆನಪಿಡಿ.
ಬೆಲ್ಲ
ಬೆಲ್ಲದಲ್ಲಿ ಕಬ್ಬಿಣದ ಅಂಶವಿದೆ. ದೇಹವನ್ನು ಬಲಪಡಿಸುವ ಬೆಲ್ಲ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಬೆಲ್ಲದ ಚಹಾವು ತೂಕ ನಷ್ಟಕ್ಕೆ ಉತ್ತಮ ಪರಿಹಾರ ನೀಡುತ್ತದೆ.
ನಕ್ಷತ್ರ ಸೋಂಪು
ಸ್ಟಾರ್ ಸೋಂಪು ಚಹಾದ ಪರಿಮಳ ನೀಡುತ್ತದೆ. ಶೀತದ ಪರಿಣಾಮ ಕಡಿಮೆ ಮಾಡುತ್ತದೆ.
ಏಲಕ್ಕಿ
ಏಲಕ್ಕಿ ಚಹಾದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಏಲಕ್ಕಿಯು ಚಹಾದ ರುಚಿ ಹೆಚ್ಚಿಸುತ್ತದೆ. ದೇಹದ ವಿವಿಧ ಭಾಗಗಳ ಉರಿಯೂತ ಸಮಸ್ಯೆ ತೊಡೆದು ಹಾಕುವ ಕೆಲಸ ಮಾಡುತ್ತದೆ.
ಇದನ್ನೂ ಓದಿ: ಪ್ರತಿದಿನ ಕೇವಲ 10 ನಿಮಿಷ ವ್ಯಾಯಾಮ ಮಾಡೋದ್ರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?
ತುಳಸಿ ಎಲೆ
ತುಳಸಿ ಎಲೆ ಚಹಾ ಸೇವಿಸಿದ್ರೆ ಕೊಲೆಸ್ಟ್ರಾಲ್ ಮತ್ತು ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ತುಳಸಿ ಎಲೆಗಳಲ್ಲಿ ವಿಟಮಿನ್ ಎ, ಸಿ ಮತ್ತು ಕ್ಯಾಲ್ಸಿಯಂ ಅಪಾರ ಪೋಷಕತತ್ವಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ