• Home
  • »
  • News
  • »
  • lifestyle
  • »
  • Walnuts: ವಾಲ್‌ನಟ್‌ ತಿನ್ನಲು ಆರಂಭಿಸಿ, ದಿನದಲ್ಲಿ ನಿಮ್ಮ ಉತ್ಸಾಹವೇ ವಿಭಿನ್ನವಾಗಿರುತ್ತದೆ

Walnuts: ವಾಲ್‌ನಟ್‌ ತಿನ್ನಲು ಆರಂಭಿಸಿ, ದಿನದಲ್ಲಿ ನಿಮ್ಮ ಉತ್ಸಾಹವೇ ವಿಭಿನ್ನವಾಗಿರುತ್ತದೆ

walnuts

walnuts

Life Style: ಆರೋಗ್ಯ ಚೆನ್ನಾಗಿರಲು ನಮ್ಮ ಜೀವನ ಶೈಲಿ ಕೂಡ ಬಹಳ ಮುಖ್ಯವಾಗುತ್ತದೆ. ಹಾಗಾಗಿ ನಾವು ದಿನನಿತ್ಯ ಯಾವ ಆಹಾರವನ್ನು ಸೇವಿಸುತ್ತೀವಿ ಎಂಬುದು ಮುಖ್ಯ ಕಾರಣವಾಗುತ್ತದೆ. ಇದಕ್ಕೆ ಮುಖ್ಯವಾಗಿ ಡ್ರೈಫ್ರೂಟ್ಸ್​ ಕಾರಣವಾಗುತ್ತದೆ.

  • Share this:

ಉತ್ತಮ ಕೊಲೆಸ್ಟ್ರಾಲ್ (Cholesterol) ಮಟ್ಟವನ್ನು ಸುಧಾರಿಸುವುದು ಮತ್ತು ಹೃದಯವನ್ನು ಆರೋಗ್ಯಕರವಾಗಿಡುವುದರ ಜೊತೆಗೆ ವಾಲ್‌ನಟ್ಸ್ Health) ಮಧುಮೇಹ (Sugar Patient) ಹೊಂದಿರುವವರಿಗೆ ಸಹ ಪ್ರಯೋಜನಕಾರಿಯಾಗಿದೆ. ಕೇವಲ ಬೆರಳೆಣಿಕೆಯಷ್ಟು ವಾಲ್‌ನಟ್‌ಗಳನ್ನು ತಿನ್ನುವುದರಿಂದ ನಿಮ್ಮ ಊಟದ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಬಹುದು. ಆದರೆ ವಾಲ್‌ನಟ್‌ ಏಕೆ ತಿನ್ನಬೇಕು ಅನ್ನೋ ಪ್ರಶ್ನೆ ಹಲವರಲ್ಲಿರುತ್ತೆ. ಅದಕ್ಕೆ ಉತ್ತರ ಇಲ್ಲಿದೆ. ವಾಲ್‌ನಟ್‌ ಅಥವಾ ಅಕ್ರೋಡು ಎಂದು ಕರೆಯಲ್ಪಡುವ, ಅದ್ಭುತವಾದ ಸಿಹಿ ಮತ್ತು ರುಚಿಯನ್ನು ಹೊಂದಿರುವ ಸಣ್ಣ ಮೆದುಳಿನ ಆಕಾರದ ಬೀಜಗಳು, ನಿಮ್ಮ ನೆಚ್ಚಿನ ಕುಕೀ, ಕೇಕ್, ಸಲಾಡ್, ಉಪಹಾರಗಳಲ್ಲಿ ಇದನ್ನು ಸೇರಿಸಬಹುದಾಗಿದೆ.


ಮೆದುಳಿಗೆ ಒಳ್ಳೆಯದು ವಾಲ್‌ನಟ್‌


ಸೂಕ್ಷ್ಮ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಸಮೃದ್ಧವಾಗಿ ಹೊಂದಿರುವ ವಾಲ್‌ ನಟ್‌ ಮೆಮೊರಿ ಸುಧಾರಿಸಲು ಹಾಗೂ ಮೆದುಳಿನ ಕಾರ್ಯವನ್ನು ವರ್ಧಿಸಲು ಸಹಾಯ ಮಾಡುತ್ತೆ. ಕೇವಲ ಬೆರಳೆಣಿಕೆಯಷ್ಟು ವಾಲ್‌ನಟ್‌ಗಳನ್ನು ತಿನ್ನುವುದರಿಂದ ನಿಮ್ಮ ಊಟದ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಬಹುದು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಇದು ಅತ್ಯುತ್ತಮ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಮಧುಮೇಹ ಹೊಂದಿದ್ದರೆ, ವಾಲ್‌ನಟ್‌ಗಳನ್ನು ಆರಾಮಾಗಿ ಸೇವಿಸಬಹುದು. ಏಕೆಂದರೆ ಅವುಗಳು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವ ಪ್ರೋಟೀನ್, ಫೈಬರ್ ಅನ್ನು ಹೊಂದಿರುತ್ತವೆ.


ಇದನ್ನೂ ಓದಿ: ಋತುಚಕ್ರದ ಸಮಯದಲ್ಲಿ ತ್ವಚೆಯ ಆರೈಕೆಗೆ ಪಾಲಿಸಬೇಕಾದ ಸಲಹೆಗಳು


ವಾಲ್‌ನಟ್‌ ಒಂದು ಸೂಪರ್‌ ಫುಡ್‌


"ವಾಲ್ನಟ್ಗಳು ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್, ಉತ್ತಮ ಕೊಬ್ಬು, ಫೈಬರ್, ವಿಟಮಿನ್ಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್ಗಳಿಂದ ತುಂಬಿರುವ ಒಂದು ಸೂಪರ್ಫುಡ್ ಆಗಿದೆ. ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವುದರ ಜೊತೆಗೆ ಹೃದಯವನ್ನು ಆರೋಗ್ಯಕರವಾಗಿಡುತ್ತದೆ. ವಾಲ್‌ನಟ್ಸ್ ಒಮೆಗಾ-3 ಕೊಬ್ಬಿನಾಮ್ಲ ಸಮೃದ್ಧವಾಗಿರುವ ಕಾರಣ ಒತ್ತಡ ಮತ್ತು ಆತಂಕವನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಫೈಬರ್‌ನಿಂದಾಗಿ ಇದು ಹಸಿವನ್ನೂ ತಡೆಯುತ್ತದೆ. ವಾಲ್‌ನಟ್ಸ್ ಅನ್ನು ಪ್ರೋಟೀನ್ ಶೇಕ್ಸ್ ಮತ್ತು ಸ್ಮೂಥಿಗಳಿಗೆ ಸೇರಿಸಬಹುದು ಎನ್ನುತ್ತಾರೆ ಮುಂಬೈನ ಅಪೊಲೋ ಸ್ಪೆಕ್ಟ್ರಾ ಆಸ್ಪತ್ರೆಯ ಡಯೆಟಿಶಿಯನ್‌ ಡಾ. ಜಿನಾಲ್ ಪಟೇಲ್.


ಚರ್ಮಕ್ಕೂ ಒಳ್ಳೆಯದು ಈ ವಾಲ್‌ನಟ್‌


ಇನ್ನು, ವಾಲ್‌ನಟ್ಸ್ ತ್ವಚೆಗೆ ಒಳ್ಳೆಯದು ಮತ್ತು ಅವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಲು ಮತ್ತು ಮೃದುವಾಗಿಡಲು ಸಹಾಯ ಮಾಡುತ್ತದೆ.ವಾಲ್‌ನಟ್ಸ್‌ನಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಬಿ 5 ಇದ್ದು ಇದು ರಂಧ್ರಗಳನ್ನು ಬಿಗಿಗೊಳಿಸಲು ಮತ್ತು ಚರ್ಮವನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ. ವಾಲ್‌ನಟ್ಸ್‌ನಲ್ಲಿರುವ ವಿಟಮಿನ್ ಬಿ 5 ಟ್ಯಾನ್ ಮತ್ತು ಡಾರ್ಕ್ ಕಲೆಗಳನ್ನು ಹೋಗಲಾಡಿಸಲು ಕೆಲಸ ಮಾಡುತ್ತದೆ. ಚರ್ಮದ ಬಣ್ಣವನ್ನು ಸುಧಾರಿಸುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಡಾ. ಪಟೇಲ್ ಹೇಳುತ್ತಾರೆ.


ವಾಲ್‌ನಟ್‌ ನೆನೆಸಿ ತಿಂದರೆ ಪ್ರಯೋಜನ ಹೆಚ್ಚು


ನಾರಾಯಣ ಹೃದಯಾಲಯದ ಹಿರಿಯ ಕ್ಲಿನಿಕಲ್ ಡಯೆಟಿಷಿಯನ್ ಶ್ರುತಿ ಭಾರದ್ವಾಜ್ ಅವರು ವಾಲ್ನಟ್ಸ್ ಅನ್ನು ನೆನೆಸುವುದರಿಂದ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಫೈಟಿಕ್ ಆಸಿಡ್ ಮತ್ತು ಟ್ಯಾನಿನ್ ಅನ್ನು ತೆಗೆದುಹಾಕುತ್ತದೆ."ನೆನೆಸುವುದು ಅಜೀರ್ಣವನ್ನು ತಡೆಯಲು ಸಹಾಯ ಮಾಡುತ್ತದೆ ಏಕೆಂದರೆ ಇದು ಅನಿಲ ರಚನೆಯ ಸಂಯುಕ್ತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಪಾಲಿಫಿನಾಲ್‌ಗಳನ್ನು ಕಡಿಮೆ ಮಾಡುತ್ತದೆ. ಪೋಷಕಾಂಶಗಳ ಲಭ್ಯತೆಯನ್ನೂ ಇದು ಹೆಚ್ಚಿಸುತ್ತದೆ ಎಂದು ಭಾರದ್ವಾಜ್ ಹೇಳುತ್ತಾರೆ.


ಇದನ್ನೂ ಓದಿ: ಕೂದಲಿನ ಆರೈಕೆಗೆ ಸಹಾಯ ಮಾಡುತ್ತೆ ಕಬ್ಬಿನ ರಸ


ಈ ವಾಲ್ನಟ್‌ ಗಳನ್ನು 5-6 ಗಂಟೆಗಳ ಕಾಲ ನೆನೆಸಿಡುವುದು ಉತ್ತಮವಾಗಿದೆ. ಇನ್ನು, ರಾತ್ರಿವೇಳೆ ಕೇವಲ 2-4 ವಾಲ್ನಟ್ ಗಳನ್ನು ಒಂದು ಕಪ್ ನೀರಿನಲ್ಲಿ ನೆನೆಸಿ ಮತ್ತು ಅವುಗಳನ್ನು ಬೆಳಗ್ಗೆ ಸೇವಿಸಬಹುದು ಅಥವಾ ಮಲಗುವ ವೇಳೆ ಒಂದು ಗ್ಲಾಸ್‌ ಹಾಲಿನ ಜೊತೆಗೂ ಇದನ್ನು ತಿನ್ನಬಹುದು ಎಂದು ಡಾ ಪಟೇಲ್ ಹೇಳುತ್ತಾರೆ.

First published: