ವಾರದಲ್ಲಿ ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಿದರೆ ಒಳಿತು?

ದಂಪತಿಗಳು ಲೈಂಗಿಕ ಸಂಬಂಧಕ್ಕಿಂತ ರೋಮ್ಯಾನ್ಸ್​ ಸೇರಿದಂತೆ ಇತರೆ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಇನ್ನೂ ಉತ್ತಮ. ಇಂತಹ ಚಟುವಟಿಕೆಯಿಂದ ದಂಪತಿಗಳ ನಡುವೆ ಅನೋನ್ಯತೆ ಇನ್ನೂ ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ.

news18
Updated:July 17, 2019, 3:00 PM IST
ವಾರದಲ್ಲಿ ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಿದರೆ ಒಳಿತು?
ಸಾಂದರ್ಭಿಕ ಚಿತ್ರ
  • News18
  • Last Updated: July 17, 2019, 3:00 PM IST
  • Share this:
ಭಾರತದಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಅರಿವಿನ ಕೊತರೆಯಿದೆ. ಈ ಬಗ್ಗೆ ತಿಳಿದುಕೊಳ್ಳಲು ಮಡಿವಂತಿಕೆ ಅಡ್ಡಗಾಲಾಗುತ್ತಿರುವುದು ಕೂಡ ಸುಳ್ಳಲ್ಲ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಮತ್ತು ಸಂತಾನೋತ್ಪತಿಗೆ ಲೈಂಗಿಕ ಸಂಬಂಧ ಎನ್ನುವುದು ಅತ್ಯಗತ್ಯ.

ಒಬ್ಬ ವ್ಯಕ್ತಿಯು ಆರೋಗ್ಯವಂತರಾಗಿರಲು ಸೆಕ್ಸ್​ ಬಹು ಮುಖ್ಯ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಲೈಂಗಿಕ ಕ್ರಿಯೆಯಲ್ಲಿ ನಿಯಮಿತವಾಗಿ ಭಾಗಿಯಾಗುವುದರಿಂದ ಹೃದ್ರೋಗದ ಸಮಸ್ಯೆಗೆ ಉಂಟಾಗುವುದಿಲ್ಲ ಎಂದು ವಿಜ್ಞಾನಿಗಳು ಕಂಡು ಕೊಂಡಿದ್ದಾರೆ.

ಆಧುನಿಕ ಜೀವನ ಶೈಲಿಯಲ್ಲಿ ಕಂಡು ಬರುತ್ತಿರುವ ಖಿನ್ನತೆ ಮತ್ತು ಒತ್ತಡವನ್ನು ನಿವಾರಿಸುವಲ್ಲಿ ಲೈಂಗಿಕ ಚಟುವಟಿಕೆಗಳು ಮುಖ್ಯ ಪಾತ್ರವಹಿಸುತ್ತದೆ. ಸೆಕ್ಸ್​ನಲ್ಲಿ ತೊಡಗುವುದರಿಂದ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಲೈಂಗಿಕ ಕ್ರಿಯೆಯಿಂದ ದೇಹದಲ್ಲಿ ಹಾರ್ಮೋನುಗಳು ಸೂಕ್ತ ಪ್ರಯಾಣದಲ್ಲಿ ಉತ್ಪತಿಯಾಗುತ್ತದೆ. ಇದರಿಂದ ಮಾನಸಿಕ ಆರೋಗ್ಯವು ಸ್ಥಿರವಾಗಿರುತ್ತದೆ.

ಉತ್ತಮ ಲೈಂಗಿಕ ಬಂಧವಿದ್ದರೆ ಮಾತ್ರ ದಾಂಪತ್ಯ ಜೀವನವು ಸುಖಕರವಾಗಿರುತ್ತದೆ ಎಂದು ಸಂಶೋಧಕರು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಲೈಂಗಿಕ ಸಂಬಂಧದಿಂದ ಬೇರ್ಪಟ್ಟವರಲ್ಲಿ ಹೆಚ್ಚಾಗಿ ಜಗಳ ಮತ್ತು ಮನಸ್ತಾಪಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಸಂಗಾತಿಯೊಂದಿಗೆ ಸಮಯ ಕಳೆಯುವುದು ವೈವಾಹಿಕ ಜೀವನವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಯಾವ ಸಮಯದಲ್ಲಿ ಲೈಂಗಿಕ ಕ್ರಿಯೆ ಉತ್ತಮ?: ಸಂಶೋಧನೆಯಿಂದ ತಿಳಿದು ಬಂತು ಹೊಸ ಸತ್ಯ

ಸುಖಕರವಾದ ದಾಂಪತ್ಯ ಜೀವನ ನಿಮ್ಮದಾಗಬೇಕಿದ್ದರೆ ವರ್ಷಕ್ಕೆ 54 ಸಲವಾದರೂ ತಮ್ಮ ಸಂಗಾತಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. 18-29 ನಡುವಿನ ವಯಸ್ಸಿನವರು ವರ್ಷಕ್ಕೆ 112 ಬಾರಿ ಸೆಕ್ಸ್​ ನಡೆಸುವುದು ಸೂಕ್ತ. ಹಾಗೆಯೇ 30 ರಿಂದ 39 ವಯಸ್ಸಿನವರು ವರ್ಷಕ್ಕೆ 86 ಬಾರಿ, 40 ರಿಂದ 49 ವರ್ಷಕ್ಕೆ 69 ಸಲ ಲೈಂಗಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಎಂದಿದ್ದಾರೆ. ಅಲ್ಲದೆ ವರ್ಷಕ್ಕೆ 54ಕ್ಕಿಂತ ಹೆಚ್ಚಿನ ಬಾರಿ ಸೆಕ್ಸ್​ನಲ್ಲಿ ತೊಡಗಿಸಿಕೊಳ್ಳುವ ಜೋಡಿಗಳ ಸಂಬಂಧ ಕೂಡ ಉತ್ತಮವಾಗಿರುತ್ತದೆ ಎಂದು ಈ ಅಧ್ಯಯನದಿಂದ ಸಾಬೀತಾಗಿದೆ.

ಇದನ್ನೂ ಓದಿ: VIDEO: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ ಎಬಿಡಿ ದಾಖಲೆ ಸರಿಗಟ್ಟಿದ ಹಾರ್ದಿಕ್ ಪಾಂಡ್ಯ!ಈ ಸಂಶೋಧನೆಯ ಪ್ರಕಾರ ವಾರಕ್ಕೆ ಒಂದೆರಡು ಬಾರಿ ಸೆಕ್ಸ್​ ನಡೆಸುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ತೃಪ್ತಿ ಸಿಗಲಿದೆ. ಇದಕ್ಕಿಂತ ಹೆಚ್ಚಿನ ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಆಯಾಸಭಾವ ಕಾಡಬಹುದು. ಇದು ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಅವಲಂಭಿತವಾಗಿರುತ್ತದೆ. ದಂಪತಿಗಳು ಲೈಂಗಿಕ ಸಂಬಂಧಕ್ಕಿಂತ ರೋಮ್ಯಾನ್ಸ್​ ಸೇರಿದಂತೆ ಇತರೆ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಇನ್ನೂ ಉತ್ತಮ. ಇಂತಹ ಚಟುವಟಿಕೆಯಿಂದ ದಂಪತಿಗಳ ನಡುವೆ ಅನೋನ್ಯತೆ ಇನ್ನೂ ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ. ಒಟ್ಟಿನಲ್ಲಿ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಮತ್ತು ಪ್ರೀತಿ ಮೂಡಲು ಆಗಾಗ್ಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ಈ ಅಧ್ಯಯನದಿಂದ ದೃಢಪಟ್ಟಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ಸಂಬಂಧದ ಕುರಿತು ನೀವು ತಿಳಿದಿರಲೇಬೇಕಾದ ಕೆಲ ಸಂಗತಿಗಳು

First published:July 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ