Healthy Diet: ದಿನದ 24 ಗಂಟೆಯಲ್ಲಿ ಎಷ್ಟು ಬಾರಿ ಊಟ ಮಾಡುವುದು ಆರೋಗ್ಯಕ್ಕೆ ಉತ್ತಮ?

ಸಾಮಾನ್ಯವಾಗಿ ಆಹಾರ ತಜ್ಞರು ಹಸಿವು ನಿಯಂತ್ರಿಸಲು ಸಹಾಯ ಮಾಡಲು ಎರಡು ತಿಂಡಿಗಳನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಸೇರಿಸಲು ಸಲಹೆ ನೀಡುತ್ತಾರೆ. ಅದೇ ವೇಳೆ ಕೆಲವು ತಜ್ಞರು ದಿನಕ್ಕೆ ಐದರಿಂದ ಆರು ಬಾರಿ ತಿನ್ನಬೇಕು ಎಂದು ಹೇಳ್ತಾರೆ. ಒಂದು ದಿನದಲ್ಲಿ ಸೇವಿಸುವ ಊಟದ ಸಂಖ್ಯೆಯ ಪ್ರಮಾಣ ಎಷ್ಟಿರಬೇಕು ಎಂದು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದಿನವೂ ನಾವು ಊಟ (Dinner) ಮಾಡುತ್ತೇವೆ. ಪ್ರತಿನಿತ್ಯ (Everyday) ನಾವು ಏನು ತಿನ್ನುತ್ತೇವೆ? ಎಷ್ಟು ತಿನ್ನುತ್ತೇವೆ ಎಂಬ ಬಗ್ಗೆ ನಿಗಾ ವಹಿಸಬೇಕು. ಯಾಕೆಂದರೆ ಅತಿಯಾಗಿ ತಿನ್ನುವುದು ಹಲವು ಆರೋಗ್ಯ ಸಮಸ್ಯೆ (Health Problem) ಉಂಟು ಮಾಡುತ್ತದೆ. ಇದು ನಮ್ಮ ಆರೋಗ್ಯ ಮತ್ತು ಜೀರ್ಣಕ್ರಿಯೆಯ (Digestion) ಮೇಲೆ ಸಾಕಷ್ಟು ಒತ್ತಡ ಮತ್ತು ತೊಂದರೆ ಉಂಟು ಮಾಡುತ್ತದೆ. ಹಾಗಾಗಿ ಆಯುರ್ವೇದವು ಜೀರ್ಣಕ್ರಿಯೆ ಸರಿಯಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ನೀವು ನಿಜವಾಗಿಯೂ ಹಸಿದಿದ್ದರೆ ಮಾತ್ರ ಆಹಾರ ಸೇವನೆ ಮಾಡುವುದು ನಿಮ್ಮ ಜೀರ್ಣಕ್ರಿಯೆಗೆ ಉತ್ತಮ. ನೀವು ದಿನಕ್ಕೆ 4-5 ಬಾರಿ ಹೆಚ್ಚು ತಿನ್ನುತ್ತಿದ್ದರೆ, ಹಸಿದಾಗ ಕಡಿಮೆ ಆಹಾರ ಸೇವಿಸುತ್ತಿದ್ದರೆ ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ.

    ದಿನಕ್ಕೆ ಮೂರು ಊಟ ಸೇವನೆ ಮಾಡುವುದು

    ಇನ್ನು ಕಡಿಮೆ ಪ್ರಮಾಣದ ಆಹಾರ ಸೇವನೆ. NCBI ಯ ವರದಿ ಪ್ರಕಾರ, ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ, ದಿನಕ್ಕೆ ಮೂರು ಊಟ ಸೇವಿಸಲು ನೀಡುತ್ತಾರೆ. ಇವುಗಳನ್ನು ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಎಂದು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ.

    ಸಾಮಾನ್ಯವಾಗಿ ಆಹಾರ ತಜ್ಞರು ಹಸಿವು ನಿಯಂತ್ರಿಸಲು ಸಹಾಯ ಮಾಡಲು ಎರಡು ತಿಂಡಿಗಳನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಸೇರಿಸಲು ಸಲಹೆ ನೀಡುತ್ತಾರೆ. ಅದೇ ವೇಳೆ ಕೆಲವು ತಜ್ಞರು ದಿನಕ್ಕೆ ಐದರಿಂದ ಆರು ಬಾರಿ ತಿನ್ನಬೇಕು ಎಂದು ಹೇಳ್ತಾರೆ.

    ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

    ಇತ್ತೀಚೆಗೆ ಆಯುರ್ವೇದ ಮತ್ತು ಗಟ್ ಹೆಲ್ತ್ ಕೋಚ್, ಡಾ. ಡಿಂಪಲ್ ಜಂಗ್ಡಾ, ಆರೋಗ್ಯದ ಆಧಾರದ ಮೇಲೆ ಒಂದು ದಿನದಲ್ಲಿ ಸೇವಿಸುವ ಊಟದ ಸಂಖ್ಯೆಯ ಪರಿಣಾಮದ ಬಗ್ಗೆ Instagram ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ದಿನಕ್ಕೆ ಎಷ್ಟು ಬಾರಿ ಆಹಾರವು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುತ್ತದೆ.?

    ಅನಾರೋಗ್ಯವಿದ್ದಾಗ ನಿಮ್ಮ ಹಸಿವಿನ 50 ರಿಂದ 80 ಪ್ರತಿಶತ ಮಾತ್ರ ತಿನ್ನಿರಿ

    ಡಾ. ಡಿಂಪಲ್ ಜಂಗ್ಡಾ ಹೇಳುವ ಪ್ರಕಾರ, ರೋಗಿಯು ಅಸಮತೋಲನ, ಕಾಯಿಲೆ ಅಥವಾ ಅಸ್ವಸ್ಥತೆ ಸ್ಥಿತಿಯಲ್ಲಿ ನಮ್ಮ ಬಳಿ ಬಂದಾಗ ನಾವು ಅವರಿಗೆ ದಿನಕ್ಕೆ ನಾಲ್ಕರಿಂದ ಐದು ಊಟ ಮಾಡಲು ಶಿಫಾರಸು ಮಾಡುತ್ತೇವೆ. ಬಹಳ ಕಡಿಮೆ ಹಸಿವಿನ ಪ್ರಮಾಣದಲ್ಲಿರುವವರು, ಇದು ಅವರ ಹಸಿವಿನ 50 ರಿಂದ 80 ಪ್ರತಿಶತ ಹೊಂದಿರಲ್ಲ.

    ಅನಾರೋಗ್ಯದಲ್ಲಿ ಎಂತಹ ಆಹಾರ ಸೇವಿಸಬೇಕು?

    ಅನಾರೋಗ್ಯದ  ವೇಳೆ ದೇಹದಲ್ಲಿ ಜೀವಸತ್ವ ಮತ್ತು ಖನಿಜಗಳ ಕೊರತೆ ಇರುತ್ತದೆ. ಅವುಗಳನ್ನು ಪೂರೈಸುವ ಆಹಾರ ಸೇವಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಇದು ಹಣ್ಣು, ಚೆನ್ನಾಗಿ ಬೇಯಿಸಿದ ತರಕಾರಿ, ಧಾನ್ಯ, ಕಾಳು, ಬೇಳೆಕಾಳು, ಬೀಜ, ಡೈರಿ ಆಧಾರಿತ ಉತ್ಪನ್ನಗಳು ಅಥವಾ ಸಸ್ಯ ಆಧಾರಿತ ಹಾಲನ್ನು ಒಳಗೊಂಡಿದೆ.

    ದಿನಕ್ಕೆ 4 ಊಟ ಮಾಡುವುದು

    ನಿಮಗೆ ಶಕ್ತಿಯ ಕೊರತೆ, ಹಸಿದಾಗ, ಅನಾರೋಗ್ಯದಲ್ಲಿದ್ದಾಗ ಚೇತರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ದಿನಕ್ಕೆ 4 ಬಾರಿ ಸೇವನೆ ಮಾಡುವುದು ಸಹಕಾರಿ. ಹಾಗಾಗಿ ನೀವು ಹಸಿದಿರುವಾಗ ಆಹಾರ ಸೇವನೆ ಮಾಡಿ. ನಿಮ್ಮ ಹಸಿವಿನ 80% ತಿನ್ನಿರಿ. ಸೂರ್ಯಾಸ್ತದ ನಂತರ ಭಾರೀ ಊಟ ಮಾಡುವುದು ತಪ್ಪಿಸಿ. ಮತ್ತು ಮಲಗುವ ಸಮಯಕ್ಕೆ ಕನಿಷ್ಠ 2 ರಿಂದ 3 ಗಂಟೆ ಮೊದಲು ಊಟ ಮುಗಿಸಿ.

    ದಿನಕ್ಕೆ ಮೂರು ಬಾರಿ ಊಟ ಮಾಡುವುದು

    ನೀವು ಆರೋಗ್ಯವಾಗಿದ್ದರೆ ದಿನಕ್ಕೆ ಮೂರು ಬಾರಿ ತಿನ್ನಿರಿ. ಇದು ಸಮತೋಲಿತ ಜೀವನಶೈಲಿಯ ಒಂದು ಭಾಗ ಆಗಿದೆ. ಸೂರ್ಯಾಸ್ತದ ಮೊದಲು ಲಘು ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯಲ್ಲಿ ಲಘು ಭೋಜನ ಮಾಡಿ. 14 ರಿಂದ 16 ಗಂಟೆ ಮಧ್ಯಂತರ ಉಪವಾಸ ಸೇವಿಸಿ.

    ದಿನಕ್ಕೆ ಎರಡು ಊಟ ಮಾಡುವುದು

    ಇದು ಯೋಗ ಮತ್ತು ಆಯುರ್ವೇದದ ಪ್ರಕಾರ ತಿನ್ನುವ ಆದರ್ಶ ವಿಧಾನ. ಎರಡೂ ಊಟಗಳ ನಡುವೆ 6 ಗಂಟೆಗಳ ಅಂತರ ನೀಡಿ. ಇದು ಮಧ್ಯಂತರ ಉಪವಾಸದ ಆಯುರ್ವೇದ ವಿಧಾನ. ಮುಂದಿನ ಊಟ ಮಾಡುವ ಮೊದಲು ಪೋಷಕಾಂಶಗಳನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು, ಹೀರಿಕೊಳ್ಳಲು ಮತ್ತು ಸಂಯೋಜಿಸಲು ಇದು ಸಹಕಾರಿ.

    ಇದನ್ನೂ ಓದಿ: ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ಹೋಗಲಾಡಿಸಲು ಈ ರೀತಿ ಮಾಡಿ, ಇಲ್ಲಿದೆ ಸುಲಭ ಉಪಾಯ

    ದಿನಕ್ಕೆ ಒಂದು ಊಟ ಮಾಡುವುದು

    ನಿಮ್ಮ ಉತ್ತಮ ಆರೋಗ್ಯ ಮತ್ತು ಚಯಾಪಚಯ ಕ್ರಿಯೆಯ ಮಟ್ಟ ತಲುಪಿದಾಗ, ದಿನಕ್ಕೆ ಒಂದು ಊಟದ ಜೀವನಶೈಲಿ ಅಳವಡಿಸಿಕೊಳ್ಳಿ. ವ್ಯಕ್ತಿಯು ತೀವ್ರವಾದ ಆಲೋಚನೆ, ಹೆಚ್ಚಿನ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯ ಹೊಂದಲು ಸಾಧ್ಯ.
    Published by:renukadariyannavar
    First published: